ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಅರಣ್ಯ ರಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ

|
Google Oneindia Kannada News

ಬೆಂಗಳೂರು ಏಪ್ರಿಲ್ 19 : ಅರಣ್ಯ ಇಲಾಖೆಯಲ್ಲಿ 240 ಅರಣ್ಯ ರಕ್ಷಕ ಹುದ್ದೆಗಳಿಗೆ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳ 2012 ರಂತೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ: ಅರಣ್ಯ ರಕ್ಷಕ (240)
ವೇತನ ಶ್ರೇಣಿ: 11600 ರಿಂದ 21000 ರು. (ತಿಂಗಳಿಗೆ)
ವಿದ್ಯಾರ್ಹತೆ: ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಯು ದ್ವಿತೀಯ ಪಿಯುಸಿ (12ನೇ ತರಗತಿ) ತೇರ್ಗಡೆಯಾಗಿರಬೇಕು.

Karnataka forest department Recruitment 2017 Apply For 240-guards Posts

ವಯೋಮಿತಿ: ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ಪ.ಜಾ/ಪ.ಪಂ/ಪ್ರ-1 ಅಭ್ಯರ್ಥಿಗಳಿಗೆ 32 ವರ್ಷ ಅರ್ಜಿ ಸಲ್ಲಿಕೆ ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸತಕ್ಕದ್ದು.

* ಆನ್-ಲೈನ್ ಮೂಲಕ ಅರ್ಜಿಯನ್ನು ದಿನಾಂಕ 15-05-2017 ರಿಂದ 14-06-2017 ರ ಅಪರಾಹ್ನ 4-30 ಗಂಟೆಯವರೆಗೆ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ: ಆನ್ ಲೈನ್ ಅರ್ಜಿ ಸಲ್ಲಿಸುವ ವಿಳಾಸ kfdrecruitment.in ಅರ್ಜಿ ಶುಲ್ಕ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.100 + ಸೇವಾ ಶುಲ್ಕ ರೂ.15 /- ಪ.ಜಾ/ಪ.ಪಂ/ಪ್ರ-1 /ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.25 + ಸೇವಾ ಶುಲ್ಕ ರೂ.15 /- ಅರ್ಜಿ ಶುಲ್ಕವನ್ನು ಇ-ಪಾವತಿ ಸೌಲಭ್ಯವಿರುವ ಅಂಚೆ ಕಚೇರಿಯಲ್ಲಿ ಮುದ್ರಿತ ಅರ್ಜಿ ಪ್ರತಿಯನ್ನು ತೋರಿಸಿ, ಈ ಮೇಲೆ ಹೇಳಿರುವ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕ ಅಭ್ಯರ್ಥಿಗಳು ಪಾವತಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆ: ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ, ದೇಹದಾರ್ಡ್ಯತೆ , ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್ ವಿಳಾಸ ಗಮನಿಸಿ.
ಇನ್ನು ಹೆಚ್ಚಿನ ವಿವರಣೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

English summary
Karnataka Forest Department released new notification on their official website for the recruitment of total 240 forest guard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X