ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್: ಉಪವಾಸ ವ್ರತಕ್ಕೆ ಯಾರ್ಯಾರಿಗಿದೆ ವಿನಾಯಿತಿ?

ರಂಜಾನ್ ಉಪವಾಸ ಆಚರಿಸದಿದ್ದರೆ, ಮರೆತರೆ ಪ್ರಾಯಶ್ಚಿತ್ತ ಹೇಗೆ ಎಂಬ ಬಗ್ಗೆ ಇಂದಿಗೂ ಕೆಲವರಲ್ಲಿ ಅನುಮಾನವಿದೆ. ಅದಕ್ಕೆಂದೇ 'ಒನ್ ಇಂಡಿಯಾ' ಈ ಕುರಿತು ಕೆಲವು ಮಾಹಿತಿಗಳನ್ನು ನೀಡುತ್ತಿದೆ.

By ಒನ್ ಇಂಡಿಯಾ ಪ್ರತಿನಧಿ
|
Google Oneindia Kannada News

ನವದೆಹಲಿ, ಮೇ 31: ಮುಸ್ಲಿಮರ ಪವಿತ್ರ ಮಾಸ ಎಂದೇ ಕರೆಯಲ್ಪಡುವ ರಂಜಾನ್ ತಿಂಗಳು ಈಗಾಗಲೇ ಆರಂಭವಾಗಿದೆ. ಈ ಬಾರಿ ಮೇ 26 ರಿಂದ ಜೂನ್ 24ರವರೆಗೆ ಆಚರಣೆಗೊಳ್ಳಲಿರುವ ರಂಜಾನ್ ಅನ್ನು ಮುಸ್ಲಿಂ ಬಾಂಧವರು ಈಗಾಗಲೇ ಕಟ್ಟುನಿಟ್ಟಿನಿಂದ ಆಚರಿಸತೊಡಗಿದ್ದಾರೆ.

ಆದರೆ ಈ ಸಮಯದಲ್ಲಿ ಉಪವಾಸ ಆಚರಿಸುವುದು ಹೇಗೆ? ಯಾರ್ಯಾರು ಉಪವಾಸ ಮಾಡದಿದ್ದರೂ ನಡೆಯುತ್ತದೆ? ಉಪವಾಸ ಆಚರಿಸದಿದ್ದರೆ, ಮರೆತರೆ ಪ್ರಾಯಶ್ಚಿತ್ತ ಹೇಗೆ ಇತ್ಯಾದಿಗಳ ಬಗ್ಗೆ ಇಂದಿಗೂ ಕೆಲವರಲ್ಲಿ ಅನುಮಾನವಿದೆ. ಅದಕ್ಕೆಂದೇ 'ಒನ್ ಇಂಡಿಯಾ' ಈ ಕುರಿತು ಕೆಲವು ಮಾಹಿತಿಗಳನ್ನು ನೀಡುತ್ತಿದೆ.[ರಂಜಾನ್ ಖಾದ್ಯಗಳ ಮಳಿಗೆಗಳಲ್ಲಿ ಒಂದು ಸುತ್ತು!]

ಮುಸ್ಲಿಂ ಮತದಲ್ಲಿ ರಂಜಾನ್ ಆಚರಣೆ ಕಡ್ಡಾಯ ಮತ್ತು ಕಟ್ಟುನಿಟ್ಟಾದರೂ ಕೆಲವು ಅನಿವಾರ್ಯ ಪರಿಸ್ಥಿತಿಗಳಲ್ಲಿ ಉಪವಾಸ ಮಾಡದೇ ಇರಬಹುದು. ಆದರೆ ಅದಕ್ಕಾಗಿ ಪ್ರಾಯಶ್ಚಿತ್ತ ಎಂಬಂತೆ ಮುಸ್ಲಿಂ ಮತದಲ್ಲಿರುವ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.[ಇಸ್ಲಾಂ ಎಂದರೇನು? ರಂಜಾನ್ ವೈಶಿಷ್ಟ್ಯ ಏನು?]

