ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬರುವ ಆತಂಕ ಮೊದಲೇ ತೋರುವ ಜಾತಕ

By ಎಸ್.ಎಸ್. ನಾಗನೂರಮಠ
|
Google Oneindia Kannada News

ಈ ಹಿಂದಿನ ಲೇಖನದಲ್ಲಿ ಜಾತಕದಿಂದ ಸಾಡೇಸಾತಿಯ ಸಮಯ ಯಾವಾಗ ಬರುತ್ತದೆ ಎಂಬುದನ್ನು ಮೊದಲೇ ಗುರ್ತಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಂಡಿರಿ. ಅದೇ ರೀತಿ ನಮ್ಮ ಅಂತ್ಯದವರೆಗೂ ಜಾತಕದ ಮೂಲಕವೇ ಶನಿದೇವ ನಮ್ಮ ಕಾರ್ಯಚಟುವಟಿಕೆಗಳಲ್ಲಿನ ಸುಖ, ದುಃಖ ಮೊದಲೇ ಸೂಚಿಸುತ್ತಾನೆ. ಅದನ್ನು ನಾವು ಮನಗಾಣಿಸಿಕೊಂಡು ಜೀವನ ನಡೆಸಬೇಕು.

ಏಕೆಂದರೆ ಎಷ್ಟೋ ಜನ ಜಾತಕವನ್ನು ನಿರ್ಲಕ್ಷಿಸಿ ತಮ್ಮ ಒಳ್ಳೆಯ ಸಮಯದಲ್ಲಿ ಏನೂ ಮಾಡದೇ ಸುಮ್ಮನಿರುತ್ತಾರೆ. ತಮ್ಮ ಗ್ರಹಚಾರದ ತೊಂದರೆಯಲ್ಲಿದ್ದಾಗ ಏನೇನೋ ಮಾಡಲು ಹೋಗಿ ಕೈ ಸುಟ್ಟುಕೊಳ್ಳುತ್ತಾರೆ. ಇನ್ನು ಸಾಡೇಸಾತಿಯು ಶುರುವಾಗುವ ಸಮಯದಲ್ಲಿ ಪಾಪರ್ ಆಗಿ ಹಣಕ್ಕಾಗಿ ಪರದಾಡುವಂತಾಗುತ್ತಾರೆ. ಆದ್ದರಿಂದ ತಮ್ಮ ಜಾತಕದ ಮೂಲಕ ಒಳ್ಳೆಯ ಸಮಯದಲ್ಲಿ ಮಾತ್ರ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಂಡರೆ ಒಳ್ಳೆಯದು. ಹೇಗೆಂದರೆ ಮುಹೂರ್ತ ನೋಡಿಯೇ ಗೃಹಪ್ರವೇಶ, ಮದುವೆ, ಮುಂಜಿವೆ, ಹಬ್ಬಗಳನ್ನು ಹೇಗೆ ಮಾಡುತ್ತಾರೆಯೋ, ಅದೇ ರೀತಿ ಜೀವನದ ಕೆಲವು ನಿರ್ಧಾರಗಳನ್ನು ತಮ್ಮ ಉತ್ತಮ ಸಮಯ ನೋಡಿಕೊಂಡು ಕಾರ್ಯರೂಪಕ್ಕೆ ತರುವುದು ಬುದ್ಧಿವಂತರ ಲಕ್ಷಣವೆನ್ನಬಹುದು. ಇಲ್ಲವಾದರೆ ಅಪಯಶಸ್ಸಿನಿಂದಾಗಿ ಬೇಸತ್ತು ಜೀವನದಲ್ಲಿ ಜಿಗುಪ್ಸೆ ಹೊಂದುವಂತಾಗುತ್ತದೆ.

Know your good bad days ahead through horoscope

ಜಾತಕದ ಮೂಲಕವೇ ಅನುಕೂಲಕರವಲ್ಲದ ಪರಿಸ್ಥಿತಿ ಆಗಮಿಸುವುದನ್ನು ಕಂಡುಕೊಂಡು, ಮೊದಲೇ ಪರಿಹಾರಮಾರ್ಗ ಮತ್ತು ಶಾಂತಿಕ್ರಮಗಳನ್ನು ಕೈಗೊಂಡರೆ ಶನಿದೇವನ ಪ್ರಭಾವವನ್ನು ತಡೆದುಕೊಳ್ಳುವ ಶಕ್ತಿ ಪಡೆದುಕೊಳ್ಳಬಹುದಾಗಿದೆ. ಪ್ರತಿಯೊಂದಕ್ಕೂ ಜಾತಕವನ್ನೇ ನೋಡಬೇಕಂತಿಲ್ಲ. ಆದರೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮಾತ್ರ, ಅಂದರೆ ಭಾರೀ ಪ್ರಮಾಣದ ಹಣ ಹೂಡಿಕೆ ಮಾಡುವಾಗ ಯೋಚಿಸಿಯೇ ಮುಂದುವರಿಯುವುದು ತುಂಬಾ ಒಳ್ಳೆಯದು.

