ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಭವಿಷ್ಯ : ರಾಶಿಫಲ ಸೆ.11ರಿಂದ ಸೆ.17ರವರೆಗೆ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಈ ವಾರ ಸೆಪ್ಟೆಂಬರ್ 11ರಿಂದ ಸೆಪ್ಟೆಂಬರ್ 17ರವರೆಗಿನ ಜನ್ಮರಾಶಿ ಆಧಾರಿತ ರಾಶಿಬಲವನ್ನು ನೀಡಲಾಗಿದೆ. ಗೋಚಾರ ಫಲಕ್ಕನುಗುಣವಾಗಿ ಪ್ರತಿಯೊಂದು ರಾಶಿಗೂ ಗ್ರೇಡ್ ಕೊಡಲಾಗಿದೆ. ಸ್ಟಾರ್ ಗಳು ಎಷ್ಟಿವೆ ಎಂಬುದರ ಮೇಲೆ ರಾಶಿಗೆ ಫಲಾನುಫಲ ತಿಳಿದುಕೊಳ್ಳಬಹುದು. ಜೊತೆಗೆ ಈ ರಾಶಿಯವರಿಗೆ ಯಾವ ರಾಶಿಯವರು ಒಳ್ಳೆಯವರು ಎಂದು ಕೂಡ ತಿಳಿಸಲಾಗಿದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಸ್ಟಾರ್‌ಗಳಿಗೆ ವಿವರಣೆ ಕೆಳಗಡೆಯಂತಿರಲಿದೆ.

***** ತುಂಬಾ ಒಳ್ಳೆಯದು ; **** ಒಳ್ಳೆಯದು ; *** ಮಧ್ಯಮ ; ** ಸಮಾಧಾನಕರ ; * ಕನಿಷ್ಠ

ಆಸ್ತಿಕರು ತಮ್ಮ ಜನ್ಮರಾಶಿಗೆ ದಿನ ಹೇಗಿದೆ ಎಂದು ತಿಳಿದುಕೊಂಡೇ ಪ್ರತಿನಿತ್ಯದ ದಿನಚರಿ ಆರಂಭಿಸುವ ವಾಡಿಕೆ ರೂಢಿಸಿಕೊಂಡಿರುತ್ತಾರೆ. ಏಕೆಂದರೆ, ನಿತ್ಯಭವಿಷ್ಯಗಳು ನಿಜಜೀವನದಲ್ಲಿ ನಡೆಯುವ ಸತ್ಯಘಟನೆಗಳ ಮುನ್ಸೂಚನೆ ನೀಡುತ್ತವೆ. ಇದನ್ನು ಆಸ್ತಿಕರು ಅನುಭವಿಸಿರುವುದರಿಂದಲೇ ಅವರಿಗೆ ನಿತ್ಯ ಭವಿಷ್ಯದಲ್ಲಿ ಅಪಾರ ನಂಬಿಕೆ, ವಿಶ್ವಾಸವಿರುತ್ತದೆ. ಇನ್ನು ನಾಸ್ತಿಕರು ಕೂಡ ಈ ಬಗ್ಗೆ ಸಾಕಷ್ಟು ತಿಳಿದುಕೊಂಡು ಅವರೂ ಕೂಡ ನಿತ್ಯಭವಿಷ್ಯದೆಡೆಗೆ ಆಕರ್ಷಿತರಾಗುತ್ತಿದ್ದಾರೆ. [ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ]

ಪ್ರತಿಯೊಬ್ಬರೂ ಪ್ರತಿನಿತ್ಯ ಒಂದೊಂದು ತರಹ ದಿನಕಳೆಯಬೇಕಾಗುತ್ತದೆ. ಇದಕ್ಕೆ ಕಾರಣವೆಂದರೆ ಚಂದ್ರನ ಚಲನೆ. ಇದರಿಂದಲೇ ನಿತ್ಯಭವಿಷ್ಯವನ್ನು ಕಂಡುಹಿಡಿಯಲಾಗುತ್ತದೆ. ಜನ್ಮರಾಶಿಯಿಂದ ಚಂದ್ರನು ಯಾವ ಮತ್ತು ಯಾರ ಮನೆಯಲ್ಲಿದ್ದಾನೆ ಎಂಬುದನ್ನು ಅಂದಿನ ಜಾತಕ ರೂಪಿಸಿ ರಾಶಿಬಲ ತಿಳಿಯಬಹುದು. ಆದರೆ ಚಂದ್ರನ ಚಲನೆಯಿಂದ ಹೇಳುವ ರಾಶಿಬಲಕ್ಕೆ ಗೋಚಾರ, ದಶಾಭುಕ್ತಿಯ ಫಲ ಅನ್ವಯಿಸುವುದಿಲ್ಲ. [ರಾಹುಕಾಲ, ಗುಳಿಕಕಾಲ, ಯಮಗಂಡಕಾಲ]