ಗರ್ಭಿಣಿಯರು, ಋತುಮತಿಯಾದವರು, ಬಾಣಂತಿಯರು, ವೃದ್ಧರು, ರೋಗಿಗಳು ಉಪವಾಸವಿರಬೇಕೆಂಬ ಕಡ್ಡಾಯ ನಿಯಮವಿಲ್ಲ. ಅಂಥವರಿಗಾಗಿ ಫಿಡಿಯಾ ಮತ್ತು ಕಫಾರಾ ಎಂಬ ನಿಯಮಗಳಿವೆ. ಅನಿವಾರ್ಯ ಕಾರಣಗಳಿಂದ ಉಪವಾಸವನ್ನು ಆಚರಿಸದವರು ಈ ನಿಯಮವನ್ನು ಪಾಲಿಸುವ ಮೂಲಕ ಉಪವಾಸ ಮಾಡದೆ ಇರುವುದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು.[ರಂಜಾನ್ ಎಂದರೆ ಉಪವಾಸ ಮಾತ್ರವಲ್ಲ]

ಫಿಡಿಯಾ ಮತ್ತು ಕಫಾರಾ ಈ ಎರಡೂ ನಿಯಮಗಳಲ್ಲಿ ಉಪವಾಸ ವ್ರತವನ್ನು ಪಾಲಿಸದೆ ಇರುವವರು ನಿರ್ಗತಿಕರಿಗೆ, ಅಸಹಾಯಕರಿಗೆ ದಾನ ಮಾಡಬೇಕು. ದಾನ ಹಣ, ಊಟ ಯಾವುದೇ ರೂಪದಲ್ಲಿರಬಹುದು.[ರೋಜಾ ಆಚರಿಸುವ ಮುಸ್ಲಿಂ ಸ್ನೇಹಿತನ ದಿನಚರಿ ಹೀಗಿರುತ್ತದೆ]

ಯಾರು ಉಪವಾಸ ಮಾಡಬಹುದು?

ಯಾರು ಉಪವಾಸ ಮಾಡಬಹುದು?

ನೀವು ಆರೋಗ್ಯವಂತರಾಗಿದ್ದು, ಪ್ರೌಢಾವಸ್ಥೆಯನ್ನು ತಲುಪಿದ್ದೀರಾದರೆ ರಂಜಾನ್ ಉಪವಾಸ ವ್ರತ ಕೈಗೊಳ್ಳಬಹುದು. ಅನಾರೋಗ್ಯದಿಂದ ಬಳಲುತ್ತಿರುವವರು, ಯಾವುದಾದರೂ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉಪವಾಸದಿಂದ ವಿನಾಯಿತಿ ಇದೆ.

ಯಾರು ಉಪವಾಸ ಮಾಡಬಾರದು?

ಯಾರು ಉಪವಾಸ ಮಾಡಬಾರದು?

ರಂಜಾನ್ ಸಮಯದಲ್ಲಿ ನೀವು ದೂರದೂರಿಗೆ ಪ್ರಯಾಣಿಸುತ್ತಿದ್ದರೆ ಆಗ ಉಪವಾಸ ಕೈಗೊಳ್ಳಬಾರದು, ಇದರಿಂದ ನಿಶ್ಶಕ್ತಿ ಉಂಟಾಗುತ್ತದೆ. ಪ್ರಯಾಣದ ದಿನವನ್ನು ಬಿಟ್ಟು ಬೇರೆ ದಿನ ಉಪವಾಸ ಮಾಡಿ.

ಮಹಿಳೆಯರು ಉಪವಾಸ

ಮಹಿಳೆಯರು ಉಪವಾಸ

ಮಹಿಳೆಯರು ಉಪವಾಸ ವ್ರತ ಕೈಗೊಂಡಿದ್ದರೆ ಋತುಮತಿಯಾಗಿರುವ ಸಮಯದಲ್ಲಿ, ಹೆರಿಗೆಯ ನಂತರದ ರಕ್ತಸ್ರಾವದಿಂದ ಬಳಲುತ್ತಿದ್ದಲ್ಲಿ ಆ ದಿನಗಳಲ್ಲಿ ಯಾವ ಕಾರಣಕ್ಕೂ ಉಪವಾಸ ಮಾಡುವಂತಿಲ್ಲ.

