ಸಿನಿಮಾ ಲೋಕದ ಸೋಲು-ಗೆಲುವು ಮತ್ತು ಜ್ಯೋತಿಷ್ಯ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಎಲ್ಲರಿಗೂ ತಿಳಿದಂತೆ ಚಿತ್ರರಂಗ ಅದ್ಭುತವಾದ ಕನಸಿನ ಲೋಕ. ಕೆಲವರಿಗೆ ಸತ್ಯವಾಗುವ ಬೆಳಗಿನ ಜಾವದ ಕನಸಾದರೆ, ಹೆಚ್ಚಿನ ಜನರಿಗೆ ಅದು ಹಗಲುಗನಸು! ಕಾರಣ ಲೌಕಿಕವಾಗಿ ಏನೇ ಹೇಳಿದರೂ ಜ್ಯೋತಿಷ್ಯ ರೀತ್ಯಾ ಅದು ಜಾತಕದಲ್ಲಿನ ಗ್ರಹಗಳ ಯೋಗ ಫಲ!

ಯಾವುದೇ ವ್ಯಕ್ತಿ ಚಿತ್ರರಂಗದಲ್ಲಿ ಯಶಸ್ಸು ಕಾಣ ಬೇಕಾದರೆ ಕಲೆ ಎಂಬುದು ಅವನಿಗೆ ರಕ್ತಗತವಾಗಿ ಮಾತ್ರ ಬಂದರೆ ಸಾಲದು. ಜಾತಕದಲ್ಲಿ ಯೋಗ ಫಲವಾಗಿ ಬರಬೇಕು. ಅಂಥ ಯೋಗ ಫಲಗಳನ್ನು ನಾವು ಹುಡುಕುತ್ತಾ ಸಾಗಿದರೆ ಸಾಮಾನ್ಯವಾಗಿ ಜ್ಯೋತಿಷಿಗಳು ನೋಡುವ ಪ್ರಮುಖ ಗ್ರಹ ಶುಕ್ರ![ಹನ್ನೆರಡು ರಾಶಿಗಳ ಗುಣ-ಸ್ವಭಾವ ಹೇಗಿರುತ್ತದೆ ಗೊತ್ತಾ?]

ಆದರೆ, ಕೇವಲ ಶುಕ್ರನ ಪ್ರಾಬಲ್ಯದಿಂದಲೇ ಚಿತ್ರರಂಗದಲ್ಲಿ ಯಶಸ್ಸು ಕಾಣುವುದು ಅರ್ಧ ಸತ್ಯ. ಏಕೆಂದರೆ ಚಿತ್ರರಂಗ ಅಂದರೆ ಕೇವಲ ಅಭಿನಯ ಅಲ್ಲ, ಅಲ್ಲಿ ಬರಹಗಾರರಿಂದ ತಾಂತ್ರಿಕ ವರ್ಗ ಹಾಗೂ ವಿದ್ಯುತ್ ದೀಪಗಳನ್ನು ಹೊರುವ ದಿನಗೂಲಿ ಕೆಲಸಗಾರರ ತನಕ ಎಲ್ಲರ ಶ್ರಮ ಇರುತ್ತದೆ. ಆದ್ದರಿಂದ ಚಿತ್ರರಂಗದಲ್ಲಿ ನಾವು ಯಾವ ರೀತಿ ಪಾತ್ರ ವಹಿಸುತ್ತೇವೆ, ಅದಕ್ಕೆ ಸಂಬಂಧಪಟ್ಟ ಗ್ರಹ ಜಾತಕದಲ್ಲಿ ಉತ್ತಮವಾಗಿರಬೇಕು. ಜ್ಯೋತಿಷಿಗಳ ಸಂಪರ್ಕ ಸಂಖ್ಯೆ 9845682380.

