ವೃಷಭ : ತಿಂಗಳ ಮಧ್ಯಭಾಗದ ನಂತರ ದೂರ ಪ್ರಯಾಣ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ. ಮದುವೆ ಮಾತುಕತೆ ನೆರವೇರುವುದು. ಕೆಲವರಿಗೆ ಇದೇ ತಿಂಗಳು ವಿವಾಹ ಸಹ ಸಂಪನ್ನವಾಗುವುದು. ವ್ಯಾಪಾರಿಗಳಿಗೆ ಉತ್ತಮ ಧನ ಲಾಭ ಕಂಡುಬರುತ್ತಿದೆ. ಆದರೆ ಒಂದು ಸಾಲದ ಹೆಸರಿನಲ್ಲಿ ನಿಮ್ಮ ವಸ್ತುಗಳನ್ನು ಮಾರಾಟ ಮಾಡುವಾಗ ಅದಕ್ಕೆ ಮಿತಿ ಇರಲಿ.

ದುಡ್ಡಿನ ಮರುಪಾವತಿ ವಿಚಾರದಲ್ಲಿ ಖಚಿತ ಮಾಡಿಕೊಳ್ಳಿ. ಹೊಸ ಸ್ನೇಹಿತರೊಂದಿಗೆ ಪ್ರಾರಂಭ ಮಾಡಬೇಕೆಂದಿರುವ ವ್ಯವಹಾರಗಳ ವಿಚಾರದಲ್ಲಿ ಒಮ್ಮೆ ನಿಮ್ಮ ಜಾತಕವನ್ನು ಪರಿಶೀಲಿಸಿ. ನಂತರ ಮುಂದುವರಿಯಿರಿ.

ಇನ್ನು ತಿಂಗಳ ಮಧ್ಯಭಾಗದ ನಂತರ ದೂರ ಪ್ರಯಾಣಗಳು ಕಂಡು ಬರುತ್ತಿವೆ. ಖರ್ಚು ಸಹ ತುಸು ಹೆಚ್ಚಾಗಿ ಕಂಡುಬರುತ್ತಿದೆ. ಯಾರದೋ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಬಹುದು. ನೂತನ ವಿಚಾರ, ಪರಿಸ್ಥಿತಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ಸಂತಾನ ಅಪೇಕ್ಷಿಗಳಿಗೆ ವರವಾಗಬಹುದು.

Taurus Monthly Horoscope

ನ್ಯಾಯಾಲಯದ ಮೆಟ್ಟಿಲು ಹೊಸದಾಗಿ ಹತ್ತುವ ಪರಿಸ್ಥಿತಿ ಬರದಂತೆ ಎಚ್ಚರ ವಹಿಸಿ. ಇದೇ ಮಾಸಾಂತ್ಯದ ಸಮಯದಲ್ಲಿ ತಾಯಿಗೆ ಆರೋಗ್ಯ ಹಾಳಾಗಬಹುದು. ಆ ವಿಚಾರದಲ್ಲಿ ಎಚ್ಚರ ವಹಿಸಿ. ನಿಮ್ಮ ಶಕ್ತಿ ಅಥವಾ ಯುಕ್ತಿಯನ್ನು ಪ್ರದರ್ಶಿಸಲು ನಿಮಗೆ ಉತ್ತಮ ಅವಕಾಶಗಳು ಲಭಿಸುತ್ತವೆ.

ಸ್ತ್ರೀಯರು: ಮನೆಯಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ನಿಮ್ಮ ಸ್ನೇಹಿತೆಯರಿಗೆ ನಿಮ್ಮ ಆವಶ್ಯಕತೆ ಹೆಚ್ಚಾಗುತ್ತದೆ. ವಸ್ತ್ರ ವಿನ್ಯಾಸಕರಿಗೆ ನಿಮ್ಮ ನೂತನ ವಿನ್ಯಾಸಗಳು ಹೆಚ್ಚು ಜನರನ್ನು ಆಕರ್ಷಿಸಿ ಹೆಚ್ಚಿನ ಕೀರ್ತಿ ತಂದುಕೊಡುತ್ತದೆ. ಗೃಹಿಣಿಯರಿಗೆ ನಿಮ್ಮ ಮಕ್ಕಳ ಸಹಕಾರ ಈ ತಿಂಗಳು ಹೆಚ್ಚು ಲಭಿಸುವುದಿಲ್ಲ. ಅವರೊಂದಿಗೆ ಚಿಕ್ಕದಾಗಿ ಕಲಹ ಸಹ ಮಾಡುತ್ತೀರಿ. ಮನೆಯ ಆರ್ಥಿಕ ವಿಚಾರಗಳಲ್ಲಿ ನೀವು ಉಳಿತಾಯ ಮಾಡುವ ಮೂಲಕ ಸಹಕರಿಸಿದರೆ ಅಷ್ಟೇ ಸಾಕು. ಅದನ್ನೂ ಮೀರಿ ಮನೆಯವರಿಗೆ ಗೊತ್ತಿರದಂತೆ ಲಾಭದ ಆಸೆಗೆ ಬಿದ್ದು, ಬಡ್ಡಿಗೆ ಸಾಲ ಕೊಡಲು ಮಾತ್ರ ಹೋಗದಿರಿ.

ವಿದ್ಯಾರ್ಥಿಗಳು: ಈ ತಿಂಗಳು ನಿಮಗೆ ಸ್ವಲ್ಪ ಹಿನ್ನಡೆ ಆಗಲಿದೆ. ಆದರೆ ಅದು ತಾತ್ಕಾಲಿಕ ಎಂದು ನೀವು ನೆನಪಿನಲ್ಲಿ ಇಟ್ಟುಕೊಂಡರೆ ಸಾಕು. ಈ ತಿಂಗಳು ನೀವು ಮಾತು ಕಡಿಮೆ ಮೌನ ಜಾಸ್ತಿ ಮಾಡಿ. ಜವಾಬ್ದಾರಿಗಳನ್ನು ಹೊರುವುದು ಬೇಡ. ಓದಿಕೊಂಡಿದ್ದನ್ನು ಮರೆತು ಹೋಗುವುದು ಈ ತಿಂಗಳ ನಿಮ್ಮ ಬಹು ದೊಡ್ಡ ಸಮಸ್ಯೆ. ಸಾಧ್ಯವಾದಲ್ಲಿ ಪ್ರತೀ ದಿನ ಅರ್ಧಗಂಟೆ ಧ್ಯಾನ ಮಾಡಿ.

ಪರಿಹಾರ: ಈ ತಿಂಗಳಿನಲ್ಲಿ ಬರುವ ಪ್ರತೀ ಬುಧವಾರ ಮಹಾ ವಿಷ್ಣು ದೇಗುಲದಲ್ಲಿ ಸ್ವಲ್ಪ ಹೆಸರು ಕಾಳು ದಾನ ಮಾಡಿ,

English summary
Get the complete month predictions of May 2017. Read monthly horoscope of Taurus in Kannada. Get free monthly horoscope, astrology and monthly predictions in Kannada.
Please Wait while comments are loading...