ಅನಾರೋಗ್ಯವಿದ್ದರೆ...

ಅನಾರೋಗ್ಯವಿದ್ದರೆ...

ಅಕಸ್ಮಾತ್ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಉಪವಾಸ ಮಾಡಬೇಕಾದ ಅಗತ್ಯವಿಲ್ಲ. ಅಂಥ ಸಮಯದಲ್ಲಿ ಫಿಡಿಯಾ ಮೂಲಕ ಅಸಹಾಯಕರಿಗೆ ದಾನ ಮಾಡಿ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು.

ಗರ್ಭಿಣಿಯರೇನು ಮಾಡಬಹುದು?

ಗರ್ಭಿಣಿಯರೇನು ಮಾಡಬಹುದು?

ಗರ್ಭಿಣಿಯರು ಅಥವಾ ಮಗುವಿಗೆ ಎದೆಹಾಲುಣಿಸುತ್ತಿರುವ ತಾಯಂದಿರು ಉಪವಾಸ ಮಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನಿಸಿದರೆ ಅಂಥವರು ಉಪವಾಸ ಮಾಡುವ ಅಗತ್ಯವಿಲ್ಲ. ಅದರ ಬದಲಾಗಿ ಫಿಡಿಯಾ ಮಾಡಬಹುದು.

ಆಹಾರ ಸೇವಿಸಿದರೆ ಏನಾಗುತ್ತದೆ?

ಆಹಾರ ಸೇವಿಸಿದರೆ ಏನಾಗುತ್ತದೆ?

ಆರೋಗ್ಯವಂತರಾಗಿರುವವರೂ ಉಪವಾಸದ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಆಹಾರ ಸೇವಿಸಿದರೆ, ಅಥವಾ ಕುಡಿದರೆ ಅಂಥ ವ್ರತ ನಿರರ್ಥಕವಾಗುತ್ತದೆ. ಆದರೆ ಮರೆತು ಅಥವಾ ಒತ್ತಾಯಪುರ್ವಕವಾಗಿ ಆಹಾರ ಸೇವಿಸುವಂತಾಗಿ ಆಹಾರ ಸೇವಿಸಿದರೆ ಅಂಥವರ ತಪ್ಪನ್ನು ಮನ್ನಿಸಲಾಗುತ್ತದೆ.

ಉದ್ದೇಶಪೂರ್ವಕವಾಗಿ ವಾಂತಿ ಮಾಡುವುದು

ಉದ್ದೇಶಪೂರ್ವಕವಾಗಿ ವಾಂತಿ ಮಾಡುವುದು

ಉಪವಾಸ ವ್ರತ ಆಚರಿಸುತ್ತಿರುವವರು ಉದ್ದೇಶಪೂರ್ವಕವಾಗಿ ವಾಂತಿ ಮಾಡಿ, ಉಪವಾಸ ಬಿಡುವುದಕ್ಕೆ ಪ್ರಯತ್ನಿಸಿದರೆ ಅಂಥವರ ವ್ರತವೂ ನಿರರ್ಥಕವಾಗುತ್ತದೆ.

ಲೈಂಗಿಕ ಕ್ರಿಯೆ

ಲೈಂಗಿಕ ಕ್ರಿಯೆ

ವ್ರತ ಪಾಲಿಸುವ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ. ಅಕಸ್ಮಾತ್ ನಡೆಸಿದರೆ ಅದಕ್ಕೆ ಪ್ರಾಯಶ್ಚಿತ್ತ ಕಫಾರಾ. ಉಪವಾಸದ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾದವನು ನಂತದರ 60 ದಿನ ಕಟ್ಟುನಿಟ್ಟಿನ ಉಪವಾಸ ಪಾಲಿಸಬೇಕು. ಇಲ್ಲವೇ, 60 ಬಡವರಿಗೆ ಹಣ ಅಥವಾ ಊಟ ದಾನ ಮಾಡಬೇಕು.

