ಬ್ಯಾಂಕ್ ಆಫ್ ಬರೋಡಾದಲ್ಲಿ ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿವೆ

By:
Subscribe to Oneindia Kannada

ಬೆಂಗಳೂರು, ಆಗಸ್ಟ್ 12: ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಸುಮಾರು 400ಕ್ಕೂ ಅಧಿಕ ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಜ್ಯೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್/ಸ್ಕೇಲ್ 1 ಹುದ್ದೆಗಳಾಗಿದ್ದು, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 21ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ? ವಿದ್ಯಾರ್ಹತೆ, ನೇಮಕಾತಿ ಪ್ರಕ್ರಿಯೆ, ಅರ್ಜಿ ಶುಲ್ಕ ಇನ್ನಿತರ ವಿವರಗಳು ಮುಂದಿವೆ:

ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗ
ಒಟ್ಟು ಹುದ್ದೆಗಳು : 400
ಹುದ್ದೆಯ ಹೆಸರು: Probationary Officer in Junior Management Grade/ Scale-I
* ಸಾಮಾನ್ಯ ವರ್ಗ : 202
* ಒಬಿಸಿ: 108
* ಎಸ್ ಸಿ: 60
* ಎಸ್ಟಿ : 30

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಆನ್ ಲೈನ್ ಪರೀಕ್ಷೆ(Objective haagU descriptive) ಫಲಿತಾಂಶದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ನಂತರ ಸೈಕೋಮೆಟ್ರಿಕ್ ಅಸೈನ್ಮೆಂಟ್, ಗ್ರೂಪ್ ನಲ್ಲಿ ಚರ್ಚೆ ಹಾಗೂ ವೈಯಕ್ತಿಕ ಸಂದರ್ಶನ ಇರುತ್ತದೆ.[ಮಿಸ್ಡ್ ಕಾಲ್ ಕೊಟ್ಟು ಬ್ಯಾಂಕ್ ಬ್ಯಾಲೆನ್ಸ್ ಪಡೆಯಿರಿ]

Bank of Baroda Recruitment 2016 – Apply Online for 400 Probationary Officer Posts

ವಯೋಮಿತಿ: 02/08/1988 ರಿಂದ 01/08/1996 ರೊಳಗೆ ಜನಿಸಿದವರಾಗಿರಬೇಕು. 20 ರಿಂದ 28 ವರ್ಷ ವಯೋಮಿತಿ 01/08/2016ರಂತೆ ಇರಬೇಕು. ಎಸ್ ಸಿ. ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ ಇರುತ್ತದೆ. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ.

ವಿದ್ಯಾರ್ಹತೆ: ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. (ಎಸ್ ಸಿ/ಎಸ್ಟಿ ಅಭ್ಯರ್ಥಿಗಳಿಗೆ ಶೇ 55)

ಅರ್ಜಿ ಶುಲ್ಕ: ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ 100ರು ಅರ್ಜಿ ಶುಲ್ಕ ಹಾಗೂ ಸಾಮಾನ್ಯ ವರ್ಗಕ್ಕೆ 600 ರು ಪ್ರತಿ ಅರ್ಜಿಗೆ ಶುಲ್ಕ ವಿಧಿಸಲಾಗಿದೆ. ಮಾಸ್ಟರ್ / ವೀಸಾ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು.

* ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್ ತಾಣದ ಮೂಲಕ ಅರ್ಜಿ ಸಲ್ಲಿಸಿ
* Careers >> Recruitment Channels ಗೆ ಹೋಗಿ ಬಿಎಂಎಸ್ ಬಿ ಸೆಲೆಕ್ಷನ್ ಆಯ್ಕೆ ಮಾಡಿಕೊಳ್ಳಿ
* ಅರ್ಜಿಯನ್ನು ತುಂಬಿ, ಕಳಿಸಿ, ತುಂಬಿದ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ

* ಆನ್ ಲೈನ್ ಅರ್ಜಿ ಕೊನೆ ದಿನಾಂಕ: 21/08/2016
* ಪರೀಕ್ಷಾ ದಿನಾಂಕ(ಬಹುಶಃ) : 25/09/2016

ಅರ್ಜಿ ಸಲ್ಲಿಸುವುದು ಹೇಗೆ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ ತಿಳಿದುಕೊಳ್ಳಿ

ಅರ್ಜಿ ಸಲ್ಲಿಸುವುದು ಹಾಗೂ ಹುದ್ದೆಯ ಬಗ್ಗೆ ಇರುವ ಗೊಂದಲ ನಿವಾರಣೆಗೆ FAQs ಇಲ್ಲಿದೆ ಡೌನ್ ಲೋಡ್ ಮಾಡಿಕೊಳ್ಳಿ

(ಒನ್ಇಂಡಿಯಾ ಸುದ್ದಿ)

English summary
Bank of Baroda, Mumbai has published notification for the recruitment of Probationary Officer vacancies in Junior Management Grade / Scale-I. Apply Online for 400 Probationary Officer Posts before 21-08-2016.
Please Wait while comments are loading...