ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಷ್ಟಕ್ಕೂ.. ಮೈಸೂರ್ ಪಾಕ್ ಹೆಸರು ಬದಲಾಯಿಸಿಕೊಂಡಿದ್ದು ಯಾಕೆ?

|
Google Oneindia Kannada News

ಮೈಸೂರು ಪಾಕ್ ನಲ್ಲಿ ಮೈಸೂರು ಇರುತ್ತದೆಯಾ? ಬಾದಾಮ್ ಪೂರಿಯಲ್ಲಿ ಬಾದಾಮಿ ಇರುತ್ತದೆಯಾ? ಇದೆಂಥಾ ಎಡವಟ್ಟು ಪ್ರಶ್ನೆ .. ಈ ಕಿತ್ತೋಗಿರೋ ಜೋಕನ್ನು ಸಿಕ್ಕಾಪಟೆ ಬಾರಿ ಕೇಳಿದ್ದೇವೆ ಎಂದು ಮೂಗು ಮುರಿದು ಸುಮ್ಮನಾಗಬೇಡಿ. ಮೈಸೂರು ಪಾಕ್ ನ ಹೊಸ ಕತೆಯನ್ನು ನಿಮಗೆ ಹೇಳುತ್ತೇನೆ. ಅದರ ಅಂತರಾಳದ ನೋವಿನ ಪಾಡನ್ನು ನಿಮ್ಮ ಮುಂದೆ ಬಿಚ್ಚಿಡುತ್ತೇನೆ...

ಒಂದು ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಕಡಲೆಹಿಟ್ಟನ್ನು ಹಸಿ ವಾಸನೆ ಹೋಗುವ ವರೆಗೆ ಹುರಿದುಕೊಳ್ಳಿ. ಹುರಿದ ಹಿಟ್ಟನ್ನು ಒಂದು ತಟ್ಟೆಯಲ್ಲಿ ತೆಗೆದಿಡಿ. ನಂತರ ಇದೇ ಪಾತ್ರೆಗೆ ಸಕ್ಕರೆ ಹಾಗು ನೀರು ಹಾಕಿ ಒಂದು ಎಳೆ ಪಾಕ ಬರುವವರೆಗೆ ಕಾಯಿಸಿ. ಇದಕ್ಕೆ ಸ್ವಲ್ಪ ಸ್ವಲ್ಪ ಹುರಿದ ಹಿಟ್ಟನ್ನು ಸೇರಿಸಿ. ಎಲ್ಲ ಹಿಟ್ಟು ಪಾಕದಲ್ಲಿ ಚೆನ್ನಾಗಿ ಹೊಂದಿಕೊಂಡ ನಂತರ, ಸ್ವಲ್ಪ ಸ್ವಲ್ಪ ಬಿಸಿ ತುಪ್ಪ ಸೇರಿಸುತ್ತಾ ಹಾಗೆಯೇ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲ ತುಪ್ಪ ಮುಗಿಯುವವರೆಗೆ ತಳ ಬಿಡುತ್ತದೆ, ಈಗ ಏಲಕ್ಕಿ ಪುಡಿ ಹಾಕಿ, ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಮೈಸೂರ್ ಪಾಕ್ ರೆಡಿ....[ಟ್ರೋಲ್ ಮಾಡೋರಿಗೆ ಆಹಾರವಾಯ್ತು ಫ್ರೀಡಂ 251!]

Soliloquy of Mysore Pak, sorry Mysuru Bharat, the taste of India

ಅರೇ ಇದೇನು ಮೈಸೂರು ಪಾಕ್ ನ ನೋವಿನ ಕತೆ ಎಂದವರು ಮೈಸೂರ್ ಪಾಕ್ ಮಾಡುವ ವಿಧಾನ ಹೇಳ್ತಾ ಇದ್ದಾರಲ್ಲ ಅಂದುಕೊಂಡ್ರಾ.. ಇರಲಿ ಸುಮ್ಮನೆ ನಿಮ್ಮ ಗಮನಕ್ಕೆ.. ಗೊತ್ತಿದ್ದವರು ಇನ್ನೊಮ್ಮೆ ತಿಳಿದುಕೊಳ್ಳಿ.. ಗೊತ್ತಿಲ್ಲದವರು ಓದಿ ತಿಳಿದುಕೊಳ್ಳಿ...

ಮೈಸೂರು ಪಾಕ್ ನ ಸ್ವಗತ...

