72 ವಲಯ ಅರಣ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 05 : ಅರಣ್ಯ ಇಲಾಖೆಯು 72 ವಲಯ ಅರಣ್ಯಾಧಿಕಾರಿ (Range Forest Officers ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಮೇ 17, 2016.

ಒಟ್ಟು 72 ಹುದ್ದೆಗಳನ್ನು ಭರ್ತಿ ಮಾಡಲು ಆಹ್ವಾನಿಸಲಾಗಿದೆ. ಇವುಗಳಲ್ಲಿ 12 ಹುದ್ದೆಗಳನ್ನು ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲು. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಅಂಚೆ ಅಥವ ಕೋರಿಯರ್ ಮೂಲಕ ಸಲ್ಲಿಸುವ ಅರ್ಜಿಯನ್ನು ಪರಿಗಣಿಸುವುದಿಲ್ಲ. [555 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಅರಣ್ಯ ಇಲಾಖೆ]

jobs

2016ರ ಏಪ್ರಿಲ್ 18 ರಿಂದ ಮೇ 17ರ ಸಂಜೆ 4.30ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಮೂಲ ದಾಖಲೆ ಪರಿಶೀಲನೆ, ಪೂರ್ವಭಾವಿ ಪರೀಕ್ಷೆ ದಿನಾಂಕ, ಪರೀಕ್ಷೆ ನಡೆಯುವ ಸ್ಥಳ ಮುಂತಾದ ವಿವರಗಳನ್ನು www.aranya.gov.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. [162 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC]

ವಿದ್ಯಾರ್ಹತೆ, ವರ್ಗೀಕರಣ : ಬಿ.ಎಸ್‌.ಸಿ. (ಅರಣ್ಯ ಶಾಸ್ತ್ರ) ಪದವೀಧರರಿಗೆ 45, ವಿಜ್ಞಾನ ಮತ್ತು ಇಂಜಿನಿಯರಿಂಗ್ ಪದವೀಧರರಿಗೆ 15 ಒಟ್ಟು 60. ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಬಿ.ಎಸ್‌.ಸಿ. (ಅರಣ್ಯ ಶಾಸ್ತ್ರ) ಪದವೀಧರರಿಗೆ 12 ಹುದ್ದೆಗಳು.

ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಯು 18 ವರ್ಷಗಳನ್ನು ಪೂರೈಸಿರತಕ್ಕದ್ದು. ಕೆಳಗಿನ ವಯೋಮಿತಿಯನ್ನು ಮೀರಬಾರದು ಪ.ಜಾ/ಪ.ಪಂ/ಪ್ರವರ್ಗ-1 32 ವರ್ಷ. ಪ್ರವರ್ಗ 2ಎ/2ಬಿ/3ಎ/3ಬಿ 30 ವರ್ಷಗಳು. ಇತರ ಅಭ್ಯರ್ಥಿಗಳು 27 ವರ್ಷಗಳು.

ಅರ್ಜಿ ಶುಲ್ಕಗಳು : ಸಾಮಾನ್ಯ ವರ್ಗ, 2ಎ/2ಬಿ/3ಎ/3ಬಿ/ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 100 ರೂ. ಮತ್ತು ಸೇವಾ ಶುಲ್ಕ 12 ರೂ., ಪ.ಜಾ/ಪ.ಗಂ/ಪ್ರವರ್ಗ -1ರ ಅಭ್ಯರ್ಥಿಗಳಿಗೆ 50 ರೂ. ಮತ್ತು 12 ರೂ. ಸೇವಾಶುಲ್ಕ ಪ್ರತ್ಯೇಕ. [ಅರ್ಜಿ ಸಲ್ಲಿಸಲು ವಿಳಾಸ]

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಮುದ್ರಿತ ಅರ್ಜಿ ಪ್ರತಿಯನ್ನು ತೆಗೆದುಕೊಂಡು ಇ-ಪಾವತಿ ಅಂಚೆ ಕಚೇರಿಯಲ್ಲಿ ಮುದ್ರಿತ ಪ್ರತಿ ತೋರಿಸಿ, ಶುಲ್ಕ ಪಾವತಿ ಮಾಡಬೇಕು. ಶುಲ್ಕ ಕಟ್ಟಲು ಕೊನೆ ದಿನಾಂಕ ಮೇ 21, 2016.[ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]

ಆಯ್ಕೆ ವಿಧಾನ : ಪೂರ್ವಭಾವಿ ಪರೀಕ್ಷೆ 200 ಅಂಕಗಳು. ಮುಖ್ಯ ಪರೀಕ್ಷೆ 200 ಅಂಕಗಳು. ಮೂಲ ದಾಖಲೆ ಪರಿಶೀಲನೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆ ಸಾಮಾನ್ಯ ಜ್ಞಾನ 100 ಅಂಕಗಳು, ಆಪ್ಟಿಟ್ಯೂಡ್ ಪರೀಕ್ಷೆ 100 ಅಂಕಗಳು.

ಪರೀಕ್ಷಾ ಕೇಂದ್ರಗಳು : ಬೆಂಗಳೂರು, ಬೆಳಗಾವಿ, ಬಳ್ಳಾರಿ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ.

ಇಂಗ್ಲಿಶ್‌ನಲ್ಲಿ ಓದಿ

English summary
Karnataka Forest Department invited online application for the 72 Range Forest Officers post. May 17, 2016 last date to submit application.
Please Wait while comments are loading...