{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/festivals/general/mother-s-day-special-tribute-all-mothers-103257.html" }, "headline": "ಅಕ್ಷರದಿಂದ ಅಮ್ಮಂದಿರ ವರ್ಣಿಸಲು ಸಾಧ್ಯವಿಲ್ಲ", "url":"http://kannada.oneindia.com/festivals/general/mother-s-day-special-tribute-all-mothers-103257.html", "image": { "@type": "ImageObject", "url": "http://kannada.oneindia.com/img/1200x60x675/2016/05/08-1462709456-mothersday.jpg", "width": "1200", "height":"675" }, "thumbnailUrl":"http://kannada.oneindia.com/img/128x50/2016/05/08-1462709456-mothersday.jpg", "datePublished": "2016-05-08T17:44:04+05:30", "dateModified": "2016-05-08T18:06:30+05:30", "author": { "@type": "Person", "url": "https://kannada.oneindia.com/authors/madhusoodhan.html", "name": "Madhusoodhan" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"General", "description": "It is the time of the year when the whole world pays tribute to mothers.", "keywords": "ಅಮ್ಮಂದಿರ ವರ್ಣಿಸಲು ಅಕ್ಷರದಿಂದ ಸಾಧ್ಯವಿಲ್ಲ, Mother's Day special: Tribute to all mothers, Worlds Mother Day", "articleBody":"ಅಮ್ಮಂದಿರ ದಿನದ ಬಗ್ಗೆ ಅಕ್ಷರಗಳಲ್ಲಿ ಬರೆದು ಮುಗಿಸಲು ಸಾಧ್ಯವಿಲ್ಲ. ಶಿವಾಜಿಯನ್ನು ಛತ್ರಪತಿ ಮಾಡಿದ ಜೀಜಾಬಾಯಿ, ಯುವರಾಜ್ ಸಿಂಗ್ ಗೆ ಕ್ಯಾನ್ಸರ್ ಗೆಲ್ಲುವ ಚೇತನ ನೀಡಿದ ಶಬನಮ್ ಸಿಂಗ್, ಮಗ ಪ್ರಧಾನಿಯಾದರೂ ಆಟೋದಲ್ಲೇ ತೆರಳುವ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್... ಉದಾಹರಣೆಗಳ ಪಟ್ಟಿ ಬೆಳೆಯುತ್ತದೆ... ಈ ಎಲ್ಲ ಮಹಾತಾಯಂದಿರಿಗೆ ಒಂದು ಸಲಾಂ ಹೇಳಿ ಮುಂದಕ್ಕೆ ಸಾಗಬೇಕು.