ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಘಾತಕಾರಿ ಸುದ್ದಿ; ಕ್ರಿಕೆಟ್‌ ನಲ್ಲಿ ಬರಿ ಮೋಸದಾಟ?

By Mahesh
|
Google Oneindia Kannada News

ಲಾಜಿಕ್ ಇಲ್ಲದ ಆಟಗಳ ಪೈಕಿ ಕ್ರಿಕೆಟ್ ಕೂಡಾ ಒಂದೆನಿಸಿದೆ.ನೂರು ವರ್ಷಗಳಿಂದ ಕ್ರಿಕೆಟ್ ಆಡಿಕೊಂಡು ಬರುತ್ತಿದ್ದರೂ ಗಲ್ಲಿಯಿಂದ ಲಾರ್ಡ್ಸ್ ತನಕ ಬಹುತೇಕ ಒಂದೇ ರೂಲ್ಸ್. ಅದರೆ, ಕ್ರಿಕೆಟ್ ನಿಯಮ ಬದಲಾವಣೆ ಮಾಡಲಾಗಿಲ್ಲ ಎಂಬ ಕೊರಗಿನಲ್ಲಿ ಯಾರೋ ಮಹಾನುಭವ ಕ್ರಿಕೆಟ್ ಬಗ್ಗೆ ತಾನು ಕಂಡು ಕೊಂಡಿದ್ದನ್ನು ಗೀಚಿ ಸಂದೇಶ ಕಳಿಸಿದ್ದಾನೆ. ಅದು ಈಗ ವಾಟ್ಸಪ್, ಫೇಸ್ ಬುಕ್ ಸೇರಿ ಎಲ್ಲೆಡೆ ಹರಿದಾಡುತ್ತಿದೆ. ಮೂಲ ಕರ್ತೃ ಯಾರೋ ಗೊತ್ತಿಲ್ಲ. ನಮಗೆ ಸಿಕ್ಕಿದ್ದು ವಾಟ್ಸಪ್ ಮೂಲಕ.

ಕಾಲ ಕಾಲದಿಂದ, ಕ್ರಿಕೆಟ್ ನಡೆಯುತ್ತ ಬಂದಿದ್ದರೂ, ಅದರಲ್ಲಿ ಮೊದಲಿಂದಲೇ ಎಂತಹ ಮೋಸ ನಡೀತಿದೆ ಎಂಬ ಅಘಾತಕಾರಿ ಸುದ್ದಿಯನ್ನು ನಾವು ನಿಮಗೆ ಇಲ್ಲಿ ಪಾಯಿಂಟ್ ಟು ಪಾಯಿಂಟ್ ಹೇಳಿ ಕೊಡಲಿದ್ದೇವೆ ತಪ್ಪದೆ ಓದಿ ಮತ್ತೆ ಶೇರ್ ಮಾಡಿ. [ವಿಶ್ವಕಪ್ 2015: ಕದನಕ್ಕಿಳಿಯುವ 14 ತಂಡಗಳ ವಿವರ ]

1. ಕೈಯಲ್ಲಿ ಬಾಲ್ ಇದ್ದರು ಅದನ್ನ ನೋ ಬಾಲ್ (No Ball)ಅಂತಾರೆ.

2. ಒಂದು ಒವರ್ ಗೆ 6 ಬಾಲ್ ಅಂತಾರೆ, ಆದರೆ ಒಂದೇ ಬಾಲನ್ನೆ ಮತ್ತೆ ಮತ್ತೆ ಬಳಸುತ್ತಾರೆ.

3. All Out ಅಂತಾರೆ ಆದರೆ ಹತ್ತೇ ಜನ ಮಾತ್ರ ಔಟಾಗಿರುತ್ತಾರೆ,ಇನ್ನೊಬ್ಬನು ಉಳಿದು ಕೊಂಡಿರುತ್ತಾನೆ.

4. ಅಂಪೈರ್ ಒಂದು ಕೈಯನ್ನ ಎತ್ತಿದರೆ ಔಟ್, ಆದರೆ ಎರಡು ಕೈಯನ್ನ ಎತ್ತಿದರೆ ಸಿಕ್ಸ್ ಅಂತಾರೆ (ಇಬ್ಬರು ಔಟ್ ಅಂತ ಯಾರು ಹೇಳೋದು ಇಲ್ಲ ಕೇಳೋದು ಇಲ್ಲ) ಇದರಲ್ಲಿ ಲಾಜಿಕ್ ಎಲ್ಲೋ ಎಡವುತ್ತಾ ಇದೆ.

This article will change your thoughts on Cricket

5. ಗೋಲ್ ಕೀಪರ್ ಅಂದ್ರೆ ಗೋಲ್ ಬೀಳದೆ ತಡೆಯುತ್ತಾರೆ, ಅದೇ ರೀತಿ ವಿಕೆಟ್ ಕೀಪರ್ ಅಂದರೆ ವಿಕೆಟ್ ಬೀಳದೆ ತಡೆಯ ಬೇಕಲ್ಲ, ಆದರೆ ಅವರೇ ವಿಕೆಟ್ ಬೀಳಿಸುತ್ತಾರೆ. ಇದು ಯಾವ ರೀತಿಯ ನ್ಯಾಯ.

6. ಕೆಲವು ಒವರ್ ಮಾತ್ರ ಪವರ್ ಪ್ಲೇ ಅಂತಾರೆ, ಹಾಗಾದರೆ ಮಿಕ್ಕ ಓವರ್ ಎಲ್ಲ ಪವರ್ ಇಲ್ಲದೆ ಕತ್ತಲಲ್ಲಿ ಆಡಿಸುತ್ತಾರಾ...?

7. ಒಬ್ಬರನ್ನ ಮಾತ್ರ Night Watchman ಅಂತ ಕರಿತೀವಿ ಆದರೆ ಅವರು ಆಟ ಮುಗಿದ ಮೇಲೆ ಮೈದಾನ ಕಾಯೋದು ಬಿಟ್ಟು ರೂಂಗೆ ಹೋಗ್ತಾರೆ.

8. Tea Break ಅಂತ ಹೇಳ್ತಾರೆ ಆದರೆ ಕೂಲ್ ಡ್ರಿಂಕ್ಸ್ ಕುಡಿತಾರೆ.

9. ಇಡಿ ಮೈದಾನದಲ್ಲಿ ಎಲ್ಲ ಕಡೆ ಲೈಟ್ ಉರಿದರು, ಒಂದು ಕಡೆಯನ್ನು ಮಾತ್ರ off Side ಅಂತಾರೆ.

10. ಆಟ ಮುಗಿದ ಮೇಲೆ ಒಬ್ಬರನ್ನ ಮಾತ್ರ ಮ್ಯಾನ್ ಆಫ್ ದಿ ಮ್ಯಾಚ್ ಅಂತಾರೆ, ಹಾಗಾದರೆ ಉಳಿದವರೆಲ್ಲ women ಅಂತಾನಾ?

ಈಗ ನಿಮಗೆ ಗೊತ್ತಗಿರಬೇಕು ಇದು ಎಂತಹ ಮೋಸದಾಟ ಎಂದು ಮರೆಯದೆ ನಿಮ್ಮ ಮಿತ್ರರಿಗೆ ತಿಳಿಸಿ

English summary
This humor article will change your thoughts on Cricket, The facts about cricket is questions by a commoner looks funny but which in turn un answerable
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X