ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ

Subscribe to Oneindia Kannada

ಆ ಬಂದ್, ಈ ಬಂದ್, ಎಲ್ಲಾ ಬಂದ್ ನಡುವೆ ಆಷಾಢ ಮಾಸ ಮುಗಿಯುತ್ತಾ ಬಂದಿದೆ. ಮಂಗಳವಾರ (ಆ 2) ಭೀಮನ ಅಮಾವಾಸ್ಯೆ ಮುಗಿಯುತ್ತಿದ್ದಂತೆಯೇ, ಶ್ರಾವಣ ಮಾಸ ಆರಂಭವಾಗುತ್ತಿದೆ.

ಈ ಬಾರಿ ಹೆಚ್ಚಿನ ಹಬ್ಬಹರಿದಿನಗಳು ಆಗಸ್ಟ್ ಮತ್ತು ಸೆಪ್ಟಂಬರ್ ಮಾಸದಲ್ಲಿ ಬರುತ್ತಿದೆ. ಕೃಷ್ಣ, ಗಣೇಶನೂ ಈ ಎರಡು ತಿಂಗಳಲ್ಲಿ ಬರುತ್ತಿದ್ದಾನೆ.

ಹೆಚ್ಚಿನ ಹಬ್ಬಗಳು ವಾರಾಂತ್ಯ ಮತ್ತು ವಾರದ ಮೊದಲ ದಿನಗಳಲ್ಲಿ ಬರುತ್ತಿರುವುದರಿಂದ ಸಾಲು ಸಾಲು ರಜೆಯ ಮಜವನ್ನು ಸವಿಯಬಹುದಾಗಿದೆ. (2016ನೇ ಸಾಲಿನ ರಜಾದಿನಗಳ ಪಟ್ಟಿ)

Karnataka india season of festivals holidays table aug sept oct 2016

ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತಿಕ ಮಾಸಗಳಲ್ಲಿ ಆಚರಿಸಲಾಗುವ ಹಬ್ಬಹರಿದಿನಗಳ ಪಟ್ಟಿ ಕೆಳಗಿನಂತಿದೆ. ಬುಕ್ ಮಾರ್ಕ್ ಮಾಡಿಕೊಂಡು ಇಟ್ಟುಕೊಳ್ಳಿ ಎನ್ನುವುದು ನಮ್ಮ ಕಡೆಯಿಂದ ಸಲಹೆ.

