ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಂಸ್ಕೃತಿಕ ನಗರಿಯಲ್ಲಿ ಸಂಕ್ರಾಂತಿಯ ಸಂಭ್ರಮ !

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜನವರಿ 13 : ಸಂಕ್ರಾಂತಿ ಬಂತು ರತ್ತೊ...ರತ್ತೋ. ನಾಳೆ(ಜ.14) ಶುಭ ಸಂಕ್ರಮಣದ ಸುದಿನ. ಹಬ್ಬವನ್ನು ಆಚರಿಸಲು ಇಡೀ ಮೈಸೂರೇ ತಳಿರು ತೋರಣಗಳಿಂದ ಸಿಂಗರಿಸಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟುಗಳು ಎಳ್ಳು-ಬೆಲ್ಲದ ಖರೀದಿ ಕೂಡ ಜೋರಾಗಿದೆ.

ಭಾಲ್ಕಿ, ಸುಗ್ಗಿ ಹಬ್ಬ ಸಂಕ್ರಾಂತಿ ಹಬ್ಬದ ಆಚರಣೆಗಾಗಿ ಮೈಸೂರಿನಲ್ಲಿ ಜನತೆ ಸಂಭ್ರಮದ ಸಿದ್ಧತೆಯಲ್ಲಿ ತೊಡಗಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು. ಮಾರುಕಟ್ಟೆ, ಬಸ್ ನಿಲ್ದಾಣ, ವಿವೇಕಾನಂದ ವೃತ್ತ, ಅಗ್ರಹಾರ, ಆಂದೋಲನ ವೃತ್ತ, ಮಹಾತ್ಮ ಗಾಂಧಿ ವೃತ್ತದ ರಸ್ತೆಯ ಇಕ್ಕಲುಗಳಲ್ಲಿ ಜನರು ಜಮಾವಣೆಯಾಗಿ ಹಬ್ಬಕ್ಕಾಗಿ ಸರಕು ಸಾಮಾಗ್ರಿಗಳನ್ನು ಕೊಳ್ಳುತ್ತಿರುವ ದೃಶ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡಿತು.[ಬೆಂಗಳೂರು ವ್ಯಾಪಾರಿಗಳಿಗಿಲ್ಲ ಸಂಕ್ರಾಂತಿ ಸುಗ್ಗಿ, ಸಡಗರ]

Mysore, there seems to be a flurry of Makara Sankranti

ಹಬ್ಬ ಆಚರಣೆಗಾಗಿ ಎಳ್ಳು, ಬೆಲ್ಲ ಸೇರಿದಂತೆ ಹಣ್ಣು ಕೊಳ್ಳುತ್ತಿರುವ ದೃಶ್ಯ ಕಂಡು ಬಂತು. ಎಳ್ಳು-ಬೆಲ್ಲ ಬೆಲೆ ಹೊರತು ಪಡಿಸಿದರೆ ಉಳಿದಂತೆ ವಿವಿಧ ರೀತಿಯ ಹಣ್ಣುಗಳು 30-50 ರೂ ಕೆ.ಜಿ.ಯಂತೆ ಮಾರಾಟ ನಡೆದಿತ್ತು. ಬೆಳಗ್ಗೆಯಿಂದ ಸಂಜೆ ವರೆಗೂ ಪ್ರಮುಖ ರಸ್ತೆಗಳಲ್ಲಿ ಜನಜಂಗುಳಿ ಕಂಡು ಬಂತು.

ಮೈಸೂರಿನಲ್ಲಿ ಹಬ್ಬದಂದು ರಾಸುಗಳಿಗೆ ಕಿಚ್ಚು ಹಾಯಿಸುವ ವಾಡಿಕೆ..!

ರಾಸುಗಳನ್ನು ಸಿಂಗರಿಸುವ, ಕಿಚ್ಚು ಹಾಯಿಸುವ ಹಾಗೂ ಎಳ್ಳು-ಬೆಲ್ಲವನ್ನು ಬೀರುವ ಮೂಲಕ ರೈತರು ಹಾಗೂ ಸಾರ್ವಜನಿಕರು ಮಕರ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಕೆಲವರು ರಾತ್ರಿ ಹೊತ್ತೇ ಮನೆಯ ಮುಂದೆ ಬಣ್ಣ, ಬಣ್ಣದ ಚಿತ್ತಾರ ಹೊಂದಿದ ರಂಗೋಲಿ ಬಿಡಿಸಿ, ಧನುರ್ಮಾಸದ ಪ್ರಯುಕ್ತ ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಳ್ಳುತ್ತಾರೆ.

ಇನ್ನು ನಾಳೆ ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಜರಗುತ್ತವೆ. ಗ್ರಾಮೀಣ ಪ್ರದೇಶದಲ್ಲಿ ರಾಸುಗಳ ಮೈತೊಳೆದು, ಅವುಗಳನ್ನು ಸಿಂಗರಿಸಿ ಸಂಭ್ರಮಿಸಿದರು. ಜಿಲ್ಲಾ ಕ್ರೀಡಾಂಗಣ, ಕಲ್ಲಹಳ್ಳಿ, ಹೊಸಹಳ್ಳಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದ ವಿವಿಧೆಡೆ ಅಲಂಕಾರಿಕ ರಾಸುಗಳನ್ನು ಕಿಚ್ಚು ಹಾಯಿಸುವ ದೃಶ್ಯ ಸಾಮಾನ್ಯವಾಗಿರುತ್ತದೆ.[ಮಕರ ಸಂಕ್ರಾಂತಿ, ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ]

