ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರಕ್ಕೆ ನೂರು ಮಾರ್ಕ್ಸ್ ತಗೊಳ್ಳೋದು ಅಂದ್ರೆ ಸುಮ್ನೇನಾ?

ಪಟ್ಟ ಶ್ರಮಕ್ಕೆ ತಕ್ಕ ಫಲ ಸಿಗಲೇಬೇಕು. ಬರೀ ಇಷ್ಟೊಂದು ಅಂಕಗಳನ್ನು ಪಡೆದರೆ ಸಾಕೆ? ಬರೀ ಶಾಲೆಯಲ್ಲಿ ಪಾಠ ಕಲಿತು ಜೀವನಪಾಠ ಕಲಿಯದಿದ್ದರೆ ಏನು ಪ್ರಯೋಜನ? ಸಿಕ್ಕಾಪಟ್ಟೆ ಅಂಕ ಪಡೆದವರೆಲ್ಲ ಜೀವನದಲ್ಲಿ ಯಶಸ್ವಿಯಾಗಿರ್ತಾರಾ?

By Prasad
|
Google Oneindia Kannada News

"ಇವರು ಮಾರ್ಕ್ಸ್ ತಗೊಂಡಿದ್ದು ನೋಡಿದ್ರೆ ನನ್ನಂಥವ್ರು ಮೂರು ಜನ ಪಾಸಾಗಬಹುದಿತ್ತು!"

ಹೀಗೆಂದು ಸ್ನೇಹಿತರೊಬ್ಬರು ಟ್ವೀಟ್ ಮಾಡಿದ್ದಾರೆ. ಅಲ್ರೀ 625 ಮಾರ್ಕ್ಸಿಗೆ 625 ಮಾರ್ಕ್ಸ್ ತಗೊಳ್ಳುವುದು ಅಂದ್ರೆ ಸುಮ್ನೇನಾ? ಅದೆಷ್ಟು ಓದಿರ್ತಾರೋ, ಅದೆಷ್ಟು ನಿದ್ದೆಗೆಟ್ಟ ಹಗಲು ರಾತ್ರಿಗಳನ್ನು ಕಳಕೊಂಡಿರ್ತಾರೋ, ಒಂದೇ ಒಂದು ಅಕ್ಷರ ಅತ್ತಿತ್ತಾಗದಂತೆ ಅದ್ಯಾವಪರಿ ನಿಖರವಾಗಿ ಉತ್ತರಗಳನ್ನು ಬರೆದಿರ್ತಾರೋ?

ಪಟ್ಟ ಶ್ರಮಕ್ಕೆ ತಕ್ಕ ಫಲ ಸಿಗಲೇಬೇಕು. ಬರೀ ಇಷ್ಟೊಂದು ಅಂಕಗಳನ್ನು ಪಡೆದರೆ ಸಾಕೆ? ಬರೀ ಶಾಲೆಯಲ್ಲಿ ಪಾಠ ಕಲಿತು ಜೀವನಪಾಠ ಕಲಿಯದಿದ್ದರೆ ಏನು ಪ್ರಯೋಜನ? ಸಿಕ್ಕಾಪಟ್ಟೆ ಅಂಕ ಪಡೆದವರೆಲ್ಲ ಜೀವನದಲ್ಲಿ ಯಶಸ್ವಿಯಾಗಿರ್ತಾರಾ? ಕ್ಯಾಂಪಸ್ ಇಂಟರ್ವ್ಯೂನಲ್ಲಿ ಕೆಲಸ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಫಸ್ಟ್ ರ್ಯಾಂಕ್ ರಾಜುವಂಥ ಮಗನನ್ನು ಪಡೆದರೇನು ಪ್ರಯೋಜನ?