ರಾಶಿ ಒಂದೇ ಆಗಿದ್ದರೂ ಕೂಡ ಪ್ರತಿಯೊಬ್ಬರ ಜನ್ಮಜಾತಕದಲ್ಲಿ ದಶಾಭುಕ್ತಿ, ಗ್ರಹಗಳು ಇರುವ ಮನೆಗಳನ್ನು ಆಧರಿಸಿ ರಾಶಿಬಲವನ್ನು ಹೋಲಿಸಿಕೊಳ್ಳಬೇಕು. ಇನ್ನೊಂದು ವಿಷಯವೆಂದರೆ ಈಡಿಯಟ್ ಬಾಕ್ಸ್ನಲ್ಲಿ ಬರುವ ನ್ಯೂಮರಾಲಜಿಗೂ ಇಲ್ಲಿ ನೀಡುವ ರಾಶಿಬಲಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿರುವುದಿಲ್ಲ. [ರಾಹುಕಾಲ, ಗುಳಿಕಕಾಲ ಯಾಕ್ರೀ ನೋಡಬೇಕು?]

ಮೇಷ

ಮೇಷ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ - ಚೂ, ಚೀ, ಚೋ, ಲಾ, ಲೀ, ಲೂ, ಲೇ, ಲೋ, ಆ), (ಅಶ್ವಿನಿ, ಭರಣಿ ಮತ್ತು ಕೃತ್ತಿಕಾ ನಕ್ಷತ್ರದ ಒಂದನೇ ಚರಣ)

ಕೆಲಸದಲ್ಲಿರುವವರಿಗೆ ಉತ್ತಮ ಸಮಯ. ಹಣದ ವಿಷಯದಲ್ಲಿ ಏರಿಕೆ. ಕುಟುಂಬದವರೊಂದಿಗೆ ಸಂಭ್ರಮ. ದೇಹಾರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಜಾಗ್ರತೆ ಇರಲಿ.

ರಾಶಿಬಲ : *** ಮಧ್ಯಮ.

ವೃಷಭ

ವೃಷಭ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ-ಇ, ಊ, ಏ, ಓ, ವಾ, ವಿ, ವು, ವೇ, ವೋ), (ಕೃತ್ತಿಕಾ ಕೊನೆಯ ಮೂರು ಚರಣ, ರೋಹಿಣಿ, ಮೃಗಶಿರಾ ನಕ್ಷತ್ರದ ಮೊದಲೆರಡು ಚರಣ)

ಉದ್ಯೋಗಸ್ಥರಿಗೆ ಗೆಲವಿನ ಸಮಯ. ಹಣಕ್ಕೆ ಸಂಬಂಧಪಟ್ಟಂತೆ ಲಾಭ. ಕೌಟುಂಬಿಕವಾಗಿ ಗೌರವ. ದೇಹಾರೋಗ್ಯದಲ್ಲಿ ತೊಂದರೆ ಇರಲ್ಲ.

ರಾಶಿಬಲ : *** ಮಧ್ಯಮ.

ಮಿಥುನ

ಮಿಥುನ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ- ಕಾ, ಕಿ, ಕೂ, ಗ, ಙ, ಛ, ಕೇ, ಕೋ, ಹಾ), (ಮೃಗಶಿರಾ ಕೊನೆಯ ಎರಡು ಚರಣ, ಆರಿದ್ರಾ, ಪುನರ್ವಸು ಮೊದಲ ಮೂರು ಚರಣ)

ಕೆಲಸದಲ್ಲಿ ಉತ್ತಮ ಬೆಂಬಲ. ಹಣದಿಂದ ದುಪ್ಪಟ್ಟು ಲಾಭ ಗಳಿಕೆ. ಕುಟುಂಬದವರೊಂದಿಗೆ ಆನಂದ. ದೇಹಾರೋಗ್ಯದಲ್ಲಿ ಹುರುಪು.

ರಾಶಿಬಲ : **** ಉತ್ತಮ.

ಕರ್ಕ

ಕರ್ಕ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ- ಹಿ, ಹು, ಹೇ, ಹೋ, ಡಾ, ಡಿ, ಡೂ, ಡೇ. ಡೋ), (ಪುನರ್ವಸು ಕೊನೆಯ ಚರಣ, ಪುಷ್ಯ, ಆಶ್ಲೇಷಾ ನಕ್ಷತ್ರ)

ಉದ್ಯೋಗಸ್ಥರಿಗೆ ಸಮಾಧಾನಕರ ದಿನಗಳು. ಬಾಕಿ ಹಣ ಕೈ ಸೇರುವುದು. ಕೌಟುಂಬಿಕವಾಗಿ ಸಂತಸ. ದೇಹಾರೋಗ್ಯದಲ್ಲಿ ಕಿರಿಕಿರಿ, ಜಾಗ್ರತೆ ಅವಶ್ಯ.

