ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣದ ಲಾಭನಷ್ಟಗಳೇನು, ಯಾರಾದ್ರೂ ವಿವರಿಸಿ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಮೊನ್ನೆ Demonetizationದಿಂದ ಹೊರಬೀಳಬೇಕಾಗಿದ್ದ ಕಪ್ಪು ಹಣ ಹೊರಬೀಳದೇ ಹೆಚ್ಚು ಕಡಿಮೆ ಎಲ್ಲ ಹಣ ಬಂದು ಸರ್ಕಾರದ ಕೈ ಸೇರಿದೆ ಎಂಬ ವಿದ್ಯಮಾನವನ್ನು ಭಾರತದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿತು. ಈ ಸುದ್ದಿ ಹೊರಬೀಳುತ್ತಲೇ ನಮ್ಮ ಮಾಧ್ಯಮಗಳು ಮತ್ತು ವಿರೋಧಿ ಪಕ್ಷದವರು ಒಮ್ಮೆಲೇ ಜಾಗೃತರಾಗಿ ಸರಕಾರವನ್ನು ಶತಾಯ ಗತಾಯ ತೆಗಳಲಾರಂಭಿಸಿದರು.

ಪುಟ್ಟ ಹಕ್ಕಿ ಮೊದಲ ಬಾರಿ ರೆಕ್ಕೆ ಬಿಚ್ಚಿ ಹಾರಿದೆ ಬಾನಿಗೆ!ಪುಟ್ಟ ಹಕ್ಕಿ ಮೊದಲ ಬಾರಿ ರೆಕ್ಕೆ ಬಿಚ್ಚಿ ಹಾರಿದೆ ಬಾನಿಗೆ!

ಇಡೀ Demonetization ಒಂದು ತಪ್ಪು ಹೆಜ್ಜೆ. ಅದರಿಂದ ಸಾರ್ವಜನಿಕರ ಹಣ ಪೋಲಾಗಿದೆಯೇ ಹೊರತು ಯಾವುದೇ ಲಾಭವಾಗಿಲ್ಲ ಎಂದು ಮಾಧ್ಯಮಗಳಲ್ಲಿ ನಡೆಯುವ ಚರ್ಚೆ(?)ಗಳಲ್ಲಿ ಎತ್ತರದ ಧ್ವನಿಯಲ್ಲಿ ವಟಗುಟ್ಟಲಾರಂಭಿಸಿದರು. ಅದಕ್ಕೆ ವಿರೋಧವೆಂಬಂತೆ ಸರಕಾರದ ಪರ ಘೋಷಕರು ಹಿಂದಿನ ಸರಕಾರದ ನಿಷ್ಕ್ರಿಯತೆಯನ್ನು ತೆಗಳಿ, ತಮ್ಮ ಸರಕಾರ ಮಾಡುತ್ತಿರುವ ಉತ್ತಮ ಕಾರ್ಯಗಳಿಂದ ವಿರೋಧ ಪಕ್ಷಗಳು ಕರುಬುತ್ತಿವೆ ಎಂದು ಬಡಬಡಿಸತೊಡಗಿದರು. ಮಾಧ್ಯಮದ ಚರ್ಚೆಗಳಲ್ಲಿ ಯಥಾರೀತಿ ಒಂದು ಅಮೂಲಾಗ್ರ ಮತ್ತು ತರ್ಕಬದ್ಧ ಚರ್ಚೆಯ ಬದಲು ಪರ ಮತ್ತು ವಿರೋಧದ ಘೋಷಣೆಗಳೇ ಹೆಚ್ಚಾಗಿ ಕಂಡುಬಂದವು.

What are the pros cons of demonetisation, somebody explain please

ಹಿಂದಿನ ಸರಕಾರದ ಹಣಕಾಸು ಮಂತ್ರಿಯಾದ ಪಿ. ಚಿದಂಬರಮ್ ಅವರು ಸರಕಾರ ಹೇಳಿಕೊಂಡಂತೆ Demonetization ಯಾವುದೇ ತರಹದ ಕಪ್ಪುಹಣವನ್ನು ಹೊರಗೆಳೆಯಲಿಲ್ಲ. ಆದುದರಿಂದ ಸರಕಾರದ ಈ ಹೆಜ್ಜೆಯಿಂದ ಸಾಮಾನ್ಯ ಜನತೆಗೆ ಕಷ್ಟ ನಷ್ಟಗಳಾಗಿವೆಯೇ ಹೊರತು ಏನೂ ಲಾಭವಾಗಿಲ್ಲ. ದೇಶಕ್ಕೆ ಇದೊಂದು "ಭವ್ಯ ವಿಪತ್ತು" ಎಂದು ಬಣ್ಣಿಸಿದರು.

