ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಖ್ಯೆ 4: ಗೆಲ್ಲಲು ನಿರ್ಧರಿಸಿದರೆ ಇವರನ್ನ ತಡೆಯೋರು ಯಾರು?

|
Google Oneindia Kannada News

ಯಾವುದೇ ತಿಂಗಳ 4, 13, 22, 31ನೇ ತಾರೀಕಿನಲ್ಲಿ ಹುಟ್ಟಿದವರ ಸಂಖ್ಯೆ 4 ಆಗುತ್ತದೆ. ಪೈಥಾಗೊರಸ್ ಪ್ರಕಾರ ಇದು ತುಂಬ ಗಟ್ಟಿಯಾದ ತಳಪಾಯವಿರುವ ಸಂಖ್ಯೆ. ಈ ಸಂಖ್ಯೆಯವರ ಗುಣ, ವಿಶೇಷ, ನಡವಳಿಕೆ, ಶಕ್ತಿ ಹಾಗೂ ದೌರ್ಬಲ್ಯಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಈ ಸಂಖ್ಯೆಯಲ್ಲಿ ಹುಟ್ಟಿದವರು ತಾವು ನಂಬಿದ ತತ್ವ, ಸಿದ್ಧಾಂತವನ್ನು ಯಾವ ಕಾರಣಕ್ಕೂ ಬಿಟ್ಟುಕೊಡುವವರಲ್ಲ. ವೃತ್ತಿ ಜೀವನದ ಬಗ್ಗೆ ಇವರಷ್ಟು ಗಂಭೀರವಾಗಿ ಯೋಚನೆ ಮಾಡುವವರು ಸಿಗಲ್ಲ. ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಲು ಇವರಿಗೆ ಸದಾ ತುಡಿತವಿರುತ್ತದೆ. ಅದರೆ ಇವರೊಂಥರ ಪಟಾಕಿ ಥರ. ಯಾವಾಗ 'ಸಿಡಿಯುತ್ತಾರೋ' ಹೇಳೋದು ಕಷ್ಟ. ಆದ್ದರಿಂದ ಎಷ್ಟೇ ಗಟ್ಟಿ ತಳಪಾಯವಿದ್ದರೂ ಒತ್ತಡ ಬಿದ್ದರೆ ಉಳಿಯೋದು ಸಾಧ್ಯವಿಲ್ಲ.[ಹನ್ನೆರಡು ರಾಶಿಗಳ ಗುಣ-ಸ್ವಭಾವ ಹೇಗಿರುತ್ತದೆ ಗೊತ್ತಾ?]

ನಾಲ್ಕನೇ ಸಂಖ್ಯೆಯವರು ಸಿಕ್ಕಾಪಟ್ಟೆ ಮೌನವಾಗಿದ್ದಾರೆ ಅಂದರೆ ಇನ್ನೇನು ಸಿಟ್ಟು ಸ್ಫೋಟವಾಗುತ್ತೆ ಅಂತಲೇ ಅರ್ಥ. ತುಂಬ ಉದ್ವಿಗ್ನ ಆದ ಸಮಯದಲ್ಲಿ ಅವರಿಗೆ ಸುಮ್ಮನಿರುವುದೇ ಉತ್ತಮ ಅನ್ನಿಸಿ, ಹಾಗಿರುತ್ತಾರೆ. ದೈಹಿಕವಾಗಿ ತುಂಬ ಗಟ್ಟಿಯಾಗಿರುವ ಇವರು, ತಿಳಿವಳಿಕೆ, ಬುದ್ಧಿವಂತಿಕೆ ವಿಷಯದಲ್ಲೂ ಅಷ್ಟೇ ಗಟ್ಟಿ. ಅವರಂಥ ಪ್ರಾಮಾಣಿಕ ನೌಕರರು ಸಿಗಲ್ಲ. ಹಾಗಂತ ಸುಮ್ಮನೆ ತಲೆಬಾಗಿಸಿ, ಹಿಂಬಾಲಿಸೋ ಜನರಲ್ಲ ಇವರು. ಜತೆಗೆ ಸಂಖ್ಯೆ ನಾಲ್ಕಕ್ಕೆ ಸಿಕ್ಸ್ತ್ ಸೆನ್ಸ್ ತುಂಬ ಚೆನ್ನಾಗಿ ಕೆಲಸ ಮಾಡುತ್ತೆ.