ಎಷ್ಟೋ ಜನ ತಮ್ಮ ಮಗು ಚಿಕ್ಕದಿದ್ದಾಗಲೇ ಅದರ ವಿದ್ಯಾಭ್ಯಾಸಕ್ಕೆ ಸಾವಿರುಗಟ್ಟಲೇ ದುಡ್ಡು ಖರ್ಚು ಮಾಡುತ್ತಾರೆ. ಆದರೆ ಜಾತಕದ ಮೂಲಕ ಆ ಮಗು ಮುಂದೆ ಯಾವ ಕ್ಷೇತ್ರದಲ್ಲಿ ಯಶಸ್ಸು ಹೊಂದುತ್ತದೆ ಎಂಬುದನ್ನು ಕಂಡುಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಎಷ್ಟೋ ಕುಟುಂಬಗಳಲ್ಲಿ ತಂದೆ-ತಾಯಿಗಳ ನಿರೀಕ್ಷೆಯಂತೆ ಮಕ್ಕಳು ಜೀವನದಲ್ಲಿ ಯಶಸ್ಸು ಸಾಧಿಸದೇ ವಿಫಲರಾಗುತ್ತಾರೆ. ಆದರೆ ತಪ್ಪು ಇರುವುದು ತಂದೆ-ತಾಯಿಗಳದು, ಅನುಭವಿಸುವುದು ಮಕ್ಕಳು! ಇದು ವಿಪರ್ಯಾಸವಲ್ಲದೆ ಇನ್ನೇನು?

ಬಾಲ್ಯಾವಸ್ಥೆಯಲ್ಲಿ ಬರುವ ಸಾಡೇಸಾತಿಯು ಅಷ್ಟೇನೂ ಪ್ರಭಾವ ಬೀರುವುದಿಲ್ಲ. ಆದರೆ ವಿದ್ಯಾಭ್ಯಾಸಕ್ಕಾಗಿ ಕೊಂಚ ಕಿರಿಕಿರಿ ಮಾಡುವ ಹಂತದಲ್ಲಿಯೇ ಮಕ್ಕಳ ಪೋಷಕರು ಮುಂಜಾಗೃತೆ ವಹಿಸಿಕೊಂಡು ಏನೂ ಅರಿಯದ ಆ ಮಗುವಿನ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಆದರೆ ಆ ಮಗುವಿನ ಜಾತಕವೂ ಇಲ್ಲ ಮತ್ತು ಸಾಡೇಸಾತಿ, ಅಷ್ಟಮ, ಪಂಚಮಶನಿಯ ಪ್ರಭಾವವೂ ಗೊತ್ತಿಲ್ಲದೆ ಹೋದರೆ, ಪಾಪ ಆ ಮಗುವಿನ ದುರಾದೃಷ್ಟದಿಂದಾಗಿ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುತ್ತದೆ. ಇನ್ನು ಜಾತಕದ ಮೂಲಕ ಮಗುವಿನ ಅದೃಷ್ಟದ ಸಂಖ್ಯೆ, ಅದೃಷ್ಟದ ಬಣ್ಣ ಮತ್ತು ಇತರ ವಿಚಾರಗಳನ್ನು ತಿಳಿದುಕೊಂಡು ಆ ಮಗುವನ್ನು ಬೆಳೆಸಬಹುದು. ಏನೂ ಗೊತ್ತಿಲ್ಲದೇ ಹಾಗೇ ಬೆಳೆಸಿದರೆ ಭಾರಿ ಪ್ರಸಿದ್ಧಿಯಾಗಬೇಕಾದಂತಹ ಆ ಮಗು ಅಲ್ಪಪ್ರಸಿದ್ಧಿಯಾಗುತ್ತದೆ ಅಷ್ಟೇ ಎಂಬುದು ಮಾತ್ರ ಸತ್ಯ.