ರಾಶಿಬಲ : **** ಉತ್ತಮ.

ಸಿಂಹ

ಸಿಂಹ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ-ಮಾ, ಮಿ, ಮೂ, ಮೇ, ಮೊ, ಟಾ, ಟೀ, ಟು), (ಮಘಾ, ಪೂರ್ವಾಫಾಲ್ಗುಣಿ, ಉತ್ತರಾಫಾಲ್ಗುಣಿ ಮೊದಲ ಚರಣ)

ಕೆಲಸದಲ್ಲಿರುವವಿಗೆ ಉತ್ತಮ ಸಮಯ. ಹಣದ ಸಹಾಯಕ್ಕೆ ಹೊಸ ಜನರ ಪರಿಚಯ. ಕುಟುಂಬದವರೊಂದಿಗೆ ಸಂತಸ. ದೇಹಾರೋಗ್ಯದಲ್ಲಿ ತೊಂದರೆ ಇರಲ್ಲ.

ರಾಶಿಬಲ : *** ಮಧ್ಯಮ.

ಕನ್ಯಾ

ಕನ್ಯಾ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ-ಟೇ, ಟೋ, ಪಾ, ಪಿ, ಪು, ಷ, ಣ, ಠ), (ಉತ್ತರಾಫಾಲ್ಗುಣಿ ಕೊನೆಯ ಮೂರು ಚರಣ, ಹಸ್ತಾ, ಚಿತ್ರಾ ನಕ್ಷತ್ರದ ಮೊದಲೆರಡು ಚರಣ)

ಕೆಲಸದಲ್ಲಿರುವವರಿಗೆ ತೊಂದರೆಗಳಿಂದ ಬೇಸರ. ಹಣದ ವಿಷಯದಲ್ಲಿ ನಷ್ಟ. ಕೌಟುಂಬಿಕ ಕಲಹಗಳು ಉಲ್ಬಣ. ದೇಹಾರೋಗ್ಯದಲ್ಲಿ ತೊಂದರೆ, ಜಾಗ್ರತೆ ಅವಶ್ಯ.

ರಾಶಿಬಲ : * ಕನಿಷ್ಠ.

ತುಲಾ

ತುಲಾ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ- ರಾ, ರಿ, ರೂ, ರೇ, ರೋ, ತಾ, ತೀ, ತೂ, ತೇ), (ಚಿತ್ತಾ ಕೊನೆಯ ಎರಡು ಚರಣ, ಸ್ವಾತಿ, ವಿಶಾಖಾ ನಕ್ಷತ್ರದ ಮೊದಲ ಮೂರು ಚರಣ)

ಕೆಲಸದಲ್ಲಿರುವವರಿಗೆ ನೆಮ್ಮದಿಯ ದಿನಗಳು. ಹಣದ ವಿಷಯದಲ್ಲಿ ಚಿಂತೆ. ಕುಟುಂಬದವರೊಂದಿಗೆ ಆನಂದ. ದೇಹಾರೋಗ್ಯದಲ್ಲಿ ಹುರುಪು.

ರಾಶಿಬಲ : *** ಮಧ್ಯಮ.

ವೃಶ್ಚಿಕ

ವೃಶ್ಚಿಕ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ-ನಾ, ನೀ, ನು, ನೇ, ನೋ, ಯಾ, ಯೀ, ಯು), (ವಿಶಾಖಾ ಕೊನೆಯ ಚರಣ, ಅನುರಾಧ, ಜ್ಯೇಷ್ಠ ನಕ್ಷತ್ರ)

ಕೆಲಸಗಾರರಿಗೆ ಒತ್ತಡದಿಂದ ಬೇಸರ. ಹಣದ ವಿಷಯದಲ್ಲಿ ನೆಮ್ಮದಿ. ಕುಟುಂಬದವರೊಂದಿಗೆ ವಾಗ್ವಾದ. ದೇಹಾರೋಗ್ಯದಲ್ಲಿ ತೊಂದರೆ ಇಲ್ಲವಾದರೂ, ಮಾನಸಿಕ ಸ್ಥಿರತೆ ಇರಲ್ಲ.

ರಾಶಿಬಲ : * ಕನಿಷ್ಠ.

