ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳದ ಹುಲಿಗೆಮ್ಮ ದೇವಿ ದಸರೆ ಉತ್ಸವಕ್ಕೆ ಆಹ್ವಾನ

By Mahesh
|
Google Oneindia Kannada News

ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಾಲಯದ ವತಿಯಿಂದ ಪ್ರಸಕ್ತ ವರ್ಷದ ದಸರಾ ಮಹೋತ್ಸವ ಅಕ್ಟೋಬರ್ 01 ರಿಂದ 11 ರವರೆಗೆ ವಿಜೃಂಭಣೆಯಿಂದ ನೆರವೇರಲಿದ್ದು, ಹಲವು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ ಅಕ್ಟೋಬರ್. 01 ರಂದು ಸಂಜೆ 6-30 ಗಂಟೆಗೆ ಹುಲಿಗೆಮ್ಮ ದೇವಾಲಯದಲ್ಲಿ ನೆರವೇರಲಿದ್ದು, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮ ಉದ್ಘಾಟಿಸುವರು.

Huligemma Devi Temple, Koppal- Dasara Special Programs List

ವಿವಿಧ ಕಾರ್ಯಕ್ರಮಗಳು : ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಅಂಗವಾಗಿ
* ಅ. 01 ರಿಂದ 10 ರವರೆಗೆ ಸಂಜೆ 6-30 ಗಂಟೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
* ಅ. 01 ರಂದು ಸಂಜೆ 6-30 ಗಂಟೆಗೆ ಮಂಗಲವಾದ್ಯದೊಂದಿಗೆ ಘಟ ಸ್ಥಾಪನೆ ನೆರವೇರಲಿದೆ.
* ಅ. 02 ರಂದು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
* ಅ. 3 ರಂದು ಹೊಸಪೇಟೆಯ ಭೂಮಿಕಾ ಹಾಗೂ ಗುಳೇದಗುಡ್ಡದ ಸುರೇಶ ಪರ್ವತೀಕರ್ ಅವರಿಂದ ಭಕ್ತಿ ಸಂಗೀತ.
* ಅ. 04 ರಂದು ಬಳ್ಳಾರಿಯ ಕವಿತಾ ವಸಂತಕುಮಾರ್ ದಂಪತಿಗಳಿಂದ ಜಾನಪದ ವೈಭವ.
* ಅ. 05 ರಂದು ಹುಬ್ಬಳ್ಳಿಯ ಪಂಡಿತ್ ವೇದಮೂರ್ತಿ ಪತ್ರಯ್ಯ ಸ್ವಾಮಿ ಹಿರೇಮಠ ಅವರಿಂದ ಕೀರ್ತನೆ.
* ಅ. 06 ರಂದು ಬಾಗಲಕೋಟೆಯ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಅನಂತ ಕುಲಕರ್ಣಿ ಇವರಿಂದ ದಾಸವಾಣಿ.
* ಅ. 07 ರಂದು ಗಂಗಾವತಿಯ ಪ್ರಾಣೇಶ್ ಮತ್ತು ತಂಡದಿಂದ ಹಾಸ್ಯಸಂಜೆ.
* ಅ. 08 ರಂದು ಹೊಸಪೇಟೆಯ ಅಂಜಲಿ ಭರತ ನಾಟ್ಯ ಸಂಘದಿಂದ ಭರತನಾಟ್ಯ ಮತ್ತು ನೃತ್ಯ ರೂಪಕ.
* ಅ. 09 ರಂದು ಮಾನ್ವಿಯ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಅಂಬಯ್ಯನುಲಿ ಅವರಿಂದ ವಚನ ಸಂಗೀತ.
* ಅ. 10 ರಂದು ಸಂಜೆ 06 ಗಂಟೆಗೆ ಕಿನ್ನಾಳಿನ ಲಚ್ಚಣ್ಣ ಇವರಿಂದ ಭಕ್ತಿ ಸಂಗೀತ. ರಾತ್ರಿ 08 ಗಂಟೆಗೆ ಹುಲಿಗಿಯ ಎಚ್.ಎಂ. ಕೊಟ್ರಯ್ಯಸ್ವಾಮಿ ಮಿತ್ರಮಂಡಳಿಯಿಂದ ರಕ್ತರಾತ್ರಿ ಸಂಗೀತಮಯ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.[ಹುಲಗಿಯ ಹುಲಗಿಯಮ್ಮನಿಗೆ ಉಘೆ ಉಘೆ ಹೇಳಿ]

ದಸರಾ ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ಬೆಳಗಿನ ಜಾವ ದೇವಸ್ಥಾನದಲ್ಲಿ ಸುಪ್ರಭಾತ ಪೂಜೆ, ಮಹಾನೈವೇದ್ಯ ಹಾಗೂ ಹೊಸಪೇಟೆಯ ನಾಗಭೂಷಣಂ ಅವರಿಂದ ಚಿದಾನಂದಾವಧೂತ ವಿರಚಿತ ಶ್ರೀದೇವಿ ಪುರಾಣ ಪಠಣಗೊಳ್ಳಲಿದೆ.

* ಅ. 11 ರಂದು ವಿಜಯದಶಮಿ ಅಂಗವಾಗಿ ಮಧ್ಯಾಹ್ನ 03 ಗಂಟೆಯಿಂದ ದೇವಿಯವರ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ಪೂಜೆ, ತೊಟ್ಟಿಲು ಸೇವೆ, ಮಹಾ ಮಂಗಳಾರತಿ, ಮಂತ್ರ ಪುಷ್ಪ ಸಮರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಗಣ್ಯಾತಿಗಣ್ಯರ ಉಪಸ್ಥಿತಿ: ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಗ್ರಾ.ಪಂ. ಅಧ್ಯಕ್ಷೆ ರೇಣುಕಾ ರಾಮಣ್ಣ, ಜಿ.ಪಂ. ಸದಸ್ಯೆ ಗಾಯತ್ರಿ ವೆಂಕಟೇಶ್ ವಡ್ಡರ್, ತಾ.ಪಂ. ಸದಸ್ಯ ಪಾಲಾಕ್ಷಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎಸ್. ವಸ್ತ್ರದ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ತ್ಯಾಗರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಭಕ್ತಾದಿಗಳು ದಸರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Dasara Special : Huligemma Devi Temple in Koppal district has announced the programs, Poojas, music recital and other events list. Huligemma Devi temple is situated in a village called Huligi. This village is beside bank of Tungabadra. Huligemma Devi Temple is around 15 km from Hospet; 25 km from Koppal and 75 km from Ballari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X