ವಾರಭವಿಷ್ಯ : ರಾಶಿಫಲ ಜನವರಿ 16ರಿಂದ ಜನವರಿ 22

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಈ ವಾರ ಜನವರಿ ಜನವರಿ 16ರಿಂದ ಜನವರಿ 22ರವರೆಗಿನ ಜನ್ಮರಾಶಿಯನ್ನು ಆಧರಿಸಿದ ರಾಶಿಬಲವನ್ನು ನೀಡಲಾಗಿದೆ. ಗೋಚಾರ ಫಲಕ್ಕೆ ಅನುಗುಣವಾಗಿ ಫಲಾನುಫಲ ತಿಳಿದುಕೊಳ್ಳಬಹುದು.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಆಸ್ತಿಕರು ತಮ್ಮ ಜನ್ಮರಾಶಿಗೆ ದಿನ ಹೇಗಿದೆ ಎಂದು ತಿಳಿದು ದಿನಚರಿ ಆರಂಭಿಸುವ ವಾಡಿಕೆ ರೂಢಿಸಿಕೊಂಡಿರುತ್ತಾರೆ. ಏಕೆಂದರೆ, ನಿತ್ಯಭವಿಷ್ಯ ಮುಂದಿನ ಘಟನೆಗಳ ಮುನ್ಸೂಚನೆ ನೀಡುತ್ತವೆ. ಪ್ರತಿಯೊಬ್ಬರೂ ನಿತ್ಯ ಒಂದೊಂದು ತರಹ ದಿನ ಕಳೆಯಬೇಕಾಗುತ್ತದೆ. ಇಡೀ ವಾರ ಹೇಗಿರುತ್ತದೆ ಎಂದು ಸೂಚಿಸುವುದೇ ವಾರಭವಿಷ್ಯ.[ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ]

ಚಂದ್ರನ ಚಲನೆ ಆಧಾರದಲ್ಲಿ ಹೇಗೆ ನಿತ್ಯಭವಿಷ್ಯವನ್ನು ಕಂಡುಹಿಡಿಯಬಹುದೇ ಅದೇ ರೀತಿ ಇತರ ಗ್ರಹ ಹಾಗೂ ಆಯಾ ವಾರದ ಗ್ರಹ ಬದಲಾವಣೆ ಗಮನಿಸಿ, ಜಾತಕ ರೂಪಿಸಿ ರಾಶಿಬಲ ತಿಳಿಯಬಹುದು. ಆದರೆ ಈ ರೀತಿ ಹೇಳುವ ರಾಶಿಬಲಕ್ಕೆ ಗೋಚಾರ, ದಶಾಭುಕ್ತಿಯ ಫಲ ಅನ್ವಯಿಸುವುದಿಲ್ಲ. [ರಾಹುಕಾಲ, ಗುಳಿಕಕಾಲ, ಯಮಗಂಡಕಾಲ]

ರಾಶಿ ಒಂದೇ ಆಗಿದ್ದರೂ ಕೂಡ ಪ್ರತಿಯೊಬ್ಬರ ಜನ್ಮಜಾತಕದಲ್ಲಿ ದಶಾಭುಕ್ತಿ, ಗ್ರಹಗಳು ಇರುವ ಮನೆಗಳನ್ನು ಆಧರಿಸಿ ರಾಶಿಬಲವನ್ನು ಹೋಲಿಸಿಕೊಳ್ಳಬೇಕು.

ಮೇಷ

ಪುರುಷರು : ಉದ್ಯೋಗ ಕ್ಷೇತ್ರದಲ್ಲಿ ಗಮನಾರ್ಹ ಉತ್ತಮ ಬೆಳವಣಿಗೆ ಕಾಣಬಹುದು ದೊಡ್ಡ ಜವಾಬ್ದಾರಿ ಒಂದನ್ನು ನಿಮ್ಮ ಹೆಗಲ ಮೇಲೆ ಹಾಕುವ ಸಾಧ್ಯತೆ ಇದೆ.

