ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರ, ಏ. 30 : ದಿನಪಂಚಾಂಗ ಮತ್ತು ಸುಭಾಷಿತ

By Prasad
|
Google Oneindia Kannada News

ಬುಧವಾರ (ಏ. 30)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪಾಡ್ಯ ತಿಥಿ, ಭರಣಿ ನಕ್ಷತ್ರ, ರಾಹುಕಾಲ 12.00 ರಿಂದ 13.30.

ಸುಭಾಷಿತ : ನೀರಿನಲ್ಲಿ ಕಾಣುವ ಪ್ರಾಕೃತಿಕ ಸೊಬಗಿನ ಪ್ರತಿಬಿಂಬದಂತೆ, ನಮ್ಮ ಮನಸೂ ದ್ವೇಷ ಅಸೂಯೆಗಳಿಂದ ಮುಕ್ತವಾಗಿರಬೇಕು.

ದಿನದ ವಿಶೇಷ : ಕೃಷ್ಣಾಪುರ ಸಂತಾನ ಗೋಪಾಲಕೃಷ್ಣ ರಥ, ಬಾಯಾರು ಮಲರಾಯ ಕಡೇಬಂಡಿ

ಮಂಗಳವಾರ (ಏ. 29)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ಅಮವಾಸ್ಯೆ ತಿಥಿ, ಅಶ್ವಿನಿ ನಕ್ಷತ್ರ, ರಾಹುಕಾಲ 15.00 ರಿಂದ 16.30

ಸುಭಾಷಿತ : ಪ್ರಪಂಚವನ್ನು ಸರಿಪಡಿಸುವ ಉದ್ದೇಶವಿದ್ದಲ್ಲಿ ಅದು ನಿನ್ನಿಂದಲೇ ಆರಂಭವಾಗಲಿ. ನಿನ್ನಲ್ಲಿನ ಲೋಪ ದೋಷ ಪರಿಹಾರದ ಮೂಲಕ ಆರಂಭವಾಗಲಿ - ಕೋಫಿ ಅನ್ನಾನ್ (ವಿಶ್ವಸಂಸ್ಥೆ ಮಾಜಿ ಮಹಾ ಕಾರ್ಯದರ್ಶಿ)

ದಿನದ ವಿಶೇಷ : ಅಂತರಾಷ್ಟ್ರೀಯ ನೃತ್ಯ ದಿನ, ಮಾನ್ವಿ, ಪೈವಳಿಕೆ ಉತ್ಸವ, ತಾಯಲೂರು ವಿಶ್ವೇಶ್ವರರಥ

Daily Almanac (panchanga) and Wise quotes in Kannada

ಸೋಮವಾರ (ಏ. 28)

ಪಂಚಾಂಗ :

ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ 07.30 ರಿಂದ 09.00.

ಸುಭಾಷಿತ : ಪ್ರೀತಿಯ ಮೂರ್ತ ರೂಪವೇ ಕಾರ್ಯ - ಖಲೀಲ್ ಗಿಬ್ರಾನ್.

ದಿನದ ವಿಶೇಷ : ಪುತ್ತೂರು ಉತ್ಸವ, ಬಲ್ನಾಡು ಉಳ್ಳಾಲ್ತಿ ಜಾತ್ರೆ, ಮುಡೂಕೊತರಿ ಪರಿಷೆ

ಭಾನುವಾರ (ಏ. 27)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ, ರಾಹುಕಾಲ 16.30 ರಿಂದ 18.00.

ಸುಭಾಷಿತ : ಪಾಪವನ್ನು ಕ್ಷಮಿಸು, ಪಾಪಿಯನ್ನಲ್ಲ - ಮಹಾತ್ಮಾ ಗಾಂಧಿ.

ದಿನದ ವಿಶೇಷ : ಮಾಶ ಶಿವರಾತ್ರಿ, ವರಾಹ ವರ್ಧಂತಿ, ಶ್ರೀರಂಗ ರಂಗನಾಥಸ್ವಾಮಿ ರಥ, ಅನಧ್ಯಯನ ಚತುಷ್ಟಯ.

ಶನಿವಾರ (ಏ. 26)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಪೂರ್ವಾಬಾದ್ರಾ ನಕ್ಷತ್ರ, ರಾಹುಕಾಲ 09.00 ರಿಂದ 10.30.

ಸುಭಾಷಿತ : ತರ್ಕವು ಕೇವಲ ಬುದ್ಧಿಯ ವಿಷಯ ; ಬುದ್ಧಿಯ ವಿಷಯವನ್ನು, ಹೃದಯ ಒಪ್ಪದಿದ್ದರೆ ಅದನ್ನು ತ್ಯಜಿಸಬೇಕು - ಮಹಾತ್ಮಾ ಗಾಂಧಿ.

