ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮುಂಡೇಶ್ವರಿ : ಜಿಟಿ ದೇವೇಗೌಡರ ಸತ್ವ ಪರೀಕ್ಷೆ

By Shami
|
Google Oneindia Kannada News

Chamundeshwari (Mysore) constituency profile
ಹಾಲಿ ಶಾಸಕ - ಸತ್ಯನಾರಾಯಣ (ಕಾಂಗ್ರೆಸ್)

ರಾಜಕೀಯ ಮಹತ್ವ : ನಾಡ ದೇವತೆ ಚಾಮುಂಡೇಶ್ವರಿ ದೇಗುಲ ಇರುವ ಈ ಕ್ಷೇತ್ರ ಸಿದ್ದರಾಮಯ್ಯ ಅವರ ರಾಜಕೀಯ ಕರ್ಮಭೂಮಿ. ಜೆಡಿಎಸ್ ತೊರೆದು 257 ಮತಗಳ ಅಂತರದಲ್ಲಿ ಅವರು ಉಪಚುನಾವಣೆಯಲ್ಲಿ ಗೆದಿದ್ದು ಇಲ್ಲೇ.

ಪ್ರಮುಖ ಸ್ಪರ್ಧಿಗಳು : ಹಾಲಿ ಶಾಸಕ ಸತ್ಯನಾರಾಯಣ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಜೆಡಿಎಸ್‍ನಿಂದ ಜಿ.ಟಿ. ದೇವೇಗೌಡ (ಚಿತ್ರದಲ್ಲಿರುವವರು) ಸ್ಪರ್ಧಿಸೋದು ಬಹುತೇಕ ನಿಶ್ಚಿತ. ಕೆಜೆಪಿಯಿಂದ ಅಪ್ಪಣ್ಣ ಸ್ಪರ್ಧಿಸುತ್ತಿದ್ದಾರೆ.

ಗೆಲುವಿನ ಲೆಕ್ಕಾಚಾರ : ಕಳೆದ ಚುನಾವಣೆಯಲ್ಲಿ ದ್ವೀಕೋನ ಸ್ಪರ್ಧೆ ಇತ್ತು. ಈ ಬಾರಿಯೂ ಅದು ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರ ವರ್ಚಸ್ಸಿನ ಮೇಲೆ ಫಲಿತಾಂಶ ಅವಲಂಬಿತವಾಗಿದೆ. ಹಾಲಿ ಶಾಸಕರ ಮೇಲೆ ಉತ್ತಮ ಅಭಿಪ್ರಾಯ ಇಲ್ಲ. ಅಲ್ಲದೇ, ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ತಮ್ಮ ಕಡೆ ಬರುವ ಕಾರಣ ಗೆಲುವು ನಿಶ್ಚಿತ ಅನ್ನೋದು ಜೆಡಿಎಸ್ ಲೆಕ್ಕ. ಸಿದ್ದರಾಮಯ್ಯ ಅವರ ವರ್ಚಸ್ಸು ಇನ್ನೂ ಕ್ಷೇತ್ರದಲ್ಲಿ ಇದೆ. ಹೀಗಾಗಿ, ಅವರು ಒಮ್ಮೆ ಬಂದು ಪ್ರಚಾರ ಮಾಡಿದ್ರು ಸಾಕು ಕಾಂಗ್ರೆಸ್ ಗೆಲುವು ನಿಶ್ಚಿತ ಅನ್ನೋ ಲೆಕ್ಕ ಕೈ ಪಾಳಯದಲ್ಲಿದೆ.

ಸ್ಥಳೀಯ ಸಂಸ್ಥೆ ಚುನಾವಣೆ : 25 ರಿಂದ 30 ಸಾವಿರ ಮಂದಿ ಪಾಲಿಕೆ ವ್ಯಾಪ್ತಿಗೆ ಬರುತ್ತಾರೆ. 6 ವಾರ್ಡ್ ವ್ಯಾಪ್ತಿಯಲ್ಲಿ ಭಾಗಶಃ ಬರುತ್ತದೆ. 22, 24 ಕೃಷ್ಣರಾಜ, 25, 26, 27 ಚಾಮರಾಜ ಕ್ಷೇತ್ರ ಹಂಚಿಕೊಂಡಿವೆ. ಕಾಂಗ್ರೆಸ್‍ಗೆ 3, ಜೆಡಿಎಸ್ 2, ಬಿಜೆಪಿ 1 ಸ್ಥಾನ ಪಡೆದಿದೆ.

ಮತದಾರರ ವಿವರ

ಪುರುಷ ಮತದಾರರು - 107,369

ಮಹಿಳಾ ಮತದಾರರು - 102,675

ಒಟ್ಟು ಮತದಾರರು - 210,044

ಹಾಲಿ ಶಾಸಕ - ಎಂ. ಸತ್ಯನಾರಾಯಣ (ಕಾಂಗ್ರೆಸ್)

ಸೋತ ಅಭ್ಯರ್ಥಿ - ಮಂಜೇಗೌಡ (ಬಿಜೆಪಿ)

ಗೆಲುವಿನ ಅಂತರ 15,000 ಮತಗಳು.

ಜಾತಿವಾರು ಮತಗಳು : ಒಕ್ಕಲಿಗರು - 65 ಸಾವಿರ, ಎಸ್ಸಿ - 34 ಸಾವಿರ, ಎಸ್.ಟಿ - 31 ಸಾವಿರ, ಕುರುಬರು - 33 ಸಾವಿರ, ಲಿಂಗಾಯಿತರು - 15 ಸಾವಿರ, ಮುಸ್ಲಿಂ - 9 ಸಾವಿರ, ಇತರೆ - 23,044 ಮತಗಳು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election watch - Chamundeshwari, Mysore : M. Sathyanarayana of Congress is the sitting MLA of the constituency. Congress is still banking on the popularity of Siddaramaiah, who had won from here after quitting JD(S). But, G.T. DeveGowda contesting with JD(S) ticket may give good fight to Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X