Mysore, there seems to be a flurry of Makara Sankranti

ತಾಲ್ಲೂಕಿನ ಜೀಗುಂಡಿ ಪಟ್ಟಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇನ್ನು ರೈತರು ತಮ್ಮ ರಾಸು ಗಳನ್ನು ಹಣ್ಣು, ದವನ, ಹೂಗಳು, ಕೊಂಬುಗಳಿಗೆ ಗುಲ್ಲಮ್ ಪಟ್ಟೆ ಅಂಟಿಸಿ ಸಂತಸವನ್ನು ಅಭಿವ್ಯಕ್ತಿಪಡಿಸುತ್ತಾರೆ. ಜೇಡಿ ಹಸಿ ಮಣ್ಣಿನಿಂದ ಸಂಕ್ರಾಂತಿ ಬೊಂಬೆ ನಿರ್ಮಿಸಿ ಪೂಜೆ ಸಲ್ಲಿಸುವ ವಾಡಿಕೆ ಕೂಡ ನಮ್ಮಲ್ಲಿದೆ ಎನ್ನುತ್ತಾರೆ ರೈತ ಬಸಪ್ಪ.

ಇನ್ನು ಬರದ ಛಾಯೆ, ರೈತರ ಆತ್ಮಹತ್ಯೆ ಸರಣಿ ಸಾವಿನ ನಡುವೆ ಈ ಭಾರಿಯ ಸಂಕ್ರಾಂತಿಗೆ ಕಾವೇರಿ ಕಾವು ಕೂಡ ಜೋರಾಗಿದೆ. ಕಬ್ಬನ್ನು ಖರೀದಿಸುವ ರೈತನಿಗೆ ಬೆಲೆ ಗೀಟದೆ ಅದು ಮಧ್ಯವರ್ತಿಗಳ ಪಾಲಾಗುತ್ತಿರುವುದು ಬೇಸರ ತರಿಸಿದೆ ಎನ್ನುತ್ತಾನೆ ಅನ್ನದಾತ.

Mysore, there seems to be a flurry of Makara Sankranti

ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ..!

ಸಂಕ್ರಾಂತಿ ಹಬ್ಬದ ದಿನ ಅವರೆಕಾಯಿ, ಕಡಲೆ ಕಾಯಿ ಹಾಗೂ ಗೆಣಸು ಬಳಕೆ ಮಾಡುವುದು ಸಂಪ್ರದಾಯ. ಆದರೆ, ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ತುಸು ಹೊರೆಯಾಗಿದೆ. ಅವರೆ ಕಾಯಿಯ ಸೀಸನ್ ಬಂತೆಂದರೆ ಎಲ್ಲಿ ನೋಡಿದರೂ ಹಸಿರು ಅವರೆಯ ಸೊಗಡಿನ ವಾಸನೆ ಸೂಸುತ್ತದೆ. ಆದರೆ, ಈ ಬಾರಿ ಮಳೆ ಕೊರತೆ ಹಾಗೂ ಹೆಚ್ಚು ಮಂಜು ಕವಿದಿದ್ದರಿಂದ ಅವರೆ ಮತ್ತು ಕಡಲೆಕಾಯಿ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡಿದೆ.

Mysore, there seems to be a flurry of Makara Sankranti

ಈ ಬಾರಿ ಮೂಟೆ ಲೆಕ್ಕದಲ್ಲಿ ಬಂದಿದ್ದು, ಇದರ ಪರಿಣಾಮ ದಿಂದ ಬೆಲೆ ಏರಿಕೆಯಾಗಿದೆ. ಕೆಜಿಗೆ 70ರಿಂದ 80ರೂ. ಇದ್ದು, ಇನ್ನು ಗೆಣಸು 30ರಿಂದ 40ರೂ. ಬೆಲೆ ಇದೆ. ಒಂದು ಜತೆ ಕಬ್ಬಿಗೆ 50ರಿಂದ 100 ಇದ್ದು, ಇನ್ನು ಎಳ್ಳು-ಬೆಲ್ಲ ಮಿಶ್ರಣ ಕೆಜಿಗೆ 300ರಿಂದ 400ರೂ.ಗೆ ಏರಿಕೆಯಾಗಿದೆ. ಇದರ ಜತೆಗೆ ಹೂವಿನ ಬೆಲೆಯೂ ಗಗನಕ್ಕೇರಿದೆ. ಈ ಬಿಸಿ ಗ್ರಾಮೀಣ ಭಾಗಕ್ಕೂ ತಟ್ಟಿದ್ದು, ವ್ಯಾಪಕ ಬರಗಾಲದಿಂದ ಗ್ರಾಮೀಣರಲ್ಲಿ ಸುಗ್ಗಿಸಂಭ್ರಮ ಕ್ಷೀಣಿಸಿದೆ. ಬಿತ್ತಿದ ಬೆಳೆ ಕೈಗೆ ಬಾರದೆ ಅನ್ನದಾತ ಕಂಗಾಲಾಗಿದ್ದು, ಇದರ ನಡುವೆ ಹೇಗೆ ಸಂಭ್ರಮದಿಂದ ಹಬ್ಬ ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ.

English summary
Mysore, there seems to be a flurry of Makara Sankranti. In the midst of the celebration of the festival of thought the people, Increase in the price of goods. But this year's(2016) crop grown by farmers due to drought. Sankranti is celebrated in an urban area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X