ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈನರಿಗೂ ಅಕ್ಷಯ ತೃತೀಯ ವಿಶೇಷ ದಿನ

ಜೈನರಿಗೂ ಅಕ್ಷಯ ತೃತೀಯ ವಿಶೇಷ ದಿನ. ಪ್ರತಿ ಎರಡು ದಿನಕ್ಕೊಮ್ಮೆ ಉಪವಾಸ ವ್ರತಾಚರಣೆ ಮಾಡುವ ಸಂಪ್ರದಾಯಸ್ಥರು ತಮ್ಮ ಒಂದು ವರ್ಷದ ತಾಪ್ಸಾಯ ವನ್ನು ಅಂದು ಮುಕ್ತಾಯಗೊಳಿಸುತ್ತಾರೆ.

By ಗುರುರಾಜ ಪೋಶೆಟ್ಟಿಹಳ್ಳಿ
|
Google Oneindia Kannada News

ಜೈನರಿಗೂ ಅಕ್ಷಯ ತೃತೀಯ ವಿಶೇಷ ದಿನ. ಪ್ರತಿ ಎರಡು ದಿನಕ್ಕೊಮ್ಮೆ ಉಪವಾಸ ವ್ರತಾಚರಣೆ ಮಾಡುವ ಸಂಪ್ರದಾಯಸ್ಥರು ತಮ್ಮ ಒಂದು ವರ್ಷದ ತಾಪ್ಸಾಯ ವನ್ನು ಅಂದು ಮುಕ್ತಾಯಗೊಳಿಸುತ್ತಾರೆ. ಪುರಾಣದಲ್ಲಿ ಋಷಭದೇವ ಕಬ್ಬಿನ ರಸ ಕುಡಿದು ತನ್ನ ಅಖಂಡ ವ್ರತಕ್ಕೆ ಅಂತ್ಯ ಸಾರಿದನೆಂಬ ಪ್ರತೀತಿಯ ಹಿನ್ನೆಲೆಯಲ್ಲಿ ಈಗಲೂ ಕಬ್ಬಿನ ರಸ ಕುಡಿದೇ ಉಪವಾಸ ಪರಿಸಮಾಪ್ತಿಗೊಳಿಸುವುದು ಪದ್ಧತಿ.

ದಕ್ಷಿಣಾಯನದಲ್ಲಿ ವಿಜಯ ದಶಮಿಯಾದರೆ ಉತ್ತರಾಯಣದಲ್ಲಿ ಅಕ್ಷಯ ತದಿಗೆ ಇವೆರಡೂ ತಿಥಿ ಪ್ರಧಾನವಾಗಿ ಗುರುತಿಸಲ್ಪಡುವ ದಿನಗಳು.ತ್ರೇತಾಯುಗಕ್ಕೆ ಇದು ಆರಂಭದ ದಿನವೆಂಬ ನಂಬುಗೆ ನಮ್ಮಲ್ಲಿದೆ. ಅದರಂತೆ ಇದು ಕಲ್ಪಾದಿಯ ದಿನವೂ ಅಹುದು. ಚೈತ್ರ ಮಾಸದಲ್ಲಿ ಪೂಜೆಗೊಳ್ಳುತ್ತಾ ಬಂದಿದ್ದ ಡೋಲಾಗೌರಿಯ ಪೂಜೆಗೆ ಇಂದು ಕೊನೆಯ ದಿನ. ಸುಮಂಗಲಿಯರ ಇಂದಿನ ಸಡಗರ ಸಂಭ್ರಮಗಳ ಸೊಗಸನ್ನು ನೋಡಿಯೇ ಅನುಭವಿಸಬೇಕು.[ಚಿನ್ನ ಖರೀದಿ ಬೇಡ ಎನ್ನಲು 7 ಕಾರಣಗಳು]

Significance of Akshaya Tritiya stories related to auspicious day

ಧರ್ಮಸಾಧನೆ ಮಾಡಬೇಕೆನ್ನುವವರಿಗೆ ವೈಶಾಖ ಮಾಸದ ಒಂದೊಂದು ದಿನವೂ ಯೋಗ್ಯ ದಿನವೆಂದು ತಿಳಿದು ಬರುತ್ತದೆ. ಉಳ್ಳವರು ಇಲ್ಲದವರಿಗೆ ನೀಡುವುದರಲ್ಲಿಯೇ ಇಹಪರಗಳ ಸಾರ್ಥಕ್ಯವಿದೆ. ಶಿವನ ಮುಡಿಯಿಂದ ಎಲ್ಲರ ದಾಹ ತಣಿಸುವ ಗಂಗೆ ಭೂಮಿಗೆ ಇಳಿದು ಬಂದ ಶುಭದಿನ ಕೂಡ ಇದೇ ಎಂದು ನಂಬಲಾಗಿದೆ.