ದಿನದ ವಿಶೇಷ : ಶನಿ ಪ್ರದೋಷ, ವಿಶ್ವ ಬೌದ್ಧಿಕ ಆಸ್ತಿ ದಿನ, ಎಕ್ಕಾರು ಮಹಾದೇವಿ ಯಾತ್ರೆ, ಹಂಪಿಹೊಳಿ ನರಸಿಂಹ ಯತಿ ಆರಾಧನೆ.

ಶುಕ್ರವಾರ (ಏ.25)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಶತಭಿಷ ನಕ್ಷತ್ರ, ರಾಹುಕಾಲ ಬೆಳಿಗ್ಗೆ 10.30 ರಿಂದ 12.00.

ಸುಭಾಷಿತ : ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಧು ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ - ಆದಿ ಶಂಕರಾಚಾರ್ಯರು.

ದಿನದ ವಿಶೇಷ : ವಿಶ್ವ ಮಲೇರಿಯಾ ದಿನ. ವೈರೂಥಿನಿ ಏಕಾದಶಿ, ಮೈಸೂರು ಶ್ವೇತವರಾಹ ರಥ, ತುರುವೇಕೆರೆ-ಸೀಗೆಹಳ್ಳಿ ವೆಂಕಟೇಶ್ವರ ರಥ.

ಗುರುವಾರ (ಏ.24)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಧನಿಷ್ಠಾ ನಕ್ಷತ್ರ, ಸೌರಮಾನ ಯುಗಾದಿ, ರಾಹುಕಾಲ 13.30 ರಿಂದ 15.00.

ಸುಭಾಷಿತ : ಧನಾತ್ಮಕವಾಗಿ ಯೋಚಿಸುವವನನ್ನು ವಿಷವೂ ಕೊಲ್ಲಲಾರದು. ಹಾಗೆ ಋಣಾತ್ಮಕವಾಗಿ ಯೋಚಿಸುವವನ ಕಾಯಿಲೆಯನ್ನು ಯಾವ ಔಷದಿಯೂ ಗುಣಪಡಿಸದು.

ದಿನದ ವಿಶೇಷ : ಡಾ. ರಾಜ್ ಕುಮಾರ್, ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬ. ಪುಟ್ಟಪರ್ತಿ ಸತ್ಯ ಸಾಯಿಬಾಬಾ ಪುಣ್ಯತಿಥಿ.

ಬುಧವಾರ (ಏ. 23)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ 12.00 ರಿಂದ 13.30.

ಸುಭಾಷಿತ : ಪುಸ್ತಕಗಳ್ಳನ್ನು ಓದುವುದರ ಮೂಲಕ, ಜಗತ್ತನ್ನು ಅತ್ಯಂತ ಸುಲಭ ವೆಚ್ಚದಲ್ಲಿ ನೋಡಬಹುದು.

ದಿನದ ವಿಶೇಷ : ವಿಶ್ವ ಪುಸ್ತಕ ದಿನ, ವಿಶ್ವ ಕೃತಿ ಹಕ್ಕುಗಳ ದಿನ, ವೃಷಭ ಜಯಂತಿ

ಮಂಗಳವಾರ (ಏ. 22)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ಅಷ್ಠಮಿ ತಿಥಿ, ಉತ್ತರಾಷಾಢಾ ನಕ್ಷತ್ರ, ರಾಹುಕಾಲ 15.00 ರಿಂದ 16.30

ಸುಭಾಷಿತ : ಭೂಮಿಗೆ ಬಿತ್ತುವ ಒಂದೇ ಒಂದು ಕಾಳು ಸಾಕು ಅದು ತೆನೆ ರೂಪದಲ್ಲಿ ಸಿಗುತ್ತದೆ, ಆಗಸದಿಂದ ಬೀಳುವ ಒಂದೊಂದೇ ಮಳೆ ಹನಿಗಳು ಸೇರಿ ನದಿಯಾಗಿ ಹರಿಯುತ್ತವೆ. ನಾವು ಮಾಡುವ, ಆಡುವ, ಯೋಚಿಸುವ ಒಳ್ಳೆ ಮತ್ತು ಕೆಟ್ಟ ಕೆಲಸಗಳ ಮೇಲೆ ನಮ್ಮ ಮುಂದಿನ ಜೀವನ ನಿರ್ಧಾರವಾಗಿರುತ್ತದೆ.

ದಿನದ ವಿಶೇಷ : ವಿಶ್ವ ಭೂಮಿ ದಿನ. ವೇಣೂರು ಮಹಾಲಿಂಗೇಶ್ವರ ರಥ, ತಲಕಾಡು ಶಾಂತಕೃಷ್ಣಾನಂದ-ಸರಸ್ವತಿ ಆರಾಧನೆ.

ಸೋಮವಾರ (ಏ.21)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಪೂರ್ವಾಷಾಢಾ ನಕ್ಷತ್ರ, ರಾಹುಕಾಲ 07.30 ರಿಂದ 09.00.

ಸುಭಾಷಿತ : ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ, ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ. ಸಂತೋಷವೂ ಹಾಗೆಯೆ, ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ.

