ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು 6 ಸರಳ ಸೂತ್ರಗಳು

|
Google Oneindia Kannada News

"ಹೆಲ್ತ್ ಇಂಪಾರ್ಟೆಂಟು.. ಹೆಲ್ತ್ ಇಂಪಾರ್ಟೆಂಟು.. ಹೊಟ್ಟೆ ನೋಡ್ಕೋಳ್ಳಿ ಎಲ್ರೂ ಬಗ್ಬುಟ್ಟು..." ಯೋಗರಾಜ ಭಟ್ಟರ ಪರಪಂಚ ಚಿತ್ರದ ಹಾಡು ಇಂದ್ಯಾಕೋ ನೆನಪಾಯ್ತು. ಹಾಂ ಅಂದ ಹಾಗೆ ಇಂದು ವಿಶ್ವ ಆರೋಗ್ಯ ದಿನ...

ಜಂಜಾಟದ ಬದುಕಿನಲ್ಲಿ ನಮ್ಮ ಆರೋಗ್ಯದ ಕಡೆ ಗಮನ ಕೊಡುತ್ತಿದ್ದೇವೆಯೇ? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ. ಅದಕ್ಕೆ ಉತ್ತರವೂ ನಮಗೆ ಗೊತ್ತಿರುತ್ತದೆ. ಒತ್ತಡದ ಬದುಕಿಗೆ ಒಗ್ಗಿಕೊಂಡಿದ್ದೇವೆ ಬಿಡಿ.[ಎಲ್ಲರ ಕಾಡುತ್ತಿರುವ ಸಕ್ಕರೆ ರೋಗ ಒದ್ದೋಡಿಸುವುದು ಹೇಗೆ?]

ಭಟ್ಟರ ಹಾಡು ಕೇಳಿ ಬೇಕಾದ್ರೆ..

ಉದ್ಯೋಗಿಗಳು, ರೈತರು, ಮಕ್ಕಳು, ವಿದ್ಯಾರ್ಥಿಗಳು, ಗೃಹಿಣಿಯರು ಯಾರೇ ಆಗಿದ್ದರೂ ಒತ್ತಡಕ್ಕೆ ಸಿಕ್ಕಿ ನಲುಗುತ್ತಿದ್ದೇವೆ. ಅವುಗಳ ನಿವಾರಣೆ ಉಪಾಯವನ್ನು ಮಾತ್ರ ಮಾಡುತ್ತಿಲ್ಲ. ಬೆಳಗ್ಗೆ ಏಳುವುದೇ ತಡ, ಎದ್ದ ಮೇಲೆ ಹೋಟೆಲ್ ಗೆ ಹೋಗು, ಗಡಿಬಿಡಿಯಲ್ಲಿ ಒಂದಿಷ್ಟು ತಿನ್ನು, ಮಧ್ಯಾಹ್ನವೂ ಹೋಟೆಲ್ ಗೆ ನಡಿ.... ಯಪ್ಪಾ ಹೌದು ಇಂಥದ್ದೇ ಜೀವನ ಕ್ರಮಕ್ಕೆ ದಾಸರಾಗಿ ಹೋಗಿದ್ದೇವೆ.[ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]

ಕೆಲವರಿಗೆ ಬೊಜ್ಜು ಸಮಸ್ಯೆ ತಂದಿಟ್ಟರೆ, ಕೆಲವರಿಗೆ ಅಶಕ್ತತೆ ಕಾಡುತ್ತದೆ. ಇವುಗಳೇ ಮುಂದೆ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೆ ಮೂಲವಾಗಬಲ್ಲದು. ಆಹಾರ ಪದ್ಧತಿ, ನಿದ್ರೆ ಮಾಡುವ ಸಮಯ, ನೀರು ಕುಡಿಯುವ ವಿಧಾನ ಎಲ್ಲವನ್ನು ಹತೋಟಿಗೆ ತಂದುಕೊಳ್ಳಬೇಕಿದೆ.[ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!]

ಒಂದಿಷ್ಟು ಯೋಗ, ಹಿತ ಮಿತವಾದ ಆಹಾರ (ನಿಮ್ಮ ಮನೆಯಲ್ಲೇ ಮಾಡಿದ್ದು), ಸಮರ್ಪಕ ನಿದ್ರೆ, ತಿಳಿ ಹಾಸ್ಯವನ್ನು ಪ್ರತಿದಿನ ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ವಿಶ್ವ ಆರೋಗ್ಯ ದಿನಕ್ಕೂ ಅರ್ಥ. ನಿಮ್ಮ ಆರೋಗ್ಯವೂ ಸಮರ್ಥ. ಆರೋಗ್ಯ ಭಾಗ್ಯಕ್ಕೆ ಸರಳ ಸೂತ್ರಗಳನ್ನು ನೋಡಿಕೊಂಡು ಬನ್ನಿ....

