ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗನ್ನಡಿಗ ಕಂಡಂತೆ 5 ರಾಜ್ಯಗಳ ಚುನಾವಣಾ ಫಲಿತಾಂಶ

By ವಸಂತ ಕುಲಕರ್ಣಿ
|
Google Oneindia Kannada News

ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿಯವರು ಮತ್ತೆ ಮೋಡಿ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಸುಮಾರು ಹದಿನೈದು ವರ್ಷಗಳ ನಂತರ ಮತ್ತೆ ಆಡಳಿತಕ್ಕೆ ಬಂದಿದೆ. ಸಮಾಜವಾದಿ ಪಕ್ಷದ ಯುವ ಮುಖಂಡ ಅಖಿಲೇಶ್ ಯಾದವ್ ಅವರಿಗೆ ರಾಜಕೀಯ ಜೀವನದ ಮೊದಲ ಹೊಡೆತ ಸ್ವಲ್ಪ ಜೋರಾಗಿಯೇ ಬಿದ್ದಿದೆ. ಆದರೆ ಈ ಚುನಾವಣೆಯನ್ನು ಸ್ವಲ್ಪ ಸೂಕ್ಷ್ಮವಾಗಿ ಅವಲೋಕಿಸಿದರೆ ಕೆಲವು ಸಂಗತಿಗಳನ್ನು ಕಾಣಬಹುದು.

ಜಾತಿ ಮತ್ತು ಧರ್ಮಗಳ ಓಲೈಕೆಯಿಂದ ಮಾತ್ರ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಪಕ್ಷಗಳು ಈಗ ಹಳಿ ತಪ್ಪಿದಂತಾಗಿವೆ. ಇಂದು ಜನರಿಗೆ ಬೇಕಾದುದು ತಮ್ಮ ಮತ್ತು ದೇಶದ ಅಭಿವೃದ್ಧಿ ಮಾತ್ರ. ಜಾತಿ ಮತ್ತು ಧರ್ಮಗಳ ಹಿಡಿತವನ್ನು ಇಂದಿನ ಯುವ ಜನಾಂಗ ಸಡಿಲಿಸಿ ದೇಶದ ಏಕತೆಗೆ ಹೆಚ್ಚಿನ ಬಲ ನೀಡಿದೆ.[ಪ್ರಧಾನಿಗೂ ಜವಾನನಿಗೂ ಒಂದೇ ಸಂಬಳ ಸಿಗುವಂತಾದಾಗ!]

People voted Modi for change in the system

ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಜನತೆ ಜಾತಿ ಮತ್ತು ಧರ್ಮಗಳನ್ನು ಮೀರಿ ಬಿಜೆಪಿಯನ್ನು ಬೆಂಬಲಿಸಿದ್ದು ಸ್ಪಷ್ಟವಾಗಿ ಕಂಡು ಬಂದಿದೆ. ಮುಸ್ಲಿಂ, ಯಾದವ್, ದಲಿತ ಮತ್ತಿತರ ಸಮುದಾಯಗಳು ವೋಟ್ ಬ್ಯಾಂಕುಗಳಾಗಿ ಉಳಿದುಕೊಳ್ಳಲು ಸ್ಪಷ್ಟವಾಗಿ ನಿರಾಕರಿಸಿದ್ದನ್ನು ಈ ಚುನಾವಣೆಯಲ್ಲಿ ಕಾಣಬಹುದು.

ಸೂತ್ರದ ಗೊಂಬೆಗಳಲ್ಲ
ಇದರಿಂದ ಈ ದೇಶದ ಅಭಿವೃದ್ಧಿಯಲ್ಲಿ ಅವರು ಸಕ್ರಿಯ ಪಾಲುದಾರರಾಗ ಬಯಸಿದ್ದಾರೆಯೇ ಹೊರತು ರಾಜಕೀಯ ನಾಯಕರುಗಳ ಕೈಯಲ್ಲಿ ಸೂತ್ರದ ಗೊಂಬೆಗಳಾಗ ಬಯಸಿಲ್ಲ ಎಂಬುದು ವಿಧಿತ. ಈ ಚುನಾವಣೆಯನ್ನು ನಮ್ಮ ದೇಶದಲ್ಲಿ "ಒಡೆದು ಆಳು (Divide and Rule)" ಧೋರಣೆಯ ಸಮಾಪ್ತಿಯ ಆರಂಭ (Begining of an End) ಎಂದು ಪರಿಗಣಿಸಬಹುದು.[ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]

