ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸೇವಕ ಆರ್ಎಸ್ಎಸ್ ಫೀಡ್

By * ಶಾಮ್
|
Google Oneindia Kannada News

ಇಂಟರ್ನೆಟ್ ಬಳಸುವುದು ಕಬ್ಬಿಣದ ಕಡಲೆಯೇನಲ್ಲ. ಈ ಆಧುನಿಕ ಜೀವನದಲ್ಲಿ ಬ್ಯಾಂಕಿಂಗ್ ಎಷ್ಟು ಸರಳವಾಗಿದೆಯೋ ಇಂಟರ್ನೆಟ್ ಬಳಕೆ ಕೂಡ ಅಷ್ಟೇ ಸರಳವಾಗುತ್ತ ಸಾಗಿದೆ.

ದಟ್ಸ್ ಕನ್ನಡ ಕೂಡ ಅಂತರ್ಜಾಲದಲ್ಲಿ ಕನ್ನಡ ಓದನ್ನು ಸರಳವಾಗಿಸುವತ್ತ, ಕನ್ನಡ ಓದು ಬೆರಳ ತುದಿಗೆ ಸಿಗುವಂತೆ ಅನೇಕ ಸಾಧನಗಳನ್ನು, ಎಸ್ಎಮ್ಎಸ್ ಸೇವೆಗಳನ್ನು ನೀಡುತ್ತಲೇ ಬಂದಿದೆ. ಅವುಗಳಲ್ಲಿ ದಟ್ಸ್ ಕನ್ನಡ ಆರ್ಎಸ್ಎಸ್ ಫೀಡ್ ಕೂಡ ಒಂದು. ಬ್ರೌಸರ್ ಮುಖಾಂತರ ದಟ್ಸ್ ಕನ್ನಡದ ಪುಟಗಳಿಗೆ ಭೇಟಿ ಕೊಡುವ ಹೊರತಾಗಿಯೂ ದಟ್ಸ್ ಕನ್ನಡದ ಲೇಖನಗಳನ್ನು ಆಯ್ಕೆ ಮಾಡಿಕೊಂಡು ಓದಲು ಅನೇಕ ದಾರಿಗಳಿವೆ. ಆರ್ಎಸ್ಎಸ್ ಫೀಡ್ ಅವುಗಳಲ್ಲಿ ಒಂದು ಮಾರ್ಗ.

ದಟ್ಸ್ ಕನ್ನಡದಲ್ಲಿ ಪ್ರಕಟವಾಗುವ ಸುದ್ದಿಗಳು, ಅಂಕಣ ಲೇಖನಗಳು, ಚಿತ್ರಸುದ್ದಿಗಳನ್ನು ಬಿಡಿಬಿಡಿಯಾಗಿ ನಿಮಗಿಷ್ಟವಾದ ರೀತಿಯಲ್ಲಿ ಓದಿಕೊಳ್ಳಬಹುದು. ಟೇಬಲ್ ಮೇಲೆ ತಂದಿಟ್ಟ ಬಿಸಿಬಿಸಿಯಾದ ರುಚಿಕಟ್ಟಾದ ನಿಮಗಿಷ್ಟವಾದ ಅಡುಗೆಯನ್ನು ಬೇಕಾದಾಗ ಹಾಕಿಕೊಂಡು ಹೊಟ್ಟೆ ತುಂಬಿಸಿಕೊಂಡಂತೆ!

ಆರ್ಎಸ್ಎಸ್ ಅಂದರೆ, ರಿಯಲಿ ಸಿಂಪಲ್ ಸಿಂಡಿಕೇಷನ್. ಅಂದರೆ, ಲೇಖನದ ಕೊಂಡಿಗಳಿರುವ ಸಂಕ್ಷಿಪ್ತ ಸುದ್ದಿಯನ್ನು ದೊರಕಿಸಿಕೊಡುವ ಎಕ್ಸ್ಎಮ್ಎಲ್ ಕಡತ. ಕೊಂಡಿಯನ್ನು ಕ್ಲಿಕ್ಕಿಸಿದರೆ ಲೇಖನದ ಪೂರ್ಣಪಾಠ ಬ್ರೌಸರಲ್ಲಿ ತೆರೆದುಕೊಳ್ಳುತ್ತದೆ.

