ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರಿಗೆ ಪರ್ಯಾಯ ಚಿಕಿತ್ಸೆ : ಲೇಖಕರ ಮಾತು

By ಡಾ| ರಾಮಚಂದ್ರ ಭಟ್, ಮುಂಬಯಿ
|
Google Oneindia Kannada News

78 ವರ್ಷ ವಯಸ್ಸಿನ ಅಲನ್ ಟೇಯ್ಲರ್ ತನ್ನ ಆಹಾರ ಕ್ರಮವನ್ನು ಬದಲಾಯಿಸಿ ಗಿಡಮೂಲಿಕೆಗಳ ಔಷಧಿಯನ್ನು ಸೇವಿಸಿ ಕ್ಯಾನ್ಸರನ್ನು ಹೊಡೆದೋಡಿಸಿದ. ಅಂತರ್ಜಾಲವನ್ನು ಶೋಧಿಸಿ ಅದರ ಆಧಾರದಲ್ಲಿ ತನ್ನ ಪಥ್ಯಾಹಾರವನ್ನು ಅಮೂಲಾಗ್ರವಾಗಿ ಬದಲಾಯಿಸಿದಾಗ ಅವನ ಸ್ಥಿತಿ ಆಶ್ಚರ್ಯಕರವಾಗಿ ಉತ್ತಮಗೊಂಡಿತು. ಮೇಲೆ ಕಾಣಿಸಿದ ಆಹಾರ ವಿಧಾನ ಹಾಗೂ ಔಷಧಿಗಳು ಎಲ್ಲರಲ್ಲಿಯೂ ಇದೇ ರೀತಿ ಧನಾತ್ಮಕವಾಗಿ ಫಲಕೊಡುವುದೇ ಇಲ್ಲವೇ ಎಂದು ಹೇಳಲಾಗದು. ಹಾಗೆಯೇ ಪ್ರತಿದಿನ ಅಧಿಕ ಸಂಖ್ಯೆಯ ಕರ್ಕ್ಯುಮಿನ್ ಮತ್ತು ಕಹಿಯಾದ ಅಪ್ರಿಕೋಟ್ ತಿರುಳಿನ ಸೇವನೆಯು ಕಷ್ಟಸಾಧ್ಯವಾದುದು. ಕೆಲವರಲ್ಲಿ ಇದು ಅಡ್ಡ ಪರಿಣಾಮವೂ ಉಂಟುಮಾಡಬಹುದು.

ದೊಡ್ಡ ಕರುಳಿನ ಕ್ಯಾನ್ಸರ್ ಹೆಚ್ಚು ಹೆಚ್ಚು ಮರುಕಳಿಸುತ್ತಿರುವುದರ ಮುಖ್ಯ ಕಾರಣ ಕೆಮೋಥೆರಪಿಯು ಕ್ಯಾನ್ಸರ್ ಆಕರ ಕೋಶಗಳನ್ನು ಸಂಪೂರ್ಣ ನಾಶಮಾಡುವುದರಲ್ಲಿ ವಿಫಲವಾಗುವುದು ಎನ್ನುತ್ತಾರೆ ಅಮೇರಿಕದ ಟೆಕ್ಸಾಸಿನ ಬಾಯ್ಲಾರ್ ಯುನಿವರ್ಸಿಟಿ ಮೆಡಿಕಲ್ ಸೆಂಟರಿನ ಎಪಿಜೆನೆಟಿಕ್ಸ್ ಮತ್ತು ಕ್ಯಾನ್ಸರ್ ಪ್ರಿವೆನ್ಶನ್ ಪಂಗಡದ ಮುಖ್ಯಸ್ಥರಾದ ಅಜಯ ಗೋಯಲ್. ಕೆಮೋಥೆರಪಿಯ ಸಮಯದಲ್ಲಿ ಗಡ್ಡೆಯಲ್ಲಿ ಅಡಗಿ ಕುಳಿತುಕೊಳ್ಳುವ ಕೆಲವು ಕ್ಯಾನ್ಸರ್ ಆಕರ ಕೋಶಗಳು ಮುಂದೆ ವಿಜೃಂಭಿಸಿ ಕಾಯಿಲೆ ಮರುಕಳಿಸಲು ಕಾರಣವಾಗುತ್ತವೆ. ಕೆಮೋಥೆರಪಿಯ ಸಮಯದಲ್ಲಿ ಗಡ್ಡೆಯ ಗಾತ್ರ ಬಹಳಷ್ಟು ಕುಗ್ಗುವುದರಿಂದ ಕಾಯಿಲೆ ಗುಣವಾಗುತ್ತಿದೆಯೆಂಬ ಕಲ್ಪನೆಯನ್ನು ಮೂಡಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.

