ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು

ದೇವಿ ಲಕ್ಷ್ಮಿ ಕೃಪೆಯಾಗಲಿ. ದುಡಿದ ದುಡ್ಡಿ ಕೈಗೆ ಹತ್ತಲಿ ಎಂಬುದು ಹಲವರ ಆಶಯ. ಆದರೆ ಕೆಲ ಕಾರಣಗಳಿಗೆ ಅದು ಸಾಧ್ಯವಾಗುತ್ತಿರುವುದಿಲ್ಲ. ಜ್ಯೋತಿಷಿ ವಿಠ್ಠಲ ಭಟ್ ಅವರು ಲಕ್ಷ್ಮಿ ಅನುಗ್ರಹಕ್ಕಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ

Written by: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ಎಷ್ಟು ದುಡಿದರೂ ಹಣ ಕೈ ಹತ್ತುತ್ತಿಲ್ಲ. ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಹಲವರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಅದಕ್ಕೆ ಕಾರಣ ತಿಳಿಸುವುದು ಇಂದಿನ ಲೇಖನದ ಉದ್ದೇಶ. ಇದರ ಜೊತೆಗೆ ಹಣ ಕೈಯಲ್ಲಿ ಉಳಿಯಲು ಮನೆಯಲ್ಲಿ ಏನೇನು ಮಾಡಬಾರದು ಎಂದು ಕೂಡ ತಿಳಿಸಲಾಗುವುದು. ಅದನ್ನು ಅನುಸರಿಸಿದರೆ ಬಹುತೇಕ ಸಮಸ್ಯೆ ನಿವಾರಣೆ ಆದಂತೆಯೇ ಸರಿ.

ಇಲ್ಲಿ ತಿಳಿಸುವ ವಿಚಾರ ಮತ್ತು ಸಲಹೆಗಳಿಗೆ ಅದರದೇ ಪ್ರಾಮುಖ್ಯ ಇದೆ. ಅದರ ಹಿಂದೆ ನಮ್ಮ ಹಿರಿಯರು ನಂಬಿಕೊಂಡು ಬಂದಿರುವ ಆಚರಣೆಗಳಿವೆ. ಆದ್ದರಿಂದ ಇವುಗಳನ್ನು ಅನುಸರಿಸುವ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಸಾಗಬಹುದು. ಇಲ್ಲಿರುವ ಬಹುತೇಕ ಸಲಹೆಯನ್ನು ಯಾವುದೇ ದೊಡ್ಡ ಖರ್ಚಿಲ್ಲದೆ, ಏನೇನೂ ಶ್ರಮವಿಲ್ಲದೆ ಅನುಸರಿಸಬಹುದು.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಅಂದಹಾಗೆ, ಇನ್ನೊಂದು ಮಾತು. ಈ ಎಲ್ಲ ಸಲಹೆಗಳಿಂದ ಲಕ್ಷ್ಮಿ ಸ್ಥಿರವಾಗಿ ನಿಲ್ಲುವುದಕ್ಕೆ ಒಂದು ವೇದಿಕೆಯಂತೂ ಸಿದ್ಧವಾಗುತ್ತದೆ. ಇದರ ಜೊತೆಗೆ ಕೆಲವು ಸೂಕ್ತ ಪಾರಾಯಣ, ಪೂಜೆ-ಪುನಸ್ಕಾರಗಳಿಂದ ಮತ್ತಷ್ಟು ಲಕ್ಷ್ಮಿ ಕಟಾಕ್ಷವಾಗುತ್ತದೆ. ಅವುಗಳನ್ನೆಲ್ಲ ಮುಂದಿನ ಲೇಖನಗಳಲ್ಲಿ ತಿಳಿಸಲಾಗುವುದು. ಸದ್ಯಕ್ಕೆ ಪ್ರಾಥಮಿಕವಾಗಿ ಅನುಸರಿಸಬೇಕಾದ ವಿಚಾರಗಳನ್ನು ಗಮನಿಸಿ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಕನ್ನಡಿ ನೇತು ಹಾಕಿ

ಮನೆಯೊಳಗೊಂದು ಕನ್ನಡಿ ನೇತು ಹಾಕಿ. ಬಾಗಿಲಿಗೆ ನೇರವಾಗಿ ಕನ್ನಡಿ ನೇತುಹಾಕಿ. ಮನೆಯೊಳಗೆ ಪ್ರವೇಶಿಸಿದ ನಂತರ ಆ ಕನ್ನಡಿ ಕಾಣಿಸುವಂತಿರಬೇಕು..

ಮಂಗಳವಾರ-ಶುಕ್ರವಾರ ಹಣ ನೀಡಬೇಡಿ

ತೀರಾ ಅನಿವಾರ್ಯ ಅಲ್ಲದ ಹೊರತಾಗಿ ಮಂಗಳವಾರ ಇಡೀ ದಿನ ಹಾಗೂ ಶುಕ್ರವಾರ ಸೂರ್ಯಾಸ್ತದ ನಂತರ ಈ ವಿಚಾರದಲ್ಲಿ ಹಲವರು ವಾದ ಮಾಡಬಹುದು. ಪ್ರಾಣ ಹೋಗುವ ಸಂದರ್ಭದಲ್ಲೂ ನೀಡಬಾರದಾ ಎಂದು ಪ್ರಶ್ನಿಸಬಹುದು. ಆ ಕಾರಣಕ್ಕೆ ಹೇಳಿರುವುದು: ಅನಿವಾರ್ಯ ಸಂದರ್ಭಗಳು ಅಂತ.

