ಐಬಿಎಂನಲ್ಲಿ ಫ್ರೆಶರ್ಸ್ ಗಳಿಗೆ ಉದ್ಯೋಗ ಅವಕಾಶ

Posted By:
Subscribe to Oneindia Kannada

ಬೆಂಗಳೂರು, ಜುಲೈ 21: ಐಬಿಎಂನಲ್ಲಿ ಫ್ರೆಶರ್ಸ್ ಗಳಿಗೆ ಉದ್ಯೋಗ ಅವಕಾಶಗಳು ಲಭ್ಯವಿದೆ. ಧ್ವನಿ ಆಧಾರಿತ ತಾಂತ್ರಿಕ ಕಾರ್ಯಕಾರಿ ಸಿಬ್ಬಂದಿ ಹುದ್ದೆಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ. ಪದವೀಧರರು, ಡಿಪ್ಲೋಮಾ ಹೊಂದಿರುವ ಸೂಕ್ತ ಅಭ್ಯರ್ಥಿಗಳು ಜುಲೈ 23 ರ ತನಕ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಹುದ್ದೆ: Technical Support Executive ( voice)
ಅನುಭವ : 0 ರಿಂದ 2 ವರ್ಷಗಳು
ಉದ್ಯೋಗ ಅವಧಿ : ಫುಲ್ ಟೈಮ್
ಎಲ್ಲಿ ? : ಬೆಂಗಳೂರು
ವಿದ್ಯಾರ್ಹತೆ: ಯಾವುದೇ ಪದವಿ. [ಕಾಲ್ ಸೆಂಟರಿನಲ್ಲಿ ಉದ್ಯೋಗ : ವಾಕ್ ಇನ್ ಸಂದರ್ಶನ]
ಯಾವಾಗ ವಾಕ್ ಇನ್ : Tue 19 Jul, 2016 To Sat 23 Jul, 2016

Job Openings in IBM For Freshers in Bengaluru

ಸಂದರ್ಶನ ಹೇಗೆ?: ವಾಯ್ಸ್ ಹಾಗೂ ಇಮೇಲ್ ತಾಂತ್ರಿಕ ಹೆಲ್ಪ್ ಡೆಸ್ಕ್ ಸೇವೆ ಒದಗಿಸುವ ಅನುಭವ ಇರಬೇಕು. ಐಬಿಎಂ ಇಂಡಿಯಾದ ಆಂತರಿಕ ಉದ್ಯೋಗಿಗಳಿಗೆ ಹಾಗೂ ವಾಣಿಜ್ಯ ಉದ್ದೇಶಿತ ಹೊರಗಿನ ಗ್ರಾಹಕರೊಡನೆ ಸಂವಹನ ನಡೆಸಬೇಕಾಗುತ್ತದೆ. ಉತ್ತರ ಅಮೆರಿಕದ ಕ್ಲೈಂಟ್ ಜತೆ ಚಾಟ್. ಫೋನ್ ಕಾಲ್/ ಇಮೇಲ್/ಚಾಟ್ ಮೂಲಕ ತಾಂತ್ರಿಕ ಸಮಸ್ಯೆಗೆ ಪರಿಹಾರ ನೀಡುವ ಸಾಮರ್ಥ್ಯವುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಶಿಫ್ಟ್ ಗಳಿರುತ್ತದೆಯೆ? : 24 X 7 ಶಿಫ್ಟ್ ಬದಲಾಗುತ್ತಾ ಇರುತ್ತದೆ.
ತಾಂತ್ರಿಕ ಜ್ಞಾನ : TCP/IP, Dial-up, Token Ring, Ethernet, LAN/WAN, ವಿಂಡೋಸ್ 2000/NT/XP ಬಗ್ಗೆ ತಿಳಿದಿರಬೇಕು.

ಸೂಚನೆ: ಸಂದರ್ಶನಕ್ಕೆ ಬರುವ ವೇಳೆ ಬ್ಯಾಗ್ ಪ್ಯಾಕ್, ಕ್ಯಾರಿ ಬ್ಯಾಗ್ ಗಳನ್ನು ತರಬೇಡಿ. ಐಬಿಎಂ ನಲ್ಲಿ ನಿಷೇಧಿಸಲಾಗಿದೆ.
ಐಡಿ ಪ್ರೂಫ್ : ಪ್ಯಾನ್ ಕಾರ್ಡ್/ ಮತದಾರರ ಗುರುತಿನ ಚೀಟಿ/ ಡ್ರೈವಿಂಗ್ ಲೈಸನ್ಸ್/ ಆಧಾರ್ ಕಾರ್ಡ್
* ಪದವಿ/ ಡಿಪ್ಲೋಮಾ ಅಂಕಪಟ್ಟಿ (ಒರಿಜಿನಲ್-ಸಾಫ್ಟ್ ಕಾಪಿ ಇದ್ದರೂ ಓಕೆ)
* ಅನುಭವ ಇರುವ ಅಭ್ಯರ್ಥಿಗಳು ಈ ಹಿಂದಿನ ಕಚೇರಿಯ ಆಫರ್ ಲೆಟರ್ ಹಾಗೂ ರಿಲಿವಿಂಗ್ ಲೆಟರ್ ತರತಕ್ಕದ್ದು.

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
(ಒನ್ಇಂಡಿಯಾ ಸುದ್ದಿ)

English summary
Job Openings in IBM For Freshers in Bengaluru.For the post of Technical Support Executive (voice) candidates with experience of 0 to 2 years can apply.
Please Wait while comments are loading...