ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಮೇಳೈಸಿದೆ ದಸರಾ ಸಂಭ್ರಮ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 2: ಬುಡಕಟ್ಟು ಖಾದ್ಯ ಬಂಬೂಬಿರಿಯಾನಿ, ಬಿದಿರಕ್ಕಿ ಪಾಯಸದ ಆಹಾರ ಮೇಳ, ಪುಸ್ತಕ ಮೇಳ, ಕುಸ್ತಿ ಪಂದ್ಯಾವಳಿ, ಜನಮನಸೆಳೆಯುವ ಫಲ-ಪುಷ್ಪ ಪ್ರದರ್ಶನ, ಸಿನಿಮಾ ವೀಕ್ಷಣೆಗೆ ಅವಕಾಶ ಹೀಗೆ.. ಒಂದೇ ಎರಡೇ ಮೈಸೂರಿಗೆ ದಸರಾ ಕಳೆ ಬಂದಿದ್ದು, ಸಂಭ್ರಮ ಮನೆ ಮಾಡಿದೆ.

ಝಗಮಗಿಸುವ ವಿದ್ಯುದ್ದೀಪಗಳಿಂದ ಮೈಸೂರು ಕಂಗೊಳಿಸುತ್ತಿದ್ದು, ಅಲ್ಲಲ್ಲಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮ ರಂಗೇರಿಸುತ್ತಿದೆ. ದೂರದ ಪ್ರವಾಸಿಗರು ಸೇರಿದಂತೆ ನಗರವಾಸಿಗಳು ತಣ್ಣಗಿನ ಸಂಜೆಯಲ್ಲಿ ನಗರಕ್ಕೊಂದು ಸುತ್ತುಹೊಡೆದು, ದಸರಾ ಸಂಭ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.[ರಾಜ್ಯದ ಪಾಲಿಗೆ ತಮಿಳುನಾಡು ಮಗ್ಗುಲ ಮುಳ್ಳು: ಕಣವಿ]

dasara kusti

ಚಾಮುಂಡಿ ಬೆಟ್ಟದಲ್ಲಿ ದಸರಾಗೆ ವಿಧ್ಯುಕ್ತ ಚಾಲನೆ ದೊರೆತ ಬಳಿಕ ದಸರಾ ಸಂಬಂಧ ಕಾರ್ಯಕ್ರಮಗಳು ಒಂದರ ಮೇಲೊಂದರಂತೆ ಆರಂಭಗೊಂಡಿವೆ. ಆಹಾರ ಮೇಳದಲ್ಲಿ ಉತ್ತರ ಕನ್ನಡ, ಧಾರವಾಡ ಶೈಲಿ ಸೇರಿದಂತೆ ಹಲವು ತಿನಿಸುಗಳು ಸೆಳೆಯುತ್ತಿವೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ 9 ದಿನಗಳ ಕಾಲ ಆಹಾರ ಮೇಳ ನಡೆಯಲಿದೆ.
ದಸರಾ ಅಂಗವಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ 34ನೇ ರಾಜ್ಯಮಟ್ಟದ ದಸರಾ ಕುಸ್ತಿ ಪಂದ್ಯಾವಳಿ ನಡೆಯುತ್ತಿದೆ.[ಮದುವೆ ನಂತರ ಯದುವೀರ್ ಮೊದಲ ಖಾಸಗಿ ದರ್ಬಾರ್!]

dasara rangoli

ದಸರಾ ಕ್ರೀಡಾ ಉಪಸಮಿತಿ ವತಿಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ದಸರಾ ಕ್ರೀಡಾ ಕೂಟ ನಡೆದಿದ್ದು, ಪ್ಯಾರಾಲಿಂಪಿಕ್ಸ್ ರಜತ ಪದಕ ವಿಜೇತೆ ದೀಪಾ ಮಲಿಕ್ ಮಾತನಾಡಿ, ಕ್ರೀಡಾಪಟುಗಳಲ್ಲಿ ಉತ್ಸಾಹ ತುಂಬಿದ್ದಾರೆ.

ಮೈಸೂರಿನ ಹೃದಯ ಭಾಗದ ಅರಮನೆ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ದಸರಾ ಮಹೋತ್ಸವ ಪ್ರಯುಕ್ತ ಮಹಿಳಾ ದಸರಾದಿಂದ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯನ್ನು ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಉದ್ಘಾಟಿಸಿದರು.[ಮೈಸೂರು ದಸರಾ: ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ]

dasara yuva

ಕಾವೇರಿ ನಮ್ಮವಳು, ಜೀವ ಜಲ ಉಳಿಸಿ, ವೀರ ಯೋಧರಿಗೆ ನಮ್ಮ ನಮನ ಎಂಬ ಘೋಷಣೆಗಳೊಂದಿಗೆ ಕೆಂಪು, ಹಳದಿ, ಹಸಿರು ಹೀಗೆ ವಿವಿಧ ಬಣ್ಣಗಳಿಂದ ರಂಗೋಲಿ ಬಿಡಿಸಿ ಪ್ರಸ್ತುತ ರಾಜ್ಯದಲ್ಲಿ ಭುಗಿಲೆದ್ದಿರುವ ಕಾವೇರಿ ವಿವಾದವನ್ನು ಪ್ರತಿಬಿಂಬಿಸಿದ್ದು ಕಂಡು ಬಂತು.[ಗೋಲ್ಡ್ ಕಾರ್ಡ್, ಪ್ಯಾಲೆಸ್ ಆನ್ ವೀಲ್ಸ್, ಲಲಿತಮಹಲ್ ನಲ್ಲಿ ಊಟ]

ಕಲಾಮಂದಿರ ಸಭಾಂಗಣದಲ್ಲಿ ದಸರಾ ಅಂಗವಾಗಿ ಆಯೋಜಿಸಿದ್ದ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ ನಡೆಯಲಿದೆ.

English summary
Mysuru dasara attracting people for various reasons. Food festival, wrestling, film festival... happening in different parts of Mysuru city. Even book festival full with tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X