ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಪದೋಷ ಪರಿಹಾರ ಪೂಜೆ ಯಾವ ದೇವಾಲಯಗಳಲ್ಲಿ?

|
Google Oneindia Kannada News

ಬೆಂಗಳೂರು, ಆಗಸ್ಟ್. 18: ನಾಡಿಗೆ ದೊಡ್ಡದು ಎಂದು ಕರೆಸಿಕೊಳ್ಳುವ ನಾಗರ ಪಂಚಮಿ ಆಗಮಿಸಿದೆ, ಉತ್ತರ ಕರ್ನಾಟಕ ಭಾಗದಲ್ಲಿ ನಾಗರ ಪಂಚಮಿ ಹಬ್ಬಕ್ಕೆ ವಿಶೇಷ ಮಾನ್ಯತೆ ನೀಡುತ್ತಾರೆ.

ನಾಗದೇವರಿಗೆ ಪೂಜೆ ಸಲ್ಲಿಕೆ ಹಬ್ಬದ ಒಂದು ಆಚರಣೆ. ಸರ್ಪದೋಷ ನಿವಾರಣೆಗಾಗಿ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಮತ್ತು ದೊಡ್ಡಬಳ್ಳಾಪುದ ಘಾಟಿ ಸುಬ್ರಹ್ಮಣ್ಯದಲ್ಲಿ ಪೂಜೆ ನೆರವೇರಿಸಲಾಗುತ್ತದೆ.[ನಾಗರ ಪಂಚಮಿ ನಿಮಿತ್ತ ಆಶ್ಲೇಷ ಬಲಿ, ನಾಗ ತನು ತರ್ಪಣ]

bengaluru

ಶ್ರೀರಂಗಪಟ್ಟಣದ ಸಮೀಪದ ರಾಮನಾಥಪುರದ ಸುಬ್ರಹ್ಮಣ್ಯ ದೇವಾಲಯವೂ ಕರ್ನಾಟಕಲ್ಲಿ ಪ್ರಸಿದ್ಧಿ ಪಡೆದಿದೆ. ಸರ್ಪದೋಷ, ಸಂತಾನ ಹೀನತೆ, ದೃಷ್ಟಿ ದೋಷ ಸೇರಿದಂತೆ ಅನೇಕ ಸಮಸ್ಯೆಗಳು ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರೆ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಬೆಂಗಳೂರಿಗರಿಗೆ ಮುಕ್ತಿನಾಗ
ಬೆಂಗಳೂರು ನಾಗರಿಕರ ದೃಷ್ಟಿಯಲ್ಲಿ ಹೇಳಬೇಕು ಎಂದರೆ ಮುಕ್ತಿನಾಗ ದೇವಾಲಯ ಹತ್ತಿರದಲ್ಲಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚರಿಸಿ ದೊಡ್ಡ ಆಲದ ಮರ ರಸ್ತೆಯಲ್ಲಿ ತೆರಳಬೇಕು. ದೊಡ್ಡ ಆಲದ ಮರದ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಂಡರೆ ಮುಕ್ತಿನಾಗ ದೇವಾಲಯ ಸಿಗುತ್ತದೆ. ಇಲ್ಲಿಯೂ ಸಹ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತಿರುತ್ತವೆ.[ತಂಬಿಟ್ಟು ಮಾಡುವುದು ಹೇಗೆ?]

bengaluru

ನಾಗರ ಪಂಚಮಿಯನ್ನು ಅಣ್ಣ ತಂಗಿಯರ ಹಬ್ಬ, ಅಣ್ಣ ತಮ್ಮಂದಿರ ಹಬ್ಬ ಎಂದು ಹಲವು ಕಡೆ ಆಚರಣೆ ಮಾಡಲಾಗುತ್ತದೆ. ಹುಣಸೆ ಮರಕ್ಕೆ ಜೋಕಾಲಿ ಕಟ್ಟುವ ಸಂಪ್ರದಾಯವೂ ಹಲವೆಡೆ ಇದೆ.

bengaluru
English summary
There are two temples in Karnataka to worship or offer pooja for Sarpadosha parihara. The most prominent temple in Karnataka to worship in connection with sarpadosha, rhau kethu dosha etc is the Kukke Subramanya temple near Dharmasthala. Another temple is Ghati Subramanya near Doddaballapur and is 60 kms from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X