ಉಚಿತವಾಗಿ ದೊರೆಯುವ ಸೌಕರ್ಯದ ಉಪಯೋಗ ಪಡೆದುಕೊಳ್ಳುವುದು ಕೂಡ ಸುಲಭ. ಅಂತರ್ಜಾಲದಲ್ಲಿ 'ನ್ಯೂಸ್ ಅಗ್ರಿಗೇಟರ್ಸ್' ಎಂದು ಕರೆಯಲಾಗುವ 2000ಕ್ಕೂ ಹೆಚ್ಚಿನ ಫೀಡ್ ರೀಡರ್(ಸಂಕ್ಷಿಪ್ತ ಸುದ್ದಿಗಳನ್ನು ಒದಗಿಸುವ ಸಾಧನ)ಗಳು ಲಭ್ಯವಿವೆ. ಅವುಗಳನ್ನು ಡೌನ್ ಲೋಡ್ ಮಾಡಿಕೊಂಡು ಅದಕ್ಕೆ ದಟ್ಸ್ ಕನ್ನಡ ಸೇರಿಸಿಕೊಂಡರೆ, ದಟ್ಸ್ ಕನ್ನಡದಲ್ಲಿ ಪ್ರಕಟವಾಗುವ ತಾಜಾ ಸುದ್ದಿಗಳು ಪಟಪಟನೆ ಕಂಪ್ಯುಟರ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ. ನಿಮಗಾವುದಿಷ್ಟವೋ ಅದನ್ನು ಕ್ಲಿಕ್ಕಿಸಿ ಓದಿಕೊಳ್ಳಿ.

ಈ ಸೌಲಭ್ಯದ ಉಪಯೋಗ ಹೇಗೆ? : ದಟ್ಸ್ ಕನ್ನಡದಲ್ಲಿ ಪ್ರಕಟವಾಗುವ ಪ್ರತಿ ಲೇಖನದ ಶೀರ್ಷಿಕೆಯ ಅಡಿಯಲ್ಲಿ ಈ ಐಕಾನನ್ನು ನೀವು ಗಮನಿಸಿರಬಹುದು. ಅದನ್ನು ಕ್ಲಿಕ್ಕಿಸಿದರೆ, ಅದು ನೇರವಾಗಿ ದಟ್ಸ್ ಕನ್ನಡ ಫೀಡ್ ಗಳ ಪುಟಕ್ಕೆ ಕರೆದೊಯ್ಯುತ್ತದೆ. ಆರ್ಎಸ್ಎಸ್ ಫೀಡ್ ಗಳನ್ನು ಓದಲು ಮತ್ತೊಂದು ದಾರಿಯಿದೆ. ಮೊದಲೇ ತಿಳಿಸಿದ ಹಾಗೆ ಅಂತರ್ಜಾಲದಲ್ಲಿ ದೊರೆಯುವ ಫೀಡ್ ರೀಡರುಗಳಲ್ಲಿ ಉಚಿತವಾಗಿ ದೊರೆಯುವ ರೀಡರನ್ನು ಡೌನ್ ಲೋಡ್ ಮಾಡಿಕೊಂಡು ಅದರಲ್ಲಿ ದಟ್ಸ್ ಕನ್ನಡ ಎಕ್ಸ್ಎಮ್ಎಲ್ ಕಡತವನ್ನು ಅಳವಡಿಸಿಕೊಂಡರೆ ಸಂಕ್ಷಿಪ್ತ ಸುದ್ದಿಗಳು ಪ್ರಕಟವಾದಂತೆಲ್ಲ ಆಟೋಮ್ಯಾಟಿಕ್ಕಾಗಿ ಫೀಡ್ ರೀಡರಲ್ಲಿ ಪ್ರಕಟವಾಗಲು ಪ್ರಾರಂಭಿಸುತ್ತವೆ.

http://rss.oneindia.in/ ಪುಟಕ್ಕೆ ಭೇಟಿಕೊಟ್ಟರೆ ದಟ್ಸ್ ಕನ್ನಡ ಆರ್ಎಸ್ಎಸ್ ಫೀಡ್ ಗಳು ಸೇರಿದಂತೆ ಒನ್ ಇಂಡಿಯಾದ ಎಲ್ಲ ಆರ್ಎಸ್ಎಸ್ ಫೀಡ್ ಗಳು ಲಭ್ಯವಿವೆ. ಈ ಆರ್ಎಸ್ಎಸ್ ಫೀಡ್ ಗಳನ್ನು ನಿಮ್ಮ ಈಮೇಲ್ ಅಪ್ಲಿಕೇಷನ್ ಗಳಲ್ಲಿ ಕೂಡ ಅಳವಡಿಸಿಕೊಳ್ಳಬಹುದು. ಅಲ್ಲದೆ, ದಟ್ಸ್ ಕನ್ನಡ ಗ್ಯಾಡ್ಜೆಟ್ಟುಗಳನ್ನು ಗೂಗಲ್, ಯಾಹೂಗಳಲ್ಲಿ ಅಳವಡಿಸಿಕೊಳ್ಳುವ ಮುಖಾಂತರ ಗೂಗಲ್ ಮತ್ತು ಯಾಹೂ ಮುಂತಾದ ತಾಣಗಳಲ್ಲಿಯೂ ದಟ್ಸ್ ಕನ್ನಡದ ಫೀಡ್ ಗಳನ್ನು ಓದಬಹುದು. ಏನಾದರೂ ಸಂಶಯಗಳಿದ್ದರೆ, ನೆರವಿಗೆ ನಮಗೆ ತಪ್ಪದೆ ಬರೆಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X