ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಲ್ಸಂದ್ರ ಶೀನನ ಅದೃಷ್ಟದ ಬಾಗಿಲು ತೆರೆಯುವಷ್ಟರಲ್ಲಿ!

By ಚಾರುಕೇಶ, ವರ್ಜಿನಿಯ, ಅಮೆರಿಕ
|
Google Oneindia Kannada News

"ಮಗಾ, ಏಳೋ"
"ಲೇಟಾಯ್ತದೆ, ಏಳೋ"
"ಅಮ್ಮಾ, ಬೆಳ್-ಬೆಳಗ್ಗೆ ಎನಮ್ಮಾ ಇದು?"
"ಬೆಳಗ್ಗೆ ಎಲ್ ಬಂತು, ಅವಾಗ್ಲೇ ಮದ್ಯಾನ್ನ" ಅಮ್ಮ ಅಂದಳು.
"ಥೂ, ಶೆಕೆ, ಫ್ಯಾನ್ ಹಾಕಮ್ಮ"
"ಕರಂಟ್ ಇಲ್ಲ" ಬಯ್ಕೊಂಡು ಎದ್ದ ಪಾಲ್ಸಂದ್ರ ಶೀನಾ.

"ಊಟಕ್ಕೆ ಹಾಕ್ತೀನಿ, ರೆಡಿಯಾಗ್ಲಾ, ವ್ಯಾನ್ ಬತ್ತದೆ" ಅಮ್ಮ ಅಂದಳು. ಸ್ನಾನಕ್ಕೆ ಹೋದ, ನೀರಿಲ್ಲ. ಶೀನ ಬಾಯ್ಬಿಡಕ್ಕೆ ಮುಂಚೆನೇ "ನೀರ್ ಬಂದು ವಾರಾತು" ಅಂದ್ಲು. ಹಂಗೆ ಮುಖಸಾರಿಸಿಕೊಂಡ್ಬಂದ.

"ದಾರಿಯಾಗೆ ಬೆಮರುಕಿತ್ಕೊಂಡು, ಆಪೀಸ್ ಹೋಗೊವಸ್ಟ್ರಲ್ಲಿ ಸ್ನಾನಾಯ್ತದೆ, ಅಲ್ಲೇ ಜಿಮ್ಮೊ ಪಿಮ್ಮೊ ಮಾಡ್ಕಂಡು, ಸ್ನಾನ ಮಾಡ್ಲಾ" ಅಂದ್ಲು. ಬೆವರುತ್ತಾ ಕಾಲ್ ಸೆಂಟರ್ಗೆ ಬಂದ ಶೀನಾ.

Sheena thought he hit the jackpot

ಶೀನನ ಕೆಲಸ ಅಮೆರಿಕದ ವಾಟರ್ ಕಂಪನಿಗೆ ಕಸ್ಟಮರ್ ಸರ್ವಿಸ್. ಪೋನ್ ರಿಂಗಾಯಿತು. ಉಭಯಕುಶಲೋಪರಿ ಆದಮೇಲೆ, ಆ ಕಡೆಯ ಜಾನ್ ಹೇಳಿದ. "ನಮ್ಮ ರೋಡ್ನಲ್ಲಿ ಪೈಪ್ ಒಡೆದು ನೀರು ಪೊಲಾಗುತ್ತಿದೆ."
"ಅಯ್ಯೋ, ನೀರು ವೇಸ್ಟಾ, ಯಾವ ಏರಿಯಾ, ಜಿಪ್ ಕೋಡ್ ಎನು?"
"54903"
"ಈಗ್ಲೇ ಟಿಕೆಟ್ ಬರಿತೀನಿ"