ಇರಲಿ, ಇಂಥದೊಂದು ಅಸಾಧಾರಣ ಸಾಧನೆಯನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ಮಾಡಿದ್ದಾರೆ. ಬೆಂಗಳೂರು ಎಂಇಎಸ್ ಕಿಶೋರ್ ಕೇಂದ್ರದ ಸುಮಂತ್ ಹೆಗಡೆ, ಪುತ್ತೂರಿನ ಪೂರ್ಣಾನಂದ ಮತ್ತು ಬಾಗಲಕೋಟೆಯ ಪಲ್ಲವಿ ಶಿರಹಟ್ಟಿ. ಈ ಮೂವರೇ ಆ ಸಾಧಕರು. ಈ ಮೂವರಿಗೂ ಹೃತ್ಪೂರ್ವಕ ಅಭಿನಂದನೆಗಳು. [ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಅಂಕ ಪಡೆದ ಈ ಮೂವರಿಗೆ ಅಭಿನಂದನೆ]

Karnataka SSLC Results : Who is the real achiever?

ಈ ಮೂವರಿಗಿಂತ ಒಂದೇ ಒಂದು ಅಂಕ ಕಡಿಮೆ ಪಡೆದುಕೊಂಡವರು ಆರು ವಿದ್ಯಾರ್ಥಿಗಳಿದ್ದಾರೆ. ಎರಡನೇ ಸ್ಥಾನದಲ್ಲಿರುವವರಿಗಿಂತ ಇನ್ನೂ ಒಂದು ಅಂಕ ಕಮ್ಮಿ ಪಡೆದವರು ಅಂದರೆ 625ಕ್ಕೆ 623 ಅಂಕ ಪಡೆದವರು ಹದಿಮೂರು ವಿದ್ಯಾರ್ಥಿಗಳಿದ್ದಾರೆ. ಆ ಎರಡು ಅಂಕಗಳನ್ನು ಅದ್ಹೇಗೆ ಕಳೆದುಕೊಂಡರೋ?

ಈ ಅಂಕಗಳ ಸ್ಪರ್ಧೆ ಯಾವ ಮಟ್ಟಕ್ಕೇರಿದೆಯೆಂದರೆ 95ಕ್ಕಿಂತ ಕಡಿಮೆ ಅಂಕ ತೆಗೆದುಕೊಂಡರೇ ಅಷ್ಟೇನಾ ಎನ್ನುವಂತಾಗಿದೆ. ಹಾಗಂತ, ಈ ಫಸ್ಟ್ rank ರಾಜುಗಳಿಗಿಂತ ಕಡಿಮೆ ಮಾರ್ಕ್ಸ್ ತೆಗೆದುಕೊಂಡವರು ಕಡಿಮೆಯೇನಲ್ಲ. ಕೇವಲ 35 ಅಂಕ ಗಳಿಸಿದ್ದರೂ ಜೀವನಪಾಠ ಕಲಿತ ಜಸ್ಟ್ ಪಾಸ್ ಆದವರನ್ನು ಜೀವನ ಎಲ್ಲೋ ಕರೆದುಕೊಂಡು ಹೋಗಿ ನಿಲ್ಲಿಸಿರುತ್ತದೆ.

625ಕ್ಕೆ 625 ಅಂಕ ಪಡೆದು ಕರ್ನಾಟಕಕ್ಕೇ ಫಸ್ಟ್ ಬಂದಿರುವ ಬಾಗಲಕೋಟೆಯ ಪಲ್ಲವಿ ಶಿರಹಟ್ಟಿ ಕನ್ನಡ ಮಾಧ್ಯಮದಲ್ಲಿ ಓದಿದ್ದಾಳೆ, ಮುಂದೆ ಸೈನ್ಸ್ ತೆಗೆದುಕೊಂಡು ಡಾಕ್ಟರಾಗಬೇಕೆಂಬ ಕನಸು ಕಂಡಿದ್ದಾಳೆ, ತನ್ನ ಸಾಧನೆಗೆ ಪೋಷಕರು, ಸ್ನೇಹಿತರು ಮತ್ತು ಶಿಕ್ಷಕರೇ ಕಾರಣ ಎಂದು ಹೇಳಿದ್ದಾಳೆ. ಆಕೆಯ ಕನಸು ನನಸಾಗಲಿ. [ತಾಯಿಯೇ ನನಗೆ ಸ್ಫೂರ್ತಿ: ಪಿಯುಸಿ ಟಾಪರ್ ಸೃಜನಾ]

Karnataka SSLC Results : Who is the real achiever?

