ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರಿಗೆ ಅರಿಶಿನ ಮತ್ತು ಅಪ್ರಿಕೋಟ್ ಮದ್ದು

By ಡಾ| ರಾಮಚಂದ್ರ ಭಟ್, ಮುಂಬಯಿ
|
Google Oneindia Kannada News

ಪ್ರತಿ ದಿನ ಸಕ್ಕರೆಯ ಪದರವಿಲ್ಲದ ವಿಟಮಿನ್ 'ಸಿ' ಸೇವಿಸಲಾರಂಬಿಸಿದೆ. ಇದು ಅತಿಸಾರವನ್ನು ಉಂಟುಮಾಡುವ ಸಾಧ್ಯತೆ ಇದೆ. ಅದರ ಸಲುವಾಗಿ ವೈದ್ಯರ ಸಲಹೆಯಂತೆ ಲೋಪರ್ಮೈಡ್ ಗುಳಿಗೆ. ಒಂದು ಗ್ರಾಮಿನ ವಿಟಮಿನ್ 'ಸಿ' ಗುಳಿಗೆ ದಿನಕ್ಕೊಂದರಂತೆ ತೆಗೆದುಕೊಳ್ಳಬಹುದು. ಆದರೆ ನಾನು ಒಮ್ಮೆಗೆ ಮೂರು ಗುಳಿಗೆಗಳಂತೆ ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳುತ್ತಾ ಅದನ್ನು ಎಂಟಕ್ಕೆ ಏರಿಸಿದೆ ಅಂದರೆ ದಿನಕ್ಕೆ 24 ಗುಳಿಗೆಗಳು.

ಅಲ್ಲದೆ ನನ್ನ ಹೃದಯದ ಆರೋಗ್ಯಕ್ಕಾಗಿ ದಿನಕ್ಕೆ 75mg ಆಸ್ಪಿರಿನ್. ಟೆಕ್ಸಾಸ್ ವಿಶ್ವವಿದ್ಯಾಲಯದ ಆಂಡರ್ಸನ್ ಕ್ಯಾನ್ಸರ್ ಸೆಂಟರಿನ ಸಂಶೋಧಕ ಡಾ. ಭರತ್ ಅಗರ್ವಾಲರು, ಅಮೆರಿಕದ ಜನತೆಯಲ್ಲಿ ಬಹು ಮಂದಿಯನ್ನು ಬಾಧಿಸುತ್ತಿರುವ ಕರುಳು, ಸ್ತನ, ಶ್ವಾಸಕೋಶ, ಪ್ರಾಸ್ಟೇಟ್ ಕ್ಯಾನ್ಸರಿನಿಂದ ಬಳಲುವವರ ಸಂಖ್ಯೆ ಪ್ರತಿ ದಿನ ಗಮನಾರ್ಹ ಅಂಶವಾಗಿ ಅಡಿಗೆಯಲ್ಲಿ ಅರಶಿನ ಬಳಸುತ್ತಿರುವ ಭಾರತದಲ್ಲಿ 10 ಪಾಲು ಕಡಿಮೆ ಎನ್ನುತ್ತಾರೆ.

ಕರ್ಕ್ಯುಮಿನ್ ದೇಹದಲ್ಲಿ ಆಂಟಿ ಓಕ್ಸಿಡೆಂಟ್ ಆಗಿ ವರ್ತಿಸಿ ಗಡ್ಡೆಗಳ ಬೆಳವಣಿಗೆಯನ್ನು ನಿರೋಧಿಸುತ್ತದೆ. ಅಲ್ಲದೆ ಕರ್ಕ್ಯುಮಿನ್ ಕ್ಯಾನ್ಸರ್ ಗಡ್ಡೆಗಳಿಗೆ ಆಹಾರ ಪೂರೈಸುವ ರಕ್ತನಾಳಗಳ ಬೆಳವಣಿಗೆಯನ್ನೂ ತಡೆಯುತ್ತದೆ ಎನ್ನುವ ಅವರ ವರದಿಯನ್ನವಲಂಬಿಸಿ ಅರಶಿನದ 'ಕರ್ಕ್ಯುಮಿನ್ X4000' ಎಂಬ ಸಾಮಾನ್ಯ ಅರಶಿನದ ಕಷಾಯದಲ್ಲಿನ ಕರ್ಕ್ಯುಮಿನ್‌ಗಿಂತ 23 ಪಾಲು ಅಧಿಕ ಹೀರುವಿಕೆಯ ಗುಣವಿರುವ ಒಂದು ಕಂಪನಿಯ ಉತ್ಪನ್ನವನ್ನು ಊಟದೊಂದಿಗೆ ದಿನಕ್ಕೆ ಮೂರು ಕ್ಯಾಪ್ಸೂಲ್‌ಗಳಂತೆ ತೆಗೆದುಕೊಳ್ಳುತ್ತಾ ಅದನ್ನು 12ಕ್ಕೆ ಏರಿಸಿದೆ.

