ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯಲ್ಲಿ ಬಿಜೆಪಿ ಕುಂದಾ ಕದ್ದವರು ಯಾರು?

By Mahesh
|
Google Oneindia Kannada News

Belgaum District Assembly Results
ಬೆಳಗಾವಿ, ಮೇ.12: ಜಿಲ್ಲೆಯಲ್ಲಿ 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹದಿನೆಂಟರಲ್ಲಿ ಬಿಜೆಪಿ ಹನ್ನೊಂದು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದರೆ, ಕಾಂಗ್ರೆಸ್ ಉಳಿದ ಏಳು ಕ್ಷೇತ್ರಗಳಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿತ್ತು. ಆದರೆ, ಈ ಬಾರಿ ಆಗಿದ್ದೆಲ್ಲ ಉಲ್ಟಾ ಪಲ್ಟಾ. ಬಿಜೆಪಿ ಬಾಯಲ್ಲಿದ್ದ ಕುಂದಾವನ್ನು ಕದ್ದವರು ಯಾರು?

ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ಕ್ಲಿಪಿಂಗ್ ನೋಡಿ ಸಿಕ್ಕುಬಿದ್ದಿದ್ದ ಲಕ್ಷ್ಮಣ ಸವದಿ ಶೈಕ್ಷಣಿಕವಾಗಿ ಮುಂದಿರುವ ಅಥಣಿ ಕ್ಷೇತ್ರದಿಂದ, ಬೆಳಗಾವಿ ಜಿಲ್ಲೆಯವರು ಮುಖ್ಯಮಂತ್ರಿಯಾಗಬೇಕು ಎಂದು ಮಹತ್ವಾಕಾಂಕ್ಷೆ ಹೊಂದಿರುವ ಉಮೇಶ್ ಕತ್ತಿ ಬಿಜೆಪಿಯಿಂದ, ಯಡಿಯೂರಪ್ಪನವರ ವಿರುದ್ಧ ತೊಡೆತಟ್ಟಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದಿಂದ, ಸಿನೆಮಾ ಕ್ಷೇತ್ರದಲ್ಲಿ ಗೆದ್ದಿರುವ ಆನಂದ ಅಪ್ಪುಗೋಳ್ ಅವರು ಕಿತ್ತೂರು ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಈ ಬಾರಿ ಬಿಜೆಪಿ ಸ್ಥಾನಗಳನ್ನು ಕೆಜೆಪಿ, ಬಿಎಸ್ ಆರ್ ಹಾಗೂ ಪಕ್ಷೇತರರ ಜೊತೆಗೆ ಕಾಂಗ್ರೆಸಿಗೂ ಬಿಟ್ಟುಕೊಟ್ಟಿದೆ. 18 ರ ಪೈಕಿ 8 ಸ್ಥಾನಗಳನ್ನು ಮಾತ್ರ ಬಿಜೆಪಿ ಪಡೆದಿದೆ. ಖಾನಾಪುರ ಕ್ಷೇತ್ರವನ್ನು ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಲ್ಲದೆ, ಬೆಳಗಾವಿ ಗ್ರಾಮಾಂತರ, ಬೆಳಗಾವಿ ಉತ್ತರ ಹಾಗೂ ರಾಯಭಾಗ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ಪಕ್ಷೇತರರು ಬಂದಿರುವುದು ಪ್ರಮುಖ ಪಕ್ಷಗಳಿಗೆ ತಲೆನೋವು ತಂದಿದೆ.

[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

2013 ರಲ್ಲಿ ಬೆಳಗಾವಿ ದಿಂದ ಆಯ್ಕೆಗೊಂಡ ಶಾಸಕರು ಇವರು:

