ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಲ್ಲಿ ಫೆ.17ರಂದು ವಾಯುದಳದ ನೇಮಕಾತಿ

|
Google Oneindia Kannada News

ಮೈಸೂರು, ಫೆಬ್ರವರಿ 03 : ಭಾರತೀಯ ವಾಯುದಳದಲ್ಲಿನ ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್‌ಸ್ಟ್ರಕ್ಟರ್, ಐಎಎಫ್ (ಪೊಲೀಸ್) ಮತ್ತು ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ಫೆ.17ರಂದು ಮೈಸೂರಿನಲ್ಲಿ ನೇರ ನೇಮಕಾತಿ ನಡೆಯಲಿದೆ.

ಫೆ.17ರ ಬುಧವಾರದಂದು ನಜರಬಾದ್‌ನಲ್ಲಿರುವ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ನೇಮಕಾತಿ ನಡೆಯಲಿದ್ದು, ಕರ್ನಾಟಕ ರಾಜ್ಯದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಇದರಲ್ಲಿ ಭಾಗವಹಿಸಬಹುದಾಗಿದೆ. ನೇಮಕಾತಿಗಾಗಿ ಆಗಮಿಸುವ ಅಭ್ಯರ್ಥಿಗಳು ದಿನಾಂಕ 1-8-1996 ರಿಂದ 30-11-1999 ರ ಅವಧಿಯಲ್ಲಿ ಜನಿಸಿದವರಾಗಿರಬೇಕು.[ಕೆಎಸ್ಆರ್ ಟಿಸಿ ನೇಮಕಾತಿ : ಅರ್ಜಿ ಹಾಕಲು 1 ದಿನ ಬಾಕಿ]

jobs

ವಿದ್ಯಾರ್ಹತೆಯ ವಿವರ : 'Y' ಗುಂಪಿನ ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್‌ಸ್ಟ್ರಕ್ಟರ್, ಐಐಎಫ್ (ಪೊಲೀಸ್) ಹುದ್ದೆಗಳಿಗೆ ಯಾವುದೇ ವಿಷಯಗಳಲ್ಲಿ 10 + 2 ಅಥವಾ ದ್ವಿತೀಯ ಪಿಯುಸಿಯಲ್ಲಿ ಶೇ 50 ರಷ್ಟು ಅಂಕ ಪಡೆದು ತೇರ್ಗಡೆ ಹೊಂದಿರಬೇಕು. ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಪಡೆದಿರಬೇಕು.[police constable ನೇಮಕಾತಿ ವಿವರ]

ಸಿಬಿಎಸ್ಇ/ರಾಜ್ಯ ಶಿಕ್ಷಣ ಮಂಡಳಿ/ಪರಿಷತ್‍ನಿಂದ ಅಂಗೀಕೃತವಾದ ಹಾಗೂ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್‍ನಿಂದ 10+2 ಕ್ಕೆ ತತ್ಸಮಾನ ಎಂದು ಪರಿಗಣಿಸಲ್ಪಟ್ಟಿರುವ ಎರಡು ವರ್ಷಗಳ ವೃತ್ತಿಪರ ಶಿಕ್ಷಣದಲ್ಲಿ ಶೇ 50 ಅಂಕಗಳಿಸಿ ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಗಳಿಸಿರಬೇಕು.

'Y' ಗುಂಪಿನ ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಆಗಮಿಸುವವರು 10+2 ಅಥವಾ ದ್ವಿತೀಯ ಪಿಯುಸಿ ಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಆಂಗ್ಲ ಭಾಷೆ ವಿಷಯಗಳನ್ನು ಹೊಂದಿದ್ದು, ಶೇ 50 ಅಂಕ ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಪಡೆದಿರಬೇಕು.

ಬೇಕಾದ ದಾಖಲೆಗಳು : ನೇಮಕಾತಿಗೆ ಆಗಮಿಸುವ ಅಭ್ಯರ್ಥಿಗಳು ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯ ಮೂಲ ಅಂಕ ಪಟ್ಟಿಗಳು, ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ 4 ಸೆಟ್ ಜೆರಾಕ್ಸ್ ಪ್ರತಿಗಳು ಹಾಗೂ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ 7 ಭಾವಚಿತ್ರಗಳನ್ನು ತರಬೇಕು.

ಅರ್ಹತಾ ನಿಬಂಧನೆಗಳ ವಿವರಗಳಿಗಾಗಿ www.airmenselection.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. 080-25592100 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

English summary
Indian Air Force (IAF) has organized recruitment rally in Chamundi Vihar stadium, Mysuru on February 17, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X