ಕಥೆ-ಚಿತ್ರಕಥೆಗೆ ಬುಧನ ಬಲ

ಇದೇ ವಿಚಾರವಾಗಿ ನಾವು ಗಮನಿಸುತ್ತಾ ಹೋದರೆ ಒಂದು ಒಳ್ಳೆ ಚಿತ್ರಕ್ಕೆ ಉತ್ತಮವಾದ ಕಥೆ ಹಾಗೂ ಚಿತ್ರಕಥೆ ಬೇಕು. ಆದರೆ ಉತ್ತಮ ಕಥೆ- ಚಿತ್ರಕಥೆ, ಬರೆಯುವವನ ಜಾತಕದಲ್ಲಿ ಬುಧಗ್ರಹ ಬಹಳ ಚೆನ್ನಾಗಿರಬೇಕಾಗುತ್ತದೆ. ಹೇಗೆಂದರೆ ಜಾತಕದಲ್ಲಿ ಮಿಥುನ, ಕನ್ಯಾ ಅಥವಾ ಲಗ್ನ/ರಾಶಿಯಿಂದ ಬುಧ 5, 9, 11 ಮನೆಗಳಲ್ಲಿ (ಮೀನ ರಾಶಿ ಹೊರತು ಪಡಿಸಿ) ಇದ್ದಾಗ ಹಾಗೂ ಕರ್ಮಾಧಿಪತಿಯಾಗಿ ಶುಕ್ರನಿಂದ ದೃಷ್ಟನಾದಾಗ ಚಿತ್ರರಂಗಕ್ಕೆ ಒಳ್ಳೆಯ ಕಥೆ-ಚಿತ್ರಕಥೆ ಸಂಭಾಷಣೆ ಬರೆಯುವವ ಸಿಕ್ಕಂತೆ.[ಸಂಖ್ಯಾಶಾಸ್ತ್ರ: 2ನೇ ಸಂಖ್ಯೆಯಲ್ಲಿ ಹುಟ್ಟಿದವರ ಮಾತು ಚಂದ]

ತಾಂತ್ರಿಕ ಪರಿಣತಿಗೆ ಕುಜ ಅನುಕೂಲ

ಇನ್ನು ಚಿತ್ರರಂಗದಲ್ಲಿ ತಾಂತ್ರಿಕ ವರ್ಗವಾದ ಗ್ರಾಫಿಕ್, ಉತ್ತಮ ಕ್ಯಾಮೆರಾಮೆನ್ ಇತ್ಯಾದಿಗಳಾಗಲು ಜಾತಕದಲ್ಲಿ ಕುಜಗ್ರಹ ಬಹಳ ಉತ್ತಮ ಸ್ಥಿತಿ ಅಂದರೆ ಮಕರ, ಮೇಷ ಅಥವಾ ಲಾಭ ಸ್ಥಾನದಲ್ಲಿ ಜನ್ಮ ಲಗ್ನ- ರಾಶಿಯಿಂದ ಭಾಗ್ಯ ಅಥವಾ ಲಾಭ ಸ್ಥಾನದಲ್ಲಿ ಇದ್ದು, ರವಿಯಿಂದ ಸಪ್ತಮ ದೃಷ್ಟಿ ಪಡೆದಿರಬೇಕು.

ವೃಶ್ಚಿಕ ಕುಜ ಒಳ್ಳೆಯದಲ್ಲ

ಇಲ್ಲಿ ವೃಶ್ಚಿಕ ವಿಷಮ ರಾಶಿ ಆಗಿರುವುದರಿಂದ ವೃಶ್ಚಿಕದ ಕುಜ ವೃತ್ತಿಯಲ್ಲಿ ಅಭಿವೃದ್ಧಿ ಒಮ್ಮೆ ಕೊಟ್ಟರೂ ಅತಿಯಾದ ಕೋಪ ಹಾಗೂ ಜಗಳಗಳಿಂದ ಹೊಂದಾಣಿಕೆ ಸಮಸ್ಯೆಯಾಗಿ ಅಂಥವರು ಚಿತ್ರರಂಗದಲ್ಲಿ ಯಶಸ್ಸು ಪಡೆಯಲು ಆಗುವುದಿಲ್ಲ!

ಸಂಗೀತ, ನಿರ್ದೇಶನಕ್ಕೆ ಗುರು ಬಲ

ಇನ್ನು ನಿರ್ದೇಶನ ಹಾಗೂ ಸಂಗೀತ ಕ್ಷೇತ್ರ ಚಿತ್ರರಂಗದ ಶ್ವಾಸಕೋಶಗಳಿದ್ದಂತೆ. ಆದ್ದರಿಂದ ಅಲ್ಲಿ ಯಶಸ್ಸು ಪಡೆಯಲು ಜಾತಕದಲ್ಲಿ ಗುರು ಗ್ರಹದ ಬಲ ಅತ್ಯವಶ್ಯ! ಜ್ಞಾನಕಾರಕ ಗುರು ನಿರ್ದೇಶನದಲ್ಲಿ ಸರ್ವರೂ ಹುಡುಕುವ ಆ ವಿಭಿನ್ನತೆಯನ್ನು ಹಾಗೂ ಎಲ್ಲರೂ ಮೆಚ್ಚುವಂಥ ಹೊಸತನವನ್ನು ನೀಡುತ್ತಾನೆ,