ಬದರಿನಾರಾಯಣನ ಮಂದಿರದ ದ್ವಾರವನ್ನು ತೆರೆಯುವುದು ಅಕ್ಷಯ ತೃತೀಯದಂದು. ಅದು ಮುಕ್ತಿದ್ವಾರವನ್ನು ತೆರೆಯುವ ತಿಥಿ ಎಂದು ಪರ್ಯಾಯವಾಗಿ ಹೇಳಬಹುದು. 12ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವಣ್ಣನವರು ಜನಿಸಿದ್ದು ಕೂಡ ಇದೇ ದಿನ. ಅಂದು ಸೂರ್ಯ ಮತು ಚಂದ್ರರಿಬ್ಬರು ಅವರ ಉಜ್ವಲತೆಯ ಉತ್ತುಂಗದಲ್ಲಿರುತ್ತಾರೆ. ಹಗಲೂ ಪ್ರಖರ, ರಾತ್ರಿಯೂ ತುಂಬ ಬೆಳಕು![ಅಕ್ಷಯ ತೃತೀಯ ಬಗ್ಗೆ ಜನ ಏನಂತಾರೆ?]

ಮಗದೊಂದು ಗರಿಮೆ ಅಂದರೆ ವಾದೀಂದ್ರರು ಗುರು ಗುಣಸ್ತವನವನ್ನು ಈ ದಿನದಂದೇ ಮಂತ್ರಾಲಯ ಗುರು ಸಾರ್ವಭೌಮರಿಗೆ ಭಕ್ತಿ ಭಾವದಿಂದ ಸಮರ್ಪಿಸಿದರೆಂದೂ, ಅವರ ಭಕ್ತಿ ಭಾವಗಳಿಗೆ ಪುಳಕಿತರಾಗಿ ರಾಘವೇಂದ್ರರು ವೃಂದಾವನ ಸಮೇತವೇ ತಲೆದೂಗಿ ವಾದೀಂದ್ರರ ಕೀರ್ತಿಯನ್ನು ಅನೇಕ ತಲೆಮಾರುಗಳ ತನಕ ಹಬ್ಬಿಸಿ ಅನಂತ ಫಲ ನೀಡಿದ್ದು ಅಕ್ಷಯ ತೃತೀಯ ಮಹಿಮೆಯೇ ಆಗಿದೆ. ಹೀಗಾಗಿ ಅಂದು ಗಂಧಲೇಪಿತ ಗುರುರಾಜನ ದರ್ಶನ, ಪರಮ ಮಂಗಳಕರ.[ಅಕ್ಷಯ ತೃತೀಯದಂದು ಚಿನ್ನ ಖರೀದಿ ಯಾಕೆ?]

ಇಷ್ಟೇ ಏಕೆ? ಇದರ ಹೆಗ್ಗಳಿಕೆ ಮತ್ತೊಂದು ಹಿನ್ನೆಲೆಯಿದೆ. ಇಂದಿನ ಶುಭ ದಿನದಂದೇ ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ಪರಿಶುದ್ಧತೆಯನ್ನು ಪ್ರಕಟಪಡಿಸಿದ್ದು, ಸದಾ ಪರಿಶುದ್ಧಳ ಪುನಃ ಪರಿಶುದ್ಧತೆ ಸದಾ ಸಂಪಾದಿಸಬೇಕಾದ eನವನ್ನು ಪುನಃ ಸಂಪಾದಿಸುವ, ಜ್ಞಾನಯಜ್ಞದ ಪ್ರತೀಕವೂ ಆಗಿದೆ.

English summary
Akshaya Tritiya a very auspicious day in India. Akshaya tritiya is related with many stories. One of the stories is that, on this day Jains also perform purification vrat. This year Akshaya Tritiya celebrated on April 28,29, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X