ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಸಿಟಿವಿ ಕಣ್ಗಾವಲಿನಲ್ಲಿ ಮೈಸೂರು ಅರಮನೆ

|
Google Oneindia Kannada News

ಮೈಸೂರು, ಸೆ.11 : ವಿಶ್ವಪ್ರಸಿದ್ದ ಮೈಸೂರು ದಸರಾ ಉತ್ಸವ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ, ಐತಿಹಾಸಿಕ ಮೈಸೂರು ಅರಮನೆ ಸಿಸಿಟಿವಿ ಕಣ್ಗಾವಲಿಗೆ ಒಳಪಟ್ಟಿದೆ. ಅರಮನೆಯ ಸುತ್ತಲೂ ಹೊಸದಾಗಿ 118 ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ದಸರಾ ಸಂದರ್ಭದಲ್ಲಿ ಅರಮನೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಪ್ರವಾಸಿಗರ ಭದ್ರತೆ ದೃಷ್ಠಿಯಿಂದ 4 ಕೋಟಿ ವೆಚ್ಚದಲ್ಲಿ, ಅರಮನೆಗೆ ಸಿಸಿಟಿವಿ ಆಳವಡಿಸಲಾಗಿದೆ. ಅರಮನೆ ಆವರಣದ 90 ಎಕರೆ ಪ್ರದೇಶ ಸದ್ಯ ಸಿಸಿಟಿವಿ ಕಾವಲಿನಲ್ಲಿದೆ.

Mysore Palace

ಮೈಸೂರು ಅರಮನೆಗೆ ಸದಾ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಆದರೆ, ದಸರಾ ಉತ್ಸವ ಪ್ರಾರಂಭವಾಗುತ್ತಿರುವುದರಿಂದ ಅರಮನೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾತ್ರಿಯ ವೇಳೆಯಲ್ಲೂ ಕ್ಯಾಮರಾಗಳು ಕಾರ್ಯನಿರ್ವಹಿಸಲಿದ್ದು, ಭದ್ರತೆಗೆ ಪೊಲೀಸರಿಗೆ ಸಹಕಾರ ನೀಡಲಿವೆ.

ಪ್ರತಿ ಪ್ರವಾಸಿಗ ಅರಮನೆಯ ಪಾರ್ಕಿಂಗ್ ಲಾಟ್ ಗೆ ಪ್ರವೇಶಿಸಿದ ನಂತರ ಸಿಸಿಟಿವಿ ಕಾವಲಿಗೆ ಒಳಪಡುತ್ತಾನೆ. ಅರಮನೆ ಸುತ್ತಾಡಿ ಆತ, ಆವರಣದಿಂದ ಹೊರ ಹೋಗುವ ತನಕ ಆತನ ಮೇಲೆ ಕ್ಯಾಮರಾ ಕಣ್ಣು ಇರುವಂತೆ ವ್ಯವಸ್ಥೆ ಮಾಡಲಾಗಿದೆ.

ಅರಮನೆ ಆಡಳಿತ ಮಂಡಳಿ ನಿರ್ದೇಶಕ ಸುಬ್ರಮಣ್ಯ ಅವರು ಈ ಕುರಿತು ಮಾಹಿತಿ ನೀಡಿದ್ದು, ಸಿಸಿಟಿವಿ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಲಹೆಯಂತೆ, ಅರಮನೆಯಲ್ಲಿ ನಾವು ಬೆಂಕಿ ನಂದಿಸುವ ಉಪಕರಣಗಳನ್ನು ಸ್ಥಾಪಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಂಬಾ ವಿಲಾಸ ಅರಮನೆ, ದರ್ಬಾರ್ ಹಾಲ್, ಚಿನ್ನದ ಅಂಬಾರಿ ಇರುವ ಸ್ಥಳ ಮುಂತಾವುಗಳಿಗೆ ಭದ್ರತೆ ಹೆಚ್ಚಿಸಲಾಗಿದೆ. ಅರಮನೆಯ ಭದ್ರತೆಗೆಂದೇ ಎಸಿಪಿ ದರ್ಜೆ ಅಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ಪೊಲೀಸ್‌ ಪಡೆ ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದರು.

English summary
The Mysore Palace is said to be one of the most visited monuments in India. In an effort to ensure the safety of the over 40 lakh tourists as well as the century-old elegant structure in Dasara session, 118 cameras installed in palace at a cost of Rs 4 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X