ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯ ತದಿಗೆ ವಿಶೇಷ : ತಣ್ಣೀರನ್ನು ದಾನ ಮಾಡುವುದು ಶ್ರೇಷ್ಠ

ಬೇಸಿಗೆ ಕಾಲದಲ್ಲಿ ತಣ್ಣೀರನ್ನು ದಾನ ಮಾಡುವುದರಿಂದ ಅಕ್ಷಯ ಪುಣ್ಯ. ಪ್ರಾಣಾಪಾನಗಳ ಪೂರ್ಣ ಸ್ತಂಭನ ರೂಪವಾದ ಕುಂಭಕ ಯೋಗದ ನಿಶ್ಚಲತೆಯನ್ನು ಅದು ಸ್ಮತಿಗೆ ತರುತ್ತದೆ.

By ಗುರುರಾಜ ಪೋಶೆಟ್ಟಿಹಳ್ಳಿ
|
Google Oneindia Kannada News

ಇನ್ನು ಬೇಸಿಗೆ ಕಾಲದಲ್ಲಿ ತಣ್ಣೀರನ್ನು ದಾನ ಮಾಡುವುದರಿಂದ ಅಕ್ಷಯ ಪುಣ್ಯ. ಪ್ರಾಣಾಪಾನಗಳ ಪೂರ್ಣ ಸ್ತಂಭನ ರೂಪವಾದ ಕುಂಭಕ ಯೋಗದ ನಿಶ್ಚಲತೆಯನ್ನು ಅದು ಸ್ಮತಿಗೆ ತರುತ್ತದೆ.

ಅಂತಹ ಜಲವನ್ನು ಹೊತ್ತಿರುವ ಕಲಶವು ತಳದಲ್ಲಿ ಚಿಕ್ಕದಾಗಿದ್ದು ಮಧ್ಯದಲ್ಲಿ ವಿಸ್ತಾರವಾಗಿದ್ದು, ಮತ್ತೆ ಮುಖದಲ್ಲಿ ಕಿರಿದಾಗಿ ಸೃಷ್ಟಿ ಸ್ಥಿತಿ ಲಯಗಳನ್ನು ಹೊಂದುವ ವಿಶ್ವವನ್ನು, ಅವುಗಳನ್ನು ನಿರ್ವಹಿಸುವ ಭಗವಂತನ ತ್ರಿಮೂರ್ತಿ ತತ್ವವನ್ನು ಹೇಳುತ್ತದೆ. ಕಲಶಪೂಜೆಯ ಮಂತ್ರದಲ್ಲಿ ಈ ಅರ್ಥವನ್ನು ಕಾಣುತ್ತೇವೆ.

ಅಕ್ಷಯ ಫಲವು ನಿಶ್ಚಿತ: ಹೀಗೆ ಅಕ್ಷಯ ತೃತೀಯ ಪರ್ವದ ಕಾಲಜ್ಞಾನ, ದ್ರವ್ಯಜ್ಞಾನ, ವಿಧಿಜ್ಞಾನ ಪೂರ್ವಕವಾಗಿ ಈ ಹಬ್ಬವನ್ನು ಆಚರಿಸಿದರೆ ಅದರ ಹೆಸರಿಗೆ ಅನ್ವರ್ಥವಾದ ಅಕ್ಷಯ ಫಲವು ನಿಶ್ಚಿತವಾಗಿ ಸಿದ್ಧಿಸುವುದು.

Significance of Akshaya Tritiya stories related to auspicious day

ಅಕ್ಷಯ ತೃತೀಯದಂದು ಹುಟ್ಟಿದವರು ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿ ಹೆಸರು ಗಳಿಸುತ್ತಾರೆ ಎನ್ನುವುದೂ ಉಂಟು. ಅದಕ್ಕೆ ಉದಾಹರಣೆಯೆಂಬಂತೆ ವೈಶಾಖ ಮಾಸದಲ್ಲಿ ಬಸವೇಶ್ವರ, ರಾಮಾನುಜಾಚಾರ್ಯ ಹಾಗ ಶಂಕರಾಚಾರ್ಯ ಮತ್ತು ಗೌತಮ ಬುದ್ಧ ಜನಿಸಿ ಹೆಸರುವಾಸಿಯಾಗಿದ್ದಾರೆ.