ಸಾಹಸಕ್ಕೆ ಶನಿಯ ಸಾಥ್

ಇನ್ನು ಚಿತ್ರದಲ್ಲಿ ಸಾಹಸವನ್ನು ಪ್ರದರ್ಶಿಸಲು ಹಾಗೂ ಕಬ್ಬಿಣದ ಭಾರವಾದ ವಸ್ತುಗಳನ್ನು ಹೊತ್ತು ಸಿದ್ಧಪಡಿಸಿ ತಯಾರಿಸುವವರ ಜಾತಕದಲ್ಲಿ ಶನಿ, ಜನರೇಟರ್ ಇತ್ಯಾದಿ ವಾಹನಗಳನ್ನು ಓಡಿಸಲು ರಾಹು, ಬಣ್ಣಗಳನ್ನು ಹಚ್ಚಲು ಕೇತು ಗ್ರಹಗಳ ಸಹಯೋಗ ಅತ್ಯವಶ್ಯ![ಮಹಾನ್ ಶಕ್ತಿವಂತ ಶನಿದೇವರ ಬಗ್ಗೆ ಇನ್ನಷ್ಟು ಮಾಹಿತಿ]

ಶುಕ್ಲ ಪಕ್ಷದಲ್ಲಿ ಶುರು ಮಾಡಿ

ಒಂದು ಚಿತ್ರ ತಯಾರು ಮಾಡಲು ಮೊಟ್ಟ ಮೊದಲನೇದಾಗಿ ಬೇಕಾಗಿರುವುದು ದೃಢವಾದ ಮನಸ್ಸು. ಜತೆಗೆ ಚಿತ್ರ ನಿರ್ಮಾಣದ ಸಮಯದಲ್ಲಿ ಎಲ್ಲೂ ಯಾರ ಮಧ್ಯದಲ್ಲೂ ವೈಮನಸ್ಸು ಬರಬಾರದು. ಇದಕ್ಕಾಗಿ ಚಂದ್ರ ವೃದ್ಧಿಯಲ್ಲಿ ಅಂದರೆ ಶುಕ್ಲ ಪಕ್ಷದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸಬೇಕು!

ಶುಕ್ರ ಪ್ರಭಾವ

ಈ ಎಲ್ಲ ಸಿದ್ಧತೆಗಳೂ ಸರಿ ಇದ್ದರೆ ಆಗ ನಾವು ಶುಕ್ರ ಗ್ರಹದ ಬಗ್ಗೆ ನೋಡಬಹುದು. ಅಂದರೆ ಚಿತ್ರಕ್ಕೆ ನಾಯಕ ನಟ/ನಟಿಯಿಂದ ಹಿಡಿದು ಸಹ ಪಾತ್ರಧಾರಿಗಳು ಹಾಗೂ ಹಾಡಿನಲ್ಲಿ ನೃತ್ಯದವರ ತನಕ ಜಾತಕದಲ್ಲಿ ಶುಕ್ರನ ಪ್ರಭಾವದಿಂದಲೇ ಯಶಸ್ಸು ಸಿಗುವುದು. ಅಷ್ಟೇ ಅಲ್ಲ, ಚಿತ್ರ ತಯಾರಿಸಲು ನಿರ್ಮಾಪಕರಿಂದ ಪ್ರಾರಂಭಿಸಿ ಹಂಚಿಕೆದಾರರು, ಚಿತ್ರ ಮಂದಿರದ ಮಾಲೀಕರ ತನಕ ಎಲ್ಲಾ ಶುಕ್ರಮಯ.[ವಾರಭವಿಷ್ಯ : ರಾಶಿಫಲ ನವೆಂಬರ್ 14ರಿಂದ ನವೆಂಬರ್ 20]

ಯಾವ ಸ್ಥಾನದಲ್ಲಿರುಬೇಕು ಶುಕ್ರ?

