ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರದಿಂದ ರಾಗೀಗುಡ್ಡದ ಹನುಮಜ್ಜಯಂತಿ ಉತ್ಸವ

By *ಬಾಲರಾಜ್ ತಂತ್ರಿ
|
Google Oneindia Kannada News

Ragigudda Temple
43ನೇ ಹನುಮಜ್ಜಯಂತಿ ಉತ್ಸವ ಸೋಮವಾರದಿಂದ ( ಡಿಸೆಂಬರ್ 5) ಆರಂಭಗೊಳ್ಳಲಿದೆ. 14 ದಿನಗಳ ಈ ಕಾರ್ಯಕ್ರಮ ಡಿಸೆಂಬರ್ 18ರಂದು ಮುಕ್ತಾಯಗೊಳ್ಳಲಿದೆ. ಪ್ರತಿವರ್ಷದಂತೆ ಈ ಬಾರಿಯೂ ರಾಗೀಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಸೋಮವಾರ (ಡಿ 5) ದಂದು ಪ್ರಾತಃಕಾಲ 9.05ಕ್ಕೆ ದೇವಾಲಯದ ಎಲ್ಲಾ ಸನ್ನಿಧಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಏಕಾದಶವಾರ ರುದ್ರಾಭಿಷೇಕ ಮತ್ತು ಸಹಸ್ರ ಮೋದಕ ಗಣಪತಿಹೋಮದ ಮೂಲಕ ಉತ್ಸವ ಆರಂಭಗೊಳ್ಳಲಿದೆ. ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ 108 ಶ್ರೀ ಸುಯತೀಂದ್ರ ತೀರ್ಥ ಶ್ರೀ ಪಾದಂಗಳವರು ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.

ಇಂದು ( ಡಿ 8) ಹನುಮಜ್ಜಯಂತಿ

ಗುರುವಾರ (ಡಿ 8) ಹನುಮಜ್ಜಯಂತಿ ಪ್ರಯುಕ್ತ ಪವಮಾನ ಸೂಕ್ತದಿಂದ ಮಧು ಅಭಿಷೇಕ, ಪವಮಾನ ಹೋಮ ಮತ್ತು ಆಂಜನೇಯಸ್ವಾಮಿ ಲಕ್ಷಾರ್ಚನೆ ನಡೆಯಲಿದೆ ಮತ್ತು ಸ್ವಾಮಿಗೆ ವಜ್ರಕಿರೀಟ ಸಹಿತ ವಜ್ರಕವಚ ಅಲಂಕಾರ ನಡೆಯಲಿದೆ. ಅಂದು ಸಂಜೆ 6.30ಕ್ಕೆ ವಿದುಷಿ ಎಂ ಡಿ ಪಲ್ಲವಿ ಮತ್ತು ವೃಂದದವರಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಲಿದೆ. ಉತ್ಸವದ ಕೊನೆಯ ದಿನವಾದ ಡಿ 18 ರಂದು ಸಂಜೆ ಆರು ಗಂಟೆಗೆ ಪ್ರಭಾತ್ ಕಲಾವಿದರಿಂದ "ಶ್ರೀಕೃಷ್ಣ ಜಯಂತಿ" ನೃತ್ಯರೂಪಕ ವಿರುತ್ತದೆ.

ರಾಮನಬಂಟ ಹನುಮಂತನ ಈ ಉತ್ಸವದಲ್ಲಿ ಆಸ್ತಿಕ ಮಹಾಶಯರು ಪಾಲ್ಗೊಂಡು ಸ್ವಾಮಿಯ ಕೃಪಾಶಿರ್ವಾದಗಳಿಗೆ ಪಾತ್ರರಾಗಬೇಕೆಂದು ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್ ಕೋರಿದೆ.

ವಿ.ಸೂ : ಶನಿವಾರ (ಡಿ 10) ಕೇತುಗ್ರಸ್ತ ಚಂದ್ರಗ್ರಹಣ ಸಂಜೆ 6.15 ರಿಂದ ರಾತ್ರಿ 9 .48ರ ವರೆಗೆ. ಅಂದು ಸಂಜೆ 7ಕ್ಕೆ ಗ್ರಹಣಶಾಂತಿ ಹೋಮ ಏರ್ಪಡಿಸಲಾಗಿದೆ.

English summary
43rd Hanumajjyanthi celebration starts from December 5th. 14 days celebration concludes on December 18th. Sri. Suyateendra Theertha Seer of Najanagudu Sri Raghavendra Swamy Math will inaugurate this festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X