ದಿನದ ವಿಶೇಷ : ಗುರು ಅರ್ಜುನ್ ದೇವ್ ಜನ್ಮದಿನ. ವಿಶ್ವ ಕಾರ್ಯದರ್ಶಿಗಳ ದಿನ. ಕಟೀಲು ಶ್ರೀ ದುರ್ಗಾಪರಮೇಶ್ವರಿ ರಥ. ವಾಮಂಜೂರು, ಕಮಲಶಿಲೆ ರಥ.

ಭಾನುವಾರ (ಏ.20)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ಈಸ್ಟರ್ ಸಂಡೇ, ರಾಹುಕಾಲ 16.30 ರಿಂದ 18.00.

ಸುಭಾಷಿತ : ಮಾತಾಡಿ ಕೆಟ್ಟವರು ಅನ್ನಿಸಿ ಕೊಳ್ಳದಕಿಂತ, ಮೌನವಾಗಿದ್ದು ಅರ್ಥವಾಗದೇ ಉಳಿದುಬೀಡೋದು ಒಳ್ಳೆಯದು.

ದಿನದ ವಿಶೇಷ : ಈಸ್ಟರ್ ಸಂಡೇ.

ಶನಿವಾರ (ಏ.19)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ಚೌತಿ ತಿಥಿ, ಜ್ಯೇಷ್ಠ ನಕ್ಷತ್ರ, ರಾಹುಕಾಲ 09.000 ರಿಂದ 10.30.

ಸುಭಾಷಿತ : ಒಳ್ಳೆಯದೆಂದರೆ ಕೆಟ್ಟದ್ದನ್ನು ಮಾಡದಿರುವುದು ಅಷ್ಟೇ ಅಲ್ಲ, ಕೆಟ್ಟದ್ದನ್ನು ಮಾಡಲು ಬಯಸದಿರುವುದು - ಡೆಮೋಕ್ರೆಟಸ್.

ದಿನದ ವಿಶೇಷ : ಹೋಲಿ ಸ್ಯಾಟರ್ಡೆ (ಪವಿತ್ರ ಶನಿವಾರ), ಆವನಿ ಶಂಕರಿ ಜಗದ್ಗುರು ವಿದಯಾಶಂಕರಭಾರತಿ ಸ್ವಾಮಿ ಉತ್ತರಾರಾಧನೆ.

ಶುಕ್ರವಾರ (ಏ. 18)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ತದಿಗೆ ತಿಥಿ, ಅನುರಾಧ ನಕ್ಷತ್ರ, ರಾಹುಕಾಲ 10.30 ರಿಂದ 12.00

ಸುಭಾಷಿತ : ಜನರಿಗೆ ವಯಸ್ಸಾಗುತ್ತಿದೆ ಎಂದು ಕನಸು ಕಾಣುವುದನ್ನು ನಿಲ್ಲಿಸುತ್ತಿದ್ದಾರೆ ಎನ್ನುವುದು ಸರಿಯಲ್ಲ, ಅವರು ಕನಸು ಕಾಣುವುದನ್ನು ನಿಲ್ಲಿಸಿದ್ದಿಕ್ಕಾಗಿ ಅವರಿಗೆ ವಯಸ್ಸಾಗುತ್ತಿದೆ - ಗ್ಯಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ (ಇವರು ಗುರುವಾರ, ಏ.17ರಂದು ತೀರಿಕೊಂಡರು.)

ದಿನದ ವಿಶೇಷ : ಗುಡ್ ಫ್ರೈಡೆ, ವಿಶ್ವ ಪರಂಪರೆ ದಿನ, ಮೌನ ದಿನ, ಪಾವಂಜೆ, ಹುಲಿಕಲ್ಲು ನೃಸಿಂಹಸ್ವಾಮಿ ರಥ.

ಗುರುವಾರ (ಏ. 17)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ಬಿದಿಗೆ ತಿಥಿ, ವಿಶಾಖ ನಕ್ಷತ್ರ, ರಾಹುಕಾಲ 13.30 ರಿಂದ 15.00

ಸುಭಾಷಿತ : ಒಬ್ಬ ಶಿಕ್ಷಕ ತಾನು ಕಲಿಯದೆ ಇನ್ನೊಬ್ಬರಿಗೆ ಕಲಿಸಲಾರ. ತಾನು ಉರಿಯದ ದೀಪ ಇನ್ನೊಂದು ದೀಪವನ್ನು ಬೆಳಗಿಸಲಾರದು - ಕವಿ ರವೀಂದ್ರನಾಥ್ ಟ್ಯಾಗೋರ್.

ದಿನದ ವಿಶೇಷ : ವರದಹಳ್ಳಿ ಶ್ರೀಧರ ಸ್ವಾಮಿ ಆರಾಧನೆ.