Number 4

ಕಾಲಿಪೀಲಿ ಹರಟೆ ಹೊಡೆಯೋದು ಅಷ್ಟಾಗಿ ಇಷ್ಟಪಡದ ಇವರು, ತಮಗೆ ಬೇಕಾದ ವಿಷಯ, ವಿಚಾರಗಳಿಗಷ್ಟೇ ಪ್ರಾಶಸ್ತ್ಯ ನೀಡ್ತಾರೆ. ಸ್ನೇಹಿತರು ವಿಚಾರದಲ್ಲೂ ಅಷ್ಟೇ, ಇವರ ಆಲೋಚನೆ, ವಿಚಾರಕ್ಕೆ ಹತ್ತಿರವಾದವರ ಗುಂಪೇ ಈ ಸಂಖ್ಯೆಯವರ ಸ್ನೇಹವಲಯದಲ್ಲಿರುತ್ತದೆ. ಸಂಬಂಧಿಕರೋ ಸ್ನೇಹಿತರೋ ಯಾರೇ ಆಗಿರಲಿ, ಇಷ್ಟವಿಲ್ಲ ಅನ್ನಿಸಿದರೆ ಅವರತ್ತ ಈ ನಾಲ್ಕು ತಿರುಗಿ ಕೂಡ ನೋಡಲ್ಲ. ಅಂದರೆ, ಯಾರಾದರೂ ಸಮಯಕ್ಕೆ ಬೇಕಾಗ್ತಾರೆ, ಸುಮ್ಮನೆ ಆದರೂ ಚೆನ್ನಾಗಿರೋಣ ಅಂದುಕೊಳ್ಳುವ ಪೈಕಿ ಇವರಲ್ಲ.[ಸಂಖ್ಯಾಶಾಸ್ತ್ರ: 3ರ ಸಂಖ್ಯೆಯವರ ಮ್ಯಾಜಿಕ್ ಏನು ಗೊತ್ತಾ?]

ಪ್ರೀತಿಯನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳುವ ಇವರ ಹತ್ತಿರ ಈ ವಿಚಾರದಲ್ಲಿ ತಮಾಷೆ ಮಾಡಲೇ ಕೂಡದು. 'ನಾನಷ್ಟೇ ಸತ್ಯ ಹೇಳೋದು, ಅದು ನನ್ನ ಹಕ್ಕು' ಎಂಬ ಧೋರಣೆಯನ್ನು ಇವರು ಬಿಡಬೇಕು. ಅಂದಹಾಗೆ, ಸನ್ನಿವೇಶದಿಂದ ಸನ್ನಿವೇಶಕ್ಕೆ ಇವರು ನಡೆದುಕೊಳ್ಳುವ ರೀತಿಯೇ ಭಿನ್ನವಾಗಿರುತ್ತದೆ. ಬಹಳ ಯೋಚನೆ ಮಾಡೋ ಇವರು ತಮ್ಮ ಮನಸ್ಸಿನಲ್ಲಿ ಇರೋದನ್ನು ಅಷ್ಟು ಸಲೀಸಾಗಿ ಹಂಚಿಕೊಳ್ಳೋರಲ್ಲ.

