ವೃಶ್ಚಿಕ ಮಾರ್ಚ್ ಭವಿಷ್ಯ : ಮನಸ್ತಾಪದಿಂದ ದೂರವಿರಿ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರಿಗೆ:- ಪ್ರೇಮಿಗಳಿಗೆ ಉತ್ತಮ ಸಮಯ. ಅವಿವಾಹಿತರಿಗೆ ಇದ್ದಕಿದ್ದಂತೆ ಈ ತಿಂಗಳಿನಲ್ಲಿ ಹೆಚ್ಚು ಹೆಚ್ಚು ಮದುವೆಯ ಪ್ರಸ್ತಾಪಗಳು ಬರಲು ಪ್ರಾರಂಬಿಸುತ್ತವೆ. ದೂರ ಪ್ರಯಾಣಗಳಿಂದ ಉತ್ತಮ ಲಾಭಗಳಿವೆ. ದಿವ್ಯ ಕ್ಷೇತ್ರ ದರ್ಶನ ಯೋಗಗಳು ಸಹ ಕಂಡು ಬರುತ್ತಿದೆ. ಸ್ತ್ರೀಯರ ಮುಖಾಂತರ ಮಾಡುವ ವ್ಯವಹಾರಗಳಲ್ಲಿ ಯಶಸ್ಸು ಕಾಣುತ್ತಿದೆ. ತಿಂಗಳಾಂತ್ಯಕ್ಕೆ ಸರಿದಂತೆ ಭುಮಿ ವ್ಯವಹಾರ ಮಾಡುವವರಿಗೆ ಲಾಭದ ಸಮಯ, ಅಧ್ಯಾಪಕ ವೃತ್ತಿಯಲ್ಲಿ ಇರುವವರಿಗೆ ಸಂಬಳ ಹೆಚ್ಚಳ ಇತ್ಯಾದಿ ಮಾರ್ಗಗಳಿಂದ ಧನ ಲಾಭ. ಇನ್ನೊಬ್ಬರ ಒಟ್ಟಿಗೆ ಸೇರಿ ಮಾಡುತ್ತಿರುವ ವ್ಯಾಪಾರದಲ್ಲಿ ಲಾಭದ ಪ್ರಮಾಣ ಸ್ವಲ್ಪ ತಗ್ಗುವ ಸಾಧ್ಯತೆಗಳು ಕಾಣುತ್ತಿದೆ. ಆದರೆ ಹೊಸ ಹೊಸ ವ್ಯಾಪಾರ ವಿಚಾರಗಳ ಮಾಹಿತಿ ನಾವೂ ಸಹ ಆ ವ್ಯಾಪಾರವನ್ನು ಮಾಡೋಣ ಎಂಬ ಸಲಹೆ ಸೂಚನೆಗಳು ಲಭಿಸುತ್ತದೆ. ವಿದೇಶ ಪ್ರಯಾಣದ ಕನಸು ಅಥವಾ ಆಸೆ ಹೊತ್ತಿರುವವರು ಈ ತಿಂಗಳಿನಲ್ಲಿ ಪ್ರಯತ್ನಿಸಿದರೆ ಯಶಸ್ಸು ಸಿಗಬಹುದು.

ಸ್ತ್ರೀಯರಿಗೆ:- ಹೆಣ್ಣು ಹೆತ್ತವರಿಗೆ ಸಂಭ್ರಮದ ಸಮಯ. ತವರು ಮನೆಯಿಂದ ಸಹ ಸಂತಸದ ಸುದ್ದಿಗಳು ಬರುವ ನಿರೀಕ್ಷೆಗಳಿವೆ. ಆದರೆ ತಿಂಗಳಾಂತ್ಯದಲ್ಲಿ ಮಾತ್ರ ಸಹೋದರೊಂದಿಗೆ ಚಿಕ್ಕದಾಗಿ ಮನಸ್ತಾಪ ಆಗುವ ಸಾಧ್ಯತೆಗಳಿವೆ. ಇನ್ನೊಂದು ಸ್ತ್ರೀಗೆ ಸಂಬಂಧಿತವಾದ ಯಾವುದೇ ಮನಸ್ತಾಪಗಳು ಅಥವಾ ಜಗಳಗಳು ಬಂದರೂ ಸಹ ಅದನ್ನು ಮುಂದು ವರಿಸದೇ ಅಲ್ಲಿಗೇ ಬಿಟ್ಟು ಬಿಡುವುದು ಲೇಸು. ನಿಮ್ಮ ಮಾತುಗಳಿಂದ ಇತರರ ಮನಸ್ಸಿಗೆ ಬೇಸರ ಆಗಬಹುದು. ಆದುದರಿಂದ ಮಾತನಾಡುವಾಗ ಎಚ್ಚರವಹಿಸಿ. ಹೊಸ ಅಥವಾ ಪರಿಚಯವೇ ಇಲ್ಲದ ಜನರೊಂದಿಗೆ ವ್ಯವಹಾರಗಳು ಬೇಡ. ಆಕಸ್ಮಿಕ ಧನ ಲಾಭ ಬೇಕು ಎಂದಾದಲ್ಲಿ ತಿಂಗಳಾಂತ್ಯದಲ್ಲಿ ಸ್ವಲ್ಪ ಸಾಧ್ಯತೆಗಳಿವೆ.

Scorpio monthly horoscope

ವಿದ್ಯಾರ್ಥಿಗಳಿಗೆ:- ಇತರರು ಮಾಡಿದ ತಪ್ಪುಗಳನ್ನು ನಿಮ್ಮ ಮೇಲೆ ಹಾಕುವ ಸಾಧ್ಯತೆಗಳಿವೆ. ಆಟ ಆಡ ಬೇಕಾದರೆ ಬೆನ್ನು ಅಥವಾ ಕಾಲಿಗೆ ಈ ತಿಂಗಳು ನೋವು ಮಾಡಿಕೊಳ್ಳುತ್ತೀರ ಎಚ್ಚರ. ತಿಂಗಳ ಮಧ್ಯ ಅಥವಾ ಅಂತ್ಯ ಭಗದಲ್ಲಿ ಓದಿ ಮುಗಿಸಬೇಕು ಎಂದುಕೊಂಡಿದ್ದ ವಿಷಯಗಳು ಆ ಸಮಯದಲ್ಲಿ ನಿಮ್ಮ ಮನೆಗೆ ದೂರದ ನೆಂಟ್ರಿಷ್ಟರ ಆಗಮನದಿಂದ ಸರಿಯಾಗಿ ಓದಲಾಗದೇ ಪಶ್ಚಾತಾಪ. ಆದರೆ ನಿಮ್ಮ ಮನಸ್ಸಿಗೆ ಮುದ ನೀಡುವ ಉಡುಗೋರೆಗಳು ಈ ತಿಂಗಳು ನಿಮಗೆ ಲಭ್ಯವಾಗಲಿವೆ.

ಪರಿಹಾರ:- ಮನೆಯ ಹತ್ತಿರ ಇರುವ ಮಹಾವಿಷ್ಣು ದೇಗುಲದಲ್ಲಿ ದೇವರ ಎದುರು ಇರುವ ಗರುಡ ಮೂರ್ತಿಗೆ ಬುಧವಾರದಂದು ಪೂಜೆ ಮಾಡಿಸಿ.

English summary
Get the complete month predictions of February 2017. Read monthly horoscope of Scorpio in Kannada. Get free monthly horoscope, astrology and monthly predictions in Kannada.
Please Wait while comments are loading...