ಕೆಲವರು ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ನಾಲ್ಕು ದಿಕ್ಕಿಗೆ ನಾಲ್ಕು ನಾಣ್ಯಗಳನ್ನು ಎಸೆಯುತ್ತಾರೆ. ಹೀಗೆ ಮಾಡಿದರೆ ಅದೃಷ್ಟದ ಬಾಗಿಲು ತೆರೆಯುತ್ತದೆ ಎನ್ನಲಾಗುತ್ತದೆ. ಮದುವೆಯಾದ ಮಹಿಳೆಯರು ಸಿಂಧೂರದಲ್ಲಿ ಅದ್ದಿದ ಕೆಂಪು ದಾರ ಧರಿಸಿ, ಶಿವ ಮಂದಿರಕ್ಕೆ ಭೇಟಿ ನೀಡಿ ಪತಿಯ ದೀರ್ಘಾಯುಷ್ಯಕ್ಕಾಗಿ ಮತ್ತು ಮದುವೆಯಾಗದವರು ಅದನ್ನು ಶಿವನ ಪಾದದ ಮೇಲಿಟ್ಟು ತಾವು ಬಯಸಿದಂಥ ಪತಿಯನ್ನು ಕರುಣಿಸಲು ಬೇಡಿಕೊಳ್ಳುತ್ತಾರೆ.

ಕಾಲ ಕಾಮ ಪರಶುರಾಮ: ಮಹಾ ವಿಷ್ಣುವಿನ ಆರನೇ ಅವತಾರವಾದ ಪರಶುರಾಮ ದೈಹಿಕ ಮತ್ತು ಬೌದ್ಧಿಕತೆಯ ದೃಷ್ಟಿಯಿಂದಲೂ ಪರಿಪೂರ್ಣ ಅವತಾರ. ಅದು ಆದದ್ದು ಇದೇ ಅಕ್ಷಯ ತೃತೀಯದಂದು. ಜಮದಗ್ನಿ-ರೇಣುಕೆಯ ಮಗನಾಗಿ ಜನನ. ದೈವೀ ಸ್ವರೂಪ ಮತ್ತು ಪವಾಡಗಳ ಹೊರತಾಗಿ ಶ್ರೀ ಪರಶುರಾಮನ ವ್ಯಕ್ತಿತ್ವವನ್ನು ಅವಲೋಕಿಸಿದಾಗ ಆತ ಒಬ್ಬ ಮಹಾನ್ ನಾಯಕ. ಆದರ್ಶ ಗುರು. ತ್ರೇತಾಯುಗದಲ್ಲೂ ಯುಗ ಧರ್ಮವನ್ನು ಮೀರಿ ಅತ್ಯಾಚಾರ-ಅನಾಚಾರ-ಭ್ರಷ್ಟಾಚಾರವೆಂಬ ಸಹಸ್ರಬಾಹುಗಳ ಕಾರ್ತವೀರ್‍ಯನ ರೂಪದಲ್ಲಿ ಪ್ರಕಟವಾದಾಗ ಕೊಡಲಿಯೆತ್ತಿ ಸಮರ ಸಾರಿ ಜಯಶೀಲರಾದ ಗಂಡುಗಲಿ.

ತಂದೆಯ ಮಾತನ್ನು ನಡೆಸಿಕೊಡುವಲ್ಲಿ ಕಾಣುವ ಅಸಾಧಾರಣ ಪಿತೃಭಕ್ತಿ. ಮೃತಳಾದ ತಾಯಿ, ತಮ್ಮಂದಿರನ್ನು ಬದುಕಿಸಲು ವರವನ್ನು ಬೇಡುವಲ್ಲಿ ಕಂಡು ಬರುವ ಅನನ್ಯ ಅಸಾಧಾರಣ ಮಾತೃಭಕ್ತಿ.