 ಹೋಟೆಲ್ ಸಹವಾಸ ಬೇಡ

ಹೋಟೆಲ್ ಸಹವಾಸ ಬೇಡ

ಸಾಮಾನ್ಯವಾಗಿ ರಾತ್ರಿ ಊಟ ಅಥವಾ ಬೆಳಗಿನ ತಿಂಡಿಯನ್ನ ರೆಸ್ಟೋರೆಂಟ್ ಗಳಲ್ಲಿ ತಿನ್ನುವವರು ಮಾಮೂಲಿಯವರಿಗಿಂತ ಎರಡು ಪಟ್ಟು ಬೊಜ್ಜು ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ.

ನಗುವೇ ಜೀವನ

ನಗುವೇ ಜೀವನ

ನೂರು ಸಾರಿ ನಗು ಹದಿನೈದು ನಿಮಿಷ ನಿಲ್ಲಿಸಿದ ಸೈಕಲ್ ಅನ್ನು ತುಳಿದಷ್ಟು ವ್ಯಾಯಾಮಕ್ಕೆ ಸಮನಾಗಿರುತ್ತದೆ.

ಕುಳಿತುಕೊಂಡರೆ ಕತೆ ಮುಗೀತು

ಕುಳಿತುಕೊಂಡರೆ ಕತೆ ಮುಗೀತು

ದಿನದಲ್ಲಿ ಮೂರು ಗಂಟೆಗಿಂತ ಹೆಚ್ಚಿನ ಸಮಯ ಕೂರುವವರು ತಮ್ಮ ಆಯುಷ್ಯದ ಮೂರು ವರ್ಷಗಳನ್ನು ಕಳೆದುಕೊಳ್ಳುವ ಸಂಭವವಿರುತ್ತದೆ.

ಅಂತ್ಯ ಕಾಣಿಸುವ ದುಶ್ಚಟ

ಅಂತ್ಯ ಕಾಣಿಸುವ ದುಶ್ಚಟ

ತಂಬಾಕು ಮತ್ತು ಮದ್ಯವನ್ನು ಬಳಸದೇ ಇರುವುದರಿಂದ ಆರೋಗ್ಯಕರ ಆಹಾರಕ್ರಮ ಮತ್ತು ದೈಹಿಕ ವ್ಯಾಯಾಮ ಪಾಲಿಸುವುದರಿಂದ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆಯನ್ನು ಪ್ರತಿಶತ ಮೂವತ್ತರಷ್ಟು ತಗ್ಗಿಸಬಹುದು.

 ನಿದಿರೆ ಬರದಿರೆ ಏನಂತಿ?

ನಿದಿರೆ ಬರದಿರೆ ಏನಂತಿ?

ಪ್ರತಿ ರಾತ್ರಿಯೂ ಏಳು ಗಂಟೆಗಿಂತ ಕಡಿಮೆ ನಿದ್ರೆ ಮಾಡುವವರ ಆಯುಷ್ಯ ಮಿಕ್ಕವರಿಗಿಂತ ಬಲು ಬೇಗ ಕುಂಠಿತವಾಗುತ್ತದೆ. ಯಾರೂ ಏನೇ ಅಂದ್ರೂ ನಿದ್ರೆ ಮಾಡ್ತಾನೆ ಇರಿ(ಸರಿಯಾದ ಸಮಯದಲ್ಲಿ)

 ಕೆಟ್ಟದನ್ನು ಸುಟ್ಟುಹಾಕಿ!

ಕೆಟ್ಟದನ್ನು ಸುಟ್ಟುಹಾಕಿ!

ಕೆಟ್ಟದನ್ನು ಸುಟ್ಟುಹಾಕಿ ಅಂದ ಮಾತ್ರಕ್ಕೆ ಸಿಗರೇಟು ಸುಡುವುದಲ್ಲ. ನೀವು ಸೇದುವ ಪ್ರತೀ ಸಿಗರೇಟೂ ನಿಮ್ಮ ಜೀವನದ ಹನ್ನೊಂದು ನಿಮಿಷಗಳ ಆಯುಷ್ಯ ಕಿತ್ತುಕೊಳ್ಳುತ್ತದೆ ನೆನಪಿರಲಿ.

English summary
World Health Day 2016: How to maintain good Health? The Question and Answer is very simple. Here are 6 effective ways to maintain good health. Not for reading it is for following.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X