ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಲಕ್ಷ್ಮಿ ಒಲಿದ ಮಹಿಳಾ ಶಾಸಕಿಯರ ಪಟ್ಟಿ

|
Google Oneindia Kannada News

ಬೆಂಗಳೂರು, ಮೇ 9: 14ನೇ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ 170 ಅಭ್ಯರ್ಥಿಗಳು ಕಣದಲ್ಲಿದ್ದರು. ಇದುವರೆಗಿನ ಹದಿಮೂರು ಅಸೆಂಬ್ಲಿ ಚುನಾವಣೆಯಲ್ಲಿ ಇಷ್ಟು ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರಲಿಲ್ಲ.

ಇಷ್ಟು ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರೂ ವಿಜಯಲಕ್ಷ್ಮಿ ಒಲಿದಿದ್ದು ಬರೀ ಆರು ಮಂದಿಗೆ. ಶೋಭಾ ಕರಂದ್ಲಾಜೆ, ಅನಿತಾ ಕುಮಾರಸ್ವಾಮಿ, ಮಂಜುಳಾ ನಾಯ್ಡು, ತೇಜಸ್ವಿನಿ ರಮೇಶ್, ಸೀಮಾ ಮಸೂತಿ ಮುಂತಾದವರು ಸೋಲು ಅನುಭವಿಸಿದ್ದಾರೆ. ರಾಯಚೂರಿನಲ್ಲಂತೂ ನಟಿ ಪೂಜಾ ಗಾಂಧಿ ಠೇವಣಿಯನ್ನೇ ಕಳೆದುಕೊಂಡಿದ್ದಾರೆ.

2008ರ ಚುನಾವಣೆಯಲ್ಲಿ 107 ಮಹಿಳೆಯರು ಕಣದಲ್ಲಿದ್ದರು, ಅದರಲ್ಲಿ ಗೆದ್ದದ್ದು ಬರೀ ಮೂವರು. ನಂತರ ನಡೆದ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ಕಲ್ಪನಾ ಸಿದ್ದರಾಜು ವಿಜಯಶಾಲಿಯಾಗಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಗೆದ್ದ ಆರು ಮಹಿಳಾ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ಸಿನಿಂದ ಮೂವರು, ಬಿಜೆಪಿಯಿಂದ ಇಬ್ಬರು ಮತ್ತು ಜೆಡಿಎಸ್ ನಿಂದ ಒಬ್ಬರು. ಗೆದ್ದ ಮಹಿಳಾ ಅಭ್ಯರ್ಥಿಗಳ ಪಟ್ಟಿ ಸ್ಲೈಡಿನಲ್ಲಿ.

ನಿಪ್ಪಾಣಿ

ನಿಪ್ಪಾಣಿ

ಬಿಜೆಪಿ ಅಭ್ಯರ್ಥಿ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ 81860 ಮತಗಳನ್ನು ಪಡೆದು ವಿಜಯಶಾಲಿಯಾದರು. ಇವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಕಾಕಾ ಸಾಹೇಬ್ ಪಾಂಡುರಂಗ ಪಾಟೀಲ್ ಅವರನ್ನು 18662 ಮತಗಳಿಂದ ಸೋಲಿಸಿದ್ದಾರೆ.

ತೇರದಾಳ

ತೇರದಾಳ

ಕಳೆದ ಬಾರಿ ಸೋಲು ಅನುಭವಿಸಿದ್ದ ಉಮಾಶ್ರೀ ಈ ಬಾರಿ ಸೇಡು ತೀರಿಸಿ ಕೊಂಡಿದ್ದಾರೆ. ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಉಮಾಶ್ರೀ 70189 ಮತಗಳನ್ನು ಪಡೆದು ವಿಧಾನಸೌಧಕ್ಕೆ ಪ್ರವೇಶ ಪಡೆದಿದ್ದಾರೆ. ಅವರು ಬಿಜೆಪಿಯ ಸಿದ್ದು ಸವದಿ ಅವರನ್ನು 2599 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕುಮಟಾ

ಕುಮಟಾ

ಕಾಂಗ್ರೆಸ್ಸಿನ ಶಾರದಾ ಮೋಹನ್ ಶೆಟ್ಟಿ 36756 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ಇವರು ಜೆಡಿಎಸ್ಸಿನ ದಿನಕರ್ ಕೇಶವ್ ಶೆಟ್ಟಿಯವರನ್ನು ಕೂದಲೆಳೆಯ ಅಂತರದಿಂದ (420 ಮತ) ಸೋಲಿಸಿ ಆಯ್ಕೆಯಾದರು.

ಶಿವಮೊಗ್ಗ ಗ್ರಾಮಾಂತರ

ಶಿವಮೊಗ್ಗ ಗ್ರಾಮಾಂತರ

ಈ ಬಾರಿಯ ಚುನಾವಣೆಯ ಅಚ್ಚರಿಯ ಫಲಿತಾಂಶ. ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ ಶಾರದಾ ಪೂರ್ಯ ನಾಯಕ್ 48639 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಅವರು ಕೆಜೆಪಿಯ ಜಿ ಬಸವಣ್ಣಪ್ಪ ಅವರನ್ನು 10109 ಮತಗಳಿಂದ ಸೋಲಿಸಿ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.

ಕೆಜಿಎಫ್

ಕೆಜಿಎಫ್

ತನಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ತನ್ನ ತಾಯಿಯ ಮೂಲಕ ಆಖಾಡಕ್ಕೆಇಳಿದಿದ್ದ ವೈ ಸಂಪಗಿ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ವೈ ರಾಮಕ್ಕ 55014
ಮತಗಳನ್ನು ಪಡೆದು ಜೆಡಿಎಸ್ ಪಕ್ಷದ ಭಕ್ತವತ್ಸಲಂ ಅವರನ್ನು 26022 ಸೋಲಿಸಿದ್ದಾರೆ.

ಪುತ್ತೂರು

ಪುತ್ತೂರು

ಬಿಜೆಪಿಗೆ ತೀವ್ರ ಮುಖಭಂಗವಾದ ಕ್ಷೇತ್ರಗಳಲ್ಲಿ ಈ ಕ್ಷೇತ್ರ ಕೂಡಾ ಒಂದು. ಕಳೆದ ಬಾರಿ ಬಿಜೆಪಿ ಟಿಕೆಟಿನಿಂದ ಆಯ್ಕೆಯಾಗಿದ್ದ ಶಕುಂತಲಾ ಶೆಟ್ಟಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಶಕುಂತಲಾ ಶೆಟ್ಟಿ 66345 ಮತಗಳನ್ನು ಪಡೆದು ಬಿಜೆಪಿಯ ಸಂಜೀವ ಮಠಂದೂರು ಅವರನ್ನು 4289 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದಾರೆ.

English summary
Women legislators in 14th assembly, only 6 of 170 women win in Karnataka Assembly Elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X