ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ಕೊಲ್ಲುವ ಪ್ಯಾರಲಲ್ ಲೈಫ್ ಎಂಬ ಕಾಯಿಲೆ!

By * ರವಿ ಬೆಳಗೆರೆ
|
Google Oneindia Kannada News

ಅದು ಮರ್ಲಿನ್ ಮನ್ರೋ ನಟಿಸಿದ ಚಿತ್ರ: ಸೆವೆನ್ ಇಯರ್ಸ್ ಇಚ್. ಅದಕ್ಕೂ ಮುಂಚೆ 1952ರಲ್ಲಿ ಜಾರ್ಜ್ ಎಕ್ಸಲ್ ರಾಡ್ ಎಂಬಾತ ಇದೇ ಹೆಸರಿನ ನಾಟಕ ಬರೆದಿದ್ದ. ಮುಂದೆ ಅದು ಸಿನಿಮಾ ಆದಾಗ ಈ Seven Years Itch ಎಂಬುದು ಮನೆ ಮಾತಾಯಿತು. ವೈದ್ಯ ಪ್ರಪಂಚದಲ್ಲಿ ಅದೇ ಬೇರೆಯದೇ ಅರ್ಥ ಪಡೆದು ವೈದರು ಕೂಡ ಬಳಸುವಂತಾಯಿತು.

ಇಷ್ಟಕ್ಕೂ ದಾಂಪತ್ಯ ಜೀವನದಲ್ಲಿ ಏಳು ವರ್ಷದ ನಂತರ, ಗಂಡ ಅಥವಾ ಹೆಂಡತಿ (ಅಥವಾ ಇಬ್ಬರೂ) ಒಂದು ಮದುವೆಯ ಆಚೆಗಿನ ಸಂಬಂಧಕ್ಕೆ ಹಾತೊರೆಯುತ್ತಾರೆ ಎಂಬ ಅಂದಾಜು ಸಿದ್ಧಾಂತ, ಹಾತೊರೆಯುವಿಕೆಯನ್ನೇ itch ಅಂದಿದ್ದಾರೆ. ಅದನ್ನೇ ಮತ್ತಷ್ಟು ಒರಟಾಗಿ ಚಿತ್ರನಟ ಉಪೇಂದ್ರ 'ಕೆರೆತ ಕಾಂತಾ ಕೆರೆತ' ಅಂದ. ಸಾಮಾನ್ಯವಾಗಿ ಇಂಥ ಸಮಸ್ಯೆ ದಂಪತಿಗಳು 30 ದಾಟಿದ ನಂತರ ತಮ್ಮ ನಡುವೆ ತಂದುಕೊಳ್ಳುತ್ತಾರೆ ಎಂಬ ನಂಬಿಕೆ.

Seven-year itch | Marriage and extra-marital affair

ಆದರೆ ಮೊದಲೆಲ್ಲಾ ಚಿಕ್ಕ ವಯಸ್ಸಿಗೇ ಮದುವೆಯಾಗುತ್ತಿತ್ತು. ಅನೇಕರು ಮದುವೆಯೆಂಬುದಕ್ಕೆ ಬೌದ್ಧಿಕವಾಗಿ prepare ಆಗಿಯೇ ಇರುತ್ತಿರಲಿಲ್ಲ. ಆದರೆ ದೇಹದಲ್ಲಿನ ಹಾರ್ಮೋನ್ ಗಳ ಕಲರವ ಇರುತ್ತಿತ್ತಲ್ಲ? ದಾಂಪತ್ಯವನ್ನು ತುಂಬಾ intimate ಆಗಿ enjoy ಮಾಡುತ್ತಿದ್ದರು. ಆಮೇಲೆ ನಿಧಾನವಾಗಿ ಮನಸ್ಸು ಬಲಿತು, ದೇಹ ತಂಪಾಗಿ ಆಕರ್ಷಣೆಯ ಮಟ್ಟ ಕಡಿಮೆಯಾದ ಮೇಲೆ, ತಮ್ಮನ್ನು ಪುಳಿಕಿತಗೊಳಿಸಬಲ್ಲಂಥ, stimulate ಮಾಡುವಂತಹುದು ಇನ್ನೇನೋ ಬೇಕು ಎಂಬ ಹಂಬಲಗೊಂದಿಗೆ ಮದುವೆಯ ಬೇಲಿ ಹಾರಿ ಹೊರಗಿನ ಸಂಬಂಧಕ್ಕೆ ಕೈ ಚಾಚುತ್ತಿದ್ದರು. ಅಷ್ಟು ಹೊತ್ತಿಗೆ ಬಹುಶಃ ಏಳು ವರ್ಷಗಳಾಗುರುತ್ತಿದ್ದವು.

ಈಗ ಅಷ್ಟೆಲ್ಲಾ ಬೇಗ ಮದುವೆಗಳಾಗುವುದಿಲ್ಲ. ಚೆನ್ನಾಗಿ ಸೆಟ್ಲ್ ಆಗಿ ದುಡಿದು, ಸ್ವಂತ ಮನೆಮಾಡಿ, ಜವಾಬ್ದಾರಿ ಮುಗಿಸಿಕೊಂಡು ಮದುವೆಯಾಗಲು ನಿರ್ಧರಿಸುವ ಹೊತ್ತಿಗೆ ಯಾವ ಇಪ್ಪತ್ತೊಂಬತ್ತೋ? ಮೂವತ್ತೋ? ಅವರು ಮಾನಸಿಕವಾಗಿ ಪ್ರಬುದ್ಧರಾಗಿರುತ್ತಾರೆ. ಮದುವೆಗೆ, ವೈವಾಹಿಕ ಜೀವನಕ್ಕೆ ಮಾನಸಿಕವಾಗಿ ಸಂಸಿದ್ಧರಾಗಿರುತ್ತಾರೆ. ಆದರೆ ಅವರೂ ಈ seven years itchಗೆ ಒಳಗಾಗುತ್ತಾರಾ? ಅಷ್ಟು ಪ್ರಬುದ್ಧ ದಂಪತಿಗಳು, ತಮ್ಮ ಶಾಶ್ವತ ಬಾಂಧವ್ಯಕ್ಕಾಗಿ ತುಂಬಾ ಶ್ರಮಿಸಿದವರು, ಪರಸ್ಪರರನ್ನು ತುಂಬಾ ಪ್ರೀತಿಸಿದವರು, ಅವರೂ...? [ಅನೈತಿಕ ಸಂಬಂಧಕ್ಕಿಂತ ಡೇಂಜರ್ ಯಾವ್ದು ಗೊತ್ತಾ? ಮುಂದೆ ಓದಿ...]

English summary
Seven-year itch. Call it infatuation, disease, curse to the marriage, every couple surely fall into this ditch, however affectionate to each other they are. Bottom item by Hi Bangalore editor Ravi Belagere unmasks many facets of marriage and infidelity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X