ಧನು: ಆಲಸ್ಯ ಬಿಟ್ಟು ಮುನ್ನುಗ್ಗಿದರೆ ಕೆಲಸವಾಗುತ್ತದೆ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ಈ ತಿಂಗಳು ನಿಮಗೆ ಆಲಸ್ಯ ಅಥವಾ ಅನಾರೋಗ್ಯ ಹೆಚ್ಚಾಗಿ ಕೆಲಸ-ಕಾರ್ಯಗಳು ಮಾಡಲು ಆಗುವುದಿಲ್ಲ. ಆದರೆ ಅಂಥ ಸಂದರ್ಭದಲ್ಲಿ ನಿಮ್ಮ ಮಕ್ಕಳ ಸಹಾಯ- ಸಹಕಾರ ಅದೃಷ್ಟದಂತೆ ಲಭಿಸುತ್ತದೆ. ನಿರುದ್ಯೋಗಿಗಳು ಈ ತಿಂಗಳ ಮಧ್ಯಭಾಗದ ನಂತರ ಪ್ರಯತ್ನಿಸಿದರೆ ಕೆಲಸ ಸಿಗಬಹುದು. ಆದರೆ ನಿರುತ್ಸಾಹದಿಂದ ಆಲಸ್ಯದಿಂದ ಮನೆಯಲ್ಲಿಯೇ ಕುಳಿತರೆ ಕೆಲಸ ನಿಮ್ಮನ್ನು ಹುಡುಕುತ್ತ ಮನೆ ಬಾಗಿಲಿಗೆ ಬರುವುದಿಲ್ಲ, ನೆನಪಿಡಿ. ನಿಮ್ಮಿಂದ ಸ್ನೇಹಿತರಿಗೂ ಈ ತಿಂಗಳು ಧನ ಸಹಾಯ ಅಥವಾ ನಿಮ್ಮ ಹೆಸರನ್ನು ತಮ್ಮ ಕೆಲಸಗಳಿಗೆ ಅವರು ಬಳಸಿಕೊಳ್ಳುತ್ತಾರೆ. ಬಾಳಸಂಗಾತಿ ಬೇಸರ ಮಾಡಿಕೊಂಡಿದ್ದಲ್ಲಿ ತಿಂಗಳ ಮಧ್ಯಭಾಗದ ನಂತರ ಸರಿಹೋಗುತ್ತದೆ. ದೂರ ಪ್ರಯಾಣ ಸಹ ಕಾಣಿಸುತ್ತಿದೆ. ಆದರೆ ನಿಮ್ಮ ಆಲಸ್ಯ ಬಿಟ್ಟು ಮುನ್ನುಗ್ಗಿದರೆ ಎಲ್ಲೆಡೆ ಜಯ ಖಂಡಿತ.

Sagittarius monthly horoscope

ಸ್ತ್ರೀಯರು: ನಿಮ್ಮ ಹೆಸರಿನಲ್ಲಿ ಮಾಡಿದ ವ್ಯವಹಾರಗಳು ಹೆಚ್ಚಿನ ಲಾಭ ತರುತ್ತವೆ. ನಿಮ್ಮ ಮಕ್ಕಳ ಸಾಧನೆ ಹೆಮ್ಮೆ ತರುತ್ತದೆ, ಈ ತಿಂಗಳಿನಲ್ಲಿ ವಸ್ತ್ರ ಖರೀದಿಗೆ ಹೆಚ್ಚಿನ ಖರ್ಚು ಮಾಡುತ್ತೀರಿ. ನಿಮ್ಮವರಿಂದ ಅಥವಾ ನೀವೇ ಹೊಸದೊಂದು ವಾಹನ ಖರೀದಿ ಮಾಡಿದರೂ ಆಶ್ಚರ್ಯವಿಲ್ಲ. ತಿಂಗಳ ಮಧ್ಯ ಭಾಗದಲ್ಲಿ ಮಾತ್ರ ಒಮ್ಮೆ ಗೆಳತಿಯರ ಚುಚ್ಚು ಮಾತು ಮನಸಿಗೆ ನೋವು ಉಂಟು ಮಾಡುತ್ತದೆ. ಈ ತಿಂಗಳಿನಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೆ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ. ಉದ್ಯೋಗದಲ್ಲಿ ಬದಲಾವಣೆ ಅಥವಾ ಟ್ರಾನ್ಸ್ ಫರ್ ಅವಶ್ಯ ಇರುವವರು ಈ ತಿಂಗಳಿನಲ್ಲಿ ಹೆಚ್ಚು ಒತ್ತು ಕೊಟ್ಟು ಪ್ರಯತ್ನಿಸಿದರೆ ಆಗುತ್ತದೆ. ಸಂಗೀತಾಸಕ್ತರಿಗೆ ಈ ತಿಂಗಳು ಉತ್ತಮ ಸುಶ್ರಾವ್ಯ ಸಂಗೀತ ಕೇಳುವ ಯೋಗವಿದೆ. ಮನರಂಜನೆಗೆ ನಿಮಗೆ ಕೊರತೆ ಆಗುವುದಿಲ್ಲ.

ವಿದ್ಯಾರ್ಥಿಗಳು: ನಿಮ್ಮನ್ನು ಮೂರ್ಖರನ್ನಾಗಿಸುವ ಪ್ರಯತ್ನಗಳು ನಡೆಯುತ್ತವೆಯಾದರೂ ಅವು ಸಫಲವಾಗುವುದಿಲ್ಲ.

ಪರಿಹಾರ: ಶುದ್ಧವಾದ ಕುರಿಯ ಕಂಬಳಿಯನ್ನು ಈ ತಿಂಗಳು ದಾನ ಮಾಡಿ.

English summary
Get the complete month predictions of Aprill 2017. Read monthly horoscope of Sagittarius in Kannada. Get free monthly horoscope, astrology and monthly predictions in Kannada.
Please Wait while comments are loading...