ಮೊದ್ಲೇ ನೀರು ಪ್ರಾಬ್ಲಂ ಇರೋ ಪಾಲ್ಸಂದ್ರದ ಶೀನಂಗೆ ನೀರು ವೇಸ್ಟಾಗ್ತಿರೋದು ಕೇಳಿ ಹೊಟ್ಟೆಯುರಿಯಿತು. ತಡೆಯಲಾರದೆ ಕೇಳೇಬಿಟ್ಟಾ "ನಿಮ್ಮ ಊರಲ್ಲಿ ಯಾವತ್ತೂ ನೀರು ನಿಲ್ಲೋದಿಲ್ವಾ"
"ಇಲ್ಲ, ಯಾಕೆ?"
"ಯಾವಾಗ್ಲೂ ಎಲೆಕ್ಟ್ರಿಕ್ ಪವರ್ ಇರತ್ತಾ?"
"ಹೌದು, ಯಾಕೆ?"
"ನಾನ್ ಪ್ರಶ್ನೆ ಕೇಳಬೇಕು, ನೀನೇ ಕೇಳ್ತಾ ಇದಿಯಲ್ಲಾ?" ಜಾನ್ ಅಂದ.

ಟೀಂ ಲೀಡರ್ ಗುರಾಯಿಸಿ, ಕಣ್ಣಲ್ಲೇ ಗದರಿಸಿದ. ಶೀನ ಮಾತುಮುಗಿಸಿ ಫೋನ್ ಇಟ್ಟ. ಟೀಂ ಲೀಡರ್ ಓಡಿ ಬಂದ. "ಕಸ್ಟಮರ್ಸ್ನಗೆ ಪರ್ಸೊನಲ್ ಪ್ರಶ್ನೆ ಕೇಳಬೇಡ ಅಂತ ಎಷ್ಟು ಸರ್ತಿ ಹೇಳದು. ನಿಂಗೆ ಆಗ್ಲೇ ಮೂರು ವಾರ್ನಿಂಗ್ ಆಗಿದೆ. ಯು ಅರ್ ಫೈರ್ಡ್!" ಅಂದ.

***
ಕೆಲಸಕಳೆದುಕೊಂಡ ಶೀನ ಸಂಪಿಗೆ ರೋಡ್ ಫ್ರೆಂಡ್ ಅಂಗಡಿ ಮುಂದೆ ನಿಂತಿದ್ದ. ಮುಂದೆ ಒಂದು ಕಾರು ಬಂದು ನಿಂತಿತು. ಒಬ್ಬ ಅಮಾಯಕ ಪ್ರಾಣಿ ಒಂದು ದೊಡ್ಡ ಸೂಟ್ ಕೇಸ್ ಹಿಡಿದು ಇಳಿದ.
"ಸಾರ್, ಜನತಾ ಹೋಟೆಲ್ ಹತ್ರ ಪಾರ್ಕ್ ಮಾಡಿರ್ತಿನಿ" ಡ್ರೈವರ್ ಅಂದ, "ಓಕೆ" ಪ್ರಾಣಿ. ಕನ್ ಫ್ಯೂಜನ್ ಮಿಶ್ರಿತ ಖುಶಿಯಲ್ಲಿ ಈ ಪ್ರಾಣಿ ಸುತ್ತ-ಮುತ್ತಾ ನೋಡಿದ. ಸೂಟ್ ಕೇಸ್ ಹೊತ್ಕೊಂಡು ಮೆಲ್ಲಗೆ ಶೀನನ ಹತ್ತಿರ ಬಂದು ಹಾಯ್ ಅಂದ.

"ಇಲ್ಲಿ ಒಂದು ಗುಲ್ಕಂದ ಅಂಗಡಿಯಿತ್ತಲ್ವ?"
"ಇಲ್ಲಲ್ಲಾ, ಅಲ್ಲಿ ಇದೆ" ಶೀನ ಅಂದ.
"ಸೋ ಮೆನಿ ಚೇಂಜಸ್, ಗುರ್ತೇ ಸಿಗಲ್ಲ"
"ಅಂದಹಾಗೆ, ಇವಾಗ ವೀಣಾ ಸ್ಟೋರ್ಸ್ ತೆಗೆದಿರತ್ತಾ?" ಪ್ರಾಣಿ.