ಈಗಿನ ಮತದಾರ ರಾಜಕಾರಣಿಗಳ ಅದಕ್ಷ ಆಡಳಿತ ಮತ್ತು ದಿವ್ಯ ನಿರ್ಲಕ್ಷ್ಯದಿಂದ ಬೇಸತ್ತಿದ್ದಾನೆ ಮತ್ತು ರಾಜಕಾರಣಿಗಳಿಂದ ದೇಶದ ಜನರ ಏಳಿಗೆಗಾಗಿ ಕಠಿಣತಮ ಕ್ರಮಗಳನ್ನು ಪ್ರತೀಕ್ಷಿಸುತ್ತಿದ್ದಾನೆ. ಯಾವ ರಾಜಕಾರಣಿ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವುದು ಕಂಡು ಬರುತ್ತದೋ ಆ ರಾಜಕಾರಣಿಯ ಜಾತಿ, ಧರ್ಮಗಳನ್ನು ನೋಡದೆ ಪ್ರಾಮಾಣಿಕವಾಗಿ ಮತ ನೀಡುತ್ತಿದ್ದಾನೆ.

People voted Modi for change in the system

ದೇಶದ ಎಲ್ಲ ಪ್ರತಿ ಪಕ್ಷಗಳು ಅನಾಣ್ಯೀಕರಣ(Demonetisation)ವನ್ನು ಚುನಾವಣೆಯ ವಿಷಯವನ್ನಾಗಿ ಬಳಸಿ ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ಹೀಗಳೆದರೂ ದೇಶದ ಜನತೆಗೆ ಅನಾಣ್ಯೀಕರಣ ಭ್ರಷ್ಟಾಚಾರದ ವಿರುದ್ಧ ಮೋದಿ ತೆಗೆದುಕೊಂಡ ಕಠಿಣ ಕ್ರಮ ಎಂದು ಕಂಡು ಬಂದಿದೆ.

ಕಠಿಣ ನಿರ್ಧಾರಕ್ಕೆ ಬೆಂಬಲ
ಆದುದರಿಂದ ಸ್ವತಃ ತೊಂದರೆಗೊಳಗಾದರೂ ಜನತೆ ದೇಶದ ಭವಿಷ್ಯಕ್ಕಾಗಿ ತೆಗೆದುಕೊಂಡ ಕಠಿಣ ನಿರ್ಧಾರಗಳನ್ನು ಬೆಂಬಲಿಸುತ್ತಾರೆ ಎಂದು ತಿಳಿದು ಬರುತ್ತದೆ. ಆದುದರಿಂದ ಈ ಚುನಾವಣೆಯ ಮೂಲಕ ದೇಶದ ಜನತೆ, ಇಲ್ಲ ಸಲ್ಲದ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡಿ ಸಮಯ ಹಾಳು ಮಾಡದೇ ಜನಹಿತದ ಕಾರ್ಯಕ್ರಮಗಳಿಗೆ ಬೆಂಬಲ ನೀಡುವಂತೆ ರಾಜಕಾರಣಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಈಗಿನ ಮತದಾರ, ಚುನಾವಣಾ ಅಭ್ಯರ್ಥಿ ಯಾವ ಪ್ರಭಾವಿ ವ್ಯಕ್ತಿಯ ಮಗನೋ ಅಥವಾ ಮೊಮ್ಮಗನೋ ಆಗಿರುವುದನ್ನು ಪರಿಗಣಿಸುವುದಿಲ್ಲ. ಅವರು ನೋಡುತ್ತಿರುವುದು ಯಾರು ದೇಶವನ್ನು ಮುನ್ನಡೆಸುವುದರಲ್ಲಿ ಸಮರ್ಥರು ಎಂಬುದನ್ನು ಮಾತ್ರ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವನ್ನು ಮತ್ತು ಪಂಜಾಬಿನಲ್ಲಿ ಬಿಜೆಪಿ ಮತ್ತು ಅಕಾಲಿ ಪಕ್ಷವನ್ನು ಮತದಾರ ಮುಳುಗಿಸಿರುವುದನ್ನು ನೋಡಿದರೆ ಇದು ಸ್ಪಷ್ಟವಾಗಿ ಕಾಣುತ್ತದೆ.