ಎಲ್ಲರಿಗೂ ಅವರ ತಾಯಿ ನಾಯಕಿಯೇ, ಆದರ್ಶವೇ.. ಬದುಕಿನ ಪುಟಗಳೇ ಹಾಗೆ, ತಿರುವಿಹಾಕಿದಷ್ಟು ಮುಗಿಯದ ಹೊತ್ತಿಗೆ.... ಬಾಲ್ಯದ ಅಮ್ಮ ಕೊನೆವರೆಗೂ ಅಮ್ಮನೇ....ಅಮ್ಮನಿಗಾಗಿ ಬಾವಿಯನ್ನೇ ತೋಡಿದ ಸಾಗರದ ಬಾಹುಬಲಿಅಂಗನವಾಡಿಯ ಟೀಚರ್,ಪ್ರಾಥಮಿಕ ಶಾಲೆಯ ಅಕ್ಕೋರು, ಹೈಸ್ಕೂಲಿನ ಮೆಡಮ್, ಪಿಯುಸಿಯ ಮೇಡಮ್, ಡಿಗ್ರಿಯ ಇಂಗ್ಲಿಷ್ ಮೇಡಮ್, ಗೆಳತಿ, ಪ್ರೇಯಸಿ...ಅಷ್ಟೆ ಏಕೆ ವಿಧಾನ ಸೌಧದಲ್ಲಿ ಕೆಲಸ ಮಾಡುವ ಮಹಿಳೆಯೂ, ಸ್ಟೇಟ್ ಬ್ಯಾಂಕ್ ನ ಕ್ಯಾಷಿಯರ್, ಬಿಎಂಟಿಸಿ ಲೇಡಿ ಕಂಡಕ್ಟರ್, ಗಗನ ಸಖಿ, ನರ್ಸ್, ಸಹ ಅಮ್ಮನಾಗಿ ಕಾಣಿಸಬಹುದು..ಮಳೆ, ಪ್ರಕೃತಿ, ಇಳೆ, ಭೂಮಿ, ಮರ, ಅಮ್ಮಂದಿರಿಗೆ ಅಮ್ಮ.. ಭಾರತೀಯರೂ ನಿಸರ್ಗಕ್ಕೆ ಮಾತೆ ಎಂದು ಕರೆದುಕೊಂಡೇ ಬಂದಿದ್ದಾರೆ. ಅದನ್ನು ಪೂಜೆ ಮಾಡುತ್ತಲೇ ಇದ್ದಾರೆ.ಅಮ್ಮನಿಗೆ ಪ್ರೀತಿಯಿಂದ ಕಾಣಿಕೆ ಕೊಟ್ಟ ಗಾಯಕ ವಾಸು ದೀಕ್ಷಿತ್ಅಮ್ಮನ ಅನುಭೂತಿಯೇ ಹಾಗೆ, ಇದ್ದಾಗ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ. ತಿಳಿದರೂ ವ್ಯಕ್ತಪಡಿಸುವ ಪ್ರಮೇಯವೂ ಬರಲ್ಲ. ಅವಳಿಗೆ ನೀವು ತೆಗೆಸಿಕೊಡುವ ಸೀರೆ ಬೇಕಾಗಿಲ್ಲ. ಅವಳಿಗೆ ನೀವು ಕೊಡುವ ಚಿನ್ನದ ಒಡವೆಯೂಬೇಕಾಗಿಲ್ಲ. ನೀವು ಬೈದರೂ ಆಕೆ ಬೇಜಾರು ಮಾಡಿಕೊಳ್ಳಲ್ಲ. ಅದಕ್ಕೆ ಅವಳನ್ನು ತಾಯಿ ಎಂದು ಕರೆಯುವುದು.ಸಾಮಾಜಿಕ ತಾಣಗಳು ತಾಯಂದಿರಿಗೆ ನಮನ ಸಲ್ಲಿಕೆ ಮಾಡಿವೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಅಮ್ಮಂದಿರ ದಿನ ಜೋರಾಗಿಯೇ ಇದೆ. ಸಾಮಾಜಿಕ ತಾಣದಲ್ಲಿ ಫೋಟೋ ಅಪ್ ಲೋಡ್ ಮಾಡಿ ಅಮ್ಮಂದಿರ ದಿನವನ್ನು ನೆನಪು ಮಾಡಿಕೊಂಡರೆ ತಪ್ಪೇನು ಇಲ್ಲ.ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದುಆದರೆ ಅಮ್ಮನ ಪ್ರತಿದಿನದ ಆಗು ಹೋಗುಗಳು, ಅವಳಿಗೆ ಎದುರಾಗಬಹುದಾದ ಆರೋಗ್ಯ ಸಮಸ್ಯೆ ಈ ಬಗ್ಗೆಯೂ ನೀವು ಕುಳಿತಲ್ಲಿಂದಲೇ ಚಿಂತಿಸಬೇಕಿದೆ. ಆಕೆ ನಿಮಗೆ ಕರೆ ಮಾಡಿ ನನಗೆ ಎದೆನೋವು ಎಂದು ಹೇಳಿಲ್ಲದೇ ಇರಬಹುದು. ಆದರೆ ಆಕೆಯನ್ನು ಮೂರು ತಿಂಗಳಿಗೊಮ್ಮೆಯಾದರೂ ಮೆಡಿಕಲ್ ಚೆಕ್ ಅಪ್ ಮಾಡಿಸುವ ಕನಿಷ್ಠ ಜವಾಬ್ದಾರಿಯನ್ನಾದರೂ ನಿಭಾಯಿಸೋಣ..." }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರದಿಂದ ಅಮ್ಮಂದಿರ ವರ್ಣಿಸಲು ಸಾಧ್ಯವಿಲ್ಲ