21 ಸಾರಿ ಭೂ ಪ್ರದಕ್ಷಿಣೆ ಮಾಡಿ ಕ್ಷತ್ರಿಯ ಸಂಹಾರದಿಂದ ಗಳಿಸಿದ ಭೂಮಿಯನ್ನು ತಾನು ಅನುಭವಿಸದೇ ಸ್ವಜನರಿಗೆ ದಾನವಿತ್ತ ಉದಾರತೆ, ಕೊಡಲಿಯೆಸೆದು ಸಮುದ್ರ ರಾಜನಿಂದ ಪಡೆದ ಭೂಮಿಯಲ್ಲಿ ತೋರಿದ ಹೊಸ ಸೃಷ್ಟಿಯ ಸಾಮರ್ಥ್ಯ. ಅನಂತರ ಲೋಕ ಕಲ್ಯಾಣಾರ್ಥವಾಗಿ ಮಹೇಂದ್ರ ಪರ್ವತದಲ್ಲಿ ತಪಸ್ಸಾಚರಣೆ ಹಾಗಾಗಿ ಚಿರಂಜೀವಿ. ಭವಿಷ್ಯ ಪುರಾಣದಲ್ಲಿ ಶ್ರೀ ಕೃಷ್ಣ ಪರಮಾತ್ಮನೇ ಇದರ ಅಸಾಧಾರಣ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ.

Parushu Rama
ಶೈವ-ವೈಷ್ಣವ ಪಂಥಗಳಿಬ್ಬರಿಗೂ ಮಾನ್ಯ: ನಮ್ಮ ಕರ್ನಾಟಕಕ್ಕೂ ಪರಶುರಾಮನಿಗೂ ನಿಕಟ ಸಂಬಂಧವಿದೆ. ಕನ್ನಡ ನಾಡಿನ ಒಂದು ದೊಡ್ಡ ಭಾಗವನ್ನು ಪರಶುರಾಮ ಕ್ಷೇತ್ರ ಎನ್ನುತ್ತೇವೆ. ಚಿಕ್ಕಮಗಳೂರು ಸಮೀಪದ ಹಿರೇಮಗಳೂರು ಶ್ರೀರಾಮ ಪರಶುರಾಮ ಸಂಧಿಸಿದ ಸ್ಥಳ ಭಾರ್ಗವ ಪುರಿ. ಮಹಾಭಾರತದ ವೀರಯೋಧ ಕರ್ಣ ತನ್ನ ಸ್ವಯಂಕೃತ ಅಪರಾಧದಿಂದ ಪರಶುರಾಮರಿಂದ ಶಾಪಗ್ರಸ್ತನಾದ.

ಹಾಗಾಗದೇ ಇದ್ದಲ್ಲಿ ಮಹಾಭಾರತದ ಕಥೆಯೇ ಬೇರೆಯಾಗುತ್ತಿತ್ತೇನೋ ಪರಶುರಾಮನನ್ನು ಕಾಲಕಾಮನೆಂದೂ ಕರೆಯಲಾಗುತ್ತದೆ. ಸೃಷ್ಟಿ-ಸ್ಥಿತಿ-ಲಯಗಳೆಂಬ ತ್ರಿವಿಧ ವ್ಯಾಪಾರಕ್ಕೆ ಕಾಲ ಮತ್ತು ಕಾಮಗಳು ಪ್ರೇರಕ. ಕಾಲವೆಂಬುದು ಶಿವ ಸ್ವರೂಪ ಮತ್ತು ಕಾಮವೆಂಬುದು ವಿಷ್ಣು ಸ್ವರೂಪವೆಂದಾದಲ್ಲಿ ಕಾಲಕಾಮ (ಪರಶುರಾಮ) ಶೈವ-ವೈಷ್ಣವ ಪಂಥಗಳಿಬ್ಬರಿಗೂ ಮಾನ್ಯ.

English summary
Akshaya Tritiya a very auspicious day in India. Akshaya tritiya is related with many stories. One of the stories is that, on this day many reformers born. This year Akshaya Tritiya celebrated on April 28,29, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X