ಬುಧವಾರ (ಏ. 16)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಕೃಷ್ಣ ಪಕ್ಷ, ಪಾಡ್ಯ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ 12.00 ರಿಂದ 13.30

ಸುಭಾಷಿತ : ಯಾರಿಗೂ ಉಪದೇಶ ಮಾಡಬೇಡ. ದಡ್ಡರು ಅದನ್ನು ಗಮನಿಸುವುದಿಲ್ಲ, ಜಾಣರಿಗೆ ಅದು ಬೇಕಾಗಿಲ್ಲ - ವಾಷಿಂಗ್ಟನ್ ಪೋಸ್ಟ್ ಪತ್ರಿಕೆ.

ದಿನದ ವಿಶೇಷ : ಬನ್ನೂರು ಕೋದಂಡರಾಮ ರಥ, ಮಧುಗಿರಿ, ಮರವೇಕೆರೆ, ಎಕ್ಕಾರು ರಥ.

ಮಂಗಳವಾರ (ಏ.15)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ಹುಣ್ಣಿಮೆ ತಿಥಿ, ಚಿತ್ರಾ ನಕ್ಷತ್ರ, ಸೌರಮಾನ ಯುಗಾದಿ, ರಾಹುಕಾಲ 15.00 ರಿಂದ 16.30.

ಸುಭಾಷಿತ : ಒಬ್ಬನನ್ನು ಮೂರ್ಖನನ್ನಾಗಿಸಿದೆ ಎಂದು ಸಂತೋಷಿಸಬೇಡ ಏಕೆಂದರೆ ಅವನು ನಿನ್ನ ಮೇಲಿಟ್ಟ ನಂಬಿಕೆಯಿಂದ ಮೂರ್ಖನಾಗಿರುತ್ತಾನೆ, ಆದುದರಿಂದ ನಂಬಿಕೆ ಎನ್ನುವುದು ಬಹಳ ದೊಡ್ಡದು ಅದನ್ನು ಉಳಿಸಿಕೊಳ್ಳಬೇಕು.

ದಿನದ ವಿಶೇಷ : ಬೆಂಗಳೂರು ಕರಗ, ಹನುಮ ವ್ರತ, ಅಕ್ಕಮಹಾದೇವಿ ಜಯಂತಿ.

ಸೋಮವಾರ (ಏ. 14)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಹಸ್ತಾ ನಕ್ಷತ್ರ, ರಾಹುಕಾಲ ಬೆಳಿಗ್ಗೆ 7.40 ರಿಂದ 9.13.

ಸುಭಾಷಿತ : ಆಸೆ ಪಡುವುದು ತಪ್ಪಲ್ಲ. ಆಸೆ ಬಿಡು ಎಂದು ಹೇಳುವುದೇ ತಪ್ಪು. ಅದನ್ನು ಬಿಟ್ಟಿದ್ದೇನೆ ಎಂದು ಹೇಳುವುದು ದೊಡ್ಡ ಸುಳ್ಳು. ಏಕೆಂದರೆ, ಆಸೆ ಎಂಬುದು ಪ್ರತಿ ಮನುಷ್ಯನ ಆಂತರ್ಯದಲ್ಲಿರುವ ಸಹಜ ಗುಣ - ಯು.ಜಿ. ಕೃಷ್ಣಮೂರ್ತಿ.

ದಿನದ ವಿಶೇಷ : ಡಾ. ಅಂಬೇಡ್ಕರ್ ಜಯಂತಿ. ಸೌರಮಾನ ಯುಗಾದಿ. ತಮಿಳರ ಹೊಸ ವರ್ಷ.

ಭಾನುವಾರ (ಏ. 13)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಉತ್ತರ ನಕ್ಷತ್ರ, ರಾಹುಕಾಲ 16.30 ರಿಂದ 18.00.

ಸುಭಾಷಿತ : ಲೈಂಗಿಕ ಕಾಮ ಸುಂದರವೂ, ಉದಾತ್ತವೂ ಆಗಿರುತ್ತದೆ. ಆ ವಿಷಯದಲ್ಲಿ ನಾಚಿಕೆ ಪಡಬೇಕಾಗಿಲ್ಲ - ಮಹಾತ್ಮಾ ಗಾಂಧಿ.

ದಿನದ ವಿಶೇಷ : ಭಗವಾನ್ ಮಹಾವೀರ ಜಯಂತಿ, ಮೈಸೂರು ಸಂತೇಪೇಟೆ ಸತ್ಯನಾರಾಯಣ ವರ್ಷೋತ್ಸವ, ಬನ್ನೂರು ಕುಂಟ್ಯಾರು ಸದಾಶಿವ ಉತ್ಸವ, ಪಾಮ್ ಸಂಡೇ (ಈಸ್ಟರ್ ಗೂ ಮೊದಲು ಬರುವ ಭಾನುವಾರದಂದು ಕ್ರೈಸ್ತರು ನಡೆಸುವ ಆಚರಣೆ).

