ಮೀನ ಮಾರ್ಚ್ ಭವಿಷ್ಯ : ದುರಭ್ಯಾಸಗಳಿಂದ ಹೊರಬನ್ನಿ

Written by: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಈ ತಿಂಗಳು ದಿನ ನಿತ್ಯದ ಖರ್ಚುಗಳು ನಿಮಗೆ ಹೆಚ್ಚಾದಂತೆ ಭಾಸವಾಗುತ್ತದೆ. ವಾಸ್ತವದಲ್ಲಿ ನಿಮ್ಮ ಆದಾಯ ಕಡಿಮೆ ಆಗಿರುವುದು ನಿಮ್ಮ ಗಮನಕ್ಕೆ ಬಂದಿರುವುದಿಲ್ಲ! ಉದ್ಯೋಗದಲ್ಲಿ ನಿಮಗೆ ತಡೆಯೊಡ್ಡಲು ಹೊಸಬರ ಆಗಮನದ ಸಾಧ್ಯತೆಗಳು ಕಾಣುತ್ತಿದೆ. ಕೆಟ್ಟ ವ್ಯವಹಾರಗಳನ್ನು ಮಾಡುವವರು ದೈವಾನುಗ್ರಹದಿಂದ ಈ ತಿಂಗಳಿನಲ್ಲಿ ನಿಮ್ಮಿಂದ ದೂರವಾಗುತ್ತಾರೆ. ಯಾರೆ ಜಗಳವಾಡಲಿ ನ್ಯಾಯ ಮಾಡಿಸಿ ಎಂದು ಈ ತಿಂಗಳು ನಿಮ್ಮ ಬಳಿ ಬರುವ ಸಾಧ್ಯತೆಗಳು ಹೆಚ್ಚು ಇವೆ. ನಿಮಗಿರುವ ದುರಭ್ಯಾಸಗಳ ಗುಟ್ಟು ರಟ್ಟಾಗದಂತೆ ನೋಡಿಕೊಳ್ಳಿ ಹಾಗೂ ಇದೇ ತಿಂಗಳು ಆದಷ್ಟೂ ಅಂಥ ದುರಭ್ಯಾಸಗಳಿಂದ ಹೊರಬನ್ನಿ. ಸಮಾಜ ಸೇವೆ ಮಾಡುವ ಮನಸ್ಸು ಉಂಟಾಗುತ್ತದೆ. ಸನ್ಮಾನಗಳನ್ನು ಬಯಸಿದವರಿಗೆ ಈ ತಿಂಗಳಿನಲ್ಲಿ ಲಭ್ಯವಿದೆ. ವಿದೇಶ ಪ್ರಯಾಣವನ್ನು ಬಯಸಿದವರು ಯಾವ ಅಡ್ಡಿ ಆತಂಕಗಳಿಲ್ಲದೇ ಹೋಗಿ ಬರ ಬಹುದು. ಅವಿವಾಹಿತರಿಗೆ ವಿವಾಹದ ಹೊಸ ಅವಕಾಶಗಳು ಕಾಣುತ್ತವೆ.

ಸ್ತ್ರೀಯರಿಗೆ:-ಕಡಿಮೆ ಬೆಲೆಯ ವಸ್ತುಗಳಿಗೆ ಹೆಚ್ಚಿನ ಮೌಲ್ಯವನ್ನು ಕೊಟ್ಟು ಈ ತಿಂಗಳು ನೀವು ಖರೀದಿಸುತ್ತೀರಿ. ಅದರಿಂದಾಗಿ ಸ್ವಲ್ಪ ಅಪಹಾಸ್ಯಕ್ಕೆ ಒಳಗಾಗುತ್ತೀರಿ. ನಿಮ್ಮ ಮಕ್ಕಳಿಂದ ನಿಮಗೆ ಸದಾ ಸಹಕಾರ ಇದ್ದೇ ಇರುತ್ತದೆ. ಸ್ನೇಹಿತೆಯರ ಜೊತೆಗೂಡಿ ಹೊಸದೊಂದು ಚಿಕ್ಕ ವ್ಯಾಪಾರ ಆರಂಭಿಸುವ ಚಿಂತನೆಗಳು ಪ್ರಾರಂಭವಾಗುತ್ತವೆ. ಸಂತಸ ವಾಗಿ ಇರಲು ನೀವು ಈ ತಿಂಗಳು ಹೆಚ್ಚು ಪ್ರಯತ್ನಿಸುತೀರಿ ಎನ್ನುವುದೇ ಸಂತಸದ ವಿಷಯ. ಆರೋಗ್ಯವೂ ಸಹ ಉತ್ತಮವಾಗಿ ಇರುತ್ತದೆ.

Pisces Monthly Horoscope Kannada

ವಿದ್ಯಾರ್ಥಿಗಳಿಗೆ: ಅತ್ಯುತ್ತಮ ಗುರುಗಳು [ಪ್ರಾಧ್ಯಾಪಕರ] ಲಭಿಸಿ ವಿದ್ಯಾ ವಿಷಯಗಳಲ್ಲಿ ನಿಮಗಿರುವ ಎಲ್ಲ ಅನುಮಾನಗಳನ್ನು ಹೋಗಲಾಡಿಸುತ್ತಾರೆ. ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾಗುತ್ತೀರಿ. ನಿಮಗೆ ಖರ್ಚು ಮಾಡಲು ನಿಮ್ಮ ಮನೆಯಲ್ಲಿ ನೀಡಿದ ಅಲ್ಪ ಹಣದಲ್ಲಿಯೇ ತೃಪ್ತರಾದಲ್ಲಿ ಉತ್ತಮ ಇಲ್ಲದಿರೆ ಸಮಸ್ಯೆಗಳನ್ನು ನೀವೇ ತಂದು ಹಾಕಿಕೊಳ್ಳುತೀರಿ.

ಪರಿಹಾರ:-ಈ ತಿಂಗಳು ತಪ್ಪದೇ ಪ್ರತೀ ಶುಕ್ರ ಹಾಗೂ ಮಗಳವಾರಗಳಲ್ಲಿ ದುರ್ಗಾ ದೇಗುಲಕ್ಕೆ ಹೋಗಿ ಅಲ್ಲಿ ಕುಂಕುಮಾರ್ಚನೆ ಮಾಡಿಸಿ.

ಆಚಾರ್ಯ ವಿಠ್ಠಲ ಭಟ್ ಕೆಕ್ಕಾರು -9845682380

English summary
Get the complete month predictions of February 2017. Read monthly horoscope of Pisces in Kannada. Get free monthly horoscope, astrology and monthly predictions in Kannada.
Please Wait while comments are loading...