|
Google Oneindia Kannada News

ಅಮ್ಮಂದಿರ ದಿನದ ಬಗ್ಗೆ ಅಕ್ಷರಗಳಲ್ಲಿ ಬರೆದು ಮುಗಿಸಲು ಸಾಧ್ಯವಿಲ್ಲ. ಶಿವಾಜಿಯನ್ನು ಛತ್ರಪತಿ ಮಾಡಿದ ಜೀಜಾಬಾಯಿ, ಯುವರಾಜ್ ಸಿಂಗ್ ಗೆ ಕ್ಯಾನ್ಸರ್ ಗೆಲ್ಲುವ ಚೇತನ ನೀಡಿದ ಶಬನಮ್ ಸಿಂಗ್, ಮಗ ಪ್ರಧಾನಿಯಾದರೂ ಆಟೋದಲ್ಲೇ ತೆರಳುವ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್... ಉದಾಹರಣೆಗಳ ಪಟ್ಟಿ ಬೆಳೆಯುತ್ತದೆ... ಈ ಎಲ್ಲ ಮಹಾತಾಯಂದಿರಿಗೆ ಒಂದು ಸಲಾಂ ಹೇಳಿ ಮುಂದಕ್ಕೆ ಸಾಗಬೇಕು.

ಎಲ್ಲರಿಗೂ ಅವರ ತಾಯಿ ನಾಯಕಿಯೇ, ಆದರ್ಶವೇ.. ಬದುಕಿನ ಪುಟಗಳೇ ಹಾಗೆ, ತಿರುವಿಹಾಕಿದಷ್ಟು ಮುಗಿಯದ ಹೊತ್ತಿಗೆ.... ಬಾಲ್ಯದ ಅಮ್ಮ ಕೊನೆವರೆಗೂ ಅಮ್ಮನೇ....[ಅಮ್ಮನಿಗಾಗಿ ಬಾವಿಯನ್ನೇ ತೋಡಿದ ಸಾಗರದ 'ಬಾಹುಬಲಿ']

mothers day

ಅಂಗನವಾಡಿಯ ಟೀಚರ್,ಪ್ರಾಥಮಿಕ ಶಾಲೆಯ ಅಕ್ಕೋರು, ಹೈಸ್ಕೂಲಿನ ಮೆಡಮ್, ಪಿಯುಸಿಯ ಮೇಡಮ್, ಡಿಗ್ರಿಯ ಇಂಗ್ಲಿಷ್ ಮೇಡಮ್, ಗೆಳತಿ, ಪ್ರೇಯಸಿ...
ಅಷ್ಟೆ ಏಕೆ ವಿಧಾನ ಸೌಧದಲ್ಲಿ ಕೆಲಸ ಮಾಡುವ ಮಹಿಳೆಯೂ, ಸ್ಟೇಟ್ ಬ್ಯಾಂಕ್ ನ ಕ್ಯಾಷಿಯರ್, ಬಿಎಂಟಿಸಿ ಲೇಡಿ ಕಂಡಕ್ಟರ್, ಗಗನ ಸಖಿ, ನರ್ಸ್, ಸಹ ಅಮ್ಮನಾಗಿ ಕಾಣಿಸಬಹುದು..

ಮಳೆ, ಪ್ರಕೃತಿ, ಇಳೆ, ಭೂಮಿ, ಮರ, ಅಮ್ಮಂದಿರಿಗೆ ಅಮ್ಮ.. ಭಾರತೀಯರೂ ನಿಸರ್ಗಕ್ಕೆ ಮಾತೆ ಎಂದು ಕರೆದುಕೊಂಡೇ ಬಂದಿದ್ದಾರೆ. ಅದನ್ನು ಪೂಜೆ ಮಾಡುತ್ತಲೇ ಇದ್ದಾರೆ.[ಅಮ್ಮನಿಗೆ ಪ್ರೀತಿಯಿಂದ ಕಾಣಿಕೆ ಕೊಟ್ಟ ಗಾಯಕ ವಾಸು ದೀಕ್ಷಿತ್]

mothers day

ಅಮ್ಮನ ಅನುಭೂತಿಯೇ ಹಾಗೆ, ಇದ್ದಾಗ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ. ತಿಳಿದರೂ ವ್ಯಕ್ತಪಡಿಸುವ ಪ್ರಮೇಯವೂ ಬರಲ್ಲ. ಅವಳಿಗೆ ನೀವು ತೆಗೆಸಿಕೊಡುವ ಸೀರೆ ಬೇಕಾಗಿಲ್ಲ. ಅವಳಿಗೆ ನೀವು ಕೊಡುವ ಚಿನ್ನದ ಒಡವೆಯೂಬೇಕಾಗಿಲ್ಲ. ನೀವು ಬೈದರೂ ಆಕೆ ಬೇಜಾರು ಮಾಡಿಕೊಳ್ಳಲ್ಲ. ಅದಕ್ಕೆ ಅವಳನ್ನು ತಾಯಿ ಎಂದು ಕರೆಯುವುದು.

mothers day

ಸಾಮಾಜಿಕ ತಾಣಗಳು ತಾಯಂದಿರಿಗೆ ನಮನ ಸಲ್ಲಿಕೆ ಮಾಡಿವೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಅಮ್ಮಂದಿರ ದಿನ ಜೋರಾಗಿಯೇ ಇದೆ. ಸಾಮಾಜಿಕ ತಾಣದಲ್ಲಿ ಫೋಟೋ ಅಪ್ ಲೋಡ್ ಮಾಡಿ ಅಮ್ಮಂದಿರ ದಿನವನ್ನು ನೆನಪು ಮಾಡಿಕೊಂಡರೆ ತಪ್ಪೇನು ಇಲ್ಲ.[ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು]

ಆದರೆ ಅಮ್ಮನ ಪ್ರತಿದಿನದ ಆಗು ಹೋಗುಗಳು, ಅವಳಿಗೆ ಎದುರಾಗಬಹುದಾದ ಆರೋಗ್ಯ ಸಮಸ್ಯೆ ಈ ಬಗ್ಗೆಯೂ ನೀವು ಕುಳಿತಲ್ಲಿಂದಲೇ ಚಿಂತಿಸಬೇಕಿದೆ. ಆಕೆ ನಿಮಗೆ ಕರೆ ಮಾಡಿ ನನಗೆ ಎದೆನೋವು ಎಂದು ಹೇಳಿಲ್ಲದೇ ಇರಬಹುದು. ಆದರೆ ಆಕೆಯನ್ನು ಮೂರು ತಿಂಗಳಿಗೊಮ್ಮೆಯಾದರೂ ಮೆಡಿಕಲ್ ಚೆಕ್ ಅಪ್ ಮಾಡಿಸುವ ಕನಿಷ್ಠ ಜವಾಬ್ದಾರಿಯನ್ನಾದರೂ ನಿಭಾಯಿಸೋಣ...

English summary
It is the time of the year when the whole world pays tribute to mothers. Twitter, Facebook, and other social media platforms are flooding with wishes and poems about moms and motherhood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X