ತಮ್ಮ ಬಗ್ಗೆ ಟೀಕೆ-ಟಿಪ್ಪಣಿ ಮಾಡೋದರಲ್ಲೂ ಅಷ್ಟೇ ಕಠಿಣವಾಗಿ ಯೋಚಿಸುವ ಜನ ಇವರು. ಕೆಲವರು ಮಾತನಾಡುತ್ತಲೇ ಎಲ್ಲವನ್ನೂ ಮರೆಮಾಚುತ್ತಾರೆ. ಈ ಸಂಖ್ಯೆಯವರಲ್ಲಿ ನಾಯಕತ್ವದ ಗುಣ ಸಹಜವಾಗಿಯೇ ಬಂದಿರುತ್ತದೆ. ಆದರೆ ವಿಚಿತ್ರ ಏನು ಗೊತ್ತಾ, ತಮ್ಮ ಜತೆಗೆ ಕೆಲಸ ಮಾಡುವವರನ್ನು ಯಾವ ವಿಚಾರದಲ್ಲೂ ಇವರು ಬಲವಂತ ಮಾಡೋದಿಲ್ಲ. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಹಾಗೂ ತಿದ್ದಿಕೊಳ್ಳುವ ಇವರ ಗುಣ ದೊಡ್ಡ ಯಶಸ್ಸು ದೊರೆಯುವಂತೆ ಮಾಡುತ್ತವೆ.[ಸಂಖ್ಯಾಶಾಸ್ತ್ರ: 2ನೇ ಸಂಖ್ಯೆಯಲ್ಲಿ ಹುಟ್ಟಿದವರ ಮಾತು ಚಂದ]

Sardar Patel

ಗೆಲ್ಲಬೇಕು ಎಂಬುದು ಮನಸ್ಸು ಹೊಕ್ಕುಬಿಟ್ಟರೆ ಅದೆಂಥ ವಾತಾವರಣ, ಸನ್ನಿವೇಶವೂ ಇವರನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಇವರ ಕೆಲಸದ ಮೇಲಿನ ಪ್ರೀತಿಯು ಅದೆಂಥ ಸವಾಲನ್ನು ಮೀರಿಯೂ ಗೆಲುವು ಪಡೆಯಲು ಸಹಕರಿಸುತ್ತದೆ. ಈ ಸಂಖ್ಯೆಯವರ ಅಧಿಪತಿ ರಾಹು.[ಸಂಖ್ಯಾಶಾಸ್ತ್ರ: ಧೀರೂಭಾಯಿ ಅಂಬಾನಿ ಹುಟ್ಟಿದ್ದೂ 1ನೇ ತಾರೀಕು]

1,4,6ರ ಸಂಖ್ಯೆಯಲ್ಲಿ ಹುಟ್ಟಿದವರು ಒಳ್ಳೆ ಬಿಜಿನೆಸ್ ಪಾರ್ಟನರ್ ಆಗ್ತಾರೆ.
1,4,6,8ರ ಸಂಖ್ಯೆಯಲ್ಲಿ ಹುಟ್ಟಿದವರ ಜೊತೆ ಮದುವೆಯಾದರೆ ಹೊಂದಾಣಿಕೆ ಚೆನ್ನಾಗಿರತ್ತೆ.

ನಂಬರ್ 3ರಲ್ಲಿ ಹುಟ್ಟಿದವರು- ಸರ್ದಾರ್ ವಲ್ಲಭ ಭಾಯ್ ಪಟೇಲ್, ಶ್ರೀನಿವಾಸ ರಾಮಾನುಜನ್, ಜಾರ್ಜ್ ವಾಷಿಂಗ್ಟನ್, ಸರೋಜಿನಿ ನಾಯ್ಡು, ಮೈಕೆಲ್ ಫ್ಯಾರಡೆ

ಶುಭ ದಿನ: ಭಾನುವಾರ, ಸೋಮವಾರ. ಶನಿವಾರ

ಶುಭ ಬಣ್ಣ: ನೀಲಿ, ಬಿಳಿ, ಬೂದು

ಶುಭ ದಿನಾಂಕ: 1,2,7,10,11,16,19,20,28,29

ಶುಭ ರತ್ನ: ನೀಲ

English summary
People who are born on 4, 13, 22, 31st of any month, they are ruled by planet Rahu. Their nature, characteristics, traits explained here. Compatibility for marriage, business, lucky stone also explained in this article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X