ಎಚ್ಚೆಸ್ವಿ ಮತ್ತು ಅಶ್ವತ್ಥ್ ಹರಿಬಿಟ್ಟ ಸೃಜನಶೀಲತೆಯ ಪ್ರವಾಹಎಚ್ಚೆಸ್ವಿ ಮತ್ತು ಅಶ್ವತ್ಥ್ ಹರಿಬಿಟ್ಟ ಸೃಜನಶೀಲತೆಯ ಪ್ರವಾಹ

ಟೆಲಿವಿಜನ್‍ನ ಮುಖ್ಯ ವಾಹಿನಿಗಳಲ್ಲಿ ಬಿತ್ತರಗೊಂಡ ಅವರ ಭಾವಾಭಿನಯದಲ್ಲಿ ಇಂದಿನ ಸರಕಾರದ ವಿಫಲತೆಯನ್ನು ಕುರಿತು ಬಹಳ ಸಂತೋಷ ಕಂಡುಬಂದಿತು. ಆದರೆ ದೇಶಕ್ಕೆ ಆಗಿರುವ ಹಾನಿಯ ಬಗ್ಗೆ ಮತ್ತು ಜನರಿಗೆ ಉಂಟಾದ ಕಷ್ಟ ನಷ್ಟಗಳನ್ನು ಕುರಿತು ಅಷ್ಟೊಂದು ಅನುಕಂಪ ಕಂಡುಬರಲಿಲ್ಲ. ಇಂದಿನ ಸರಕಾರಕ್ಕೂ ಮತ್ತು ಪಿ. ಚಿದಂಬರಂ ಅವರಿಗೂ ಇರುವ ಎಣ್ಣೆ ಸೀಗೆಕಾಯಿ ಸಂಬಂಧದಿಂದ ಅವರ ಇಂತಹ ಖಾರವಾದ ಪ್ರತಿಕ್ರಿಯೆ ಸಹಜವೇನೋ? ಆದರೆ ದೇಶದ ಕ್ಯಾಬಿನೇಟ್ ಮಂತ್ರಿಯಾಗಿ ಅನೇಕ ವರ್ಷಗಳಿಂದ ಕೆಲಸಮಾಡಿದ ಅವರಿಂದ ಒಬ್ಬ ರಾಜಕೀಯ ಮುತ್ಸದ್ದಿಯ ಮತ್ತು ಪ್ರಾಜ್ಞತೆಯನ್ನೊಳಗೊಂಡ ಧನಾತ್ಮಕ ವಿಮರ್ಶೆ ಹೊರಬೀಳಲಿಲ್ಲ.

What are the pros cons of demonetisation, somebody explain please

ಇದು ನಮ್ಮ ದೇಶದ ದೌರ್ಭಾಗ್ಯವೇ ಸರಿ. Demonetization ವಿಫಲವೇ ಆಗಿದ್ದಲ್ಲಿ, ಅದನ್ನು ಸರಿಪಡಿಸಲಿಕ್ಕಾಗಿ ತಮ್ಮ ಸಲಹೆ ಏನು? ಅದನ್ನವರು ಹೇಳಲೇ ಇಲ್ಲ. ತಮ್ಮ ಪಕ್ಷದ ಸರಕಾರ ಆಡಳಿತದಲ್ಲಿದ್ದಾಗ ಕಪ್ಪು ಹಣದ ವಿರುದ್ಧ ಅವರು ಕೈಗೊಂಡ ಕ್ರಮಗಳೇನು? ನಮಗೆ ಕಾಣಲಿಲ್ಲ. ನಮ್ಮಂತಹ ಜನಸಾಮಾನ್ಯರಿಗೆ ಕಂಡು ಬಂದದ್ದು ಒಂದರ ಮೇಲೊಂದರಂತೆ ಎರಗಿದ ಸ್ಕ್ಯಾಮ್‍ಗಳು.

