ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಬಾರ ಮತ್ತು ಚಿಮೂಗೆ ನಮ್ಮಲ್ಲೇ ಅವಮಾನ

By * ಬಾಲರಾಜ್ ತಂತ್ರಿ
|
Google Oneindia Kannada News

Chidananda Murthy and Chandrashekhara Kambar
ಇಡೀ ರಾಜ್ಯ ಡಾ. ಚಂದ್ರಶೇಖರ ಕಂಬಾರರಿಗೆ 8ನೇ ಜ್ಞಾನಪೀಠ ಪ್ರಶಸ್ತಿ ಬಂದ ಸಂತಸದಲ್ಲಿದ್ದರೆ, ರಾಜ್ಯದ ಗಡಿಭಾಗದ ಜನಪ್ರತಿನಿಧಿ ಕನ್ನಡಿಗರ ಸ್ವಾಭಿಮಾನದ ಬುಡಕ್ಕೆ ಕೈ ಹಾಕಿದ್ದರು. ಕನ್ನಡ ಭಾಷೆಗೆ ಮತ್ತು ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕಂಬಾರ ಅವರಿಗೆ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂದಾ ಬಾಳೆಕುಂದ್ರಿ ಅಗೌರವ ತೋರಿದ್ದರು.

ಕಂಬಾರರಿಗೆ ಅಭಿನಂದನೆ ಸಲ್ಲಿಸಲು ನಡೆದ ಪಾಲಿಕೆ ಸಭೆಯಲ್ಲಿ ವಿಷಯ ಮಂಡಿಸಿದ್ದ ಪ್ರಸ್ತಾವನೆಗೆ ಎಂಇಎಸ್ ಸದಸ್ಯ ಸಂಭಾಜಿ ಚವ್ಹಾಣ ಮಾತನಾಡಿ, ಕಂಬಾರರು 1ರಿಂದ 10ನೇ ತರಗತಿಯವರೆಗೆ ಕನ್ನಡ ಭಾಷೆಯಲ್ಲಿ ಕಲಿಸಬೇಕೆಂದು ಹೇಳಿದ್ದಾರೆ. ಆದ್ದರಿಂದ ಅವರನ್ನು ಅಭಿನಂದಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತೇನೆ ಎಂದಾಗ ಅದಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಎಲ್ಲಾ ಸದಸ್ಯರೂ ಬೆಂಬಲ ವ್ಯಕ್ತಪಡಿಸಿದರು. ಇದಕ್ಕೆ ಪರ ವಿರೋಧ ವ್ಯಕ್ತವಾದಾಗ ಮಧ್ಯ ಪ್ರವೇಶಿಸದ ಮೇಯರ್ ಮೇಯರ್ ಮಂದಾ ಬಾಳೇಕುಂದ್ರಿ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿ ಹೊರ ನಡೆದರು.

ಚಿಮೂಗೆ ರಾಜ್ಯಪಾಲರ ಅವಮಾನ : ಖ್ಯಾತ ಸಂಶೋಧಕ ಎಂ. ಚಿದಾನಂದಮೂರ್ತಿ ಅವರಿಗೆ ಬೆಂಗಳೂರು ವಿವಿ ಸಿಂಡಿಕೇಟ್ ಗೌರವ ಡಾಕ್ಟರೇಟ್ ನೀಡುವುದಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿರಾಕರಿಸಿದ್ದರು. ರಾಜ್ಯದಲ್ಲಿ ನಡೆದ ಚರ್ಚ್ ಮೇಲೆ ದಾಳಿ ನಡೆದಾಗ ಅದನ್ನು ಚಿದಾನಂದಮೂರ್ತಿ ಸಮರ್ಥಿಸಿಕೊಂಡಿದ್ದರು ಎನ್ನುವ ಕಾರಣಕ್ಕಾಗಿ ಹಂಸರಾಜ್ ಭಾರದ್ವಾಜ್ ಡಾಕ್ಟರೇಟ್ ಶಿಫಾರಸಿಗೆ ಸಹಿ ಹಾಕಿರಲಿಲ್ಲ.

ಈ ಬಗ್ಗೆ ಸಾಹಿತಿ ಮತ್ತು ಸಾಮಾಜಿಕ ವಲಯದಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ನಿಲುವಿನಿಂದ ಹಿಂದೆ ಸರಿದ ರಾಜ್ಯಪಾಲರು ಮತ್ತೆ ಚಿಮೂ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಪಕ್ಷಾತೀತವಾಗಿ ಎಲ್ಲರೂ ರಾಜ್ಯಪಾಲರ ನಿಲುವನ್ನು ಖಂಡಿಸಿದ್ದರು. ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರ್ತಿ ಅವರಿಗೆ ಗೌರವ ನಿರಾಕರಣೆ ವಿರುದ್ಧ ನಿರ್ಣಯವನ್ನೂ ಕೂಡಾ ಕೈಗೊಳ್ಳಲಾಗಿತ್ತು.

English summary
Kannada and Kannadigas in Karnataka are being insulted from every corner, especially from Maratha people. But, Kannadigas have not bogged down and showed strength to the rivals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X