ಸ್ತ್ರೀಯರು : ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರಬೇಕು ಅತೀಯಾದ ಖಾರ ಹಾಗು ಕರಿದ ಪದಾರ್ಥಗಳಿಂದ ದೂರವಿರಿ.
ವಿದ್ಯಾರ್ಥಿಗಳು : ನಿಮ್ಮ ವಿದ್ಯಾಲಯದಲ್ಲಿ ಕೆಲವು ವ್ಯವಸ್ಥೆಗಳು ಪಾರದರ್ಶಕವಾಗಿ ಇಲ್ಲ ಎಂದು ನೀವು ರಾಗ ಎಳೆದು ಜಗಳಕ್ಕೆ ನಿಲ್ಲಬಹುದು.
ಪರಿಹಾರ : ತಪ್ಪದೇ ಈ ವಾರ ಪ್ರತಿ ದಿನ ಕುಜನ ಅಷ್ಟೋತ್ತರ ಪಠಿಸಿ.

ವೃಷಭ

ಪುರುಷರು : ಅನಿಯಮಿತವಾಗಿ ದುಡ್ಡು ಲೆಖ್ಖ ಸಹ ಸಿಗದ ಹಾಗೆ ಖರ್ಚಾಗಿರುವುದು ನಿಮ್ಮ ಗಮನಕ್ಕೆ ಬರುತ್ತದೆ.
ಸ್ತ್ರೀಯರು : ಪರಿಸ್ಥಿತಿಗಳನ್ನು ಎದುರಿಸಲು ಮನಸನ್ನು ಈಗಲಿಂದಲೇ ದೃಢವಾಗಿಸಲು ಪ್ರಾರಂಭಿಸಿದರೆ ಉತ್ತಮ.

ವಿದ್ಯಾರ್ಥಿಗಳು : ಈ ವಾರದಲ್ಲಿ ನಿಮಗೆ ನಿಮ್ಮ ವಿದ್ಯಾಭ್ಯಾಸದಲ್ಲಿ ನಿಮ್ಮ ಸಹೋದರರು ಸಹಕರಿಸುವರು.
ಪರಿಹಾರ : ಪ್ರತೀ ದಿನ ಚಂದ್ರ ಗ್ರಹ ಅಷ್ಟೋತ್ತರ ಪಠಿಸಿ ಹಾಗೂ ಹತ್ತಿರದ ಶಿವ ದೇಗುಲದಲ್ಲಿ ನಿತ್ಯ ಹಾಲಿನಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡಿಸಿ.

ಮಿಥುನ

ಪುರುಷರು : ಮಾತು ಮನೆ ಕೆಡಿಸಿತು ಎಂದು ಈ ವಾರ ಅವಶ್ಯ ನಿಮಗೆ ಅನಿಸುವ ಸಾಧ್ಯತೆಗಳಿವೆ.

ಸ್ತ್ರೀಯರು : ದೂರದ ಊರಿನಿಂದ ಬಂಧುಗಳ ಅನಿರೀಕ್ಷಿತ ಆಗಮನ ಒತ್ತಡ.
ವಿದ್ಯಾರ್ಥಿಗಳು : ತಿದ್ದಿಕೊಳ್ಳಲು ಹಾಗೂ ಪುನಃ ಪ್ರಯತ್ನಿಸಲು ಗುರುಗಳಿಂದ ಇನ್ನೊಂದು ಅವಕಾಶ ಲಭಿಸುತ್ತದೆ.

ಪರಿಹಾರ : ಪ್ರತಿ ದಿನ ಶ್ರೀ ರಾಮ ರಕ್ಷಾ ಸ್ತೋತ್ರ ಪಠಿಸಿ.