ಕಾಲದ ಅಳತೆ ಯಾವುದು? ಹರಿಕಥಾಮೃತಸಾರ ಓದಿಕಾಲದ ಅಳತೆ ಯಾವುದು? ಹರಿಕಥಾಮೃತಸಾರ ಓದಿ

ಇನ್ನು ನಮ್ಮ ದೇಶದ ಇಂದಿನ ಅರ್ಥಮಂತ್ರಿ ಅರುಣ್ ಜೇಟ್ಲಿ ಅವರು Demonetizationನ ಪರಿಣಾಮ ಅಂದುಕೊಂಡ ಮಾರ್ಗದಲ್ಲಿಯೇ ಸಾಗುತ್ತಿದೆ ಎಂದು ಘಂಟಾಘೋಷವಾಗಿ ಸಮರ್ಥಿಸಿಕೊಂಡಿದ್ದಾರೆ. "ಎಲ್ಲ ಹಣ ಬಂದು ರಿಸರ್ವ್ ಬ್ಯಾಂಕಿಗೆ ಸೇರಿದೆ ಎಂದ ಮಾತ್ರಕ್ಕೆ ಅದು ನ್ಯಾಯವಾದ ಹಣ ಆಗುವುದಿಲ್ಲ" ಎಂದು ಹೇಳಿದ್ದಾರೆ. "ಈ ಕ್ರಮ ಕಪ್ಪು ಹಣದ ಹುಟ್ಟಡಗಿಸಿದೆ ಎಂಬುದನ್ನು ಅಲ್ಲಗಳೆಯಲಾಗದು. ಅಲ್ಲದೇ ಜಿ.ಎಸ್.ಟಿ ಯ ಜೊತೆ ಜೊತೆಗೆ ಹೆಚ್ಚು ಹೆಚ್ಚು ತೆರಿಗೆ ಹಣ ಸರಕಾರಕ್ಕೆ ಹರಿದು ಬರುತ್ತಿದೆ. ಇದು ಸರಕಾರದ ಧನಾತ್ಮಕ ಆರ್ಥಿಕ ನೀತಿಯ ಪ್ರತಿಫಲ" ಎಂದು ಹೇಳಿದ್ದಾರೆ.

ಇದು ಎಷ್ಟರಮಟ್ಟಿಗೆ ನಿಜ? ಸರಕಾರ ಹೇಳಿಕೊಂಡಷ್ಟು ಪರಿಣಾಮಕಾರಿಯಾಗಿದೆಯೇ ಈ Demonetization? ಹಾಗಿದ್ದರೆ ನೆದರ್ಲ್ಯಾಂಡ್ಸ್ ನ ಹ್ಯುಗೋ ಎರ್ಕೆನ್ ಮತ್ತು ಸ್ಟೀವ್ ಫೋರ್ಬ್ಸ್ ಅವರಂತಹ ಅನೇಕ ಆರ್ಥಿಕ ತಜ್ಞರು ಇದೊಂದು ವಿಫಲವಾದ ಕ್ರಮ ಎಂದೇಕೆ ಬಣ್ಣಿಸುತ್ತಿದ್ದಾರೆ? ಅವರೆಲ್ಲ ವಿರೋಧಿ ಪಕ್ಷದವರೇ? ಸರಕಾರ ಇದಕ್ಕೆ ಸಮಜಾಯಿಷಿ ನೀಡಬಲ್ಲದೇ? ಗೊಂದಲಕ್ಕೆ ಇನ್ನಿಷ್ಟು ಸೇರಿಸುವಂತೆ ಸ್ವಾಮಿನಾಥನ್ ಅಯ್ಯರ್ Demonetization ಮತ್ತು ಜಿ ಎಸ್ ಟಿ ಕ್ರಮಗಳಿಂದ ಉತ್ತಮ ದೂರಗಾಮಿ ಪರಿಣಾಮವೇ ಆಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

What are the pros cons of demonetisation, somebody explain please

ಮುಖ್ಯವಾಗಿ ಈಗ ಕೇಳಿಬರುತ್ತಿರುವ ಪರ ಮತ್ತು ವಿರೋಧಿ ಘೋಷಣೆಗಳು ನನ್ನಂತಹ ಅನೇಕ ಸಾಮಾನ್ಯ, ಆದರೆ ದೇಶಹಿತ ಮಾತ್ರ ಬಯಸುವ ಜನರಲ್ಲಿ ದ್ವಂದ್ವವನ್ನು ಸೃಷ್ಟಿಸುತ್ತಿವೆಯೇ ಹೊರತು ನಿಜಸ್ಥಿತಿ ತಿಳಿಸುತ್ತಿಲ್ಲ. ವರ್ತಮಾನ ಪತ್ರಿಕೆಗಳಲ್ಲಿ ಕಂಡು ಬಂದ ವಿಶ್ಲೇಷಣೆಗಳಲ್ಲಿ ಕೂಡ ಪರ ಮತ್ತು ವಿರೋಧದ ಹೊರೆಹೊತ್ತ ಪಕ್ಷಪಾತದ ಛಾಯೆ ಕಂಡುಬಂದಿತೇ ಹೊರತು ವಸ್ತುನಿಷ್ಠ ವಿಶ್ಲೇಷಣೆ ಅಷ್ಟೇನೂ ಕಾಣಸಿಗಲಿಲ್ಲ. ಇದೇ ದ್ವಂದ್ವದಲ್ಲಿ ಕೆಳಗಿನ ಕವನ ಮೂಡಿಬಂದಿತು:

