ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾ: ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ವಿವಿಧ ವೇದಿಕೆಗಳಲ್ಲಿ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದಸರಾ ರಂಗು ಹೆಚ್ಚಿಸಲಿದೆ.
ಅರಮನೆ ವೇದಿಕೆ: ಸಂಜೆ 6 ಗಂಟೆಗೆ ಮಹಾಲಿಂಗು ಮತ್ತು ತಂಡದಿಂದ ಸುಗಮ ಸಂಗೀತ, ಸಂಜೆ 6.30ಕ್ಕೆ ಬದರೀ ದಿವ್ಯಭೂಷಣ್ ಮತ್ತು ತಂಡದಿಂದ ಸಮೂಹ ನೃತ್ಯ ರಾತ್ರಿ 7.30ಕ್ಕೆ ಮುಂಬೈ ಹರಿಹರನ್ ಮತ್ತು ತಂಡದಿಂದ ಸೋಲ್ ಇಂಡಿಯಾ.

ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5.30ರಿಂದ 6ಗಂಟೆಯವರೆಗೆ ಮೈಸೂರಿನ ನಾಗೇಶ್ ಕಂದೆಗಾಲ ಮತ್ತು ತಂಡದಿಂದ ಸುಗಮ ಸಂಗೀತ, ಸಂಜೆ 6 ರಿಂದ 7 ಗಂಟೆಯವರೆಗೆ ಮಹಾರಾಷ್ಟ್ರ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಲಾವಣಿ, ರಾತ್ರಿ 7 ರಿಂದ 8 ಗಂಟೆಯವರೆಗೆ ಹುಬ್ಬಳ್ಳಿ ಬಾಲಚಂದ್ರ ನಾಕೋಡ ಮತ್ತು ತಂಡದಿಂದ ಹಿಂದೂಸ್ತಾನಿ ಸಂಗೀತ ಹಾಗೂ ರಾತ್ರಿ 8 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಯಮುನಾ ಶ್ರೀನಿಧಿ ನೃತ್ಯಸಿರಿ.[ಗೋಲ್ಡ್ ಕಾರ್ಡ್, ಪ್ಯಾಲೆಸ್ ಆನ್ ವೀಲ್ಸ್, ಲಲಿತಮಹಲ್ ನಲ್ಲಿ ಊಟ]

ಕಲಾಮಂದಿರ ವೇದಿಕೆ: ಸಂಜೆ 5.30ರಿಂದ 6 ಗಂಟೆಯವರೆಗೆ ಕನಕಪುರ ಕು.ಭೂಮಿಕಾ ಮಧುಸೂದನ ಮತ್ತು ತಂಡದಿಂದ ಸುಗಮ ಸಂಗೀತ, ಸಂಜೆ 6 ರಿಂದ 7 ಗಂಟೆಯವರೆಗೆ ಬೆಂಗಳೂರಿನ ಅನಿತಾ ನಾರಾಯಣ ಕುಲಕರ್ಣಿ ಅವರಿಂದ ಸಿತಾರ್ ವಾದನ, ರಾತ್ರಿ 7 ರಿಂದ 8 ಗಂಟೆಯವರೆಗೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಭರತನಾಟ್ಯ, ಹಾಗೂ ರಾತ್ರಿ 8 ರಿಂದ 9ಗಂಟೆಯವರೆಗೆ ಬೆಂಗಳೂರಿನ ಧಾತ್ರಿ ಪ್ರತಿಷ್ಠಾನದ ವತಿಯಿಂದ ಸಮೂಹ ನೃತ್ಯ.

Dasara logo

ಗಾನಭಾರತಿ ವೇದಿಕೆ: ಸಂಜೆ 5.30ರಿಂದ 6ಗಂಟೆಯವರೆಗೆ ಮೈಸೂರಿನ ಪ್ರಗತಿ ಸೇವಾ ಟ್ರಸ್ಟ್ ವತಿಯಿಂದ ಸುಗಮ ಸಂಗೀತ, ಸಂಜೆ 6 ರಿಂದ 7 ಗಂಟೆಯವರೆಗೆ ಒಡಿಶಾ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ವತಿಯಿಂದ ರಣಪ್ಪಾ ನ್ಯತ್ಯ ಹಾಗೂ ರಾತ್ರಿ 7 ರಿಂದ 8 ಗಂಟೆಯವರೆಗೆ ಮೈಸೂರಿನ ಭೀಮಾಶಂಕರ್ ಮತ್ತು ತಂಡದಿಂದ ತಬಲಾ ವಾದನ ಹಾಗೂ ರಾತ್ರಿ 8 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಅಂಜಲಿ ನೃತ್ಯಶಾಲೆ ವತಿಯಿಂದ ಸಮೂಹ ನೃತ್ಯ.