ಕರ್ಕ

ಪುರುಷರು : ಕೊನೆಯದಾಗಿ ಇನ್ನೊಮ್ಮೆ ಬಂದುಹೋಗಿ ಎಂದು ನಿಮಗೆ ಕೆಲಸ ಮಾಡಿಕೊಡುವುದಾಗಿ ಮಾತುಕೊಟ್ಟವರು ಹೇಳುತ್ತಾರೆ.

ಸ್ತ್ರೀಯರು : ಅತೀ ಕೋಪ ನಿಮ್ಮನ್ನು ಈ ವಾರ ಕಾಡುತ್ತದೆ. ಸಮಾಧಾನ ವಾಗಿ ಇರಲು ಈಗಲಿಂದಲೇ ಉಪಾಯಗಳನ್ನು ಹುಡುಕಿ.

ವಿದ್ಯಾರ್ಥಿಗಳು : ನಿಮ್ಮನ್ನು ಹೆದರಿಸಲು ಕೆಲ ಶಕ್ತಿಗಳು ಪ್ರಯತ್ನಿಸಬಹುದು ಧೃತಿಗೆಡಬೇಡಿ.
ಪರಿಹಾರ : ಪ್ರತಿ ದಿನ ಶಿವಾಷ್ಟೋತ್ತರವನ್ನು ಪಠಿಸಿ.

ಸಿಂಹ

ಪುರುಷರು : ವ್ಯಾಪಾರದಲ್ಲಿ ಅಥವಾ ಉದ್ಯೋಗ ಸ್ಥಳದಲ್ಲಿ ವಾರದ ಆರಂಭದಲ್ಲಿ ನಷ್ಟ ಅಂತ್ಯದಲ್ಲಿ ಸ್ವಲ್ಪ ಲಾಭ.

ಸ್ತ್ರೀಯರು : ನಿಮ್ಮ ಹಠದ ಸ್ವಭಾವ ಈ ವಾರ ನಿಮ್ಮನ್ನು ಸಂಕಷ್ಟಕ್ಕೆ ಈಡು ಮಾಡಬಹುದು.

ವಿದ್ಯಾರ್ಥಿಗಳು : ಸಹನೆ ಈ ವಾರ ನಿಮಗೆ ಉತ್ತಮ ಪ್ರತಿಫಲ ನೀಡಲಿದೆ.
ಪರಿಹಾರ : ಮನೆಯ ಹತ್ತಿರ ಇರುವ ದುರ್ಗಾ ದೇಗುಲಕ್ಕೆ ಪ್ರತಿ ದಿನ ಸಂಧ್ಯಾಕಾಲದಲ್ಲಿ ಹೋಗಿ ಕುಂಕುಮಾರ್ಚನೆ ಮಾಡಿಸಿ.

ಕನ್ಯಾ

ಪುರುಷರು : ಸಾಲಗಳ ಮರುಪಾವತಿಗಾಗಿ ತೀವ್ರ ಓಡಾಟ.

ಸ್ತ್ರೀಯರು : ಹಾಸಿಗೆ ಇದ್ದಷ್ಟು ಕಾಲು ಚಾಚಲು ಕಲಿತರೆ ಉತ್ತಮ ವಾರ ಆಗಿ ಮೂಡಿ ಬರುವುದರಲ್ಲಿ ಸಂಶಯವಿಲ್ಲ.

ವಿದ್ಯಾರ್ಥಿಗಳು : ಸ್ನೇಹಿತರೊಂದಿಗೆ ಮನಸ್ತಾಪ ಜಗಳ ಆಗದಂತೆ ಎಚ್ಚರ ವಹಿಸಿ.
ಪರಿಹಾರ : ಪ್ರತಿ ದಿನ ಆದಿತ್ಯ ಹೃದಯ ಸ್ತೋತ್ರ ಪಠಿಸಿ.

