ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

541 ಗ್ರೂಪ್ 'ಸಿ' ಹುದ್ದೆಗಳಿಗೆ ಕೆಪಿಎಸ್ ಸಿ ಅರ್ಜಿ ಆಹ್ವಾನ

ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಗ್ರೂಪ್ 'ಸಿ' ವೃಂದದ ತಾಂತ್ರಿಕೇತರ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

|
Google Oneindia Kannada News

ಬೆಂಗಳೂರು, ಮಾರ್ಚ್, 16 : ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ 'ಸಿ' ವೃಂದದ ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಮಾರ್ಚ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಏಪ್ರಿಲ್ 15 ಕೊನೆ ದಿನವಾಗಿದೆ.

ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಹತೆಯುಳ್ಳ ಪೌರಾಡಳಿತ, ಕೃಷಿ ಇಲಾಖೆ, ಸಮಾಜ ಕಲ್ಯಾಣ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಒಟ್ಟು 541 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೈದರಬಾದ್ ಕರ್ನಾಟಕಕ್ಕೆ ಇದರಲ್ಲಿ ಮೀಸಲಾತಿ ನೀಡಲಾಗಿದೆ.

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ, ಅರ್ಜಿಸಲ್ಲಿಸುವಾಗ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸತಕ್ಕದ್ದು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೂ ಎಲ್ಲಾ ಹುದ್ದೆಗಳಿಗೂ ಸೇರಿ ಒಂದೇ ಅರ್ಜಿಯನ್ನು ಸಲ್ಲಿಸತಕ್ಕದ್ದು ಹಾಗೂ ಒಂದೇ ಶುಲ್ಕವನ್ನು ಪಾವತಿಸ ತಕ್ಕದು.[ಅಬಕಾರಿ ಇಲಾಖೆಯಲ್ಲಿ 1180 ಹುದ್ದೆ, ಅರ್ಜಿ ಸಲ್ಲಿಕೆಗೆ ಮಾರ್ಚ್ 30 ಕೊನೆ ದಿನ]

ಯಾವುದೇ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಬಾರಿ ಅರ್ಜಿ ಸಲ್ಲಿಸಿದಲ್ಲಿ, ಆಧಾರ್ ಸಂಖ್ಯೆ ಮೂಲಕ ಅರ್ಜಿಯನ್ನು ಪರಿಗಣಿಸಿ ಉಳಿದಂತಹ ಅರ್ಜಿಗಳನ್ನು ಯಾವುದೇ ಮುನ್ಸೂಚನೆಯಿಲ್ಲದೇ ತಿರಸ್ಕರಿಸಲಾಗುವುದು ಎಂದು ಕೆಪಿಎಸ್ ಸಿ ಸೂಚನೆಯಲ್ಲಿ ತಿಳಿಸಿದೆ.[ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]

ಪದವಿ ವಿದ್ಯಾರ್ಹತೆಯುಳ್ಳ ಹುದ್ದೆಗಳು

ಪದವಿ ವಿದ್ಯಾರ್ಹತೆಯುಳ್ಳ ಹುದ್ದೆಗಳು

* ಪೌರಾಡಳಿತ ನಿರ್ದೇಶನಾಲಯದಲ್ಲಿ ಮುಖ್ಯಧಿಕಾರಿ ಶ್ರೇಣಿ-2: 34
* ಪೌರಾಡಳಿತ ನಿರ್ದೇಶನಾಲಯದಲ್ಲಿ ಅಕೌಂಟೆಂಟ್-26
* ಪೌರಾಡಳಿತ ನಿರ್ದೇಶನಾಲಯದಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು- 37
* ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ ಲೆಕ್ಕ ಸಹಾಯಕರು-66