ಆ ಗಲ್ಲಕ್ಕೆ ಅಪ್ಪ, ಈ ಗಲ್ಲಕ್ಕೆ ಅಮ್ಮನಿಂದ ಮುತ್ತು ಕೊಡಿಸಿಕೊಂಡವರೆಷ್ಟೋ, ಸ್ನೇಹಿತರಿಂದ ಬರ್ಫಿ ಬಾಯಿಗೆ ಹಾಕಿಸಿಕೊಂಡವರೆಷ್ಟೋ, ಸ್ನೇಹಿತನಿಗಿಂತ ಒಂದು ಮಾರ್ಕ್ಸ್ ಕಡಿಮೆ ತೆಗೆದುಕೊಂಡೆನೆಂದು ಅವಮಾನಗಳನ್ನು ಅನುಭವಿಸಿದವರೆಷ್ಟೋ, ಸದ್ಯ ಫಸ್ಟ್ ಕ್ಲಾಸ್ ಪಾಸಾಯ್ತಲ್ಲ, ಮಾನ ಉಳಿಯಿತು ಅಂದುಕೊಂಡವರೆಷ್ಟೋ...

ಇಡೀ ವರ್ಷ ಓದಿ, ಅಂದಿನ ದಿನದ ಪಾಠವನ್ನು ಅಂದೇ ಮನನ ಮಾಡಿ, ಜೊತೆಗೆ ಸಮಯ ಸಿಕ್ಕಾಗ ಮಜಾವನ್ನೂ ಮಾಡುತ್ತ ಭರ್ಜರಿ ಫಸಲು ತೆಗೆದಿರುವ ವಿದ್ಯಾರ್ಥಿಗಳ ಸಂತೋಷ ಒಂದೆಡೆಯಾದರೆ, ಮಕ್ಕಳ ಸಂತಸದಲ್ಲಿ ಮುಳುಗೇಳುವ ಪೋಷಕರ ಖುಷಿಗೆ ಮಿತಿಯೇ ಇಲ್ಲ. ಸ್ನೇಹಿತರಿಗೆ, ಬಂಧುಗಳಿಗೆ ಫೋನ್ ಮಾಡಿ ಹೇಳುವಲ್ಲಿ ಮೊಬೈಲ್ ನಿರತವಾಗಿರುತ್ತದೆ. ಇಂಥ ವಿದ್ಯಾರ್ಥಿ ಗಣವನ್ನು ಸೃಷ್ಟಿಸಿರುವ ಶಿಕ್ಷಕವರ್ಗವೂ ಬೀಗುತ್ತಿರುತ್ತದೆ.

Karnataka SSLC Results : Who is the real achiever?

ಇದೇ ಸಂದರ್ಭದಲ್ಲಿ ಹೋಟೆಲ್ ಅಡುಗೆ ಭಟ್ಟರ ಮಗಳೊಬ್ಬಳು ಸೈಲೆಂಟಾಗಿ ಶೇ.93ಕ್ಕೂ ಹೆಚ್ಚು ಅಂಕ ಗಳಿಸಿ ಅಪ್ಪನೊಂದಿಗೆ ಸಂಜೆ ಪ್ಲೇಟ್ ತೊಳೆಯುವ ಕಾಯಕದಲ್ಲಿ ತೊಡಗಿರುತ್ತಾಳೆ, ಮತ್ತಾವುದೋ ಹಳ್ಳಿಯಲ್ಲಿ ಮನೆಗೆಲಸ ಮಾಡುವವಳ ಮಗ ಕನ್ನಡ ಮಾಧ್ಯಮದಲ್ಲಿ ಓದಿ, ಆಂಗ್ಲ ಮಾಧ್ಯಮದವರೂ ನಾಚಿಕೆಪಟ್ಟುಕೊಳ್ಳುವಂತೆ ಅಂಕ ತೆಗೆದಿರುತ್ತಾನೆ. ಅವರಿಗೆ ಶಭಾಶ್ ಹೇಳುವವರು, ಲೈಮ್ ಲೈಟಿಗೆ ತರುವವರು ಯಾರೂ ಇರುವುದಿಲ್ಲ. [ಮಂಗಳೂರಿನ ಎಂಡೋಸಲ್ಫಾನ್ ಪೀಡಿತನ ಅಪೂರ್ವ ಸಾಧನೆ]