ಶನಿವಾರ (ಏ. 12)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಹುಬ್ಬ ನಕ್ಷತ್ರ, ಅನಂಗ ತ್ರಯೋದಶಿ, ರಾಹುಕಾಲ 09.000 ರಿಂದ 10.30.

ಸುಭಾಷಿತ : ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರಬೇಕಾದರೆ ಸ್ವಲ್ಪವಾದರೂ ನೈತಿಕ ಶಿಕ್ಷಣ ಮುಖ್ಯ - ಮಾಜಿ ಪ್ರಧಾನಿ ಜವಾಹರಲಾಲ್ ನೆಹರು.

ಶುಕ್ರವಾರ (ಏ. 11)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಮಖ ನಕ್ಷತ್ರ, ರಾಹುಕಾಲ 10.30 ರಿಂದ 12.00

ಸುಭಾಷಿತ : ಜೀವನವನ್ನು ಸಂತೋಷದಿಂದ ಹೇಗೆ ಕಳೆಯಬೇಕು ಎನ್ನುವದನ್ನು ತಿಳಿಯದಿದ್ದವನು ಮನುಷ್ಯನೇ ಅಲ್ಲ - ಸರ್ವಜ್ಞ.

ದಿನದ ವಿಶೇಷ : ನಂಜನಗೂಡು ಪಂಚರಥ, ಮಂಡ್ಯ ಗರುಡೋತ್ಸವ, ಸೊರಬ ರಥ, ಬನವಾಸಿ ಮಧುಕೇಶ್ವರ ರಥ.

ಗುರುವಾರ (ಏ.10)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ದಶಮಿ/ಏಕಾದಶಿ ತಿಥಿ, ಆಶ್ಲೇಷ ನಕ್ಷತ್ರ, ಶುಕ್ರ ಜಯಂತಿ, ರಾಹುಕಾಲ 13.30 ರಿಂದ 15.00

ಸುಭಾಷಿತ : ಇಡೀ ಪ್ರಪಂಚವನ್ನು ಸೌಂದರ್ಯಕ್ಕಾಗಿ ಸುತ್ತಾಡಿದರೂ, ಅದು ನಮ್ಮಲ್ಲಿಲ್ಲದಿದ್ದರೆ ಸಿಗಲಾರದು - ರಾಲ್ಫ್ ವಾಲ್ಡೋ ಎಮರ್ಸನ್ (ಅಮೆರಿಕದ ಕ್ರಾಂತಿಕಾರಿ ಕವಿ.)

ದಿನದ ವಿಶೇಷ : ಪೊಳಲಿ ಜಾತ್ರೆ, ಮಹಾಲಿಂಗೇಶ್ವರ ಧ್ವಜ. ಯುವ ಬರಹಗಾರರನ್ನು ಪ್ರೋತ್ಸಾಹಿಸುವ ದಿನ.

ಬುಧವಾರ (ಏ.9)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಪುಷ್ಯ ನಕ್ಷತ್ರ, ರಾಹುಕಾಲ 12.00 ರಿಂದ 13.30.

ಸುಭಾಷಿತ : ಆಧುನಿಕ ರಾಜಕೀಯ ಮನುಷ್ಯರ ನಡುವಿನ ತಿಕ್ಕಾಟವಲ್ಲ, ಶಕ್ತಿ ಕೂಟಗಳ ನಡುವಿನ ಹೋರಾಟ - ಹೆನ್ರಿ ಬಿ. ಆಡಂಸ್.

ದಿನದ ವಿಶೇಷ : ರಾಮನಗರ ರಾಮಸ್ವಾಮಿ, ಬೆಂಗಳೂರು ಗಾಳಿ ಆಂಜನೇಯ ರಥ. ಹೊಳಲ್ಕೆರೆ, ಹಿರೇಹೆಮ್ಮಗನೂರು ಕಲ್ಲೇಶ್ವರ ರಥ.

ಮಂಗಳವಾರ (ಏ. 8)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಪುನರ್ವಸು ನಕ್ಷತ್ರ, ಶ್ರೀರಾಮನವಮಿ, ರಾಹುಕಾಲ 15.00 ರಿಂದ 16.30.

ಸುಭಾಷಿತ : ಶ್ರಮ ಎನ್ನುವುದು ಯಾರನ್ನೂ ಕೊಲ್ಲುವುದಿಲ್ಲ. ಆದರೆ ಚಿಂತೆ ಎನ್ನುವುದು ಮಾತ್ರ ಬಹಳಷ್ಟು ಜನರನ್ನು ಜೀವಂತ ಕೊಲ್ಲುತ್ತದೆ - ಲೆನಿನ್.

ದಿನದ ವಿಶೇಷ : ಶ್ರೀರಾಮ ನವಮಿ. ತ್ರೇತಾಯುಗದಲ್ಲಿ ದಶರಥ, ಕೌಸಲ್ಯೆಯ ಮಗನಾಗಿ ಅಯೋಧ್ಯೆಯಲ್ಲಿ ಶ್ರೀರಾಮನು ಜನಿಸಿದ ದಿನ. ಶ್ರೀ ರಾಮ ನವಮಿ ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ.