ಧನಸ್ಸು

ಧನಸ್ಸು

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ-ಯೇ, ಯೋ, ಭಾ, ಭೀ, ಭೂ, ಧಾ, ಫಾ, ಢಾ), (ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ ಮೊದಲ ಚರಣ)

ಉದ್ಯೋಗಗಳಿಗೆ ನೆಮ್ಮದಿ ಮತ್ತು ಸಂತಸದ ದಿನಗಳು. ಹಣದ ವಿಷಯದಲ್ಲಿ ಆನಂದ. ಕುಟುಂಬದವರೊಂದಿಗೆ ಸಂಭ್ರಮ. ದೇಹಾರೋಗ್ಯದಲ್ಲಿ ತೊಂದರೆ, ಜಾಗ್ರತೆ ಇರಲಿ.

ರಾಶಿಬಲ : *** ಮಧ್ಯಮ.

ಮಕರ

ಮಕರ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ - ಭೇ, ಭೋ, ಜಾ, ಜಿ, ಖೀ, ಖೂ, ಖೇ, ಖೊ), (ಉತ್ತರಾಷಾಢಾ ಕೊನೆಯ ಮೂರು ಚರಣ, ಶ್ರವಣಾ, ಧನಿಷ್ಠಾ ನಕ್ಷತ್ರದ ಮೊದಲೆರಡು ಚರಣ)

ಉದ್ಯೋಗಿಗಳು ಸಮಾಧಾನದಿಂದಿದ್ದರೆ ನೆಮ್ಮದಿ. ಹಣದ ಬಗ್ಗೆ ಚಿಂತೆ ದೂರ. ಕುಟುಂಬದವರೊಂದಿಗೆ ನೆಮ್ಮದಿ. ದೇಹಾರೋಗ್ಯದಲ್ಲಿ ತೊಂದರೆ ಇರಲ್ಲ.

ರಾಶಿಬಲ : *** ಮಧ್ಯಮ.

ಕುಂಭ

ಕುಂಭ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ-ಗೂ, ಗೇ, ಗೋ, ಸಾ, ಸೀ, ಸು, ಸೇ, ದಾ), (ಧನಿಷ್ಠಾ ಕೊನೆಯೆರಡು ಚರಣ, ಶತತಾರಾ, ಪೂರ್ವಾಭಾದ್ರಪದ ಮೊದಲ ಮೂರು ಚರಣ)

ಕೆಲಸದಲ್ಲಿರುವವರಿಗೆ ನೆಮ್ಮದಿಯ ದಿನಗಳು. ಹಣದ ವಿಷಯದಲ್ಲಿ ತೊಂದರೆ ಉಲ್ಬಣ. ಕುಟುಂಬದವರಿಂದ ಪ್ರೋತ್ಸಾಹ, ಬೆಂಬಲ. ದೇಹಾರೋಗ್ಯದಲ್ಲಿ ಹುರುಪು.

ರಾಶಿಬಲ : *** ಮಧ್ಯಮ.

ಮೀನ

ಮೀನ

ಜನ್ಮನಾಮ, ನಕ್ಷತ್ರ : (ಹೆಸರಿನ ಮೊದಲಕ್ಷರ-ದಿ, ದು, ಞ, ಝ, ಥ, ದೇ, ದೋ, ಚಾ, ಚಿ), (ಪೂರ್ವಭಾದ್ರಪದ ಕೊನೆಯ ಚರಣ, ಉತ್ತರಭಾದ್ರಪದ, ರೇವತಿ ನಕ್ಷತ್ರ)

ಕೆಲಸದಲ್ಲಿರುವವರಿಗೆ ತೊಂದರೆದಾಯಕ ದಿನಗಳು. ಹಣದ ವಿಷಯದಲ್ಲಿ ತೊಂದರೆ ಹೆಚ್ಚಳ. ಕುಟುಂಬದವರೊಂದಿಗೆ ನೆಮ್ಮದಿ. ದೇಹಾರೋಗ್ಯದಲ್ಲಿ ತೊಂದರೆ ಇಲ್ಲವಾದರೂ, ಮನಸ್ಸಿನ ಚಿಂತೆ ಹೆಚ್ಚಳ.

ರಾಶಿಬಲ : * ಕನಿಷ್ಠ.

ಜ್ಯೋತಿಷಿ ನಾಗನೂರಮಠ ಎಸ್ಎಸ್

ಜ್ಯೋತಿಷಿ ನಾಗನೂರಮಠ ಎಸ್ಎಸ್

ಜ್ಯೋತಿಷಿ : ನಾಗನೂರಮಠ ಎಸ್ಎಸ್

ಮೊಬೈಲ್ : 94815 22011

ಈಮೇಲ್ : [email protected]

ಯಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ಜ್ಯೋತಿಷಿಗಳನ್ನು ನೇರವಾಗಿ ಸಂಪರ್ಕಿಸಬೇಕಾಗಿ ವಿನಂತಿ.

English summary
Weekly zodiac horoscope forecasts by astrologer S.S. Nagnurmath. Rashi phala from September 11 to September 17, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X