ಉಪವಾಸ ವ್ರತ

ಉಪವಾಸ ವ್ರತ

ಉಪವಾಸ ವ್ರತ ಪಾಲಿಸುತ್ತಿದ್ದ ಮಹಿಳೆ ಸೂರ್ಯಾಸ್ತಕ್ಕೂ ಮೊದಲೇ ಋತುಮತಿಯಾದರೆ ಆಅಕೆಯ ಆ ದಿನದ ಉಪವಾಸ ನಿರರ್ಥಕ.

ರಂಜಾನ್ ನಲ್ಲಿ ಯಾವುದಕ್ಕೆ ಅಡ್ಡಿಯಿಲ್ಲ?

ರಂಜಾನ್ ನಲ್ಲಿ ಯಾವುದಕ್ಕೆ ಅಡ್ಡಿಯಿಲ್ಲ?

* ಬಾಯಿ ಮತ್ತು ಮೂಗನ್ನು ಮಿತ ನೀರಿನಿಂದ ತೊಳೆಯಬಹುದಾದರೂ ಆ ನೀರನ್ನು ನುಂಗುವಂತಿಲ್ಲ.
* ದೇಹಕ್ಕೆ ನೀರಿನ ಅಗತ್ಯವಿದೆ, ಅಥವಾ ನಿಮಗೆ ಬಾಯಾರಿಕೆಯಾಗುತ್ತಿದೆ ಎನ್ನಿಸಿದರೆ ತಕ್ಷಣ ಸ್ನಾನ ಮಾಡಬಹುದು. ಆದರೆ ಆ ಸಮಯದಲ್ಲೂ ನೀರು ಹೊಟ್ಟೆಗೆ ಹೋಗದಂತೆ ಎಚ್ಚರ ವಹಿಸಿ.
* ಅನಾರೋಗ್ಯದಿಂದ ಬಳಲುತ್ತಿರುವವರು ಚುಚ್ಚುಮದ್ದು ತೆಗೆದುಕೊಳ್ಳಬಹುದು.
* ಆಹಾರದ ರುಚಿ ನೋಡಿ ಅದನ್ನು ನುಂಗದೆ ಉಗುಳಿದರೆ ಅಂಥವರ ಉಪವಾಸ ನಿರರ್ಥಕವಾಗುವುದಿಲ್ಲ.
* ಪತ್ನಿ ಅಥವಾ ಪತಿ ಪರಸ್ಪರ ತಬ್ಬಿ, ಮುತ್ತಿಕ್ಕಬಹುದು. ಆದರೆ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ.

ಆಹಾರ ಯಾವಾಗ ತೆಗೆದುಕೊಳ್ಳಬೇಕು?

ಆಹಾರ ಯಾವಾಗ ತೆಗೆದುಕೊಳ್ಳಬೇಕು?

ಸೂರ್ಯೋದಯಕ್ಕೂ ಮೊದಲೇ ಆಹಾರ ತೆಗೆದುಕೊಂಡರೆ, ಇದೀ ದಿನ ಉಪವಾಸವಿದ್ದರೂ ದೇಹ ಕೊಂಚ ಲವಲವಿಕೆಯಿಂದಿರುತ್ತದೆ. ಸೂರ್ಯಾಸ್ತಕ್ಕೂ ಮೊದಲೇ ಆಹಾರ ಸೇವನೆಗೆ ಅನುಮತಿ ಇದೆ.

English summary
In Islamic culture, Ramzan is considered as a sacred festival of fasting. Ramadan brings virtue for the followers of this religion. Most of the muslims think this Ramzan fasting is a time to regret their sins, which they have committed knowingly or unknowingly. Here are the few guidlines for Ramadan fasting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X