ಚಿಕ್ಕ ಗಡಿಯಾರ ವೇದಿಕೆ: ಸಂಜೆ 5.30ರಿಂದ 6 ಗಂಟೆಯವರೆಗೆ ತಿ.ನರಸೀಪುರ ತುರುಗನೂರು ಆನಂದಕುಮಾರ್ ಮತ್ತು ತಂಡದಿಂದ ವೀರಭದ್ರನ ಕುಣಿತ, ಸಂಜೆ 6 ರಿಂದ 7 ಗಂಟೆಯವರೆಗೆ ತೆಲಂಗಾಣ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ವತಿಯಿಂದ ಬಥುಕಂ ನೃತ್ಯ ಹಾಗೂ ರಾತ್ರಿ 7 ರಿಂದ 8 ಗಂಟೆಯವರೆಗೆ ಕೊಪ್ಪಳ ಪರಶುರಾಮ್ ಕೆ ಬಣ್ಣದ ಮತ್ತು ತಂಡದವರಿಂದ ತತ್ವಪದ.[ದಸರಾ: ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ]

ಪುರಭವನ ವೇದಿಕೆ: ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗ ಕುಮಾರೇಶ್ವರ ನಾಟಕ ಸಂಘದ ವತಿಯಿಂದ ನಾಟಕ ಮುದುಕನ ಮದುವೆ, ಮಧ್ಯಾಹ್ನ 3 ಗಂಟೆಗೆ ಬಾಗಲಕೋಟೆ ಶ್ರೀ ಮಲ್ಲಿಕಾರ್ಜುನ ನಾಟಕ ಸಂಘದ ವತಿಯಿಂದ ಹೇಮರೆಡ್ಡಿ ಮಲ್ಲಮ್ಮ ಪೌರಾಣಿಕ ನಾಟಕ ಹಾಗೂ ರಾತ್ರಿ 7 ಗಂಟೆಗೆ ಮೈಸೂರಿನ ರಂಗವಲ್ಲಿ ತಂಡದಿಂದ ಸಂಸಾರದಲ್ಲಿ ಸನಿದಪ ಹಾಸ್ಯ ನಾಟಕ ನಡೆಯಲಿದೆ.

ಮಹಿಳಾ ದಸರಾ
ಬೆಳಗ್ಗೆ 11 ರಿಂದ 2 ಗಂಟೆಯವರೆಗೆ ಜೆ.ಕೆ.ಗ್ರೌಂಡ್ನಲ್ಲಿ ಮೈಸೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಮಕ್ಕಳ ಚಿಣ್ಣರ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಡ್ರಾಮ ಜ್ಯೂನಿಯರ್ ಖ್ಯಾತಿಯ ಅಮೋಘ, ಅಚಿಂತ್ಯ ಹಾಗೂ ಮಹೇಂದ್ರ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಅಂಗನವಾಡಿ ಕೇಂದ್ರಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ರಿಂದ 6 ಗಂಟೆಯವರೆಗೆ ಸ್ವಪ್ನ ಸುಂದರ್ ಅವರ ಸುಂದರ ಋತು ಕಲಾತಂಡದವರಿಂದ ಸುಗಮ ಸಂಗೀತ ನಡೆಯಲಿದೆ.

ಚಲನಚಿತ್ರೋತ್ಸವ
ಮಾನಸ ಗಂಗೋತ್ರಿಯ ಸೆನೆಟ್ ಭವನ: ಬೆಳಗ್ಗೆ 10.30ಕ್ಕೆ ಗೋಲ್ಡನ್ ಬರ್ಡ್ ಮತ್ತು ಫಿಶರ್ ವುಮನ್ ಅಂಡ್ ಟುಕ್ ಟುಕ್, ಬೆಳಗ್ಗೆ 11 ಗಂಟೆಗೆ ಪ್ರಕೃತಿ, ಮಧ್ಯಾಹ್ನ 2 ಗಂಟೆಗೆ ರಸನ್ ಪಿಯ, ಮಧ್ಯಾಹ್ನ 4 ಗಂಟೆಗೆ ಮಸಾನ್.[ರಾಜ್ಯದ ಪಾಲಿಗೆ ತಮಿಳುನಾಡು ಮಗ್ಗುಲ ಮುಳ್ಳು: ಕಣವಿ]