ತುಲಾ

ಪುರುಷರು : ಈ ವಾರದ ಆದಿಯಲ್ಲಿ ನಿಮ್ಮನ್ನು ಹೊಗಳಿ ನಿಮ್ಮಿಂದ ಸಹಾಯ ಪಡೆದವರೇ ವಾರಾಂತ್ಯದಲ್ಲಿ ನಿಮ್ಮನ್ನು ತೆಗಳಲು ಪ್ರಾರಂಭಿಸಿ ನಿಮ್ಮನ್ನು ಚಕಿತಗೊಳಿಸುತ್ತಾರೆ.

ಸ್ತ್ರೀಯರು : ಈ ವಾರ ಹೊಸ ರುಚಿ ಮಾಡಲು ಪ್ರಯತ್ನಿಸದಿರಿ ಯಶಸ್ಸು ಅಸಾಧ್ಯವಲ್ಲದಿದ್ದರೂ ಸಹ ಕಷ್ಟ ಕಷ್ಟ.

ವಿದ್ಯಾರ್ಥಿಗಳು : ಈ ವಾರ ಗಣಿತ ಕಬ್ಬಿಣದ ಕಡಲೆ ಆಗುತ್ತದೆ.
ಪರಿಹಾರ : ವಿಷ್ಣು ದೇಗುಲದಲ್ಲಿ ಪ್ರತಿದಿನ ತುಲಸಿ ಅರ್ಚನೆ ಮಾಡಿಸಿ.

ವೃಶ್ಚಿಕ

ಪುರುಷರು : ನಿಮ್ಮ ಕೆಲಸಗಲಷ್ಟೇ ಅಲ್ಲದೇ ಸನಿಹದ ಇತರರ ಕೆಲಸವೂ ನೀವೇ ಮಾಡಿ ಮುಗಿಸ ಬೇಕಾಗಬಹುದು.

ಸ್ತ್ರೀಯರು : ವಾರದ ಮೊದಲ ಕೆಲವು ದಿನಗಳು ವಿಶ್ರಾಂತಿ ಪಡೆಯಲು ಲಭಿಸುವುದಿಲ್ಲ, ಕೆಲಸದ ಒತ್ತಡಗಳು ಹೆಚ್ಚು ಇರುತ್ತದೆ.

ವಿದ್ಯಾರ್ಥಿಗಳು : ಒಂಟಿ ಪ್ರಯಾಣ ಈ ವಾರ ವರ್ಜಿಸಿ.
ಪರಿಹಾರ : ಈ ವಾರ ನೃಸಿಂಹ ದೇವರ ಸ್ತೊತ್ರಗಳನ್ನು ತಪ್ಪದೇ ಪಠಿಸಿ.

ಧನುಸ್ಸು

ಪುರುಷರು : ಈ ವಾರ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಅನಿಸುತ್ತದೆ ಎಂಬ ಮನಸ್ಥಿತಿ ಇರುತ್ತದೆ.

ಸ್ತ್ರೀಯರು : ತವರು ಮನೆಯಿಂದ ಲಾಭಗಳನ್ನು ಪಡೆಯಬಹುದು.

ವಿದ್ಯಾರ್ಥಿಗಳು : ಕಲಿಯಲು ಉತ್ತಮ ವಿಚಾರಗಳು ಈ ವರ ನಿಮಗೆ ಲಭಿಸಲಿದೆ.
ಪರಿಹಾರ : ಪ್ರತಿ ದಿನ ಶನಿ ಅಷ್ಟೋತ್ತರ ಪಠಿಸಿ.

ಮಕರ

ಪುರುಷರು : ಸರಕಾರಿ ಕೆಲಸಕ್ಕಾಗಿ ಓಡಾಟ ಈ ವಾರ ಹೆಚ್ಚು ಆಗಬಹುದು.

ಸ್ತ್ರೀಯರು : ಹೊಟ್ಟೆ ನೋವು ನಿಮ್ಮ ಈ ವಾರವನ್ನು ತಿಂದು ಹಾಕುವ ಸಾಧ್ಯತೆಗಳಿವೆ ದೂರ ಪ್ರಯಾಣ ವರ್ಜಿಸಿ.