ಇವರದೊಂದು ಬಗೆಯಾದರೆ, ವಿಚಿತ್ರ ಹೇರ್ ಸ್ಟೈಲ್ ಮಾಡಿಕೊಂಡು, ಕೈಗೊಂದು ಕೊಟ್ಟ ಡಿಯೋಮೇಲೇರಿ ಕಾಲೇಜಿಗೆ ಸರಿಯಾಗಿ ಹೋಗದೆ, ಗರ್ಲ್ ಫ್ರೆಂಡ್ ಅಂಡಲೆಯುವ ಮಗ ಕನಿಷ್ಠ ಪಾಸೂ ಆಗಲಿಲ್ಲವೆಂದು ಕಣ್ಣೀರು ಸುರಿಸುವ ಪೋಷಕರೆಷ್ಟಿದ್ದಾರೋ? ಅವರಿಗೆ ಇಡೀ ವರ್ಷ ಮಗ ಅಥವಾ ಮಗಳು ಕಾಲೇಜಿಗೆ ಹೋಗಿ ಏನು ಮಾಡುತ್ತಿದ್ದಾನೆಂಬ ಅರಿವೂ ಇರುವುದಿಲ್ಲ. ಫಲಿತಾಂಶ ಬಂದಮೇಲೆ ಪಶ್ಚಾತ್ತಾಪ ಪಟ್ಟರೇನು ಫಲ?

Karnataka SSLC Results : Who is the real achiever?

ಕಾಲೇಜುಗಳಿಗೆ ಇನ್ನು ಸುಗ್ಗಿಯೋ ಸುಗ್ಗಿ. 95ಕ್ಕಿಂತ ಕಡಿಮೆ ಅಂಕ ಪಡೆದವರಿಗೆ ಸೀಟ್ ಕೊಡುವುದಿಲ್ಲ, ಕೊಟ್ಟರೂ ಇಷ್ಟು ಲಕ್ಷ ಇಕ್ಕಬೇಕು ಎನ್ನುವ ಕಾಲೇಜುಗಳಿಗೆ ಇಲ್ಲಿ ಕಮ್ಮಿಯಿಲ್ಲ. ಬುದ್ಧಿವಂತರನ್ನಷ್ಟೇ ತೆಗೆದುಕೊಂಡು ಅವರನ್ನು ಮತ್ತಷ್ಟು ಬುದ್ಧಿವಂತರನ್ನಾಗಿ ಮಾಡುವಲ್ಲಿ ಇವರ ಸಾಧನೆಯೇನು ಬಂತು ಮಣ್ಣು? ಇಂಥ ಕಾಲೇಜುಗಳಿಗೆ ಧಿಕ್ಕಾರವಿರಲಿ.

ಭರ್ಜರಿ ಅಂಕ ಪಡೆದವರಿಗೆಲ್ಲ ಸುಮ್ಮನೆ ಅಂಕ ಬಂದಿರುವುದಿಲ್ಲ. ಹಗಲಿರುಳೂ ಕಷ್ಟಪಟ್ಟ, ಕಣ್ಣಿಗೆ ಎಣ್ಣೆ ಹಾಕಿಕೊಂಡು ಓದಿರುತ್ತಾರೆ. ಪಟ್ಟ ಶ್ರಮಕ್ಕೆ ತಕ್ಕ ಫಲ ಪಡೆದಿರುತ್ತಾರೆ. ಇಂಥವರಲ್ಲಿ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಸ್ವಂತ ಪರಿಶ್ರಮದ ಮೇಲೆ ಗಮನಾರ್ಹವಾದ ಸಾಧನೆ ಮಾಡಿರುತ್ತಾರೆ. ಅಂಥವರ ಬಗ್ಗೆ ನಮಗೆ ತಿಳಿಸಿರಿ. ಅವರ ಬಗ್ಗೆ ನಮ್ಮ ವೆಬ್ ಸೈಟಿನಲ್ಲಿ ಬರೆಯಲು ಅವಕಾಶ ಮಾಡಿಕೊಡಿ.

English summary
Karnataka SSLC Results : Who is the real achiever? SSLC can be turning point for many students. It is not just the marks that will decide the fate of a students, ultimately the lesson of life which the student has learnt will make him a successful person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X