ಕರ್ನಾಟಕ: 550 ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್. 17 : ಪಶುಪಾಲನೆ ಮತ್ತು ಪಶು ಸೇವಾ ವೈದ್ಯ ಇಲಾಖೆಯಲ್ಲಿ ಖಾಲಿಯಿರುವ 450 ಹುದ್ದೆ ಮತ್ತು 100 ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 05 -04 -2017 ಕೊನೆ ದಿನವಾಗಿದೆ.

ಹುದ್ದೆ: ಪಶುವೈದ್ಯಾಧಿಕಾರಿ (550)
ವೇತನ: 28100 ರಿಂದ 50100 ರು.(ತಿಂಗಳಿಗೆ)
ಆಯ್ಜೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

Aapplication invited for recruitement 550 posts veterinary officers

ವಯೋಮಿತಿ: ಹಿಂದುಳಿದ ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷ ಮತ್ತು ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.[ಕೆಪಿಎಸ್‌ಸಿ ವಿವಿಧ ಹುದ್ದೆಗಳಿಗೆ ಆಹ್ವಾನ, ಏ.15 ಕೊನೆ ದಿನ]

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ಪಶುವೈದ್ಯಕೀಯ ವಿಜ್ಞಾನ ವಿದ್ಯಾಲಯ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್.ಸಿ/ ಬಿ.ವಿ.ಎಸ್.ಸಿ ಮತ್ತು ಹೆಚ್ ಪದವಿಯನ್ನು ಪಡೆದಕೊಂಡಿರಬೇಕು.

ಅರ್ಜಿ ಶುಲ್ಕ: ಅರ್ಜಿಯೊಂದಿಗೆ " ಜಂಟಿ ನಿರ್ದೇಶಕರು (ಆಡಳಿತ) ಪದನಿಮಿತ್ತ ಸದಸ್ಯ ಕಾರ್ಯದರ್ಶಿ, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ನಿರ್ದೇಶನಾಲಯ, ಬೆಂಗಳೂರು ರವರ ಹೆಸರಿಗೆ 500 ಡಿಡಿ ತುಂಬಬೇಕು. ಪ.ಜಾ/ಪ.ಪಂ/ಪ್ರ- ವಿಶೇಷ ಚೇತನರಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಕಳುಹಿಸಬೇಕಾದ ವಿಳಾಸ : ಸದಸ್ಯ ಕಾರ್ಯದರ್ಶಿಗಳು ಇಲಾಖಾ ಆಯ್ಕೆ ಸಮೀತಿ, ಪರಿಶೀಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಆಯುಕ್ತರವರ ಕಾರ್ಯಾಲಯ 2ನೇ ಮಹಡಿ, ಸರ್ ಎಂ ವಿಶ್ವೇಶ್ವರಯ್ಯ ಚಿಕ್ಕಗೋಪುರ ಡಾ.ಬಿ.ಆರ್ ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇವರಿಗೆ ತಲುಪುವಂತೆ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Karnataka AHVS Veterinary Officer Recruitment 2017 550 Posts. Job seekers should apply before 5th April 2017
Please Wait while comments are loading...