ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ದೂರದರ್ಶನ ಕೇಂದ್ರದಲ್ಲಿ ಕೆಲಸ ಖಾಲಿ ಇದೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 13 : ಬೆಂಗಳೂರು ದೂರದರ್ಶನ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ಜಿಲ್ಲಾ ಕೇಂದ್ರಗಳಲ್ಲಿ ಸ್ಟ್ರಿಂಜರ್‌ಗಳಾಗಿ ಕಾರ್ಯನಿರ್ವಹಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಮೇ 13, 2016 ಅರ್ಜಿ ಸಲ್ಲಿಸಲು ಕೊನೆಯ ದಿನ.

ಸುದ್ದಿ ದೃಶ್ಯಾವಳಿ ಚಿತ್ರೀಕರಣ ಹಾಗೂ ವರದಿಗಾರಿಕೆಯಲ್ಲಿ ಅನುಭವ ಹಾಗೂ ಪರಿಣಿತಿ ಇರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ, ಅರ್ಹತೆ ಮಾನದಂಡಗಳ ಬಗ್ಗೆ ಮಾಹಿತಿ www.ddchandana.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ. [BMRCL ನಲ್ಲಿ 65 ಹುದ್ದೆ ಖಾಲಿ ಇದೆ]

job

ಯಾವ ಜಿಲ್ಲೆಯಲ್ಲಿ ಅವಕಾಶವಿದೆ : ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ದಾವಣಗೆರೆ. [806 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC]

ದಕ್ಷಿಣ ಕನ್ನಡ, ಹಾಸನ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ಕೋಲಾರ, ಕೊಡಗು, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯಪುರ, ಉಡುಪಿ, ಉತ್ತರ ಕನ್ನಡ, ಯಾದಗಿರಿ. [ನೇಮಕಾತಿ ಆದೇಶ ಓದಿ]

ಆಯ್ಕೆಯಾದ ಅಭ್ಯರ್ಥಿಗಳು ಚಂದನ ವಾಹಿನಿಯ ವಾರ್ತೆಗಳು ಹಾಗೂ ಡಿಡಿ ನ್ಯೂಸ್‌ಗಾಗಿ ಪ್ರಾದೇಶಿಕ ಸುದ್ದಿ ವಿಭಾಗ ಸೂಚಿಸುವ ತಮ್ಮ ಜಿಲ್ಲೆಯ ಯಾವುದೇ ಭಾಗದಲ್ಲಿನ ಸುದ್ದಿ, ಪ್ರಚಲಿತ ವಿದ್ಯಮಾನ, ವಿಶೇಷ ಸುದ್ದಿ/ವರದಿ ಹಾಗೂ ಇತರ ವಿಷಯಗಳ ಬಗ್ಗೆ ಕವರೇಜ್ ಮಾಡಬೇಕಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮದೇ ಆದ ವೃತ್ತಿಪರ ವಿಡಿಯೋ ಕ್ಯಾಮರಾ ಹೊಂದಿರಬೇಕು. ಜೊತೆಗೆ ಇಎನ್‌ಜಿ ಸಾಧನ-ಸಲಕರಣೆಗಳು ಹಾಗೂ ಅಗತ್ಯ ಸೌಲಭ್ಯಗಳು ಮತ್ತು ತಮ್ಮದೇ ವಾಹನ ಹೊಂದಿರಬೇಕು.

ಅರ್ಜಿ ಸಲ್ಲಿಸುವವರು ಹಿಂದಿರುಗಿಸಲಾಗದ 1 ಸಾವಿರ ರೂ. ಡಿಡಿಯನ್ನು Drawing & Disbursing Officer ,
Doordarshan Kendra, Bengaluru ಹೆಸರಿನಲ್ಲಿ ತೆಗೆದು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಕವರ್ ಹೊರಭಾಗದಲ್ಲಿ Empanelment of Stringers of DD News ಎಂದು ಬರೆಯಬೇಕು.

ಅರ್ಜಿ ಸಲ್ಲಿಸಲು ವಿಳಾಸ : ನಿರ್ದೇಶಕರು (ಸುದ್ದಿ), ಪ್ರಾದೇಶಿಕ ಸುದ್ದಿ ವಿಭಾಗ, ದೂರದರ್ಶನ ಕೇಂದ್ರ, ಜೆ.ಸಿ.ನಗರ, ಬೆಂಗಳೂರು 560006.

English summary
Regional News Unit, Doordarshan Kendra, Bengaluru invites applications for Stringers with experience in news gathering and broadcast journalism. May 13, 2016 last date for submitting application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X