ವಿದ್ಯಾರ್ಥಿಗಳು : ಹಿಂದೆಂದೋ ಮಾಡಿದ್ದ ತಪ್ಪಿನ ಶಿಕ್ಷೆ ಈ ವಾರ ನಿಮಗೆ ಬಿದ್ದಲ್ಲಿ ಆಶ್ಚರ್ಯವಿಲ್ಲ.
ಪರಿಹಾರ : ಪ್ರತಿ ದಿನ ಸೂರ್ಯ ಅಷ್ಟೊತ್ತರ ಪಠಿಸಿ ಸೋಮವಾರ ಸ್ವಲ್ಪ ಗೋಧಿ ದಾನ ಮಾಡಿ.

ಕುಂಭ

ಪುರುಷರು : ಪ್ರಮುಖವಾದ ಕೆಲಸಗಳಿಗೆ ಸ್ವಲ್ಪ ತಡೆ ಉಂಟಾಗಲಿದೆ ನೀವು ಬೇಡ ಅಂದುಕೊಂಡವರೇ ಅನಿವಾರ್ಯವಾಗಿ ಬೇಕಾಗುತ್ತಾರೆ.

ಸ್ತ್ರೀಯರು : ತಡೆದಷ್ಟೂ ಉಕ್ಕುವ ಕೆಲವು ಭಾವನೆಗಳು ನಿಮ್ಮ ಬಿಡದೇ ಕಾಡಲಿದೆ. ನಿಮ್ಮ ನಿಜವಾದ ಮಿತ್ರರನ್ನು ಗುರುತಿಸಿ ಸಹಾಯ ಮಾಡಲು ಅವರು ಸಿದ್ದರಾಗುತ್ತಾರೆ.

ವಿದ್ಯಾರ್ಥಿಗಳು : ಆರೋಗ್ಯ ಬಾಧೆಗಳಿಂದಾಗಿ ವಿದ್ಯೆಯತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗದು.
ಪರಿಹಾರ : ಶ್ರೀಕೃಷ್ಣ ದೇವರ ಆರಾಧನೆ ಮಾಡಿ ಕೃಷ್ಣಾಷ್ಟೋತ್ತರ ನಿತ್ಯ ಪಠಿಸಿ.

ಮೀನ

ಪುರುಷರು : ಮನಸನ್ನು ಸ್ವಲ್ಪ ವಿಶಾಲವಾಗಿಸಿ ಮಕ್ಕಳ ತಪ್ಪನ್ನು ಈ ವಾರ ಕ್ಷಮಿಸಿ. ಸಂತಸ ನಿಮ್ಮಲ್ಲಿಯೇ ಇರಲಿದೆ.

ಸ್ತ್ರೀಯರು : ಸಿಟ್ಟಿಗೆದ್ದು ಕೂಗಾಡಿ ರಂಪ ಮಾಡದೇ ಇದ್ದರೆ ಸಿಟ್ಟನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಈ ವಾರ ಎಲ್ಲೆಡೆಯಿಂದ ಪ್ರಶಂಸೆ ಸಿಗಲಿದೆ.

ವಿದ್ಯಾರ್ಥಿಗಳು : ಮನಸ್ಸನ್ನು ಏಕಾಗ್ರಗೊಳಿಸುವಲ್ಲಿ ಕಷ್ಟವಾಗುತ್ತದೆ ನಾ ನಾ ಕಡೆ ಮನಸ್ಸು ಹರಿಯುತ್ತದೆ.
ಪರಿಹಾರ : ಈ ವಾರ ಪ್ರತಿ ದಿನ ಲಲಿತಾ ಸಹಸ್ರನಾಮವನ್ನು ಶ್ರವಣ ಮಾಡಿ.

English summary
Read your Weekly forecast on the horoscope provided by Oneindia Kannada. We provide online free weekly prediction including your personal, professional and love life.
Please Wait while comments are loading...