ಕನ್ಯಾ : ಸಮಯಾವಕಾಶ ಲಭಿಸದೆ ಪರಿತಪಿಸುತ್ತೀರಿ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ಈ ತಿಂಗಳಿನಲ್ಲಿ ನಿಮಗೆ ಬಿಡುವಿಲ್ಲದ ಕೆಲಸಗಳು ಬರುತ್ತವೆ. ನೀವು ಏನೋ ಮಾಡಬೇಕು ಎಂದು ಅಂದುಕೊಂಡಿರುತ್ತೀರಿ. ಆದರೆ ಅವೆಲ್ಲ ಮಾಡಲು ಮಾತ್ರ ಸಮಯಾವಕಾಶ ಲಭಿಸದೆ ಪರಿತಪಿಸುತ್ತೀರಿ. ಈ ತಿಂಗಳ ಮೊದಲಾರ್ಧ ಭಾಗದಲ್ಲಿ ಮಾತ್ರ ನಿಮ್ಮ ಸ್ನೇಹಿತ ಅಥವಾ ಬಾಳಸಂಗಾತಿಯೊಂದಿಗೆ ಚಿಕ್ಕ- ಪುಟ್ಟ ಮನಸ್ತಾಪಗಳು ಬರಬಹುದು. ಪಾರ್ಟನರ್ ಶಿಪ್ ನಲ್ಲಿ ವ್ಯಾಪಾರ ಮಾಡುತ್ತಿರುವವರಿಗೂ ಅಭಿಪ್ರಾಯ ಭೇದಗಳು ಹಾಗೂ ಹಣದ ವಿಚಾರದಲ್ಲಿ ಕಿತ್ತಾಟಗಳು ಆಗುತ್ತವೆ. ತಿಂಗಳಾಂತ್ಯ ಸಮಯ ಇನ್ನೂ ಹೆಚ್ಚಾಗಬಹುದು ಆದುದರಿಂದ ಈ ತಿಂಗಳು ಆದಷ್ಟು ಜಾಗ್ರತೆ ವಹಿಸಬೇಕಾಗುತ್ತದೆ. ಜಮೀನು ತಕರಾರು ವಿಚಾರಗಳಲ್ಲಿ ಇದ್ದವರು ಸ್ವಲ್ಪ ಎಚ್ಚರದಿಂದಿರಿ. ಯಾವುದೇ ಕಾರಣಕ್ಕೂ ಜಗಳ ಹಾಗೂ ಮನಸ್ತಾಪ ಮಾಡಿಕೊಳ್ಳಬೇಡಿ. ನಿಮ್ಮ ಸಹೋದರರು ವಿಚಿತ್ರ ಬೇಡಿಕೆಗಳನ್ನು ಇಡಬಹುದು. ನಿಮ್ಮ ಕೈಯಲ್ಲಿ ಎಷ್ಟು ಆಗುತ್ತದೋ ಅಷ್ಟು ಮಾತ್ರ ಕೆಲಸ ಮಾಡಿಕೊಡುವುದಾಗಿ ಒಪ್ಪಿಕೊಳ್ಳಿ. ಹಾಸಿಗೆ ಹಾಗೂ ಇದ್ದಷ್ಟೇ ಕಾಲು ಚಾಚಿ

Virgo Monthly Horoscope

ಸ್ತ್ರೀಯರು: ನಿಮ್ಮ ಸಂಸಾರದಲ್ಲಿ ಹುಳಿ ಹಿಂಡುವವರಿಗೆ ಈ ತಿಂಗಳು ಏನೂ ಕಡಿಮೆ ಇರೋದಿಲ್ಲ. ನಿಮ್ಮ ಸುಖ ದಾಂಪತ್ಯಕ್ಕೆ ಈ ತಿಂಗಳು ದೃಷ್ಟಿ ತಗಲುವ ಭಯವಿದೆ. ಇನ್ನು ಬಾಳ ಸಂಗಾತಿ ನಿಮಗೆ ಕೊಡಿಸಿದ ವಸ್ತುಗಳ ಪ್ರಚಾರ ಮಾಡದೇ ಇದ್ದಲ್ಲಿ ತಕ್ಕ ಮಟ್ಟಿಗೆ ಈ ಸಮಸ್ಯೆಯಿಂದ ಹೊರ ಬರಬಹುದು. ನಿಮ್ಮ ಅಡುಗೆ ಈ ತಿಂಗಳು ಹಿಡಿಸುವುದಿಲ್ಲ. ನಿಮ್ಮ ಮಾತುಗಳು ಕಹಿ ಅನಿಸುತ್ತದೆ ಆದೆಲ್ಲ ನಿಮಗೆ ಮಾನಸಿಕವಾಗಿ ನೋವು ಕೊಡಬಹುದು. ಆದರೆ ಇದೆಲ್ಲ ಸ್ವಲ್ಪ ಅಂದರೆ ಒಂದು ತಿಂಗಳು ಮಾತ್ರ. ನಿಮ್ಮ ನೆನಪಿನಲ್ಲಿ ಇದ್ದರೆ ಅಷ್ಟೇ ಸಾಕು. ತವರು ಮನೆಯಲ್ಲಿ ನಿಮ್ಮ ಸಹೋದರ ಸಹಕಾರ ನೀಡುತ್ತಾರೆ. ಅಣ್ಣ ನಮ್ಮವನೇ ಆದರೂ ಅತ್ತಿಗೆ? ಹೀಗೆ ಕೆಲ ವಿಚಾರಗಳು ನಿಮಗೆ ಈ ತಿಂಗಳು ಬಿಸಿ ತುಪ್ಪದಂತೆ ಉಗುಳಲೂ ಆಗದೇ ನುಂಗಲೂ ಆಗದ ಸ್ಥಿತಿ. ನೀವು ಈ ತಿಂಗಳು ಮಾತು ಕಡಿಮೆ ಮಾಡಿ. ವಿಚಾರಗಳನ್ನು ಅಲ್ಲಿಂದ ಅಲ್ಲಿಗೇ ಬಿಟ್ಟು ಬಿಡಿ. ಒಬ್ಬರ ಸಮಸ್ಯೆಯನ್ನು ಇನ್ನೊಬ್ಬರ ಹತ್ತಿರ ಚರ್ಚಿಸಬೇಡಿ.

ವಿದ್ಯಾರ್ಥಿಗಳು: ನಾಚಿಕೆ ನಿಮ್ಮನ್ನು ಈ ತಿಂಗಳು ಸಮಸ್ಯೆಗೆ ಅಥವಾ ನಷ್ಟಕ್ಕೆ ದೂಡಬಹುದು. ನಿಮ್ಮ ಹಕ್ಕನ್ನು ಬಾಯಿ ಬಿಟ್ಟು ಕೇಳಬೇಕು

ಪರಿಹಾರ: ಈ ತಿಂಗಳು ಪ್ರತೀ ದಿನ ಒಂದು ಹಸುವಿಗೆ ಬಾಳೆ ಹಣ್ಣು ಅಥವಾ ಅಕ್ಕಿ- ಬೆಲ್ಲ ತಿನ್ನಿಸಿ

English summary
Get the complete month predictions of Aprill 2017. Read monthly horoscope of Virgo in Kannada. Get free monthly horoscope, astrology and monthly predictions in Kannada.
Please Wait while comments are loading...