ಎಚ್‌ಎಎಲ್‌ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 09 : ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. 2016-17 ನೇ ಸಾಲಿನಲ್ಲಿ ಫುಲ್‍ಟರ್ಮ್ ಅಪ್ರೆಂಟಿಸ್ ತರಬೇತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು 12/8/2016 ಕೊನೆಯ ದಿನವಾಗಿದೆ.

ಎಸ್‍ಎಸ್‍ಎಲ್‍ಸಿ/ತತ್ಸಮಾನ ಪರೀಕ್ಷೆಯಲ್ಲಿ ಸಾಮಾನ್ಯ/ಓಬಿಸಿ ವರ್ಗದವರು ಶೇಕಡ 60 ರಷ್ಟು ಅಂಕಗಳೊಂದಿಗೆ ಎಸ್‍ಸಿ/ಎಸ್‍ಟಿ/ವಿಕಲಚೇತನ ವರ್ಗದವರು ಶೇಕಡ 50 ಅಂಕಗಳೊಂದಿಗೆ ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.[KSRP ಪೇದೆಗಳ ನೇಮಕಾತಿ ವಿವರ]

HAL invites application for apprenticeship training

ವಯೋಮಿತಿ 01/10/2016 ಕ್ಕೆ 15 ರಿಂದ 18 ವರ್ಷದೊಳಗಿರಬೇಕು. ಕರ್ನಾಟಕ ರಾಜ್ಯದ ಬಡಕುಟುಂಬದ ಅಭ್ಯರ್ಥಿಗಳಾಗಿರಬೇಕು. ಬಿಪಿಎಲ್/ಅಂತ್ಯೋದಯ ಕಾರ್ಡ್‍ನ್ನು ಹೊಂದಿರಬೇಕು. ಈ ತರಬೇತಿಗಾಗಿ ಲಿಖಿತ ಪರೀಕ್ಷೆ 7/9/2016 ರಂದು ನಡೆಯಲಿದೆ.[ದಕ್ಷಿಣ ಕನ್ನಡದಲ್ಲಿ 35 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ ಇದೆ]

ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ/ವಿದ್ಯಾಭ್ಯಾಸ, ಸ್ಟೈಫಂಡ್ ಮತ್ತು ಭತ್ಯೆ ತಿಂಗಳಿಗೆ ರೂ.7185ರಂತೆ ಮತ್ತು ಇತರೆ ಕಲ್ಯಾಣದ ಅನುಕೂಲಗಳನ್ನು ನೀಡಲಾಗುತ್ತದೆ. ಅರ್ಜಿಯನ್ನು ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. ನಲ್ಲಿ ಪಡೆಯಬಹುದು ಅಥವಾ www.hal-india.com ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕು.[KPTCL ನಲ್ಲಿ ಕೆಲಸ ಖಾಲಿ ಇದೆ]

ಭರ್ತಿ ಮಾಡಿದ ಅರ್ಜಿಯನ್ನು ಸ್ಥಳೀಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ 12/8/2016 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೈಸೂರಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಖುದ್ದಾಗಿ ಅಥವಾ 0821-2489972 ಸಂಖ್ಯೆಗೆ ಕರೆ ಮಾಡಬಹುದು.

English summary
Hindustan Aeronautics Limited (HAL) invited application for apprenticeship training (Full term). August 12, 2016 last date for submit application.
Please Wait while comments are loading...