Colon cancer is curable, ask great guy allan taylor how, part6

ಅಜಯ ಗೋಯಲ್‌ರವರು ಕ್ಯಾನ್ಸರಿಗೆ ಪರ್ಯಾಯ ಚಿಕಿತ್ಸೆಯ ದಾರಿ ಹುಡುಕುತ್ತಾ ಕೆಮೋ ಒಟ್ಟಿಗೆ ಅರಸಿನದಲ್ಲಿರುವ ಕರ್ಕ್ಯುಮಿನಿನ ಬಳಕೆಯ ಪರಿಣಾಮವನ್ನು ತಮ್ಮ ಅಧ್ಯಯನಕ್ಕೆ ಆರಿಸಿಕೊಂಡಿದ್ದರು. 5-FU ಎಂಬ ಕರುಳಿನ ಕ್ಯಾನ್ಸರಿಗೆ ಬಳಸುವ ಕೆಮೋ ಔಷಧಿಯು ಕ್ಯಾನ್ಸರ್ ಗಡ್ಡೆಯ ಗಾತ್ರವನ್ನು ಶೇ.50ಕ್ಕಿಂತ ಹೆಚ್ಚು ಕುಗ್ಗಿಸಿದರೂ ಕ್ಯಾನ್ಸರ್ ಆಕರ ಕೋಶಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಮತ್ತು ಕೆಮೋ ಚಿಕಿತ್ಸೆ ಮುಗಿದ ನಂತರ ಹೆಚ್ಚು ತೀವ್ರವಾಗಿ ಕ್ಯಾನ್ಸರ್ ಹಬ್ಬಲು ಕಾರಣವಾಗುತ್ತದೆ ಎನ್ನುತ್ತಾರೆ ಅವರು.

ಕರ್ಕ್ಯುಮಿನ್ ಬಳಸಿದಾಗ ಬೇಕಾಗುವ ಕೆಮೋದ ಪ್ರಮಾಣವೂ ಕಡಿಮೆಯಾಗುತ್ತದೆ ಮತ್ತು ಕೆಮೋ ಹೆಚ್ಚು ಪರಿಣಾಮಕಾರಿಯಾಗಿ ಈ ಆಕರ ಕೋಶಗಳ ಸಂಖ್ಯೆಯನ್ನು ತಗ್ಗಿಸುತ್ತದೆ. ಕರ್ಕ್ಯುಮಿನ್‌ನ ಸಮಕ್ಷದಲ್ಲಿ ಕ್ಯಾನ್ಸರ್ ಆಕರ ಕೋಶಗಳು ಕೆಮೋಗೆ ಹೆಚ್ಚು ಸೂಕ್ಷ್ಮಗ್ರಾಹಿಯಾಗಿ ವರ್ತಿಸುತ್ತವೆ. ಕೆಮೋಥೆರಪಿಯ ಮೊದಲು ಕರ್ಕ್ಯುಮಿನ್ ಬಳಸುವುದರಿಂದ ಕ್ಯಾನ್ಸರ್ ಗಡ್ಡೆಯ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಈ ಹಿಂದೆ ಸುಮಾ ಎಂಬ ತರುಣಿಯು ಅರಶಿನದ ಸೇವನೆಯಿಂದ ನಾನ್ ಹೋಡ್ಜಿನ್ಸ್ ಲಿಂಫೋಮಾದಿಂದ ಮುಕ್ತಿ ಪಡೆದಿದ್ದನ್ನು ತಿಳಿಸಿದ್ದೆ. ಮೇಲಿನ ವರದಿ ಇದನ್ನು ಮತ್ತಷ್ಟು ದೃಢಪಡಿಸುತ್ತಿದೆ. (ಅಜಯ್ ಗೋಯಲ್‌ರವರು ಅರಶಿನದ ಆವಶ್ಯಕ ತೈಲಗಳನ್ನೊಳಗೊಂಡ ಮತ್ತು ಉತ್ತಮ ಹೀರುವಿಕೆ ಗುಣವುಳ್ಳ 'BCM-95 ಕರ್ಕ್ಯುಮಿನ್' ಎಂಬ ಉತ್ಪನ್ನವನ್ನು ತಮ್ಮ ಅಧ್ಯಯನಕ್ಕೆ ಬಳಸಿರುತ್ತಾರೆ). ಇದರಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅರಶಿನವು ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಯಬಹುದು.

English summary
Cancer affects all of us, whether you’re a daughter, mother, sister, friend, co-worker, doctor, or patient. Colon Cancer Healed with Alkaline Diet, Turmeric, Apricot and Supplements. An inspirational story by Allan Taylor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X