People voted Modi for change in the system

ಈ ಚುನಾವಣೆ ಬಿಜೆಪಿಯನ್ನು ಹಿಡಿದು ಎಲ್ಲ ಪಕ್ಷಗಳ ರಾಜಕೀಯ ನಾಯಕರಿಗೆ ಮುನ್ನೆಚ್ಚರಿಕೆ ಮಾತ್ರ.

ಅಭಿವೃದ್ಧಿ ನಿರೀಕ್ಷೆ
ಇಂದಿನ ಯುವ ಜನತೆಗೆ ಈಗ ಬೇಕಾಗಿರುವುದು ತಮ್ಮ ನಿರುದ್ಯೋಗ ಸಮಸ್ಯೆಯ ಪರಿಹಾರ ಮತ್ತು ದೇಶದ ಏಳಿಗೆ ಅಷ್ಟೇ. ಇಂದಿನ ಮಾಹಿತಿ ಮತ್ತು ಜೆಟ್ ಯುಗದಲ್ಲಿ ಚೀನಾದಂತಹ ದೇಶಗಳು ಕೇವಲ ಹತ್ತು ಹದಿನೈದು ವರ್ಷಗಳಲ್ಲಿ ಅಭಿವೃದ್ದಿ ಹೊಂದಿ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿವೆ ಎಂಬುದನ್ನು ಕಣ್ಣಾರೆ ಕಂಡ ಇಂದಿನ ಯುವಕರು ಇಂದಿನ ರಾಜಕೀಯ ನೇತಾರರಿಂದ ಆ ಬಗೆಯ ಅಭಿವೃದ್ದಿಯನ್ನು ನಿರೀಕ್ಷಿಸುತ್ತಿದ್ದಾರೆಯೇ ಹೊರತು ಖಾಲಿ ಆಶ್ವಾಸನೆಗಳನ್ನಲ್ಲ.

ಮುಂಬರುವ ದಿನಗಳಲ್ಲಿ ಆಡಳಿತಾರೂಢ ಬಿಜೆಪಿಯಿಂದ ಜನ ಮೂರ್ತ ಫಲಿತಾಂಶವನ್ನು ನಿರೀಕ್ಷಿಸುತ್ತಾರೆ.

People voted Modi for change in the system

ದೇಶದ ಬಹುತೇಕ ಎಲ್ಲ ಮತದಾರ ಈಗ ಒಬ್ಬ ಪ್ರಬಲ ಮತ್ತು ಸಮರ್ಥ ನಾಯಕ ಮತ್ತು ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳಬಲ್ಲ ಸರಕಾರವನ್ನು ನಿರೀಕ್ಷಿಸುತ್ತಿದ್ದಾನೆ. ಮೋದಿ ಅವರಲ್ಲಿ ದೇಶದ ಮತದಾರ ಒಬ್ಬ ಪ್ರಬಲ ಮತ್ತು ಹೇಳಿದ್ದನ್ನು ಮಾಡಿ ತೋರಿಸುವ ಸಮರ್ಥ ನಾಯಕನನ್ನು ಕಂಡರೆ, ಬಿಜೆಪಿ ಸರಕಾರದಲ್ಲಿ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳಬಲ್ಲ ಸರಕಾರವನ್ನು ಕಾಣುತಿದ್ದಾನೆ.

ನಂಬಲರ್ಹ ನಾಯಕ ಕಂಡಿರಬಹುದು
ದಂತದ ಅರಮನೆಯೊಳಗೆ ಬಾಯಲ್ಲಿ ಚಿನ್ನದ ಚಮಚವನ್ನು ಇಟ್ಟುಕೊಂಡು ಹುಟ್ಟಿ, ಬಡತನವನ್ನು ಎಂದೂ ಅನುಭವಿಸದ ನಾಯಕರುಗಳ ಬಗ್ಗೆ ಮತದಾರನಿಗೆ ಅಸಹ್ಯ ಹುಟ್ಟಿದೆ. ತಮ್ಮಂತೆಯೇ ಸಾಧಾರಣ ಮನೆತನದಲ್ಲಿ ಹುಟ್ಟಿ, ಬಡತನದಲ್ಲಿಯೇ ಬೆಳೆದು, ತಮ್ಮ ಕೆಲಸದ ಮೂಲಕ ಮೇಲೇರಿದ ಮೋದಿ ಮತದಾರನಿಗೆ ಒಬ್ಬ ನಂಬಲರ್ಹ ನಾಯಕನಾಗಿ ಕಂಡಿರಬಹುದು.