ಕಪ್ಪುಹಣ ಹೊರತರಲು
ಯತ್ನವನು ಮಾಡಿದರು
ನಮ್ಮ ಘನ ಸರಕಾರದವರು ಅಂದು
ತಪ್ಪು ಹಾದಿಯ ಹಿಡಿದು
ಘೋರವನು ಮಾಡಿದರು
ಎಂದೊರಲಿದರು ವಿರೋಧದವರು ಇಂದು

ಒಪ್ಪಾಯಿತೋ ಅರಿಯೆ
ತಪ್ಪಾಯಿತೋ ಅರಿಯೆ
ಸಾಮಾನ್ಯ ಪ್ರಜೆ ನಾನಿಹೆನು ನೋಡಿ
ದೇಶವಾಸಿಗಳಿಗೇ
ಮೋಸವಾಗಿಹುದೆಂಬ
ಸಂದೇಹ ಅರೆಗಳಿಗೆ ನನಗೆ ಕಾಡಿ

ಜರಿಯಲೋ ಪ್ರಮಾದಕೆ
ಮೆರೆಯಲೋ ಪ್ರಯತ್ನಕೆ
ದ್ವಂದ್ವ ಏರ್ಪಟ್ಟಿದೇ ಮನದಲಿಂದು
ಸ್ಪಷ್ಟತೆಯು ಬರಲೆಂದು
ಕಷ್ಟ ತೊಲಗಲಿ ಎಂದು
ಕಾಣದಿಹ ಕರ್ತನನು ಕೇಳ್ವೆನಿಂದು

ಈ ದ್ವಂದ್ವವೇನೇ ಇರಲಿ. ಎಲ್ಲ ಕ್ರಮಗಳಂತೆ ಈ Demonetization ಕೂಡ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಪರಿಣಾಮಗಳನ್ನು ಹೊಂದಿರಬಹುದು. ಆದರೆ ದೇಶಹಿತ ದೃಷ್ಟಿಯಿಂದ ಈ ಕ್ರಮ ಯಾವ ದೂರಗಾಮಿ ಪರಿಣಾಮವನ್ನು ಹೊಂದಿದೆ ಎಂಬುದು ಮಾತ್ರ ನಮಗೆ ಮುಖ್ಯವಾಗಬೇಕು. Demonetizationನಿಂದ ಜನರಲ್ಲಿ ನಗದುರಹಿತ ವ್ಯವಹಾರದ ಬಳಕೆ ಹೆಚ್ಚಾಗಿದೆ. ತೆರಿಗೆ ಕೊಡುವವರ ಸಂಖ್ಯೆಯಲ್ಲಿ 25%ಕ್ಕೂ ಹೆಚ್ಚು ವೃದ್ಧಿಯಾಗಿದೆ. ಮುಖ್ಯವಾಗಿ ಸರಕಾರ ದೇಶದ ಅರ್ಥವ್ಯವಸ್ಥೆಯನ್ನು ಕ್ರಮಬದ್ಧಗೊಳಿಸುವತ್ತ ಕೆಲವು ಹೆಜ್ಜಗಳನ್ನಿಟ್ಟಿರುವುದಂತೂ ಸತ್ಯ.

ಸದ್ಯದ ಮಟ್ಟಿನಲ್ಲಿ ಜನರಿಗೆ ಸಮಸ್ಯೆಗಳುಂಟಾದರೂ ಒಟ್ಟಿನಲ್ಲಿ ಇದರ ಪರಿಣಾಮ ಒಳ್ಳೆಯದಾದರೆ ಅದಕ್ಕಿಂತ ಹೆಚ್ಚಿನದನ್ನು ಜನರು ಬಯಸುವುದಿಲ್ಲ. ಅರವತ್ತು ವರ್ಷಗಳ ದುರಾಡಳಿತವನ್ನು ನೋಡಿದ ಜನರ ಆಶಯಗಳು ಸದ್ಯದ ಆಡಳಿತದ ಜೊತೆಗಿವೆ. ಅದನ್ನು ನೆರವೇರಿಸುವುದು ಈ ಆಡಳಿತದ ಕರ್ತವ್ಯ. ಹಾಗಾಗುತ್ತದೆ ಎಂದು ಆಶಿಸುತ್ತೇನೆ.

English summary
What are the pros and cons, profit and loss of demonetisation, somebody explain please, says Vasant Kulkarni. Report by RBI on demonetization has rubbed the salt on the wounds of public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X