ಶೀನ ಅನ್ಕಂಡ, ಈ ಪ್ರಾಣಿ ಇಲ್ಲಿಯವನಲ್ಲ. ಎಲ್ಲಾರೂ ಪಿಜ್ಜಾ, ಬರ್ಗರ್ ಅನ್ನಬೇಕಾದ್ರೆ, ಇಡ್ಲಿ, ಗುಲ್ಕಂದ್ ಅನ್ತಿದಾನೆ.
"ಸಾರ್, ಯಾವೂರು ನಿಮ್ಮದು?"
"ಅಮೆರಿಕ"
"ಓ, ಅದಕ್ಕೆ ನೀವು ಬೆಂಗಳೂರು ಬಿಟ್ಟೋದ ಟೈಂನಲ್ಲೇ ಸ್ಟಕ್ ಆಗಿದೀರ!"

ಪ್ರಾಣಿ ಬೆವರು ಒರೆಸಿಕೊಳ್ಳುತ್ತ "ಆವಾಗ ಬೆಂಗಳೂರು ಒಳ್ಳೇ ಎಸಿ..." ಯಪ್ಪಾ, ಕೊರೆಯಕ್ಕೆ ಶುರು ಮಾಡಿದ.
"ಹಳೇದೆಲ್ಲಾ ಯಾಕ್ ಈವಾಗ ಬಿಡಿ ಸಾರ್"
"ಅಮೆರಿಕದಲ್ಲಿ ಯಾವ ಜಿಪ್-ಕೊಡು?" ಶೀನ ಕೇಳಿದ.
ಪ್ರಾಣಿಗೆ ಗಾಬರಿ, ಎಲ್ಲಾರು ಯಾವ ಊರು ಅಂತಾರೆ, ಯಾವ ಜಿಪ್-ಕೊಡು ಅನ್ನಲ್ಲ.
ಆದ್ರೂ, ಹೇಳಿದ
ಶೀನ ಅಂದ "ಓ, ಅರ್ಲಿಂಗ್ಟಂನ್, ವರ್ಜಿನಿಯಾ.."
"ನೀವು ಅಮೆರಿಕದಲ್ಲೇ ಇದೀರಾ?"
"ಊ.., ಹಾ,.. ಹಾಗೆ ಒಂತರ" ಶೀನ ಅಂದ.

ಅಷ್ಟರೊಳಗೆ, ಪ್ರಾಣಿಗೆ ಫೋನ್ ಬಂತು, "ಸಾರಿ, ಹೆಂಡ್ತಿ ಕಾಲ್" ಸ್ವಲ್ಪ ದೂರ ಹೊದ. "ಟೆಲ್ ಮಿ, ಶಿವಾ ಗೋಲ್ಡು, ಓಕೆ, ಎಷ್ಟು"
"500 ಗ್ರಾಂಸ್, ಸರಿ, ಅಮೇಲೆ, ಗಣೇಶಾ?"
"ಗೊಲ್ಡು 1 ಕೆಜಿ, ಸಿಲ್ವರೂ 1 ಕೆಜಿ, ಸರಿ, ಗೊತ್ತಾಯಿತು"

ಶೀನನಿಗೆ ಪ್ರಾಣಿ ಮಾತು ಅಸ್ಫಷ್ಟವಾಗಿ ಕೇಳಿಸುತ್ತಾಯಿದೆ, ಮಯ್ಯಿ ಜುಮ್ಮೆಂದಿತು. ಪಾರ್ಟಿ ದೊಡ್ಡ ಕುಳನೆ, ಕೆಜಿ ಲೆಕ್ಕದಲ್ಲಿ ಚಿನ್ನ - ಬೆಳ್ಳಿ ಅಂತಿದಾನೆ, ಅದೂ ದೇವರ ವಿಗ್ರಹಗಳು. ಶೀನ ಕಿವಿ ಕ್ಲೀನ್ ಮಾಡಿಕೊಂಡು ಕೇಳಕ್ಕೆ ಮುಂದುವರಿಸಿದ.