ಅಲ್ಲಿ ಎಲ್ಲಾ ಕಡೆ ಯಶಸ್ಸಿಗೆ ಶುಕ್ರನ ಪಾತ್ರ ಬಹಳ ಮುಖ್ಯವಾದುದು. ಈ ಎಲ್ಲ ರಂಗಗಳಲ್ಲಿ ಯಶಸ್ಸು ಕಾಣಲು ಜಾತಕದಲ್ಲಿ ಶುಕ್ರನು ವೃಷಭ, ತುಲಾ, ಮೀನ ಈ ಯಾವುದಾದರೊಂದು ರಾಶಿಯಲ್ಲಿ ಅಥವಾ ಸಿಂಹ ಹಾಗೂ ಕನ್ಯಾ ರಾಶಿಯನ್ನು ಹೊರತುಪಡಿಸಿ ಲಗ್ನ/ ಚಂದ್ರನಿಂದ ಪಂಚಮ, ಭಾಗ್ಯ ಹಾಗೂ ಲಾಭ ಇತ್ಯಾದಿ ಯಾವುದಾದರೊಂದು ಸ್ಥಾನಗಳಲ್ಲಿ ಇರಬೇಕು.

ಸ್ತ್ರೀಲೋಲರಾಗಿ ಹಣ ಹಾಳು ಮಾಡಬಹುದು

ಇದರ ಜತೆಗೆ ಜನ್ಮ ರಾಶಿಗೆ ಗುರುಬಲ ಇರಬೇಕು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಶುಕ್ರ ಬಲಾಢ್ಯನಾಗಿ ಇದ್ದರೂ ಸಹ ಶಕ್ತಿಯುತನಾದ ಶನಿಯಿಂದ ದೃಷ್ಟನಾದರೆ ಸ್ತ್ರೀಲೋಲರಾಗಿ ಸಂಪಾದಿಸಿದ ಹಣವನ್ನು ವೃಥಾ ಹಾಳು ಮಾಡುತ್ತಾರೆ![ಪಂಚ ಮಹಾಪುರುಷ ಯೋಗ: ನಿಮ್ಮ ಜಾತಕದಲ್ಲಿ ಯಾವುದಿದೆ?]

ಪ್ರಾರಂಭದ ಮುಹೂರ್ತ ಮುಖ್ಯ

ಚಿತ್ರರಂಗದಲ್ಲಿ ಯಶಸ್ಸು ಪಡೆಯಬೇಕಾದರೆ ಗ್ರಹ ಬಲಗಳು ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಒಂದು ಚಿತ್ರ ಯಶಸ್ಸು ಅಗಬೇಕಾದರೆ ಅದರ ಪ್ರಾರಂಭದ ಮುಹೂರ್ತವು ಸಹ ಅಷ್ಟೇ ಅದ್ಭುತವಾಗಿರಬೇಕು. ಕ್ಷೀಣ ಚಂದ್ರ ಸಮಯದಲ್ಲಿ ಸೋಮವಾರ ಪ್ರಾರಂಭಿಸುವ ಚಿತ್ರದಲ್ಲಿ ಯಾರಿಗೂ ಚಿತ್ರ ಮಾಡುವ ಮನಸ್ಸು, ಹುಮ್ಮಸು ಇರೋದಿಲ್ಲ.

ಗುರು, ಶುಕ್ರವಾರವೇ ಉತ್ತಮ

ಹಾಗೇ ಮಂಗಳವಾರ ಪ್ರಾರಂಭಿಸಿದರೆ ಚಿತ್ರೀಕರಣದಲ್ಲಿ ವಿಘ್ನಗಳು ಎದುರಾಗುತ್ತವೆ. ಆದರೆ ಬುಧವಾರ ಹಾಗೂ ಶನಿವಾರ ಪ್ರಾರಂಭಿಸಿದರೆ ಚಿತ್ರಗಳು ಮುಗಿಯಲು ಅಂದುಕೊಂಡ ಸಮಯಕ್ಕಿಂತ ತಿಂಗಳುಗಟ್ಟಲೆ ತಡವಾಗುತ್ತದೆ. ಇನ್ನು ಗುರು ಹಾಗು ಶುಕ್ರವಾರಗಳು ಅತ್ಯಂತ ಶುಭ ಕೋರಿದರೆ, ಭಾನುವಾರ ಮಧ್ಯಮವಾಗಿರುತ್ತದೆ.

English summary
Astrologer Vittal Bhat explains, Which is the best planetary position for cinema professionals?
Please Wait while comments are loading...