ಸೋಮವಾರ (ಏ. 7)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಆದ್ರಾ ನಕ್ಷತ್ರ, ರಾಹುಕಾಲ 07.30 ರಿಂದ 09.00

ಸುಭಾಷಿತ : ಕಾಲವನ್ನು ಕಾಲ ಮಾತ್ರ ಗೆಲ್ಲುತ್ತದೆ - ಟಿಎಸ್ ಎಲಿಯಟ್.

ದಿನದ ವಿಶೇಷ : ವಿಶ್ವ ಆರೋಗ್ಯ ದಿನ. ಗಂಡಸರೆ, ಹೆಂಗಸರೆ ಇವತ್ತು ಮನೆಗೆಲಸ ಮಾಡಬೇಡಿ, ಯಾಕಂದ್ರೆ ಇವತ್ತು ಮನೆಗೆಲಸ ರಹಿತ ದಿನ.

ಭಾನುವಾರ (ಏ. 6)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಆರ್ದ್ರಾ ನಕ್ಷತ್ರ, ಸಂತಾನ ಸಪ್ತಮಿ, ಕುರುಬ ಜಯಂತಿ, ರಾಹುಕಾಲ 16.30 ರಿಂದ 18.00

ಸುಭಾಷಿತ : ಹತ್ತು ಮಂದಿ ಉಪಾಧ್ಯಾಯರಿಗಿಂತ ಒಬ್ಬ ಆಚಾರ್ಯ, ನೂರು ಆಚಾರ್ಯರಿಗಿಂತ ಒಬ್ಬ ತಂದೆ, ಸಾವಿರ ತಂದೆಯರಿಗಿಂತ ಒಬ್ಬ ತಾಯಿ ಅಧಿಕ ಗೌರವಕ್ಕೆ ಅರ್ಹರು - ಮನು.

ಶನಿವಾರ (ಏ. 5)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಮೃಗಶಿರ ನಕ್ಷತ್ರ, ರಾಹುಕಾಲ 09.00 ರಿಂದ 10.30

ಸುಭಾಷಿತ : ಗುರುಗಳ ಸೇವೆಯಿಂದ ವಿದ್ಯೆಯೂ, ಪಾನಸೇವೆಯಿಂದ ಕಾಮವೂ ಮತ್ತು ಚಂದ್ರೋದಯದಿಂದ ಸಮುದ್ರವೂ ಹೆಚ್ಚುತ್ತದೆ.

ದಿನದ ವಿಶೇಷ : ರಾಷ್ಟ್ರೀಯ ನಾವಿಕರ ದಿನ.

ಶುಕ್ರವಾರ (ಏ. 4)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ರೋಹಿಣಿ ನಕ್ಷತ್ರ, ದೇವರ ದಾಸಿಮಯ್ಯ ಜಯಂತಿ, ರಾಹುಕಾಲ 10.30ರಿಂದ 12.00

ಸುಭಾಷಿತ : ಫಲಭರಿತವಾದ ಮರದ ಕೊಂಬೆಗಳು ಬಗ್ಗುವುದು ಸಹಜ. ಅಂತೆಯೆ, ಮಹಾನ್ ವ್ಯಕ್ತಿಗಳು ಕೂಡ ತಗ್ಗಿಬಗ್ಗಿ ನಡೆಯುತ್ತಾರೆ - ರಾಮಕೃಷ್ಣ ಪರಮಹಂಸ.

ದಿನದ ವಿಶೇಷ : ಐಟಿ ದಿಗ್ಗಜ ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್ ಮೈಕ್ರೋಸಾಫ್ಟ್ ಕಂಪನಿಯನ್ನು ಸ್ಥಾಪಿಸಿದ ದಿನ.

ಗುರುವಾರ (ಏ. 3)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ಚೌತಿ ತಿಥಿ, ಕೃತಿಕ ನಕ್ಷತ್ರ, ರಾಹುಕಾಲ 13.30 ರಿಂದ 15.00.

ಸುಭಾಷಿತ : ರಾಜಕಾರಣಿ ತನ್ನ ಮುಂದಿನ ಚುನಾವಣೆ ಬಗ್ಗೆ ಚಿಂತಿಸುತ್ತಾನೆ. ಮುತ್ಸದ್ದಿ ಜನಾಂಗದ ಭವಿಷ್ಯದ ಬಗ್ಗೆ ಚಿಂತಿಸುತ್ತಾನೆ - ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ ವೆಲ್ (ಸ್ಕಾಟ್ಲೆಂಡ್ ಗಣಿತ ವಿಜ್ಞಾನಿ).

ದಿನದ ವಿಶೇಷ : ಕಾಮನಬಿಲ್ಲು ಹುಡುಕಿ ದಿನ (Find A Rainbow Day).