"ನನ್ನ ಹೆಸರು ಮೈಸೂರ್ ಪಾಕ್... ಬಹಳ ವರ್ಷದಿಂದ ಭಾರತೀಯರು ಅದರಲ್ಲೂ ದಕ್ಷಿಣ ಭಾರತದವರು ನನ್ನ ರುಚಿಗೆ ಮನಸೋತ್ತಿದ್ದಾರೆ. ಮಂಗಳ ಕಾರ್ಯದಲ್ಲಿ, ವಿಶೇಷ ಸಂದರ್ಭಗಳಲ್ಲಿ ನನ್ನನ್ನು ನೀಡುತ್ತಾ ಸೌಹಾರ್ದ ಸಂಬಂಧವನ್ನು ಮತ್ತಷ್ಟು ಉತ್ತಮ ಮಾಡಿಕೊಳ್ಳುತ್ತಿದ್ದಾರೆ.

ದೇಶದಲ್ಲಿ ಇತ್ತಿಚೆಗೆ ನಡೆಯುತ್ತಿರವ ಘಟನಾವಳಿಗಳು ನನ್ನ ಮನಸ್ಸಿಗೆ ಖೇದ ಉಂಟುಮಾಡಿವೆ. ನನ್ನ ಹೆಸರಿನ ಬಗೆಗೂ ಹಲವಾರು ಕಡೆ ಅಪವಾದ ಕೇಳಿಬಂದಿದೆ ಎಂದು ನನ್ನ ಸ್ನೇಹಿತರಾದ ಜಹಾಂಗೀರ್, ಚಿಕ್ಕಿ ಹೇಳುತ್ತಿದ್ದರು. ಅವರ ಮಾತನ್ನು ಆಲಿಸಿದ ನಾನು ಸಕಲ ಮಾಹಿತಿಯನ್ನು ಕಲೆಹಾಕಿದ್ದೇನೆ.

ನನಗೆ ಈ ಹೆಸರು ಯಾರಿಟ್ಟರೋ ಗೊತ್ತಿಲ್ಲ. ಮೈಸೂರು ಅಂದರೆ ಕರ್ನಾಟಕ ಅದರ ಜತೆಗೆ ಪಾಕ ಇದ್ದದ್ದು ಅರ್ಧ ಅಕ್ಷರವಾಗಿ ಪಾಕ್ ಆಯಿತು ಎಂದುಕೊಂಡಿದ್ದೇನೆ. ಆದರೆ ನನ್ನ ಹೆಸರಿನ ತುದಿಯ ಎರಡು ಅಕ್ಷರಗಳು ಇಂದು ವಿವಾದ ಎಬ್ಬಿಸಲು ಸಾಕು ಎಂಬಂತಾಗಿದೆ.[ಬಿಜೆಪಿಗೆ ರಂಗಿತರಂಗ, ಕಾಂಗ್ರೆಸ್ ಗೃಹಭಂಗ, ಜೆಡಿಎಸ್ ರಸಭಂಗ...!]

ನಾನೆಂದು ದೇಶದ್ರೋಹದ ಘೋಷಣೆ ಕೂಗಿಲ್ಲ. ಜನರ ಬಾಯಿಯನ್ನು ಸಿಹಿ ಮಾಡಿದ್ದೇನೆ ಹೊರತು ಕಹಿ ಬೀಜ ಬಿತ್ತಿಲ್ಲ. ಆದರೂ ಅಂತಿಮವಾಗಿ ನನ್ನ ಹೆಸರು ಬದಲಾವಣೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದೇನೆ. ಮೈಸೂರ್ ಪಾಕ್ ಬದಲಾಗಿ ಮೈಸೂರು ಭಾರತ ಎಂದು ನನ್ನನ್ನು ಕರೆದರೆ ಒಳಿತು. ಈ ಹಲ್ವಾ, ಸ್ವೀಟ್ ಎಂಬುದು ನನಗೆ ಅಷ್ಟೇಕೋ ಇಷ್ಟ ಆಗ್ತಾ ಇಲ್ಲ. ನಿಮಗೂ ಪಾಕ್ ಬಿಟ್ಟು ಅತ್ಯುತ್ತಮ ಹೆಸರು ತಿಳಿದರೆ ಧಾರಾಳವಾಗಿ ಸೂಚಿಸಬಹುದು....

ಇತಿ ನಿಮ್ಮ ವಿಶ್ವಾಸಿ
ಮೈಸೂರು ಭಾರತ...

English summary
Even if the world goes batshit crazy over nationalism, humour can’t be exiled. With the tags “patriot” and “anti-national” being bandied about left, right and centre, the photograph below needs little explanation. Here is Soliloquy of Mysore Pak, sorry Mysuru Bharat, the taste of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X