"ಶ್ರೀರಾಮ ನಾಲಕ್ಕು ಕೆಜಿ, ಬೇರೆ, ಬೇರೆ ಪ್ಯಾಕಿಂಗೂ, ಸರಿ, ಡೌಟಿದ್ರೆ ಕಾಲ್ ಮಾಡ್ತಿನಿ, ಬೈ."

ಪ್ರಾಣಿ ಶೀನನ ಹತ್ತಿರ ಬಂದು, "ಸಾರಿ, ಶಾಪಿಂಗ್ ಇನ್‌ಸ್ಟ್ರಕ್ಷನ್ಸ್ ಹೆಂಡ್ತಿಯಿಂದ, ನೈಸ್ ಮೀಟಿಂಗ್ ಯು, ಇನ್ನೊಮ್ಮೆ ಸಿಗೋಣ" ಅಂದು ಓಣಿಯೊಳಗೆ ನುಸುಳಿದ. ಶೀನ ಹಂಗೆ ನಿಂತು ಲೆಕ್ಕ ಹಾಕಿದ. ಈ ಪ್ರಾಣಿ ಚಿನ್ನ-ಬೆಳ್ಳಿ ಲಿಸ್ಟ್ ನೊಡಿದ್ರೆ, 20 ಲಕ್ಷಕ್ಕೆ ಕಮ್ಮಿ ಇಲ್ಲ. ಫ್ರೆಂಡ್ ಅಂಗಡಿಯೊಳಗೆ ಹೋಗಿ ಎಲ್ಲಾ ಹೇಳಿದ, ಫ್ರೆಂಡ್ ಯಾಕೆ ಅವನ್ನನು ಫಾಲೋ ಮಾಡಲಿಲ್ಲ ಅಂತ ಬೈದ.

ಸುಮಾರು ಮೂರು ತಾಸಿನ ನಂತರ ಅದೆ ಪ್ರಾಣಿ ಸೂಟ್ ಕೇಸ್ ಹೊರಲಾರದೆ ಹೊರುತ್ತ ಇವರ ಅಂಗಡಿಯ ಮುಂದೆ ನಿಂತ. ಶೀನ ಮತ್ತು ಅವನ ಫ್ರೆಂಡ್, ಪ್ರಾಣಿ ಸುನಾಯಾಸವಾಗಿ ಬಲೆಯೊಳಗೆ ಬಂದದ್ದು ನೋಡಿ ಕುಣಿದರು.

"ಶೀನ ಹೆಂಗಾದ್ರು ಮಾಡಿ ನೀನು ಆ ಸೂಟ್ ಕೇಸ್ ಎತ್ತಿದ್ರೆ ನಿನ್ ಜೀವನ ಸೆಟ್ ಆಗುತ್ತೆ"
"ಪ್ರಾಣಿ ಪೆದ್ದು, ಜಾಬೂ ಬಹಳ ಈಸಿ."

ಶೀನ ಅಂಗಡಿಯಿಂದ ಓಡಿ ಸಹಜವಾಗೇ ಪ್ರಾಣಿ ಪಕ್ಕ ಬಂದು ನಿಂತ. "ಓ, ನೀವಿನ್ನೂ ಇಲ್ಲೇ ಇದ್ದಿರಾ, ಶಾಪಿಂಗ್ ಆಯ್ತಾ" ಶೀನ ಕೇಳಿದ.
"ಆಯ್ತು, ಸೂಟ್ ಕೇಸ್ ಭಾರ, ಕಾರು ಜನತಾ ಹೋಟ್ಲ್ ಹತ್ರ ಇದೆ"
"ನೊ ಪ್ರಾಬ್ಲಮ್, ನಾನು ನೋಡ್ಕೊತಿನಿ, ನೀವು ಕಾರು ತಗೊಂಡು ಬನ್ನಿ" ಶೀನ ಅಂದ.
"ತುಂಬಾ ಥಾಂಕ್ಸ್, ನಂಬಿಕೆ ಜನ ಸಿಗೋದೆ ಕಷ್ಟ" ಪ್ರಾಣಿ ಜನತಾ ಹೋಟೆಲ್ ಕಡೆಗೆ ಹೋದ.