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಗಳಿಸಿದ ಮತಗಳು ಪಕ್ಷ
ನಿಪ್ಪಾಣಿ ಶಶಿಕಲಾ ಜೊಲ್ಲೆ
81860 ಬಿಜೆಪಿ ಕಾಕಾಸಾಹೇಬ್
ಪಿ. ಪಾಟೀಲ
63198
ಕಾಂಗ್ರೆಸ್
ಚಿಕ್ಕೋಡಿ ಪ್ರಕಾಶ್ ಬಾಬಣ್ಣ ಹುಕ್ಕೇರಿ
102237
ಕಾಂಗ್ರೆಸ್
ಸಂಗಪ್ಪಗೊಳ್ ಬಿ. ರುದ್ರಪ್ಪ
25649 ಬಿಜೆಪಿ
ಅಥಣಿ ಲಕ್ಷ್ಮಣ ಸವದಿ 74299
ಬಿಜೆಪಿ ಮಹೇಶ್ ಈರನಗೌಡ ಕಮಟಳ್ಳಿ 50528 ಕಾಂಗ್ರೆಸ್
ಕಾಗವಾಡ ಭರಮಗೌಡ ಎಚ್ ಕಾಗೆ 41784 ಬಿಜೆಪಿ
ಶ್ರೀಮಂತ ಪಾಟೀಲ 38897 ಜೆಡಿಎಸ್
ಕುಡಚಿ
(ಎಸ್ ಸಿ)
ಪಿ ರಾಜೀವ್
71057
ಬಿಎಸ್ಆರ್ ಶಾಮ ಭೀಮ ಘಾಟ್ಗೆ 24823
ಕಾಂಗ್ರೆಸ್
ರಾಯಭಾಗ
(ಎಸ್ ಸಿ)
ಐಹೊಳೆ ದುರ್ಯೋಧನ 37535
ಬಿಜೆಪಿ
ಪ್ರದೀಪ್ ಕುಮಾರ್ ಮಳಗಿ
36706
ಪಕ್ಷೇತರ
ಹುಕ್ಕೇರಿ ಉಮೇಶ್ ಕತ್ತಿ
81810
ಬಿಜೆಪಿ
ರವಿ ಬಸವರಾಜ ಕರಾಳೆ
24484
ಕಾಂಗ್ರೆಸ್
ಅರಭಾವಿ ಬಾಲಚಂದ್ರ ಜಾರಕಿಹೊಳಿ
99283
ಬಿಜೆಪಿ
ರಾಮಪ್ಪ ಕರಿಯಪ್ಪ ಉಟಗಿ
24062
ಕಾಂಗ್ರೆಸ್
ಗೋಕಾಕ್ ರಮೇಶ್ ಜಾರಕಿಹೊಳಿ
79175
ಕಾಂಗ್ರೆಸ್
ಅಶೋಕ್ ಪೂಜಾರಿ
51170 ಜೆಡಿಎಸ್
ಯಮಕನಮರಡಿ
(ಎಸ್ ಟಿ)
ಸತೀಶ್ ಜಾರಕಿಹೊಳಿ
70726
ಕಾಂಗ್ರೆಸ್
ಮಾರುತಿ ಮಲ್ಲಪ್ಪ ಅಷ್ಟಗಿ
46376
ಬಿಜೆಪಿ
ಬೆಳಗಾವಿ ಉತ್ತರ ಫಿರೋಜ್ ನೂರುದ್ದಿನ್ ಸೇಠ್
45125 ಕಾಂಗ್ರೆಸ್
ರೇಣು ಸುಹಾಸ್ ಕಿಲ್ಲೇಕರ
26915
ಪಕ್ಷೇತರ
ಬೆಳಗಾವಿ ದಕ್ಷಿಣ ಸಂಭಾಜಿ
ಲಕ್ಷ್ಮಣ್ ಪಾಟೀಲ್
54426
ಪಕ್ಷೇತರ
ಅಭಯ ಪಾಟೀಲ
48116
ಬಿಜೆಪಿ
ಬೆಳಗಾವಿ ಗ್ರಾಮಾಂತರ ಸಂಜಯ ಪಾಟೀಲ
38322
ಬಿಜೆಪಿ
ಕಿಣೇಕರ್ ಮನೋಹರ್ ಕಲ್ಲಪ್ಪ
36987 ಪಕ್ಷೇತರ
ಖಾನಾಪುರ ಪ್ರಹ್ಲಾದ ರೇಮಾನಿ
37055
ಪಕ್ಷೇತರ
ರಫೀಕ ಖಾನಾಪುರಿ
20903
ಕಾಂಗ್ರೆಸ್
ಕಿತ್ತೂರು ಡಿಬಿ ಇನಾಂದಾರ
53924
ಕಾಂಗ್ರೆಸ್
ಸುರೇಶ್ ಮಾರಿಹಾಳ
35634
ಬಿಜೆಪಿ
ಬೈಲಹೊಂಗಲ ವಿಶ್ವನಾಥ ಪಾಟೀಲ
40709
ಕೆಜೆಪಿ
ಜಗದೀಶ ಮೆಟಗುಡ್ಡ
37088
ಬಿಜೆಪಿ
ಸವದತ್ತಿ ಯಲ್ಲಮ್ಮ ವಿಶ್ವನಾಥ ಮಾಮನಿ (ಆನಂದ)
46434
ಬಿಜೆಪಿ
ರವೀಂದ್ರ ಬಿ. ಎಲಿಗಾರ
30392
ಕಾಂಗ್ರೆಸ್
ರಾಮದುರ್ಗ ಅಶೋಕ್
ಮಹದೇವಪ್ಪ ಪಟ್ಟಣ
42310
ಕಾಂಗ್ರೆಸ್
ಮಹದೇವಪ್ಪ ಯಾದವಾಡ
37326 ಬಿಜೆಪಿ
English summary
Karnataka assembly Election 2013 Belgaum district Results: Get complete information about winners and losers with their constituencies and party. Belgaum has 18 constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X