ಬುಧವಾರ (ಏ. 2)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ತದಿಗೆ ತಿಥಿ, ಭರಣಿ ನಕ್ಷತ್ರ, ಸೌಭಾಗ್ಯ ಗೌರಿ ವೃತ, ರಾಹುಕಾಲ 12.30 ರಿಂದ 13.30.

ದಿನದ ವಿಶೇಷ : ವಿಶ್ವ ಮನೋವೈಕಲ್ಯ ದಿನ, ಅಂತಾರಾಷ್ಟ್ರೀಯ ಮಕ್ಕಳ ಪುಸ್ತಕ ದಿನ.

ಸುಭಾಷಿತ : ಆಗಸಕ್ಕೆ ಹಾರಿದರೂ, ಪಾತಾಳ ಹೊಕ್ಕರೂ, ಇಡೀ ಭೂಮಂಡಲವನ್ನು ಸುತ್ತಿಬಂದರೂ ನಾವು ಕೊಡದೆ ಇದ್ದದ್ದು ನಮಗೆ ದೊರೆಯುವುದಿಲ್ಲ.

ಮಂಗಳವಾರ (ಏ. 1)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ಬಿದಿಗೆ ತಿಥಿ, ಅಶ್ವಿನಿ ನಕ್ಷತ್ರ, ರಾಹುಕಾಲ 15.00 ರಿಂದ 16.30.

ದಿನದ ವಿಶೇಷ : ಏಪ್ರಿಲ್ ಫೂಲ್ಸ್ ಡೇ ಅಥವಾ ಮೂರ್ಖರ ದಿನಾಚರಣೆ, ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನ.

ಸುಭಾಷಿತ : ಜಾತಿ, ಧರ್ಮ ಮನೆಯಲ್ಲಿರಲಿ ; ದೇವರು ಹೃದಯದಲ್ಲಿರಲಿ ; ನಮ್ಮ ಈ ಜೀವ ಭೂಮಿಗೆ ಬೆಳಕಿನಂತಿರಲಿ.

***
ಸೋಮವಾರ (ಮಾ. 31)

ಪಂಚಾಂಗ : ಶ್ರೀಜಯನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ, ಶುಕ್ಲ ಪಕ್ಷ, ಪಾಡ್ಯ ತಿಥಿ, ರೇವತಿ ನಕ್ಷತ್ರ, ಚಾಂದ್ರಮಾನ ಯುಗಾದಿ, ರಾಹುಕಾಲ 07.30 ರಿಂದ 09.00.

ಸುಭಾಷಿತ : ಕ್ರಾಂತಿ ಎಂದರೆ ಹಳಯದರ ನಾಶವಲ್ಲ. ಹಳೆಯದರಲ್ಲಿ ಏನೇನು ಒಳ್ಳೆಯದು ಇದೆಯೋ ಅದನ್ನು ಉಳಿಸಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳುವುದು - ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ.

***
ಪ್ರಪಂಚದ ಮೂಲೆ ಮೂಲೆಗಳಿಗೂ ವಿಸ್ತರಿಸಿಕೊಂಡಿರುವ ಸಮಸ್ತ ಕನ್ನಡ ಕುಟುಂಬಗಳಿಗೆ ಮಾತ್ರವಲ್ಲ, ಅಂತರ್ಜಾಲದ ಮುಖಾಂತರ ಮನೆಮನೆ ತಲುಪುತ್ತಿರುವ ಒನ್ಇಂಡಿಯಾ ಕನ್ನಡಕ್ಕೂ ಯುಗಾದಿ ಅತ್ಯಂತ ಮಹತ್ವದ ದಿನ. ಸರಿಯಾಗಿ 14 ವರ್ಷಗಳ ಹಿಂದೆ, ಬೇವು ಬೆಲ್ಲ ಹಂಚಿಕೊಳ್ಳುವ ದಿನದಂದು ನಿಮ್ಮ ನೆಚ್ಚಿನ ಕನ್ನಡ ಪೋರ್ಟಲ್ ಅಂತರ್ಜಾಲದಲ್ಲಿ ಮೊದಲ ಹೆಜ್ಜೆಯನ್ನಿಟ್ಟಿತ್ತು. ಇಷ್ಟು ವರ್ಷಗಳ ಕಾಲ ನಮ್ಮನ್ನು ಪ್ರೀತಿಯಿಂದ ಪೊರೆದ ಅಭಿಮಾನಿ ಕನ್ನಡ ಓದುಗರಿಗೆ, ಜಾಹೀರಾತುದಾರರಿಗೆ ಧನ್ಯವಾದಗಳು.