ಕ್ರಮ ಸಂಖ್ಯೆ, ದಿನಾಂಕ, ದಿನ, ಹಬ್ಬ ಹರಿದಿನಗಳು, ರಜೆ

ಶಾಲಿವಾಹನ ಶಕ 1939, ದುರ್ಮುಖಿ ನಾಮ ಸಂವತ್ಸರ, ದಕ್ಷಿಣಾಯನಂ, ಶ್ರಾವಣ ಮಾಸ 2016
 1ಆಗಸ್ಟ್ 2 ಮಂಗಳವಾರಭೀಮನ ಅಮಾವಾಸ್ಯೆ
 2ಆಗಸ್ಟ್ 7 ಭಾನುವಾರನಾಗರಪಂಚಮಿ
 3ಆಗಸ್ಟ್ 8 ಸೋಮವಾರಕಲ್ಕಿ ಜಯಂತಿ
 4ಆಗಸ್ಟ್ 9, 16, 23, 30 ಮಂಗಳವಾರಮಂಗಳಗೌರೀ ವೃತ
 5ಆಗಸ್ಟ್ 10 ಬುಧವಾರತುಲಸೀದಾಸ ಜಯಂತಿ
 6ಆಗಸ್ಟ್ 12 ಶುಕ್ರವಾರವರಮಹಾಲಕ್ಷ್ಮೀ ವೃತ - ನಿರ್ಭಂದಿತ ರಜಾ
 7ಆಗಸ್ಟ್ 15 ಸೋಮವಾರಸ್ವಾತಂತ್ರ್ಯ ದಿನಾಚರಣೆ - ಸಾರ್ವತ್ರಿಕ ರಜಾ
 8ಆಗಸ್ಟ್ 17 ಬುಧವಾರಋಗ್ ಉಪಾಕರ್ಮ
 9ಆಗಸ್ಟ್ 18 ಗುರುವಾರಯಜುರ್ ಉಪಾಕರ್ಮ, ರಕ್ಷಾಬಂಧನ, ಸಮುದ್ರಪೂಜೆ, ಹಯಗ್ರೀವ ಜಯಂತಿ
 10ಆಗಸ್ಟ್ 19 ಶುಕ್ರವಾರನಾರಾಯಣ ಗುರುಜನ್ಮದಿನ, ರಾಘವೇಂದ್ರಸ್ವಾಮಿಗಳ ಪೂರ್ವಾರಾಧನೆ
 11ಆಗಸ್ಟ್ 20 ಶನಿವಾರರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ
 12ಆಗಸ್ಟ್ 21 ಭಾನುವಾರರಾಘವೇಂದ್ರಸ್ವಾಮಿಗಳ ಉತ್ತರಾರಾಧನೆ
 13ಆಗಸ್ಟ್ 25 ಗುರುವಾರಶ್ರೀಕೃಷ್ಣ ಜನ್ಮಾಷ್ಟಮಿ, ನಿರ್ಭಂದಿತ ರಜಾ
 14ಆಗಸ್ಟ್ 26 ಶುಕ್ರವಾರಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ
ಶಾಲಿವಾಹನ ಶಕ 1939, ದುರ್ಮುಖಿ ನಾಮ ಸಂವತ್ಸರ, ದಕ್ಷಿಣಾಯನಂ, ಭಾದ್ರಪದ ಮಾಸ 2016
 15
ಸೆಪ್ಟೆಂಬರ್ 4 ಭಾನುವಾರಗೌರೀ ತೃತೀಯಾ
 16ಸೆಪ್ಟೆಂಬರ್ 5 ಸೋಮವಾರಗಣೇಶ ಚತುರ್ಥಿ, ಸಾರ್ವತ್ರಿಕ ರಜಾ
 17ಸೆಪ್ಟೆಂಬರ್ 6 ಮಂಗಳವಾರಋಷಿ ಪಂಚಮಿ, ಭೂವರಾಹ ಜಯಂತಿ
 18ಸೆಪ್ಟೆಂಬರ್ 8 ಗುರುವಾರವಿಶ್ವ ಸಾಕ್ಷರತಾ ದಿನ, ನೇಟಿವಿಟಿ ಮೇರಿ ಹಬ್ಬ
 19ಸೆಪ್ಟೆಂಬರ್ 12 ಸೋಮವಾರಬಕ್ರೀದ್, ಸರಕಾರೀ ರಜಾ
 20ಸೆಪ್ಟೆಂಬರ್ 14 ಬುಧವಾರತಿರು ಓಣಂ, ನಿರ್ಭಂದಿತ ರಜಾ
 21ಸೆಪ್ಟೆಂಬರ್ 15 ಗುರುವಾರಇಂಜಿನಿಯರ್ಸ್ ಡೇ, ಅನಂತನವೃತ, ನೋಂಪು
 22ಸೆಪ್ಟೆಂಬರ್ 16 ಶುಕ್ರವಾರವಿಶ್ವಕರ್ಮ ಜಯಂತಿ
 23ಸೆಪ್ಟೆಂಬರ್ 17 ಶನಿವಾರಮಹಾಲಯ ಆರಂಭ
 24ಸೆಪ್ಟೆಂಬರ್ 27 ಮಂಗಳವಾರಯತಿದ್ವಾದಶಿ
 25ಸೆಪ್ಟೆಂಬರ್ 30 ಶುಕ್ರವಾರಸರ್ವಪಿತೃ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ, ಸರಕಾರೀ ರಜಾ
ಶಾಲಿವಾಹನ ಶಕ 1939, ದುರ್ಮುಖಿ ನಾಮ ಸಂವತ್ಸರ, ದಕ್ಷಿಣಾಯನಂ, ಅಶ್ವಯುಜ ಮಾಸ 2016
 26ಅಕ್ಟೋಬರ್ 1 ಶನಿವಾರನವರಾತ್ರಿ ಆರಂಭ
 27ಅಕ್ಟೋಬರ್ 2 ಭಾನುವಾರಗಾಂಧಿ ಜಯಂತಿ
 28ಅಕ್ಟೋಬರ್ 3 ಸೋಮವಾರಮೊಹರಂ ಆರಂಭ
 29ಅಕ್ಟೋಬರ್ 6 ಗುರುವಾರಲಲಿತ ಪಂಚಮಿ
 30ಅಕ್ಟೋಬರ್ 8 ಶನಿವಾರಶಾರದಾ ಪೂಜೆ
 31ಅಕ್ಟೋಬರ್ 9 ಭಾನುವಾರದುರ್ಗಾಷ್ಠಮಿ
 32ಅಕ್ಟೋಬರ್ 10 ಸೋಮವಾರಆಯುಧ ಪೂಜಾ, ಸರಕಾರೀ ರಜಾ
 33ಅಕ್ಟೋಬರ್ 11 ಮಂಗಳವಾರವಿಜಯದಶಮಿ, ಬುದ್ದ, ಮಧ್ವ ಜಯಂತಿ, ಸರಕಾರೀ ರಜಾ
 34ಅಕ್ಟೋಬರ್ 15 ಶನಿವಾರವಾಲ್ಮೀಕಿ ಜಯಂತಿ, ಸರಕಾರೀ ರಜಾ
 35ಅಕ್ಟೋಬರ್ 17 ಸೋಮವಾರತಲಕಾವೇರಿ ತೀರ್ಥೋದ್ಭವ
 36ಅಕ್ಟೋಬರ್ 29 ಶನಿವಾರನರಕಚತುರ್ದಶಿ, ಸರಕಾರೀ ರಜಾ
 37ಅಕ್ಟೋಬರ್ 30 ಭಾನುವಾರದೀಪಾವಳಿ, ಧನಲಕ್ಷ್ಮೀ ಪೂಜಾ
ಶಾಲಿವಾಹನ ಶಕ 1939, ದುರ್ಮುಖಿ ನಾಮ ಸಂವತ್ಸರ, ದಕ್ಷಿಣಾಯನಂ, ಕಾರ್ತಿಕ ಮಾಸ 2016
 38ಅಕ್ಟೋಬರ್ 31 ಸೋಮವಾರಬಲಿಪಾಡ್ಯ, ಸರಕಾರೀ ರಜಾ
 40ನವೆಂಬರ್ 1 ಮಂಗಳವಾರಕರ್ನಾಟಕ ರಾಜ್ಯೋತ್ಸವ, ಸಾರ್ವತ್ರಿಕ ರಜಾ

English summary
Season of Festivals : List of all the Karnataka and Indian festivals and Government holidays for August, September and October 2016. May your heart be filled with joy and peace
Please Wait while comments are loading...