ರಾತ್ರಿ ವೇಳೆ ಕಸ ಗುಡಿಸಬೇಡಿ

ಸಂಜೆಯ ನಂತರ ಮನೆಯೊಳಗೆ ಕಸ ಗುಡಿಸದಿರುವುದು ಒಳ್ಳೆಯದು. ಅದು ಕೂಡ ಅನಿವಾರ್ಯ ಪಕ್ಷದಲ್ಲಿ ಮಾಡಬೇಕಾದಾಗ ಗುಡಿಸಿದ ಕಸವನ್ನು ಮನೆಯಿಂದ ಆ ರಾತ್ರಿ ಮಟ್ಟಿಗಾದರೂ ಆಚೆ ಹಾಕಬೇಡಿ. ಮರು ದಿನ ಬೆಳಗ್ಗೆ ಈಚೆ ಹಾಕಿ.

ತಲೆ ಬಾಚಿದ ನಂತರ ಕೂದಲು ಹೊರಹಾಕಿ

ಹೆಣ್ಣುಮಕ್ಕಳು ತಲೆ ಬಾಚಿದ ನಂತರ ಉದುರಿದ ಕೂದಲನ್ನು ಬೆರಳೊಳಗೆ ಸುತ್ತಿ ಸುತ್ತಿ ಮನೆಯಲ್ಲೇ ಹಾಕುತ್ತಿರುತ್ತಾರೆ. ಈ ರೀತಿ ಮಾಡಕೂಡದು. ಎಲ್ಲ ಒಟ್ಟು ಸೇರಿಸಿ ಮನೆಯಿಂದ ಆಚೆ ಹಾಕಬೇಕು.

ಮಲಗುವುದು ನಿಷಿದ್ಧ

ಮುಸ್ಸಂಜೆ ಹೊತ್ತಿನಲ್ಲಿ ಮನೆಯಲ್ಲಿ ದೀಪ ಹಚ್ಚಿರಬೇಕು. ಅಥವಾ ಮನೆಯೊಳಗಿನ ಬಲ್ಬ್ ಹೊತ್ತಿರಬೇಕು. ತೀರಾ ಅನಾರೋಗ್ಯದ ಹೊರತಾಗಿ, ಅನಿವಾರ್ಯ ಸಂದರ್ಭದ ಹೊರತಾಗಿ ಮಲಗುವುದು ನಿಷಿದ್ಧ.

ಹಾಲು ಪಡೆದವರಿಗೆ, ಮೊಸರು ಕೊಟ್ಟವರಿಗೆ ಒಳ್ಳೆಯದಲ್ಲ

ಇನ್ನು ಸಂಜೆಯಾದ ನಂತರ ಕೆಲವರು ಹಾಲು, ಮೊಸರು ಎಂದು ಕೇಳಿಕೊಂಡು ಬರುತ್ತಾರೆ. ಮೊಸರು ಕೊಟ್ಟರೆ ಕೊಟ್ಟವರಿಗೆ ಕೇಡಾದರೆ, ಹಾಲು ಪಡೆದವರಿಗೆ ಒಳ್ಳೆಯದಾಗುವುದಿಲ್ಲ ಎಂಬುದು ಗಮನದಲ್ಲಿರಲಿ.

ಪಾದರಕ್ಷೆ ಧರಿಸಬಾರದು

ಮನೆಯೊಳಗೆ ಪಾದರಕ್ಷೆ ಧರಿಸಿ, ಓಡಾಡುವುದು ಉತ್ತಮವಲ್ಲ. ಅದು ಮನೆಯೊಳಗಷ್ಟೇ ಹಾಕಿಕೊಳ್ಳುತ್ತೇವೆ ಎಂಬ ಸಮರ್ಥನೆ ನೀಡುತ್ತಾರೆ. ಒಟ್ಟಾರೆ ಮನೆಯೊಳಗೆ ಪಾದರಕ್ಷೆ ಹಾಕಬಾರದು.

ಕೈ-ಕಾಲು ತೊಳೆಯಿರಿ

ಹೊರಗಿಂದ ಮನೆಯೊಳಗೆ ಬರುವವರು ಕಡ್ಡಾಯವಾಗಿ ಕೈ-ಕಾಲು ತೊಳೆಯಲೇಬೇಕು. ಇನ್ನು ಶೌಚಾಲಯಕ್ಕೆ ಹೋದ ನಂತರ ಕೂಡ ಕೈ ಕಾಲು ತೊಳೆದು, ಕಣ್ಣಿಗೆ ನೀರು ಹಚ್ಚಿಕೊಳ್ಳಬೇಕು.

English summary
How to get Godess Lakshmi blessings? Here some of the tips by Astrologer Pandit Vittal Bhat.
Please Wait while comments are loading...