Colon cancer is curable, ask great guy allan taylor how, part4

ಅಪ್ರಿಕೋಟ್ ಆರೈಕೆ : ನನ್ನ ಕಾಯಿಲೆಯಿಂದ ಮುಕ್ತಿ ಪಡೆಯಲು ಬೇಕಾಗುವ ಇನ್ನೊಂದು ಪ್ರಮುಖ ವಸ್ತು ಅಪ್ರಿಕೊಟ್ ಹಣ್ಣಿನ ತಿರುಳು (kernel). ಉತ್ತರ ಪಾಕಿಸ್ತಾನದಲ್ಲಿ ಹುಣ್ಸಕುಟ್ಸ್ (Hunzakuts)ಎನ್ನುವ ಸಸ್ಯಾಹಾರಿ ಪಂಗಡದವರು ದಿನದಲ್ಲಿ 40 ಅಪ್ರಿಕೊಟ್ ಹಣ್ಣುಗಳನ್ನು ಬೀಜದ ತಿರುಳು ಸಮೇತ ತಿನ್ನುತ್ತಾರೆ ಎಂದು ತಿಳಿಯಿತು. ಈ ಜನರಲ್ಲಿ ಕ್ಯಾನ್ಸರ್ ಕಾಯಿಲೆಯ ಸುದ್ಧಿಯೇ ಇಲ್ಲ. ಈ ಬೀಜದ ಕಹಿ ತಿರುಳು ಕ್ಯಾನ್ಸರ್ ಜೀವಕೋಶಗಳನ್ನು ನಾಶಪಡಿಸುವುದೆಂದು ದಾಖಲು ಮಾಡಲಾಗಿದೆ.

ಈ ಬೀಜದ ತಿರುಳಲ್ಲಿರುವ ಅಮಗ್ಡಿಲೀನ್ (amagdylin) ಎಂಬ ಸಂಯುಕ್ತದಲ್ಲಿ ನಾಲ್ಕು ರಾಸಾಯನಿಕಗಳಿವೆ. ಅವಲ್ಲಿ ಎರಡು ಗ್ಲೂಕೋಸುಗಳು, ಒಂದು ಬೆನ್ಜಾಲ್ಡಿಹೈಡ್ ಮತ್ತೊಂದು ಸಯನೈಡ್. ಕಡೆಯ ಎರಡೂ ವಿಷಕಾರಿ. ಸಯನೈಡು ಇತರ ಅಣುರಚನೆಗಳಲ್ಲಿ ಬಂಧಿಸಲ್ಪಟ್ಟಿದ್ದು ತಟಸ್ಥವಾಗಿರುವುದು. ಕ್ಯಾನ್ಸರ್ ಕೋಶಗಳಲ್ಲಿ ಪ್ರತ್ಯೇಕ ಕಿಣ್ವ ಬೀಟಾ-ಗ್ಲೂಕೋಸಿಡಾಸೆ ಎನ್ನುವ ಕಿಣ್ವವೊಂದಿದ್ದು ಇದು ಅಮಗ್ಡಲೀನ್ ಅಣುವನ್ನು ಒಡೆದು ಬೆನ್ಜಾಲ್ಡಿಹೈಡ್ ಮತ್ತು ಸಯನೈಡನ್ನು ಬಿಡುಗಡೆ ಮಾಡುವುದು ಮತ್ತು ಇದರ ಪರಿಣಾಮವಾಗಿ ಕ್ಯಾನ್ಸರ್ ಕೋಶಗಳ ನಾಶ.

ಈ ವಸ್ತುಗಳು ಹೇಗೆ ಕ್ಯಾನ್ಸರ್ ಕೋಶಗಳನ್ನು ಪ್ರವೇಶಿಸಿ ಅವನ್ನು ನಾಶಮಾಡುತ್ತವೆಂಬುದನ್ನು ತಿಳಿದು, ದಿನಕ್ಕೆ ಎಂಟು ಅಪ್ರಿಕೋಟ್ ಬೀಜದ ತಿರುಳನ್ನು ತಿನ್ನಲಾರಂಭಿಸಿದೆ ಮತ್ತು ನಿಧಾನವಾಗಿ ಅದನ್ನು 54ಕ್ಕೆ ಏರಿಸಿದೆ. ಅಂದರೆ ಒಮ್ಮೆಗೆ 18 ತಿರುಳಿನಂತೆ ದಿನಕ್ಕೆ ಮೂರು ಸಲ ಊಟದೊಂದಿಗೆ. ಅಪ್ರಿಕೋಟ್ ಹಾಗೂ ಕರ್ಕ್ಯುಮಿನ್ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮ ನನ್ನ ಮೇಲೆ ಉಂಟಾಗಲಿಲ್ಲ. ಮುಂದಿನ ಸ್ಕ್ಯಾನಿನ ಫಲಿತಾಂಶ ಬರುವ ಮೊದಲೇ ನನ್ನ ಕಾಯಿಲೆಯಿಂದ ಮುಕ್ತಿ ದೊರಕಿರುವಂತೆ ಉಲ್ಲಾಸಗೊಂಡೆ.

English summary
Cancer affects all of us, whether you’re a daughter, mother, sister, friend, co-worker, doctor, or patient. Colon Cancer Healed with Alkaline Diet, Turmeric, Apricot and Supplements. An inspirational story by Allan Taylor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X