ಸೂಟ್ ಕೇಸ್ ಎತ್ಕೊಂಡು, ಫ್ರೆಂಡ್ಗೆ ಬಾಯ್ ಹೇಳಿ ಶೀನ ಆಟೋ ಹತ್ತಿ ಜಾಗ ಖಾಲಿ ಮಾಡಿದ. ಸೀದ ಪಾಲ್ಸಂದ್ರದ ಮನೆಗೆ ಬಂದ, ಅಮ್ಮ ಮನೇಲಿಲ್ಲ. ಬೆಡ್ ಶೀಟ್ ಹಾಸಿ ಸೂಟ್ ಕೇಸ್ ಇಟ್ಟು, ದೇವರಿಗೆ ಕೈ ಮುಗಿದು ಕೂತ. ಪ್ರಾಣಿ ಪೆದ್ದ ಲಾಕ್ ಮಾಡಿರಲಿಲ್ಲ. ಶೀನ ಎಕ್ಸೈಟ್ ಮೆಂಟ್ ತಡೆಯಲಾಗದೆ, ಸೂಟ್ ಕೇಸ್ ತೆರೆದ.

ಬರೀ ಹಪ್ಪಳ, ಅರಳು ಸಂಡಿಗೆ, ಬಾಳಕದ ಮೆಣಸಿನಕಾಯಿ ಕಾಣಿಸಿತು. ಶೀನ ಗಾಬರಿಯಾದ. ಇನ್ನು ಬಗೆದ, ಕೆಳಗೆ ಕಾಫಿಪುಡಿ. ಗಣೇಶ ಗೋಲ್ಡ್ ಹಪ್ಪಳ, ಶ್ರೀರಾಮ ಕಾಫಿಪುಡಿ, ಶಿವಾ ಗೋಲ್ಡ್ ಬಾಳಕ, ಬೆಳ್ಳಿಯ ಬಣ್ಣದ ಅಕ್ಕಿ ಹಪ್ಪಳ ಶೀನನ್ನ ನೋಡಿ ಅಣಕಿಸುತ್ತಿದ್ದವು.

ಒಬಾಮಾ ಹೇಳಿದ್ದ ಭಾರತೀಯರಿಂದ, ಚೀನಿಯರಿಂದ ನಮ್ಮ ಎಕಾನಮಿ ಹಾಳಗಿದೆ ಅಂತ. ಅದ್ರೆ ಥಿಸ್ ಇಸ್ ಟೂ ಮಚ್, ಒಂದು ಗ್ರಾಮ್ ಚಿನ್ನ ಇಲ್ಲ. ನೀರು, ಪವರ್ ಇಲ್ದಿರೋ ನಾವೇ ಎಷ್ಟು ಚಿನ್ನ ಕೊಂಡ್ಕೋತೀವಿ. ಅಮೆರಿಕದವರು ನೋಡಿದ್ರೆ ಬರಿ ಹಪ್ಪಳ - ಸಂಡಿಗೆ, ಮನುಷ್ಯರು ನನಗೆ ಯಾವಾಗ ಅರ್ಥವಾಗ್ತಾರೋ. ಇನ್ನುಮೇಲೆ ಎನ್ನಾರೈ ಸವಾಸಕ್ಕೆ ಹೊಗಲ್ಲ ಅನ್ಕೊಂಡ ಶೀನ.

English summary
Palsandra Sheena thought he hit the jackpot. But, fate had other ideas. Read this humorous write up by Charukesha, virginia, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X