ಪದವಿ ಪೂರ್ವ ವಿದ್ಯಾರ್ಹತೆಯುಳ್ಳ ಹುದ್ದೆಗಳು

ಪದವಿ ಪೂರ್ವ ವಿದ್ಯಾರ್ಹತೆಯುಳ್ಳ ಹುದ್ದೆಗಳು

* ವಸತಿ ಶಾಲಾ ಶಿಕ್ಷಕರು-123
* ಕಿರಿಯ ಲೆಕ್ಕ ಸಹಾಯಕರು-42
* ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಗ್ರಂಥಾಲಯ ಸಹಾಯಕರು-29
* ಕೊಳಗೇರಿ ಅಭಿವೃದ್ಧಿಯಲ್ಲಿ ಡಾಟಾ ಎಂಟ್ರಿ ಅಪರೇಟರ್-1
* ಪೌರಾಡಳಿತ ನಿರ್ದೇಶನಾಲಯದಲ್ಲಿನ ಕರವಸೂಲಿಗಾರರು-101
* ಕೃಷಿ ಇಲಾಖೆಯಲ್ಲಿನ ಕೃಷಿ ಮಾರಾಟ ಸಹಾಯಕರು-25
* ಕರ್ನಾಟಕ ಸರ್ಕಾರ ಸಚಿವಾಲಯದ ಗ್ರಂಥಾಲಯಗಳಲ್ಲಿ ಸಹಾಯಕರು-4

ಅರ್ಜಿ ಶುಲ್ಕ

ಅರ್ಜಿ ಶುಲ್ಕ

* ಸಾಮಾನ್ಯ ಅಭ್ಯರ್ಥಿಗಳಿಗೆ-300 ರು.
* ಪ್ರವರ್ಗ 2(ಎ), 2(ಬಿ), ಮತ್ತು 3(ಬಿ) ಅಭ್ಯರ್ಥಿಗಳಿಗೆ- 150 ರು.
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ-25 ರು.
* ಎಸ್ ಸಿ, ಎಸ್ ಟಿ, ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ-ಶುಲ್ಕ ವಿನಾಯಿತಿ ಇರುತ್ತದೆ.

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ

1. ಸಾಮಾನ್ಯ ಜ್ಞಾನ-100 ಅಂಕಗಳು- 1 ಗಂಟೆ 30 ನಿಮಿಷಗಳು
2. ಸಾಮಾನ್ಯ ಕನ್ನಡ-35 ಅಂಕಗಳು
3. ಸಾಮಾನ್ಯ ಇಂಗ್ಲಿಷ್-35 ಅಂಕಗಳು
4. ಕಂಪ್ಯೂಟರ್ ಜ್ಞಾನ-35 ಅಂಕಗಳು
* ಒಟ್ಟು 100 ಅಂಕಗಳು,2 ಗಂಟೆ ಕಾಲಾವಕಾಶ.

ವಯೋಮಿತಿ

ವಯೋಮಿತಿ

* ಸಾಮಾನ್ಯ ಅಭ್ಯರ್ಥಿಗಳಿಗೆ-18 ರಿಂದ 35.
* ಪ್ರವರ್ಗ 2(ಎ), 2(ಬಿ), ಮತ್ತು 3(ಬಿ) ಅಭ್ಯರ್ಥಿಗಳಿಗೆ-18 ರಿಂದ 38.
* ಎಸ್ ಸಿ, ಎಸ್ ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ-18 ರಿಂದ 40

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು

* ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ : 080-30574957/ 080-30574901
* ಪ್ರಾಂತೀಯ ಕಛೇರಿ ಮೈಸೂರು : 0821-2545956
* ಪ್ರಾಂತೀಯ ಕಛೇರಿ ಬೆಳಗಾವಿ : 0831-2475345
* ಪ್ರಾಂತೀಯ ಕಛೇರಿ ಗುಲ್ಬರ್ಗಾ : 08472-227944
* ಪ್ರಾಂತೀಯ ಕಛೇರಿ ಶಿವಮೊಗ್ಗ : 08182-228099

English summary
The Karnataka Public Service Commission (KPSC) has invited online applications for Group 'C' non technical post. April 15, 2017 last date for submit application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X