ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮ ಒಬ್ಬ ಸೀಕ್ರೆಟ್ ಮುಸ್ಲಿಂ

By Staff
|
Google Oneindia Kannada News

libby limba
ವಾಷಿಂಗ್‌ಟನ್ ಡಿ.ಸಿ, ಡಿ. 03: ಅಮೆರಿಕದ ಮುಂದಿನ ಅಧ್ಯಕ್ಷನಾಗಿ ಬರಾಕ್ ಒಬಾಮ ಚುನಾಯಿತನಾಗಿ ಈಗಾಗಲೇ ಕೆಲವು ವಾರಗಳು ಸಂದಿದ್ದರೂ, ಆತ ಗುಟ್ಟಿನಲ್ಲಿ ಮುಸ್ಲಿಂ ಇರಬಹುದೆಂಬ ಶಂಕೆ ಕೆಲವು ಅಮೆರಿಕನ್ನರನ್ನು ಇನ್ನೂ ಕಾಡುತ್ತಿದೆ.

ನಮ್ಮ ಪತ್ರಿಕೆಯ ಅಮೆರಿಕನ್ ಬ್ಯೂರೋ ವರದಿಗಾರರು ಅಮೆರಿಕದಾದ್ಯಂತ ಅಲ್ಲಲ್ಲಿ ವ್ಯಾಪಕವಾಗಿ ತಿರುಗಾಡಿದಾಗ ಹಲವರು ಅಮೆರಿಕನ್ನು ಇಂತಹ ಸಂಶಯ ಹೊಂದಿರುವುದು ತಿಳಿದು ಬಂತು. ದಕ್ಷಿಣದ ರಾಜ್ಯವಾದ ಅಲಬಾಮದ ಯೂಫಾಲ ಪಟ್ಟಣದ ಡೆನಿಸ್ ಮಿಲ್ಲರ್ ಪ್ರಕಾರ, ಒಬಾಮ ಪ್ರಮಾಣ ವಚನ ಸ್ವೀಕರಿಸುವವರೆಗೆ ಆತನ ಬಗೆಗೆ ಸಂಶಯ ಇದ್ದೇ ಇರುತ್ತದೆ.

"ಒಬಾಮ ಯಾವ ದಿಕ್ಕಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾನೆ, ನಿಲ್ಲುತ್ತಾನೋ ಅಥವಾ ಮಂಡಿಯೂರುತ್ತಾನೋ ಅದನ್ನು ನೋಡುವವರೆಗೆ ನನ್ನ ಸಂಶಯ ಕಡಿಮೆ ಆಗೋದಿಲ್ಲ" ಎಂದು ಮಿಲ್ಲರ್ ನುಡಿದರೆ, ಆತನ ಸ್ನೇಹಿತ ಹ್ಯಾನಿಟಿ ಕೌಲ್ಟರ್ "ಪ್ರಮಾಣ ವಚನದಿಂದ ಏನೂ ಪ್ರೂವ್ ಆಗೋದಿಲ್ಲ. ಒಬಾಮ ಒಬ್ಬ ಈಜಿಪ್ಟಿನಿಂದ ಬಂದಿರುವ ಅರಬ್ ಮುಸ್ಲಿನ್. ಇನ್ನು ನಾಲ್ಕು ವರ್ಷದಲ್ಲಿ ವೈಟ್‌ಹೌಸ್ ಕಪ್ಪು ಬಣ್ಣದ ಪಿರಮಿಡ್ ಆಗುವುದು ಗ್ಯಾರಂಟಿ" ಎನ್ನುತ್ತಾನೆ.

ಕೆಂಟಕಿ ರಾಜ್ಯದ ಲಿಬ್ಬಿ ಲಿಂಬಾ ಪ್ರಕಾರ, ಒಬಾಮನನ್ನು ಗಮನಿಸಿ ಏನೂ ಪ್ರಯೋಜನ ಇಲ್ಲ. "ಗಂಡಸರನ್ನು ನೋಡಿ ಯಾರು ಮುಸ್ಲಿಮರು, ಯಾರು ಕ್ರಿಶ್ಚಿಯನ್ನರು ಎಂದು ಹೇಳುವುದು ತುಂಬಾ ಕಷ್ಟ. ಅದರಲ್ಲೂ ಎಲ್ಲಾ ಕಪ್ಪು ಜನರೂ ಒಂದೇ ತರಹ ಇರ್ತಾರೆ. ಅದರ ಬದಲು ಮಿಷೆಲ್ ಒಬಾಮಳನ್ನು ಗಮನಿಸಬೇಕು. ಆಕೆ ಏನಾದರೂ ಬುರ್ಖಾ ಧರಿಸಿದರೆ ನಮ್ಮ ಸಂಶಯ 100% ಖಚಿತ ಆಗುತ್ತದೆ.

ಆದರೆ ಒಂದೇ ಪ್ರಾಬ್ಲಂ. ಮಿಷೆಲ್ ಇನ್‌ವಿಸಿಬಲ್ ಬುರ್ಖಾ ಧರಿಸಿ ಓಡಾಡ್ತಾ ಇದ್ದರೆ, ನಮಗೆ ಗೊತ್ತಾಗೋದಾದರೂ ಹೇಗೆ?" ಎನ್ನುವ ಲಿಂಬಾ, ಎಕ್ಸ್-ರೇ ಕನ್ನಡಕ ಹಾಕಿಕೊಂಡರೆ ಇನ್ವಿಸಿಬಲ್ ಬುರ್ಖಾ ಕಾಣಿಸಬಹುದೆಂಬ ಆಶಾವಾದವನ್ನು ವ್ಯಕ್ತಪಡಿಸುತ್ತಾಳೆ.

(ವಾಷಿಂಗ್‌ಟನ್ ಬ್ಯೂರೋ ವರದಿ, ಇನ್ ಕೊಲಾಬೊರೇಷನ್ ವಿತ್ majavani.net)

ಇದನ್ನೂ ಓದಿ: ಇಸ್ರೋ ಜೊತೆ ಶಬಾನ ಅಜ್ಮಿ ಒಪ್ಪಂದ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X