ಇಡೀ ಜಗತ್ತು ಆರ್ಥಿಕ ಹಿನ್ನೆಡೆಯಿಂದ ನೆರಳುತ್ತಿರುವಾಗ ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವ, ದೂರದೃಷ್ಟಿಯುಳ್ಳ ಮತ್ತು ರಚನಾತ್ಮಕ ಯೋಜನೆಗಳನ್ನು ಹಾಕಿಕೊಳ್ಳುತ್ತಿರುವ ಮೋದಿ ಮತದಾರನಿಗೆ ಆಶಾಕಿರಣವಾಗಿ ಕಂಡು ಬಂದಿರಬಹುದು.

People voted Modi for change in the system

ಎಲ್ಲಕ್ಕಿಂತ ಮುಖ್ಯವಾಗಿ ಆಡಳಿತ ಮತ್ತು ಅಭಿವೃದ್ಧಿಯ ಹೆಸರಲ್ಲಿ ಮತದಾರನಿಗೆ ಮೋಸ ಮಾಡಿ, ಹಗರಣಗಳ ಮೇಲೆ ಹಗರಣಗಳನ್ನು ಹುಟ್ಟಿ ಹಾಕಿದ ಪರಿ ಬಡ ಮತದಾರನನ್ನು ಸಿನಿಕನನ್ನಾಗಿಸಿದೆ.

ಕೊನೆಯ ಆಯ್ಕೆ
ಒಂದು ಕೊನೆಯ ಅವಕಾಶವೆಂದು ಬಿಜೆಪಿ ಸರಕಾರವನ್ನು ಚುನಾಯಿಸಿದ್ದಾನೆ ಬಡ ಮತದಾರ. ಪೂರ್ಣ ಬಹುಮತ ನೀಡಿದ್ದಲ್ಲದೇ, ಪ್ರಮುಖ ರಾಜ್ಯಗಳಲ್ಲೂ ಚುನಾಯಿಸಿ ಯಾವುದೇ ಆಕ್ಷೇಪಕ್ಕೆ ಅವಕಾಶ ನೀಡಿಲ್ಲ. ಈಗ ಮೋದಿ ಮತ್ತು ಬಿಜೆಪಿ ಸರಕಾರದಿಂದ ಆತ ನಿರೀಕ್ಷಿಸುತ್ತಿರುವುದು ಕೇವಲ ಜಾಹೀರಾತುಗಳಲ್ಲ. ನಿಜವಾಗಿಯೂ ಹಾಕಿಕೊಂಡ ಯೋಜನೆಗಳನ್ನು ಪರಿಣಾಮಕಾರಿಯಾಗಿ ನೆರವೇರಿಸುವ ಸರಕಾರವನ್ನು ಎದುರು ನೋಡುತ್ತಿದ್ದಾನೆ.

ಬಿಜೆಪಿ ಮತ್ತು ಮೋದಿ ತಮ್ಮ ಯಶಸ್ಸನ್ನು ತಲೆಗೇರಿಸಿಕೊಳ್ಳದೆ ಮತ್ತು ಕುಪ್ರಚಾರಕ್ಕೆ ಬೆಲೆಗೊಡದೆ ದೇಶದ ದೀರ್ಘಾವಧಿ ಅಭಿವೃದ್ಧಿ ಮತ್ತು ಜನಗಳ ಕ್ಷೇಮಾಭ್ಯುದಯಕ್ಕಾಗಿ ನಿರಂತರ ಕೆಲಸ ಮಾಡಿದರೆ ಜನರ ಈ ನಂಬಿಕೆಗೆ ತಕ್ಕ ಫಲ ದೊರೆಯಬಹುದು. ಹಾಗೆಯೇ ಆಗುತ್ತದೆ ಎಂದುಕೊಳ್ಳುತ್ತೇನೆ.

English summary
Why prime minister Narendra Modi won in Uttar Pradesh assembly election? An analysis from Singapore Kannadiga Vasant Kulkarni. He also says, expectations from Modi are are also mountain high and people expect him to deliver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X