ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಜನಗೂಡು ದೇಗುಲದ ಕಿರಾತಾರ್ಜುನ ಮೂರ್ತಿಯ ಕಥೆ

By ಶಾಂತ
|
Google Oneindia Kannada News

ನಮ್ಮ ಭಾರತೀಯ ಸಂಸ್ಕೃತಿಯನ್ನು ಹೇಳುವಲ್ಲಿ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಸುಪ್ರಸಿದ್ದವಾಗಿದೆ. ಈ ಎರಡು ಮಹಾಗ್ರಂಥಗಳನ್ನು ಕೇಳದವರು ವಿರಳ. ಈ ಕಥೆಗಳನ್ನು ಹೇಳುವಲ್ಲಿ ನಿರಕ್ಷರಿಗೂ ತಿಳಿಯುವಂತೆ ಮಾಡಲು ಅನೇಕ ಶಿಲ್ಪ ಕಲೆಗಳು ನಮ್ಮ ಸಂಸ್ಕೃತಿಯಲ್ಲಿವೆ. ಎಲ್ಲಾ ಪ್ರಸಿದ್ದ ದೇವಾಲಯಗಳ ಆವರಣದಲ್ಲಿ ನೋಡಿದರೆ ಈ ಪುರಾಣೋಕ್ತವಾದ ಶಿಲ್ಪಗಳು ಗೋಡೆಗಳಲ್ಲಿ, ಕಂಬಗಳಲ್ಲಿ, ಗೋಪುರಗಳಲ್ಲಿ ಕಂಡು ಬರುತ್ತದೆ.

ಆದರೆ, ನಾಡಿನ ಪ್ರಸಿದ್ದವಾದ ನಂಜನಗೂಡಿನ ನಂಜುಡೇಶ್ವರನ ದೇವಸ್ಥಾನದ ಆವರಣದಲ್ಲಿ ಶಿವಲೀಲೆಯ ಅನೇಕ ವಿಗ್ರಹಗಳು ಇವೆ. ಅದರೆ ಯಾವ ಯಾತ್ರಿಕರಿಗೂ ಅವುಗಳನ್ನು ನೋಡುವ ತಾಳ್ಮೆ ಇರುವುದಿಲ್ಲ. ಅವುಗಳಲ್ಲಿ ಒಂದು ಈ ಕಿರಾತಾರ್ಜುನನ ಮೂರ್ತಿ. ಈ ಕಥೆ ಮಹಾಭಾರತದ ಅರಣ್ಯಪರ್ವದಲ್ಲಿ ಬರುತ್ತದೆ.

The Story of Nanjanagudu Kiratarjuna as mentioned in Mahabharata

ಪಾಂಡವರು ವನವಾಸದಲ್ಲಿ ಇರುವಾಗ ಅಲ್ಲಿಗೆ ವೇದವ್ಯಾಸ ಮಹರ್ಷಿಗಳು ಬರುತ್ತಾರೆ. ಧರ್ಮರಾಜನಿಗೆ ಶಿವನ ಮಹಾತ್ಮೆಯನ್ನು ತಿಳಿಸಿ ನಿಮ್ಮ ಐದು ಜನರಲ್ಲಿ ಒಬ್ಬನಾದ ಅರ್ಜುನನನ್ನು ತಪಸ್ಸಿಗೆ ಕಳುಹಿಸು ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡು ಪಾಶುಪತಾಶ್ತ್ರವನ್ನು ಪಡೆಯುಲಿ. ಆಗ ನಿಮ್ಮ ಗೆಲುವು ನಿಶ್ಚಿತ ಎಂದು ಹೇಳುತ್ತಾರೆ. ಆಗ ಧರ್ಮರಾಜನು ಅರ್ಜುನನಿಗೆ ವೇದವ್ಯಾಸರು ಹೇಳಿದ ಬೀಜ ಮಂತ್ರವನ್ನು ಉಪದೇಶಿಸಿ ತಪಸ್ಸಿಗೆ ಕಳುಹಿಸುತ್ತಾನೆ.

ಅರ್ಜುನನು ಇಂದ್ರ ಕೀಲಪರ್ವತಕ್ಕೆ ಹೋಗಿ ಅಲ್ಲಿ ನಿಷ್ಠೆಯಿಂದ ಘೋರ ತಪಸ್ಸನ್ನು ಮಾಡುತ್ತಾನೆ. ಅವನ ಅತ್ಯುಗ್ರ ತಪಸ್ಸಿನಿಂದ ಅಲ್ಲಿರುವ ಖುಷಿಗಳು, ಮುನಿಗಳಿಗೆ ತಾಪವಾಗುತ್ತದೆ. ಆಗ ಎಲ್ಲರೂ ಶಿವನಲ್ಲಿಗೆ ಹೋಗಿ ಪ್ರಾರ್ಥನೆ ಮಾಡುತ್ತಾರೆ. ಒಬ್ಬ ಯುವಕನು ಆಯುಧಗಳನ್ನೆಲ್ಲ ಇಟ್ಟು ಕೊಂಡು ತಪಸ್ಸು ಮಾಡುತ್ತಿದ್ದಾನೆ. ಅವನು ಯಾರೋ ಗೊತ್ತಿಲ್ಲ, ಅವನ ತಪಸ್ಸಿನಿಂದ ನಮಗೆ ತುಂಬಾ ಕಷ್ಟವಾಗುತ್ತದೆ.

English summary
The Story of Kiratarjuna of Nanjanagudu Temple in Karnataka as mentioned in epic Mahabharata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X