ಈಗೀಗ ಎಷ್ಟೋ ಜನ ದೈವಭಕ್ತಿಯನ್ನು ಮೂಢನಂಬಿಕೆ, ಅಂಧವಿಶ್ವಾಸ ಎಂದುಕೊಳ್ಳುತ್ತ ತಮ್ಮ ಮಕ್ಕಳನ್ನೂ ಹಾಗೆಯೇ ಬೆಳೆಸುತ್ತಾರೆ. ಆದರೆ ಆ ಮಕ್ಕಳು ಯಾವ ದೈವದ ಭಯವಿಲ್ಲದೇ ಮುಂದೆ ದುಶ್ಚಟಗಳ ದಾಸರಾಗಿ, ಸಮಾಜಕ್ಕೆ ಕಂಟಕವಾಗುತ್ತಾರೆ ಎಂಬುದನ್ನು ಎಷ್ಟೋ ಊರುಗಳಲ್ಲಿ ನಿದರ್ಶನ ಸಹಿತ ನೋಡುತ್ತಿದ್ದೇವೆ. ಸಾಡೇಸಾತಿ ಎಂದರೆ ಹಿಂದಿಯಲ್ಲಿ ಏಳೂವರೆ ವರ್ಷ ಅಂತ ಅರ್ಥ. ಶನಿದೇವನ ಸಾಡೇಸಾತಿಯಿಂದ ಪಾರಾಗಲು ಏಳೂವರೆ ವರ್ಷ ಕಾಯಬೇಕು. ಆ ಸಮಯದಲ್ಲಿ ಎಲ್ಲವನ್ನೂ ಕಲಿತುಕೊಂಡು ಜೀವನವನ್ನು ಸುಗಮವಾಗಿಸಿಕೊಳ್ಳಬಹುದಾಗಿದೆ. ಆದರೆ ಏನೂ ಕಲಿಯದೇ ಬಂದದ್ದು ಬರಲಿ ಎನ್ನುತ್ತಾ ಹೋದರೆ ಆ ಶನಿದೇವನೇ ಕಾಪಾಡಬೇಕು ಅಷ್ಟೇ ಎನ್ನಬಹುದು.

ಮುಂದಿನ ಲೇಖನಗಳಲ್ಲಿ ಜನ್ಮನಕ್ಷತ್ರಗಳನ್ನಾಧರಿಸಿ ಗುಣ ವಿಶೇಷಗಳನ್ನು ತಿಳಿದುಕೊಳ್ಳೋಣ. ಸಾಡೇಸಾತಿಯ ಬಗ್ಗೆ ಮೊದಲನೇ ಬಾರಿಗೆ ಈ ಲೇಖನವನ್ನು ಓದುತ್ತಿರುವವರು ಈ ಲೇಖನಮಾಲೆಯ ಹಿಂದಿನ ಎಲ್ಲ ಲೇಖನಗಳನ್ನು ಓದಿದರೆ ಇನ್ನೂ ಹೆಚ್ಚಿನದನ್ನು ತಿಳಿದುಕೊಳ್ಳಬಹುದು. ಓದುವುದು ಒಳ್ಳೆಯದು. ಇನ್ನೂ ಹೆಚ್ಚಿನ ಮಾಹಿತಿಗಳನ್ನು ಮುಂದಿನ ಲೇಖನಗಳಲ್ಲಿ ಓದುವಿರಿ.

ಶನಿಕೃಪೆಗೆ : "ಸ್ವಾಮಿನೀ ಧ್ವಂಸಿನೀ, ಚೈವ, ಕಂಕಾಲೀ ಚ ಮಹಾಬಲಾ, ಕಲಹೀ ಕಂಟಕೀ ಚೈವ ದುರ್ಮುಖೀ ತ ಅಜಾಮುಖೀ, ಏತತ್ ಶನಿಶ್ಚರಾಯ ಭಾರ್ಯಾ ಪ್ರಾತಃ ಸಾಯಂ ಯೇ ಫಠೇತ್ ತಸ್ಯ, ಶನಿಶ್ಚರಃ ಪೀಡಾ ಭವಂತು ಕದಾಚನ್."

ಇದು ಶನಿದೇವನ ಪತ್ನಿಯರ ಸ್ತುತಿಯಾಗಿದ್ದು ಸ್ಮರಣೆ ಮಾಡುತ್ತ ಇದ್ದರೆ ಶನಿದೇವನ ಕುಪ್ರಭಾವವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಬಹುದು.

ವಾಸ್ತು ಟಿಪ್ಸ್ : ಮನೆಯ ಆಗ್ನೇಯ ಅಥವಾ ವಾಯವ್ಯ ದಿಕ್ಕಿನಲ್ಲಿ ಮಾತ್ರ ಅಡುಗೆ ಮನೆ ಇರಲಿ. ಈಶಾನ್ಯ ದಿಕ್ಕಿನಲ್ಲಿ ಅಡುಗೆಮನೆ ಬೇಡ. [ಲೇಖಕರ ಮೊಬೈಲ್ : 9481522011]

English summary
Impact of Sade Sati on Zodiac signs : A horoscope will give complete forecast of good and bad days we may come across in the future. So, believe in powerful Hindu God Shani (Saturn) and mend your life for a better future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X