ರಾಣಿ ಬಹದ್ದೂರ್ ಸಭಾಂಗಣ: ಬೆಳಗ್ಗೆ 10.30ಕ್ಕೆ ರೋಟರಿ ಲೈಫ್ಫೈನ್ ಮತ್ತು -ಫೇಮಸ್ ಇನ್ ಅಹ್ಮದಾಬಾದ್, ಬೆಳಗ್ಗೆ 11 ಗಂಟೆಗೆ ಟೇಸ್ಟ್ ಆಫ್ ಚೆರ್ರಿ, ಮಧ್ಯಾಹ್ನ 2 ಗಂಟೆಗೆ ಎಲಿಝಬೆತ್ ಏಕಾದಶಿ, ಸಂಜೆ 4 ಗಂಟೆಗೆ ಪುಟ ತಿರುಗಿಸಿ ನೋಡು.

ಸ್ಕೈಲೈನ್: ಮಾಣಿಕ್ಯ, ಒಲಂಪಿಯಾ: ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಡಿಆರ್ಸಿ: ರನ್ನ, ಐನಾಕ್ಸ್- ಇಷ್ಟಕಾಮ್ಯ, ಲಕ್ಷ್ಮೀ- ಬಬ್ರುವಾಹನ, ಎಚ್.ಡಿ.ಕೋಟೆಯ ಮಂಜುನಾಥ ಚಿತ್ರಮಂದಿರದಲ್ಲಿ ಫಸ್ಟ್ ರ್ಯಾಂಕ್ ರಾಜು, ಕೆ.ಆರ್.ನಗರದ ಗೌರಿಶಂಕರ-ರಿಕ್ಕಿ, ನಂಜನಗೂಡಿನ ಲಲಿತ-ತಿಥಿ, ಪಿರಿಯಾಪಟ್ಟಣದ ಮಹದೇಶ್ವರ- ಕಿರಗೂರಿನ ಗಯ್ಯಾಳಿಗಳು, ಹುಣಸೂರಿನ ಲೀಲಾ- ಇಷ್ಟಕಾಮ್ಯ ಹಾಗೂ ತಿ.ನರಸೀಪುರದ ಮುರುಗನ್- ಬಬ್ರುವಾಹನ ಚಲನಚಿತ್ರಗಳು ಬೆಳಗಿನ ಪ್ರದರ್ಶನ ಇದೆ.[ಮದುವೆ ನಂತರ ಯದುವೀರ್ ಮೊದಲ ಖಾಸಗಿ ದರ್ಬಾರ್!]

ಆಹಾರ ಮೇಳ
ಸಂಜೆ 4 ಗಂಟೆಗೆ ಬೆಂಗಳೂರಿನ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪನಿರ್ದೇಶಕ ಎಂ.ಸಿ.ಗಂಗಾಧರ್ ಅವರು ಅನ್ನಭಾಗ್ಯ ಯೋಜನೆ-ಹಸಿವು ಮುಕ್ತ ಕರ್ನಾಟಕದ ಕನಸು ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಸಂಸಾರ ಸಾಗರ ಅತ್ತೆ ಸೊಸೆ ವಿಭಾಗದಲ್ಲಿ ಜೋಳದ ರೊಟ್ಟಿ ಮತ್ತು ಬದನೆಕಾಯಿ ಎಣ್ಣೆಗಾಯಿ ತಯಾರಿಸುವ ಅಡುಗೆ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಸಿರಿಧಾನ್ಯ ಲೋಕದಲ್ಲಿ ಬಯಲು ಸೀಮೆ ಬೆಳೆಗಾರರ ಸಂಘ ವತಿಯಿಂದ ರಾಗಿ ಮತ್ತು ಸಜ್ಜೆ ಸಿರಿಧಾನ್ಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ.

English summary
Mysore dasara celebration started. Film, food festival and other cultural activities have started on the backdrop dasara. Here the list of activities which are scheduled on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X