ಈ ಹದಿನಾಲ್ಕು ವರ್ಷಗಳಲ್ಲಿ ಅಕ್ಷರಗಳನ್ನು ನೀಟಾಗಿ ಪೋಣಿಸಿ ವೈವಿಧ್ಯಮಯ ಲೇಖನಗಳನ್ನು ನೀಡುವುದರ ಜೊತೆಗೆ ಹತ್ತುಹಲವು ಅಂಕಣಕಾರರನ್ನು, ಲೇಖಕರನ್ನು ಬೆಳೆಸಿದ ಶ್ರೇಯ ನಮ್ಮದು. ಇಡೀ ವಿಶ್ವವೇ ಅಂತರ್ಜಾಲದಲ್ಲಿ ಈಜಾಡುತ್ತಿರುವ ಸಂದರ್ಭದಲ್ಲಿ ಪ್ರಿಪೇಯ್ಡ್ ಮೊಬೈಲ್ ರಿಚಾರ್ಜ್, ಉದ್ಯೋಗ, ರಿಯಲ್ ಎಸ್ಟೇಟ್, ಕೂಪನ್ ಕೊಡುಗೆ, ಬಸ್ ಟಿಕೆಟ್ ಬುಕ್ಕಿಂಗ್ ಸೇವೆಗಳನ್ನು ನೀಡಿ ಇಂಟರ್ನೆಟ್ ಬಳಕೆದಾರರ ಬದುಕನ್ನು ಸರಳವಾಗಿಸುವತ್ತ ಒಂದೊಂದೇ ಹೆಜ್ಜೆ ಮುಂದಿಡುತ್ತ ಸಾಗುತ್ತಿದ್ದೇವೆ.

ಚೈತ್ರದ ಹೊಸ ಚಿಗುರು, ಹೊಸ ಸಂವತ್ಸರ, ಹೊಸ ವರ್ಷ, ಹೊಸ ಕನಸು, ಹೊಸ ಕಲ್ಪನೆ, ಹೊಸ ಬೆಳಕು, ಹೊಸ ಬೆರಗು, ಹೊಸ ಬಟ್ಟೆ, ಹೊಸ ಪಂಚಾಂಗ, ಕೋಗಿಲೆಯ ಹೊಸ ದನಿಗಳಂತೆ ಪ್ರತಿ ಯುಗಾದಿಯಂದು ಹೊಸದನ್ನು ಬಯಸುವ ಆಸೆಬುರುಕ ಮನಸ್ಸು ನಮ್ಮದು. ಈ ಹೊಸದರ ಸಾಕ್ಷಾತ್ಕಾರದತ್ತ ನಮ್ಮ ಮನಸ್ಸು ಯಾವತ್ತೂ ತುಡಿಯುತ್ತಲೇ ಇರುತ್ತದೆ. ಹಾಗೆಯೆ, ಒಳ್ಳೆಯ ಮಾತುಗಳು, ನುಡಿಮುತ್ತುಗಳು, ಜಾಣ್ನುಡಿಗಳು, ಚತುರೋಕ್ತಿಗಳು ಆ ಹೊಸತನದ ಅನ್ವೇಷಣೆಗೆ ಗಾಳಿ, ನೀರು, ಗೊಬ್ಬರ ಸುರಿಯುತ್ತವೆ.

ಬೊಡ್ಡೆಯಂತೆ ಮಲಗಿರುವ ಮನಸ್ಸನ್ನು ಚಿಗುರೊಡೆಸುವ, ಕದಡಿದ ನೀರನ್ನು ತಿಳಿಯಾಗಿಸುವ, ಜಡ್ಡುಗಟ್ಟಿದ ಹೃದಯವನ್ನು ನಿರಾಳವಾಗಿಸುವ, ಕನವರಿಸುತ್ತಲೇ ಇದ್ದರೆ ಕನಸನ್ನು ಅರಳಿಸುವ ಸುಭಾಷಿತಗಳ ಗುಚ್ಛವನ್ನು, ಹದಿನಾಲ್ಕನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಈ ಯುಗಾದಿಯಿಂದ ತೆರೆದ ಮನಸುಗಳ ಮುಂದಿಟ್ಟಿದ್ದೇವೆ. ಇವುಗಳೊಂದಿಗೆ ಜಯನಾಮ ಪಂಚಾಂಗದಿಂದ ಹೆಕ್ಕಿದ ಉಪಯುಕ್ತ ಮಾಹಿತಿಯನ್ನು ನಿಮ್ಮ ಮುಂದೆ ಹರವಿಟ್ಟಿದ್ದೇವೆ. ಓದುಗರು ಕೂಡ ಕಂಡ, ಕೇಳಿದ, ಅನುಭವಕ್ಕೆ ಬಂದ ಸುಭಾಷಿತಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. [2000ರ ಯುಗಾದಿಯಂದು ಪ್ರಕಟವಾದ ಮೊಟ್ಟಮೊದಲ ಲೇಖನ]

English summary
Daily Almanac (panchanga) and Wise quotes. Oneindia-Kannada, on the occasion of 14th birthday (Ugadi) of the portal, has started this new feature. Readers will get basic information from Panchanga, important events of the day and wise quote to keep readers in good spirit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X